ಮಲೆನಾಡಿನ ಮಡಿಲಲ್ಲಿ ನಿಸರ್ಗದ ಸೊಬಗಲ್ಲಿ: ಕಲ್ಲತ್ತಗಿರಿ ಜಲಪಾತ 

Team Udayavani, Sep 8, 2018, 4:06 PM IST

ರಾತ್ರಿ ಇಡೀ ಮಳೆ. ಕೆಮ್ಮಣ್ಣು ಗುಂಡಿಯ ಹಾದಿಯಲ್ಲಿ ಉದ್ದಕ್ಕೂ ಗುಂಡಿಗಳೇ ಸಿಕ್ಕವು.  ಕಲ್ಲತ್ತಗಿರಿ ಜಲಪಾತ ನೋಡುವ ಉತ್ಸಾಹ ನೂರ್ಮುಡಿಯಾಗಿದ್ದು ಈ ಮಳೆಯಿಂದಲೇ.

ಜಲಪಾತ ನೋಡಲು ಅಣಿಯಾದೆವು. ಅಲ್ಲಿಯೇ ಹತ್ತಿರದ ಹೋಟೆಲ್‌ವೊಂದರಲ್ಲಿ ಉಪಹಾರ ಮುಗಿಸಿ ಬಳುಕಿನ ಹಾದಿಯಲ್ಲಿ ಮಲೆನಾಡ ಸೊಬಗನ್ನು ಸವಿಯುತ್ತಾ ಹೊರಟೆವು. ಎಲ್ಲೆಲ್ಲೂ ಹಚ್ಚ ಹಸಿರು, ನಡುನಡುವೆ ಸುರಿವ ತುಂತುರು.  ಜೊತೆ ಜೊತೆಗೆ ಜೋರು ಮಳೆ. ಹಸಿರು ಗಿರಿಶ್ರೇಣಿಗಳ ಮೇಲೆ ಹಾರಾಡುತ್ತಾ ಹಸಿರು ಗುಡ್ಡಗಳಿಗೆ ಮುತ್ತಿಕ್ಕುವ ಮುದವಾದ ನೋಟ ನಮ್ಮ ಕಣ್ಣುಗಳನ್ನು ತಂಪಾಗಿಸಿತು.  ದಾರಿಯ ನಡುವೆ ಸಿಗುವ ಸಣ್ಣ ಸಣ್ಣ ಜಲಪಾತಗಳು ಇನ್ನಷ್ಟು ಹುಚ್ಚೆಬ್ಬಿಸಿದ್ದವು. ಎಲ್ಲರೂ ಫೋಟೋ ಶೂಟ್‌ ನಡೆಸಿದ್ದೇ ನಡೆಸಿದ್ದು. 

ಜಲಪಾತದ ಸೊಬಗು

ಅರಣ್ಯ ಇಲಾಖೆಯ ತಪಾಸಣೆ ಮುಗಿಸಿಕೊಂಡು ಜಲಪಾತದ ಹತ್ತಿರಕ್ಕೆ ಬಂದಾಗಲೂ  ಮಳೆ  ಸುರಿಯುತ್ತಲೇ ಇತ್ತು.  ಮಳೆಹನಿಗಳ ಜೊತೆ ಹರಿಯುವ ನೀರಿನಲ್ಲಿ ಮಿಂದು ಅಲ್ಲಿಯೇ ಇದ್ದ ಹೋಟೆಲ್‌ವೊಂದರಲ್ಲಿ ಕುಡಿದ ಮಲೆನಾಡಿನ ಬಿಸಿ ಬಿಸಿ ಕಾಫಿ, ಹೃದಯವನ್ನು ಬೆಚ್ಚಗೆ ಮಾಡಿತು. ಅಲ್ಲಿಂದ ಹೊರಟ ತಲುಪಿದ್ದು ಝೆಡ್‌ಪಾಯಿಂಟ್‌ಗೆ.  

ಅಲ್ಲೂ ಜಿಟಿಜಿಟಿ ಮಳೆ, ಮೈ ಕೊರೆಯುವ ಚಳಿ. ಸುಂದರ ಪರಿಸರ, ಮಳೆಯಿಂದಾಗಿ ಎಲ್ಲೆಲ್ಲೂ ಹಚ್ಚ ಹಸುರಿನಿಂದ ಕಂಗೊಳಿಸುತ್ತಿರುವ ಪರ್ವತ ಸಾಲುಗಳ ರುದ್ರರಮಣೀಯ ಪರಿಸರ. 

ನೋಡುತ್ತಾ ಅಲ್ಲಿಯೇ ಇದ್ದು ಇಡಬೇಕೆನಿಸುವಷ್ಟು ಆನಂದ. ಸ್ವಲ್ಪ ಮುಂದೆ ಸಾಗುತ್ತಿರುವಾಗಲೇ ಧುಮುಕುತ್ತಿರುವ ನೀರಿನ ಜಲಧಾರೆಯ ದರ್ಶನವಾಯ್ತು.  ಅದೇ ಶಾಂತಿ ಜಲಪಾತ. ಜಲಧಾರೆಯ ಸೌಂದರ್ಯವನ್ನು ಕಣ್ತುಂಬಿಕೊಂಡು ಪ್ರಯಾಣ ಮುಂದುವರೆಸಿದೆವು. 

ಮುಂದೆ ಸಿಕ್ಕಿದ್ದು, ಎಲ್ಲೆಲ್ಲೂ ಹಸಿರು ಸೀರೆಯನ್ನು ಉಟ್ಟ ಪರ್ವತ ಸಾಲುಗಳೇ. ಪ್ರಕೃತಿಯ ಹಸಿರ ಸೌಂದರ್ಯವನ್ನು ಆಸ್ವಾದಿಸುತ್ತಾ ಗುಡ್ಡದ ತುತ್ತತುದಿಯನ್ನು ತಲುಪಿದಾಗ ಸ್ವರ್ಗಕ್ಕೆ ಮೂರೇ ಗೇಣು. ಮೈಮನಗಳಲ್ಲಿ ನಿಜಾರ್ಥದಲ್ಲಿ ರೋಮಾಂಚನ ಉಂಟುಮಾಡುವಂಥ ಜಾಗ. ಸ್ವಲ್ಪ ಸಮಯ ಅಲ್ಲೇ ಕಾಲ ಕಳೆದು ವಾಪಸ್‌ ಹೊರಟೆವು. 

ಕೆಮ್ಮಣ್ಣುಗುಂಡಿಯಲ್ಲಿ ಪ್ರವಾಸಿಗರು ಉಳಿದುಕೊಳ್ಳಲು ಲಾಡ್ಜ್, ಹೋಮ್‌ಸ್ಟೇ, ಕಾಟೇಜ್‌ಗಳ ಸೌಕರ್ಯವಿದೆ. ಊಟ ಉಪಹಾರಕ್ಕೆ ಅಷ್ಟೇನೂ ಹೇಳಿಕೊಳ್ಳುವಂತಹ ಹೋಟೆಲ್‌ಗ‌ಳಿಲ್ಲದಿದ್ದರೂ ಹಸಿವು ಮರೆಸುವುದರಲ್ಲಿ ಸಂಶಯವಿಲ್ಲ. 

ಹೋಗುವುದು ಹೇಗೆ
ಬೆಂಗಳೂರಿನಿಂದ ಹೋಗುವುದಾದರೆ 275 ಕಿ.ುà., ಮೈಸೂರಿನಿಂದ 216 ಕಿ.ಮೀ. ಕೆಮ್ಮಣ್ಣುಗುಂಡಿುಂದ 04 ಕಿ.ಮೀ  ಸಾಗಿದರೆ ಸಿಗುತ್ತದೆ ಕಲ್ಲತ್ತಗಿರಿ ಜಲಪಾತಕ್ಕೆ ಖಾಸಗಿ ವಾಹನಗಳನ್ನು ಮಾಡಿಕೊಂಡು ಹೋದರೆ ಅನುಕೂಲ. 

ಲಕ್ಷ್ಮಿಕಾಂತ್‌ ಎಲ್‌.ವಿ


ಈ ವಿಭಾಗದಿಂದ ಇನ್ನಷ್ಟು

  • ವರ್ಷ ವರ್ಷ ಬರುವ ಯುಗಾದಿ, ದೀಪಾವಳಿಯಂತೆ ಈ ಬಾರಿಯೂ ಐಪಿಎಲ್‌ ಬಂದಿದೆ, ಹಾಗೆಯೇ ಮುಗಿದು ಹೋಗಿದೆ. ಪ್ರತೀ ಬಾರಿಯಂತೆ ಈ ಬಾರಿಯೂ ಕೆಲವು ಪ್ರಶ್ನೆಗಳಿಗೆ ಉತ್ತರವೇ...

  • 12ನೇ ಐಪಿಎಲ್‌ ಹಣಾಹಣಿ ಅತ್ಯಂತ ರೋಚಕವಾಗಿ ಮುಗಿದಿದೆ. ಮುಂಬೈ ಕೇವಲ ಒಂದು ರನ್‌ ಅಂತರದಿಂದ ಚೆನ್ನೈಗೆ ಸೋಲುಣಿಸಿ ದಾಖಲೆ 4ನೇ ಸಲ ಟ್ರೋಫಿ ಎತ್ತಿದ್ದು ಈಗ ಇತಿಹಾಸ....

  •   ಹಣೆಗೆ ತಿಲಕ ಇರಿಸಿಕೊಳ್ಳುವುದು ಹಿಂದೂ ಸಂಪ್ರದಾಯ. ಶ್ರೀಗಂಧ, ಅರಿಶಿನ, ಕುಂಕುಮ, ಹುತಾಬಸ್ಮ, ಆಂಗ್ರ ಅಕ್ಷ$ತೆಗಳಿಂದ ತಿಲಕ ಇತ್ತು ಕೊಳ್ಳಬಹುದಾಗಿದೆ. ಗಂಡಸರು,...

  • ಆತ ಸರ್ವಜ್ಞ, ಸರ್ವಶಕ್ತ ಮತ್ತು ಸರ್ವವ್ಯಾಪಿ. ಕಾಳಿದಾಸನ ಕುಮಾರಸಂಭವ ಮಹಾಕಾವ್ಯದ ನಾಯಕನಾಗಿ ಹಣೆಯಲ್ಲಿ ಭಸ್ಮ ಬಳಿದುಕೊಂಡ, ತಲೆಯಲ್ಲಿ ಚಂದ್ರನನ್ನು ಮುಡಿದುಕೊಂಡ,...

  • ಕಂಬದಿಂದ ಹೊರಬಂದ ಶ್ರೀನರಸಿಂಹ ಸ್ವಾಮಿಯು ಅತಿ ಕೋಪದಿಂದ ಹಿರಣ್ಯಕಶಿಪುವನ್ನು ಕೊಂದಮೇಲೆ ಆ ಕೋಪವನ್ನು ಶಮನ ಮಾಡಲು ಅಲ್ಲಿ ನೆರೆದಿದ್ದ ಬ್ರಹ್ಮಾದಿ ದೇವತೆಗಳಲ್ಲಿ...

ಹೊಸ ಸೇರ್ಪಡೆ