ರಾಹುಲ್‌ ಮಂಗಳೂರಿನಿಂದ ವಿಶ್ವಕಪ್‌ ನತ್ತ…

ಈ ಬಾರಿಯ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗೆ ಆಯ್ಕೆಯಾದ ಏಕೈಕ ಕನ್ನಡಿಗ..

Team Udayavani, Apr 20, 2019, 10:52 AM IST

ಇಂಗ್ಲೆಂಡ್‌ನ‌ಲ್ಲಿ ಮೇ 30ರಿಂದ ಆರಂಭವಾಗಲಿರುವ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗಾಗಿ ಭಾರತ ತಂಡವನ್ನು ಘೋಷಿಸಲಾಗಿದ್ದು, ಕರ್ನಾಟಕದ ಏಕೈಕ ಆಟಗಾರನಾಗಿ ಕೆ.ಎಲ್‌. ರಾಹುಲ್‌, ಸ್ಥಾನ ಪಡೆದಿರುವುದು ಕರಾವಳಿಯ ಕ್ರಿಕೆಟ್‌ ಪ್ರೇಮಿಗಳಲ್ಲಿ ಸಂತಸ ಮೂಡಿಸಿದೆ.

ಮಂಗಳೂರಿನಲ್ಲಿ ಶಿಕ್ಷಣ ಹಾಗೂ ಕ್ರಿಕೆಟ್‌ ತರಬೇತಿ ಪಡೆದಿರುವ ಕೆ.ಎಲ್‌.ರಾಹುಲ್‌ ಇತ್ತೀಚಿನ ಟೀಮ್‌ ಇಂಡಿಯಾ ಸರಣಿಗಳಲ್ಲಿ ಉತ್ತಮ ಆಟ ಪ್ರದರ್ಶಿಸುವಲ್ಲಿ ವಿಫಲರಾಗಿದ್ದರೂ ಐಪಿಎಲ್‌ನಲ್ಲಿ ಪಂಜಾಬ್‌ ಪರ ಭರ್ಜರಿ ಪ್ರದರ್ಶನ ನೀಡುತ್ತಿರುವುದು ವಿಶ್ವಕಪ್‌ ಆಯ್ಕೆಗೆ ಹೆಚ್ಚು ಶಕ್ತಿ ನೀಡಿತು.

ಡಾ| ಕಣ್ಣೂರು ಎನ್‌. ಲೋಕೇಶ್‌ ಮತ್ತು ರಾಜೇಶ್ವರಿ ಲೋಕೇಶ್‌ ಅವರ ಪುತ್ರ ಕಣ್ಣೂರು ಲೋಕೇಶ್‌ ರಾಹುಲ್‌ 1992ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಬೆಳೆದದ್ದು ಮಂಗಳೂರಿನಲ್ಲಿ, ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಸುರತ್ಕಲ್‌ ಎನ್‌.ಐ.ಟಿ.ಕೆ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೂರ್ಣಗೊಳಿಸಿದ ಅವರು, ಬಳಿಕ ಕಾಲೇಜು ವಿದ್ಯಾಭ್ಯಾಸವನ್ನು ಮಂಗಳೂರಿನ ಸೈಂಟ್‌ ಅಲೋಶಿಯಸ್‌ ಪಿಯು ಕಾಲೇಜಿನಲ್ಲಿ ಪೂರ್ತಿಗೊಳಿಸಿದ್ದಾರೆ. ಬಳಿಕ ಪದವಿಗಾಗಿ ಬೆಂಗಳೂರಿನ ಜೈನ್‌ ಕಾಲೇಜಿಗೆ ಸೇರ್ಪಡೆಯಾದರು.

ಮೆಚ್ಚಿದ ಆ ರಾಹುಲ್‌
ಅಂಡರ್‌-11 ವಲಯ ಮಟ್ಟದ ಕ್ರಿಕೆಟ್‌ನಲ್ಲಿ ಆಟವಾಡುವ ಮೂಲಕ ರಾಹುಲ್‌ ಕ್ರಿಕೆಟ್‌ ಜಗತ್ತಿಗೆ ಹೆಜ್ಜೆ ಇಟ್ಟರು. ಬಳಿಕ 2004ರಲ್ಲಿ ನಡೆದ 13 ವರ್ಷ ವಯೋಮಿತಿಯ ಮಂಗಳೂರು ವಿಭಾಗದ 3 ಕ್ರಿಕೆಟ್‌ ಪಂದ್ಯಗಳ 4 ಇನಿಂಗ್ಸ್‌ನಲ್ಲಿ ರಾಹುಲ್‌ 650 ರನ್‌ ಪಡೆದು ಬೆಸ್ಟ್‌ ಬ್ಯಾಟ್ಸ್‌ಮನ್‌ ಪ್ರಶಸ್ತಿ ಪಡೆದಿದ್ದರು. ಅಂಡರ್‌-13 ವಿಭಾಗದ ಕರ್ನಾಟಕ ತಂಡಕ್ಕೆ ಆಯ್ಕೆಯಾದ ರಾಹುಲ್‌ 5 ಪಂದ್ಯದಲ್ಲಿ 450 ರನ್‌ ಬಾರಿಸಿದ್ದರು. ಇದರಲ್ಲಿ 3 ಶತಕ ಹಾಗೂ ಒಂದು ಅರ್ಧ ಶತಕ ಸೇರಿತ್ತು.

ಈ ಶತಕದ ಆಟವನ್ನು ಅಂದು ರಾಹುಲ್‌ ದ್ರಾವಿಡ್‌ ಅವರೇ ನೋಡಿದ್ದರು. ಬಳಿಕ ಜೂನಿಯರ್‌ ರಾಹುಲ್‌ ಅವರನ್ನು ಕರೆದು ಮಾತನಾಡಿಸಿದ್ದಾರೆ. ನನ್ನದೇ ಹೆಸರಿನ ಹುಡುಗ 13ರ ಹರೆಯದಲ್ಲಿ ಸೆಂಚುರಿ ಬಾರಿಸಿದ್ದು ನನಗೆ ಖುಷಿ ನೀಡಿದೆ’ ಎಂದು ಅಂದು ದ್ರಾವಿಡ್‌ ಜೂ. ರಾಹುಲ್‌ ಅವರನ್ನು ಶ್ಲಾಘಿಸಿದ್ದರು.’

ಈವರೆಗೆ 34 ಟೆಸ್ಟ್‌ ಆಡಿರುವ ರಾಹುಲ್‌, 14 ಏಕದಿನ ಪಂದ್ಯಗಳಲ್ಲಷ್ಟೇ ಭಾರತವನ್ನು ಪ್ರತಿನಿಧಿಸಿದ್ದಾರೆ. ಅವರಿಗೆ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಸಿಗಲಿ ಎಂಬುದು ಕರಾವಳಿ ಕ್ರಿಕೆಟ್‌ ಅಭಿಮಾನಿಗಳ ಹಾರೈಕೆ.


ಅಮ್ಮನಿಂದ ಆಲ್‌ ದಿ ಬೆಸ್ಟ್‌
ಈ ಸಂದರ್ಭದಲ್ಲಿ ‘ಉದಯವಾಣಿ’ ಜತೆ ಮಾತಾಡಿದ ರಾಹುಲ್‌ ತಾಯಿ ರಾಜೇಶ್ವರಿ ಲೋಕೇಶ್‌, ಎನ್‌’.ಐ.ಟಿ.ಕೆ. ಆಂಗ್ಲಮಾಧ್ಯಮ ಶಾಲೆಯ 5 ನೇ ತರಗತಿಯಲ್ಲಿ ಕಲಿಯುತ್ತಿರುವಾಗಲೇ ರಾಹುಲ್‌ ಮಂಗಳೂರಿನ ನೆಹರೂ ಮೈದಾನದಲ್ಲಿ ಕ್ರಿಕೆಟ್‌ ತರಬೇತಿ ಆರಂಭಿಸಿದ್ದ. ಆ ಸಮಯದಲ್ಲಿ ಪಿ. ದೇವದಾಸ್‌ ನಾಯಕ್‌ ಹಾಗೂ ಜಯರಾಜ್‌ ಮುತ್ತು ಅವರಿಂದ ತರಬೇತಿ ಪಡೆದ. ಬಳಿಕ ಕಾಲೇಜು ಹಂತದಲ್ಲೂ ಕೂಡ ಕ್ರಿಕೆಟ್‌ ತರಬೇತಿ ನಿರಂತರವಾಗಿ ನಡೆಯಿತು. ಬಳಿಕ ಬೇರೆ ಬೇರೆ ವಯೋಮಿತಿಯ ಪಂದ್ಯದಲ್ಲಿ ಆಡಿದ ರಾಹುಲ್‌ ಇಂದು ವಿಶ್ವಕಪ್‌ ಪಂದ್ಯಕ್ಕೆ ಆಯ್ಕೆಯಾಗಿದ್ದಾನೆ ಎಂಬುದು ಸಂತಸ ತಂದಿದೆ. ಆತನಿಗೆ ಆಲ್‌ ದಿ ಬೆಸ್ಟ್‌’ ಎಂದರು.

ಮಂಗಳೂರಿನಲ್ಲಿ ರಾಹುಲ್‌ ತಂದೆ-ತಾಯಿ
ರಾಹುಲ್‌ ತಾತನ ಮನೆ ತುಮಕೂರು ಜಿಲ್ಲೆಯ ಕುದೂರು ತಾಲೂಕಿನ ಕಣನೂರು. ಇದು ಕಣ್ಣೂರು ಎಂದೂ ಪ್ರಚಲಿತ. ರಾಹುಲ್‌ನ ತಂದೆ ಹಾಗೂ ತಾಯಿ ಇಬ್ಬರೂ ಮೂಲತಃ ಅಲ್ಲಿಯವರು. ಆದರೆ, ರಾಹುಲ್‌ ತಂದೆ ಡಾ| ಕಣ್ಣೂರು ಎನ್‌.ಲೋಕೇಶ್‌ 1987ರಲ್ಲಿ ಸುರತ್ಕಲ್‌ನ ಎನ್‌.ಐ.ಟಿ.ಕೆ. ಜಿಯಾಲಜಿ ವಿಭಾಗದ ಪ್ರೊಫೆಸರ್‌ ಆಗಿ ನೇಮಕಗೊಂಡ ಅನಂತರ ಪತ್ನಿ ಜತೆ ಮಂಗಳೂರಿನಲ್ಲೇ ನೆಲೆಸಿದರು. ರಾಜೇಶ್ವರಿ ಲೋಕೇಶ್‌ ಮಂಗಳೂರು ವಿವಿಯಲ್ಲಿ ಪ್ರೊಫೆಸರ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಡುವಿನ ವೇಳೆ ರಾಹುಲ್‌ ಇಲ್ಲಿಗೆ ಬಂದು ಹೋಗುತ್ತಾರೆ.

— ದಿನೇಶ್‌ ಇರಾ


ಈ ವಿಭಾಗದಿಂದ ಇನ್ನಷ್ಟು

 • ವರ್ಷ ವರ್ಷ ಬರುವ ಯುಗಾದಿ, ದೀಪಾವಳಿಯಂತೆ ಈ ಬಾರಿಯೂ ಐಪಿಎಲ್‌ ಬಂದಿದೆ, ಹಾಗೆಯೇ ಮುಗಿದು ಹೋಗಿದೆ. ಪ್ರತೀ ಬಾರಿಯಂತೆ ಈ ಬಾರಿಯೂ ಕೆಲವು ಪ್ರಶ್ನೆಗಳಿಗೆ ಉತ್ತರವೇ...

 • 12ನೇ ಐಪಿಎಲ್‌ ಹಣಾಹಣಿ ಅತ್ಯಂತ ರೋಚಕವಾಗಿ ಮುಗಿದಿದೆ. ಮುಂಬೈ ಕೇವಲ ಒಂದು ರನ್‌ ಅಂತರದಿಂದ ಚೆನ್ನೈಗೆ ಸೋಲುಣಿಸಿ ದಾಖಲೆ 4ನೇ ಸಲ ಟ್ರೋಫಿ ಎತ್ತಿದ್ದು ಈಗ ಇತಿಹಾಸ....

 •   ಹಣೆಗೆ ತಿಲಕ ಇರಿಸಿಕೊಳ್ಳುವುದು ಹಿಂದೂ ಸಂಪ್ರದಾಯ. ಶ್ರೀಗಂಧ, ಅರಿಶಿನ, ಕುಂಕುಮ, ಹುತಾಬಸ್ಮ, ಆಂಗ್ರ ಅಕ್ಷ$ತೆಗಳಿಂದ ತಿಲಕ ಇತ್ತು ಕೊಳ್ಳಬಹುದಾಗಿದೆ. ಗಂಡಸರು,...

 • ಆತ ಸರ್ವಜ್ಞ, ಸರ್ವಶಕ್ತ ಮತ್ತು ಸರ್ವವ್ಯಾಪಿ. ಕಾಳಿದಾಸನ ಕುಮಾರಸಂಭವ ಮಹಾಕಾವ್ಯದ ನಾಯಕನಾಗಿ ಹಣೆಯಲ್ಲಿ ಭಸ್ಮ ಬಳಿದುಕೊಂಡ, ತಲೆಯಲ್ಲಿ ಚಂದ್ರನನ್ನು ಮುಡಿದುಕೊಂಡ,...

 • ಕಂಬದಿಂದ ಹೊರಬಂದ ಶ್ರೀನರಸಿಂಹ ಸ್ವಾಮಿಯು ಅತಿ ಕೋಪದಿಂದ ಹಿರಣ್ಯಕಶಿಪುವನ್ನು ಕೊಂದಮೇಲೆ ಆ ಕೋಪವನ್ನು ಶಮನ ಮಾಡಲು ಅಲ್ಲಿ ನೆರೆದಿದ್ದ ಬ್ರಹ್ಮಾದಿ ದೇವತೆಗಳಲ್ಲಿ...

ಹೊಸ ಸೇರ್ಪಡೆ

 • ಮಂಗಳೂರು: ನಿರ್ಮಾಣ್‌ ಹೋಮ್ಸ್‌ ಹಾಗೂ ಕೋಸ್ಟಲ್‌ ಕರ್ನಾಟಕ ಡೆವಲಪರ್ ಸಂಸ್ಥೆಯ ಸಹಯೋಗದಲ್ಲಿ ಬಿಜೈ ಕಾಪಿಕಾಡ್‌ನ‌ಲ್ಲಿ ನಿರ್ಮಾಣವಾಗಿರುವ ಬಹು ನಿರೀಕ್ಷಿತ 67...

 • ಬೆಂಗಳೂರು: ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಕೋಲಾರ ಸ್ನಾತಕೋತ್ತರ ಕೇಂದ್ರ ಹಾಗೂ ಚಿಕ್ಕಬಳ್ಳಾಪುರದ ಸರ್ಕಾರಿ ಶಿಕ್ಷಣ ಕಾಲೇಜಿನಲ್ಲಿರುವ ಸ್ನಾತಕೋತ್ತರ...

 • ಮಲ್ಪೆ: ಭಗವಂತ ಭಕ್ತರಿಗೆ ಬೇರೆ ಬೇರೆ ರೂಪದಿಂದ ಅನುಗ್ರಹ ಮಾಡುತ್ತಾನೆ. ಆದರಲ್ಲೂ ಕಲಿಯುಗದ ಜನರ ಸಾಧನೆ, ಸಿದ್ಧಿಗೆ ತೊಂದರೆ ಇದ್ದಲ್ಲಿ ಅದನ್ನು ಪರಿಪಾಲನೆ ಮಾಡಲು...

 • ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ನಿಚ್ಚಳ ಬಹುಮತವನ್ನು ಒದಗಿಸಿಕೊಟ್ಟ 2019ನೇ ಲೋಕಸಭೆ ಚುನಾವಣೆ ಈ ಕಾರಣಕ್ಕೆ ಮಾತ್ರ ಮುಖ್ಯವಾಗಿಲ್ಲ, ದೇಶದ ರಾಜಕೀಯ...

 • 2014ರಲ್ಲಿ ಅಮೇಠಿಯಲ್ಲಿ ರಾಹುಲ್‌ ಗಾಂಧಿ ವಿರುದ್ಧ ಸ್ಪರ್ಧಿಸಿ ಸೋತಿದ್ದ ಆಮ್‌ ಆದ್ಮಿ ಪಕ್ಷದ ಸಂಸ್ಥಾಪಕ ಡಾ.ಕುಮಾರ್‌ ವಿಶ್ವಾಸ್‌, ಈಗ ತಮ್ಮ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ....

 • ಕಾಸರಗೋಡು: ಕೇರಳದಲ್ಲಿ ಈ ಬಾರಿಯಾದರೂ ಖಾತೆ ತೆರೆಯುವ ಬಗ್ಗೆ ಬಹಳಷ್ಟು ನಿರೀಕ್ಷೆಯಿರಿಸಿದ್ದ ಬಿಜೆಪಿಗೆ ಈ ಗುರಿ ಸಾಧಿಸಲು ಸಾಧ್ಯವಾಗದಿದ್ದರೂ, ಈ ಹಿಂದಿನ ಎಲ್ಲ...