ಬ್ಯಾಟ್ಸ್‌ಮನ್‌ಗಳ ಎದೆ ನಡುಗಿಸುತ್ತಿದ್ದಾರೆ ಅರ್ಜುನ್‌

Team Udayavani, Dec 23, 2017, 1:56 PM IST

655.jpg

ಆತ ಕ್ರಿಕೆಟ್‌ನ ದಂತಕಥೆ. ಕ್ರೀಸ್‌ನಲ್ಲಿ ಬ್ಯಾಟ್‌ ಹಿಡಿದು ನಿಂತರೆ ಎದುರಾಳಿ ಬೌಲರ್‌ಗಳು ಬೆವರಿಳಿಯುತ್ತಿದ್ದರು. ಆತನ ಆಟಕ್ಕೆ ಮುರಿಯಲಾಗದಂಥ ದಾಖಲೆಗಳ ಶಿಖರಗಳೇ ನಿರ್ಮಾಣವಾಗಿವೆ. ಒಂದೇ ಮಾತಲ್ಲಿ ಹೇಳಬೇಕು ಅಂದರೆ ಆತ ಕ್ರಿಕೆಟ್‌ನಲ್ಲಿ ಹಿಮಾಲಯದ ಶಿಖರ ಇದ್ದಂತೆ. ಕ್ರೀಡಾ ಜಗತ್ತಿಗೆ ಆತ ಸ್ಫೂರ್ತಿದಾಯಕ. ಆತನೇ ಸಚಿನ್‌ ತೆಂಡುಲ್ಕರ್‌. ಆದರೆ ಸಚಿನ್‌ ಏಕೈಕ ಪುತ್ರ ಅರ್ಜುನ್‌ ತೆಂಡುಲ್ಕರ್‌ ಹಾದಿ ಮಾತ್ರ ಬೇರೆಯಾಗಿದೆ. ಹೌದು, ಅಪ್ಪ ಮಾಸ್ಟರ್‌ ಬ್ಲಾಸ್ಟರ್‌ ಆಗಿ ಬೌಲರ್‌ಗಳ ಹೃದಯ ನಡುಗಿಸಿದ್ದರೆ, ಮಗ ವೇಗದ ಬೌಲರ್‌ ಆಗಿ ಬ್ಯಾಟ್ಸ್‌ಮನ್‌ಗಳ ಹೃದಯ ನಡುಗಿಸುತ್ತಿದ್ದಾನೆ. ಅರ್ಜುನ್‌ ಕೂಡ ಅಪ್ಪನಂತೆಯೇ ದೊಡ್ಡ ಬ್ಯಾಟ್ಸ್‌ ಮನ್‌ ಆಗಬೇಕು ಅಂಥ ಕನಸು ಕಂಡ ಬಾಲಕ. ಆದರೆ ಇತನ ಎತ್ತರ ಬ್ಯಾಟಿಂಗ್‌ ಗಿಂತ ಬೌಲಿಂಗ್‌ಗೆ ಹೆಚ್ಚಿನ ನೆರವು ನೀಡುತ್ತಿದೆ. ಹೀಗಾಗಿ ಬ್ಯಾಟ್ಸ್‌ ಮನ್‌ ಆಗಿಬೇಕಿದ್ದ ಅರ್ಜುನ್‌ ಇದೀಗ ವೇಗದ ಬೌಲರ್‌ ಆಗಿದ್ದಾರೆ. ಎದುರಾಳಿ ಬ್ಯಾಟ್ಸ್‌ ಮನ್‌ಗಳ ಬೆವರಿಳಿಸುತ್ತಿದ್ದಾನೆ.

ಭರ್ಜರಿ ಫಾರ್ಮ್
ಸದ್ಯ ಮುಂಬೈ ಕಿರಿಯರ ತಂಡದಲ್ಲಿ ಆಡುತ್ತಿರುವ ಅರ್ಜುನ್‌ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ನಡುಗಿಸುತ್ತಿದ್ದಾರೆ.ಇತ್ತೀಚೆಗೆ ನಡೆದ ಕೂಚ್‌ ಬೆಹಾರ್‌ ಕೂಟದಲ್ಲಿ ಮಧ್ಯ ಪ್ರದೇಶ ಮತ್ತು ರೈಲ್ವೇಸ್‌ ವಿರುದ್ಧ  ತಲಾ 5 ವಿಕೆಟ್‌ ಕಿತ್ತು ಮುಂಬೈ ತಂಡದ ಗೆಲುವಿನ ರುವಾರಿಯಾಗಿದ್ದಾರೆ. ಪ್ರಮುಖ ಬ್ಯಾಟ್ಸ್‌ ಮನ್‌ಗಳನ್ನು ಪೆವಿಲಿಯನ್‌ಗೆ ಸೇರಿಸಿದ ಖ್ಯಾತಿ ಅರ್ಜುನ್‌ ಅವರದು. ಇದೇ ಫಾರ್ಮ್ನಲ್ಲಿ ಅರ್ಜುನ್‌ ಮುನ್ನುಗ್ಗಿದರೆ ಅಭಿಮಾನಿಗಳಿಗೆ ರಾಷ್ಟ್ರೀಯ ತಂಡದಲ್ಲಿ ಸಚಿನ್‌ ಪುತ್ರನನ್ನು ಕಾಣುವ ಕಾಲ ದೂರವಿಲ್ಲ.

ದಿಗ್ಗಜರಿಂದ ಮಾರ್ಗದರ್ಶನ

ಸಚಿನ್‌ ತೆಂಡುಲ್ಕರ್‌ ಪುತ್ರನಾಗಿರುವುದರಿಂದ ತಾರಾ ಆಟಗಾರರನ್ನು ಭೇಟಿ ಮಾಡುವುದು,ಅವರಿಂದ ಸಲಹೆ ಪಡೆಯುವುದು ಯಾವುದೂ ಅರ್ಜುನ್‌ಗೆ  ಅಸಾಧ್ಯವಾಗಿಲ್ಲ. ಹೀಗಾಗಿ ಪಾಕ್‌ನ ಮಾಜಿ ವೇಗಿ ವಾಸಿಂ ಅಕ್ರಮ್‌ ಸೇರಿದಂತೆ ಮಾಜಿ ದಿಗ್ಗಜ ಬೌಲರ್‌ಗಳಿಂದ ಮಾರ್ಗದರ್ಶನ ಸಿಕ್ಕಿದೆ. ಕ್ರಿಕೆಟ್‌ ಕಾಶಿ ಲಾರ್ಡ್ಸ್‌ ಮೈದಾನದಲ್ಲಿಯೇ ತರಬೇತಿ ಪಡೆದು ಆಗಿದೆ.

ವೈರಲ್‌ ಆದ ಬೌಲಿಂಗ್‌ ಶೈಲಿ
ಪ್ರಸಕ್ತ ವರ್ಷ ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸಕ್ಕೆ ಬಂದಿತ್ತು. ಈ ಸಂದರ್ಭದಲ್ಲಿ ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನೆಟ್ಸ್‌ ಅಭ್ಯಾಸದ ವೇಳೆ ವಿರಾಟ್‌ ಕೊಹ್ಲಿಗೆ ಅರ್ಜುನ್‌ ಬೌಲಿಂಗ್‌ ಮಾಡಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ವೈರಲ್‌ ಆಗಿತ್ತು. ಅರ್ಜುನ್‌ ಬೌಲಿಂಗ್‌ ಶೈಲಿ ನೋಡಿ ಕ್ರೀಡಾಭಿಮಾನಿಗಳು ಫಿದಾ ಆಗಿದ್ದಾರೆ. ಬೌಲರ್‌ಗಳ ಎದೆ ನಡುಗಿಸುವಲ್ಲಿ ಯಾವುದೇ ಅನುಮಾನವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಟಾಪ್ ನ್ಯೂಸ್

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.