ದಯೆಯ ಅನುಸಂಧಾನ

Team Udayavani, Nov 2, 2019, 4:06 AM IST

ಶಿವನು ನಿರ್ಮಿಸಿದನು ಮಾನವನು
ಮಾನವರು ರಚಿಸಿಹರು ಜಾತಿ- ಮತಗಳನು
ಜಾತಿ- ಮತಗಳೆಷ್ಟಾದರೇನು, ನೀತಿಯೊಂದಲ್ಲವೇ?
ನೀತಿ ನಿಯಮದಿ ನಿಲ್ಲೆ ಮಹಾಮಾನವನೆಂದ ನಮ್ಮ ಮೃಡಗಿರಿ ಅನ್ನದಾನೀಶ

ಮಾನವನು ಶಿವ ನಿರ್ಮಿತನಾದರೆ, ಜಾತಿಯು ಮಾನವ ನಿರ್ಮಿತ. ಜಾತಿ- ಮತಗಳೆಷ್ಟಾದರೂ ನೀತಿ- ನಿಯಮಗಳೇ ಮಾನವಧರ್ಮದ ಮೇರುದಂಡವಾಗಿದೆ. ಕಾರ್ಯತತ್ಪರನಾಗಲು ಜೀವನದಲ್ಲಿ ಮೊದಲು ಧೈರ್ಯ ಬೇಕು. ಧೃತಿಯಿಂದ ಸತ್ಕಾರ್ಯಗಳು ಸಿದ್ಧಿಸುತ್ತವೆ. ಶ್ರೇಯಸ್ಸಾಧನೆಯಲ್ಲಿ ಧೃತಿ ಮುಖ್ಯ. ದುರ್ಮಾರ್ಗದತ್ತ ಧೈರ್ಯ ಪ್ರವೃತ್ತರಾದರೆ, ಮಾನವನು ದಾನವನಾಗುವನು. ಸತ್ಯ, ಅಹಿಂಸೆಗಳನ್ನು, ನ್ಯಾಯ- ನೀತಿಗಳನ್ನು ಸಾಧಿಸುವಲ್ಲಿ ಧೃತಿ ಅವಶ್ಯವಾಗಿದೆ.

ಶಿಕ್ಷೆಯಿಂದ ಮನುಷ್ಯನು ಸೇಡಿನ ಭಾವ ಹೊಂದಬಹುದು. ಕ್ಷಮೆಯಿಂದ ಮನಃಪರಿವರ್ತನೆ ಹೊಂದಲು ಸಾಧ್ಯವಿದೆ. ಧೃತಿ, ಕ್ಷಮೆಗಳು ಮನದಟ್ಟಾಗಲು ದಯೆಯ ಅನುಸಂಧಾನ ಪ್ರಮುಖವಾಗಿದೆ. ಬಹಿರಿಂದ್ರಿಯ ನಿಗ್ರಹದಿಂದ ಧೃತಿ, ಕ್ಷಮೆಗಳು ಭದ್ರವಾಗಿರುತ್ತವೆ. ಆರ್ಥಿಕ ಸಮತೆಯನ್ನು ಸಾಧಿಸಲು ಆಸ್ಥೆಯ ವ್ರತವು ಮಹತ್ವದ್ದಾಗಿದೆ. ಇದರಿಂದ ಸಾಮಾಜಿಕ ಜೀವನದಲ್ಲಿ ಕೊರತೆ ಬಾರದು. ಅಭಾವ ಪರಿಸ್ಥಿತಿ ದೂರಾಗುವುದು.

ಅದೇರೀತಿ ಅಂತರಂಗ, ಬಹಿರಂಗ ಸಾಧನೆಗಾಗಿ ಶೌಚವು ಅವಶ್ಯ. ಒಳಗೂ- ಹೊರಗೂ ಶುಭ್ರವಾದ ಲಾಂದ್ರದ ಹರಳು ಅಧಿಕ. ಬೆಳಕನ್ನು ನೀಡುವಂತೆ ಶೌಚವುಳ್ಳವನು ಸುಜ್ಞಾನ ಬೆಳಕನ್ನು ಬೀರುವನು. ಶೌಚದಿಂದ ದೇವಪ್ರೀತಿಗೆ ಪಾತ್ರನಾಗುವನು. ದೇವನೊಲುಮೆಗೆ ಅಂತಃ ಶೌಚವೇ ಮೂಲವಾಗಿದೆ. ಪರಿಶುದ್ಧ ಹಾಗೂ ನಿಶ್ಚಲವಾದ ಮನವೇ ಪರಮಾತ್ಮನ ಸಾûಾತ್ಕಾರದ ಕಾರಣ ವಸ್ತು. ಮೋಕ್ಷದ ಸಾಧನ. ಮನೋನಿಗ್ರಹಿಯಾದ ಮೇಲೆ ಧರ್ಮಬುದ್ಧಿಯವರಾಗಿ, ಅಧ್ಯಾತ್ಮ ವಿದ್ಯೆಯನ್ನು ಸಂಪಾದಿಸುವನು. ಇದು ಮಾನವನಿಗೆ ಸುಜ್ಞಾನ ನೀಡುವುದು.

ಆತ್ಮಸಾಕ್ಷಾತ್ಕಾರದ ಅರಿವು, ಸತ್ಯಾನ್ವೇಷಣೆಯ ಪ್ರಮುಖಘಟ್ಟ. ಈ ಸತ್ಯಾನ್ವೇಷಣೆಯೇ ಮನುಕುಲದ ಗುರಿ. ಸತ್ಯವನ್ನು ಅರಿತವನು, ಕ್ರೋಧವನ್ನು ಕಳಕೊಳ್ಳುವನು. ಅವನಲ್ಲಿ ಅಕ್ರೋಧ ಅಥವಾ ಮಹಾಶಾಂತಿ ಲಭಿಸುವುದು. ಇದುವೇ ಮಾನವಧರ್ಮದ ಫ‌ಲ. ವಿಶ್ವಮಾನವ ಧರ್ಮವನ್ನು ಸಾಧಿಸ ಬಯಸುವವರು ಧರ್ಮದ ಧೃತಿ- ಕ್ಷಮಾದಿ ಹತ್ತು ಅಂಶಗಳನ್ನು ಮೈಗೂಡಿಸಿಕೊಂಡರೆ, ಮಾನವಧರ್ಮದ ಯಥಾರ್ಥತೆಯ ಅರಿವಾಗುವುದು.

* ಶ್ರೀ ಮ.ನಿ.ಪ್ರ. ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು, ಸಂಸ್ಥಾನಮಠ, ಮುಂಡರಗಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ರಾಮ ಸದ್ಗುಣಗಳ ಆಗರ. ಅವನಂಥ ಮಗ ಹುಟ್ಟಬೇಕು ಎನ್ನುವುದು ಈಗಿನವರ ಕನಸು. ರಾಮನಂಥ ಒಬ್ಬ ಮಗು ಒಂದು ಊರಲ್ಲಿದ್ದರೆ ವಿಶ್ವದ ಅಸಂಖ್ಯ ಸಂಖ್ಯೆಯ ವೃದ್ಧಾಶ್ರಮಗಳಲ್ಲಿ...

  • ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ತಂಬೂರಿಯನ್ನು ತೊಂಬತ್ತು ವರುಷಗಳಿಂದ, ನಿರಂತರವಾಗಿ- ಸುಶ್ರಾವ್ಯವಾಗಿ ನುಡಿಸುತ್ತಲೇ ಇದ್ದಾರೆ. ಒಂದು ದಿನವೂ ಆ ತಂಬೂರಿಯನ್ನು...

  • ತುಂಗಾರತಿ ನೆರವೇರುವ ಈ ದೃಶ್ಯ ಕಣ್ಣಿಗೊಂದು ಹಬ್ಬ. ಇನ್ನೇನು ಕರ್ಪೂರಕ್ಕೆ ದೀಪ ಸ್ಪರ್ಶಿಸಿ, ಆರತಿ ಬೆಳಗಿತು ಎನ್ನುವ ಹೊತ್ತಿಗೆ ತುಂಗೆಯಲ್ಲಿರುವ ಮೀನುಗಳು,...

  • "ಕೋಟೆನಾಡಿನ ಊಟಿ' ಖ್ಯಾತಿಯ ಜೋಗಿಮಟ್ಟಿ ಗಿರಿಧಾಮದ ಸೌಂದರ್ಯ ಮಲೆನಾಡನ್ನು ಹೋಲುವಂಥದ್ದು. ಬೆಂಕಿಯಂಥ ಚಳಿ, ಹಿಮ್ಮೆಟ್ಟುವ ಬಿರುಗಾಳಿ, ಪ್ರೇಮ ಕಾಶ್ಮೀರವನ್ನು...

  • ಉಡವು ಸರಿಸೃಪ ಜಾತಿಗೆ ಸೇರಿದೆ. ಇದು ಸಕಲ ವಿದ್ಯೆಗಳನ್ನು ಬಲ್ಲ ಸಸ್ತನಿ. ನೀರಿನಲ್ಲಿ ಸರಾಗವಾಗಿ ಈಜಬಲ್ಲುದು. ತನ್ನ ಕಾಲಿನ ಮೇಲೆ ನಿಂತುಕೊಂಡು ಸುತ್ತಲ ಪರಿಸರ...

ಹೊಸ ಸೇರ್ಪಡೆ