ಇಂಗ್ಲೆಂಡ್‌ನ‌ಲ್ಲಿ ನೀರಸ ವಿಶ್ವಕಪ್‌?

ಏಕದಿನ ಕೂಟ ಜನಪ್ರಿಯತೆ ಕಳೆದುಕೊಳ್ಳಲು ಕಾರಣವೇನು?

Team Udayavani, Jun 15, 2019, 9:50 AM IST

ವಿಶ್ವಕಪ್‌ ಏಕದಿನ ಕ್ರಿಕೆಟ್ ಕೂಟ ಜನಪ್ರಿಯತೆ ಕಳೆದು­ಕೊಳ್ಳುತ್ತಿದೆಯೆ? ಹೀಗೊಂದು ಅನುಮಾನ ಪ್ರಸಕ್ತ ವಿಶ್ವಕಪ್‌ ಕೂಟ ನಡೆಯುತ್ತಿರುವ ವೇಳೆಯೆ ಎದುರಾಗಿದೆ. ಹಿಂದೆಲ್ಲ ವಿಶ್ವಕಪ್‌ ಕೂಟ ಆರಂಭವಾಗುತ್ತದೆ ಎಂದರೆ ಕಣ್ಣಿಗೆ ಹಬ್ಬ. ಕೋಟ್ಯಂತರ ಅಭಿಮಾನಿಗಳು ಮಹಾ ಕೂಟವನ್ನು ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಲ್ಲುತ್ತಿದ್ದರು. ಆದರೆ ಇದೀಗ ವಿಪರೀತ ಕ್ರಿಕೆಟ್ ಕೂಟಗಳ ಆಯೋಜನೆಯಿಂದಲೂ ಏನೋ ಅಭಿಮಾನಿಗಳು ಕ್ರಿಕೆಟ್ ಕುರಿತ ತಮ್ಮ ಆಸಕ್ತಿಯನ್ನೇ ಸ್ವಲ್ಪ ಕಳೆದುಕೊಂಡಂತಿದೆ. ಇದಕ್ಕೆ ಕಾರಣ ಏನಿರಬಹುದು ಎಂದು ಹುಡುಕುತ್ತ ಹೊರಟಾಗ ಮೊದಲು ಸಿಗುವುದೇ ನೂರಾರು ಟಿ20 ಲೀಗ್‌ಗಳು ಎನ್ನಬಹುದು. ಚುಟುಕು ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಮನೋರಂಜನೆ ನೀಡಿರಬಹುದು. ಆದರೆ ಮೂಲ ಕೂಟಗಳ ಜನಪ್ರಿಯತೆಯನ್ನೇ ಅದು ಕಸಿದಿದೆ ಎಂದರೆ ತಪ್ಪಾಗಲಾರದು. ಟಿ20 ಭರಾಟೆಯಿಂದಾಗಿ ಇಂದು ಟೆಸ್ಟ್‌, ಏಕದಿನ ಕೂಟಗಳು ಮಂಕಾಗಿ ನಡೆಯುತ್ತಿರುವುದು ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ.

ಟಿ20 ನೋಡಲು ಹೆಚ್ಚು ಇಷ್ಟ
ಇತ್ತೀಚಿನ ವರ್ಷಗಳಲ್ಲಿ ವಿಶ್ವಕ್ಕೆ ಟಿ20 ಕೂಟ ಪರಿಚಯಗೊಂಡ ಬಳಿಕ ಏಕದಿನ, ಟೆಸ್ಟ್‌ ಕ್ರಿಕೆಟ್‌ನ ಬಲ ಕುಸಿಯುತ್ತಾ ಹೋಯಿತು. ಭಾರತದಲ್ಲಿ ಐಪಿಎಲ್ (ಇಂಡಿಯನ್‌ ಪ್ರೀಮಿಯರ್‌ ಲೀಗ್‌), ವಿಂಡೀಸ್‌ನಲ್ಲಿ ಕೆರಿಬಿಯನ್‌ ಲೀಗ್‌, ಪಾಕಿಸ್ತಾನದಲ್ಲಿ ಪಾಕ್‌ ಸೂಪರ್‌ ಲೀಗ್‌, ಬಾಂಗ್ಲಾದಲ್ಲಿ ಬಾಂಗ್ಲಾ ಕ್ರಿಕೆಟ್ ಲೀಗ್‌, ಆಸ್ಟ್ರೇಲಿಯದಲ್ಲಿ ಬಿಗ್‌ಬಾಷ್‌ ಟಿ20, ಹೀಗೆ ಸಾಲು…ಸಾಲು… ಕೂಟಗಳು ವಿಶ್ವಕ್ಕೆ ಪರಿಚಿತಗೊಂಡು ಯಶಸ್ವಿಯಾಗಿ ಆಯೋಜನೆಗೊಂಡಿವೆ. ಟಿ20 ಬರುವ ಮೊದಲು ಏಕದಿನ ಕ್ರಿಕೆಟ್ ಕೂಟವನ್ನೇ ಕಾದು ನೋಡುತ್ತಿದ್ದವರು ಇದೀಗ 50 ಓವರ್‌ಗಳ ಸುದೀರ್ಘ‌ ಕ್ರಿಕೆಟ್ ಕೂಟವನ್ನು ನೋಡಲು ಇಚ್ಛಿಸುತ್ತಿಲ್ಲ. ನಮಗೆ ಏಕದಿನ ಕ್ರಿಕೆಟ್ ಕೂಟಕ್ಕಿಂತ ಕಡಿಮೆ ಸಮಯದಲ್ಲಿ ಮುಗಿಯುವ, ಏಕದಿನ, ಟೆಸ್ಟ್‌ಗಿಂತ ಹೆಚ್ಚು ರೋಚಕತೆ ಇರುವ ಟಿ20 ನೋಡಲು ಇಷ್ಟ ಎನ್ನುತ್ತಾರೆ. ಇದೆಲ್ಲ ಕಾರಣಗಳು ಪರೋಕ್ಷವಾಗಿ ಇಂಗ್ಲೆಂಡ್‌ನ‌ಲ್ಲಿ ನಡೆಯುತ್ತಿರುವ ವಿಶ್ವಕಪ್‌ ಕೂಟದ ಮೇಲೆ ಪರಿಣಾಮ ಬೀರಿರುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

ಪಾತಾಳಕ್ಕೆ ಕುಸಿದ ಟೆಸ್ಟ್‌
ಸಾಂಪ್ರದಾಯಿಕ ಟೆಸ್ಟ್‌ ಕೂಟವನ್ನು ವೀಕ್ಷಿಸಲು ಈಗ ಜನರೇ ಸ್ಟೇಡಿಯಂ ಕಡೆಗೆ ಬರುತ್ತಿಲ್ಲ. ಒಂದು ಪಂದ್ಯದ ಫ‌ಲಿತಾಂಶಕ್ಕಾಗಿ ಕನಿಷ್ಠ ಎಂದರೂ 3 ದಿನ ಕಾಯಲೇ ಬೇಕು, ಹೀಗೇ ಮುಂದುವರಿದರೆ ಮುಂದೊಂದು ದಿನ ಟೆಸ್ಟ್‌ ಕೂಟವನ್ನೇ ನಿಲ್ಲಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಟೆಸ್ಟ್‌ ಕೂಟದಲ್ಲಿ ಕೆಲವೊಂದು ಬದಲಾ­ ವಣೆ ಮಾಡಿ. ಹೊಸತನದೊಂದಿಗೆ ಟೆಸ್ಟ್‌ ನಡೆಸಬೇಕು ಎನ್ನುವ ಒತ್ತಾಯ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಮುಂದಿದೆ.•

ಚುಟುಕು ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಮನೋರಂಜನೆ ನೀಡಿರಬಹುದು. ಆದರೆ ಮೂಲ ಕೂಟಗಳ ಜನಪ್ರಿಯತೆಯನ್ನು ಕಸಿದಿದೆ ಎಂದರೆ ತಪ್ಪಾಗಲಾರದು. ಟಿ20 ಭರಾಟೆಯಿಂದಾಗಿ ಇಂದು ಟೆಸ್ಟ್‌, ಏಕದಿನ ಕೂಟಗಳು ಮಂಕಾಗಿ ನಡೆಯುತ್ತಿರುವುದು ಇದಕ್ಕೆ ಪ್ರತ್ಯಕ್ಷ ಸಾಕ್ಷಿ.

ಮಳೆಯೂ ಒಂದು ಕಾರಣವೆ?
ವಿಶ್ವಕಪ್‌ ಕೂಟಕ್ಕೆ ಇಂಗ್ಲೆಂಡ್‌ ಹಾಗೂ ವೇಲ್ಸ್‌ ವಿಶ್ವಕಪ್‌ ಕೂಟಕ್ಕೆ ಆಯೋಜನೆ ಆತಿಥ್ಯ ಪಡೆದುಕೊಂಡಿದೆ. ಯಶಸ್ವಿಯಾಗಿ ಕೂಟವನ್ನು ಆಯೋಜಿಸಲು ಸಂಘಟಕರು ಪಣತೊಟ್ಟರೂ ಮಳೆರಾಯ ಅವಕಾಶ ನೀಡುತ್ತಿಲ್ಲ.

ಇಂಗ್ಲೆಂಡ್‌ನ‌ಲ್ಲಿ ಮಳೆಗಾಲ ಆರಂಭವಾಗಿದೆ. ಮಳೆ ಸುರಿಯುತ್ತಿದೆ. ಇದರಿಂದ ವಿವಿಧ ಪಂದ್ಯಗಳ ಮೇಲೆ ಹೊಡೆತ ಬಿದ್ದಿದೆ. ಜೂ.7ರಂದು ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಪಂದ್ಯ ಬ್ರಿಸ್ಟಲ್‌ನಲ್ಲಿ ಆಯೋಜನೆಗೊಂಡಿತ್ತು. ಆದರೆ ದಿನವಿಡೀ ಸುರಿದ ಮಳೆಯಿಂದ ಪಂದ್ಯ ಒಂದೂ ಎಸೆತ ಕಾಣದಂತೆ ರದ್ದಾಯಿತು. ಜೂ.10ರಂದು ಸೌಥಾಂಪ್ಟನ್‌ನಲ್ಲಿ ದಕ್ಷಿಣ ಆಫ್ರಿಕಾ- ವೆಸ್ಟ್‌ ಇಂಡೀಸ್‌ ನಡುವೆ ಪಂದ್ಯ ಆರಂಭವಾಗಿ ದಕ್ಷಿಣ ಆಫ್ರಿಕಾ 29 ರನ್‌ಗೆ 2 ವಿಕೆಟ್‌ ಕಳೆದುಕೊಂಡಿದ್ದಾಗ ಮಳೆ ಸುರಿಯಲಾರಂಭಿಸಿತು, ಕೊನೆಗೂ ಪಂದ್ಯ ನಡೆಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಉಭಯ ತಂಡಗಳಿಗೆ 1-1 ಅಂಕ ಹಂಚಲಾಯಿತು. ಮರು ದಿನವೇ (ಜೂ.11) ಬಾಂಗ್ಲಾ-ಶ್ರೀಲಂಕಾ ನಡುವಿನ ಪಂದ್ಯ ಕೂಡ ಮಳೆಗೆ ಬಲಿಯಾಯಿತು. ಒಟ್ಟಾರೆ 3 ಪಂದ್ಯಗಳು ಮಳೆಗೆ ಸಂಪೂರ್ಣ ಕೊಚ್ಚಿ ಹೋಗಿದೆ. ನಡೆದ ಕೆಲವು ಪಂದ್ಯಗಳಿಗೂ ಮಳೆ ಅಡ್ಡಗಾಲು ಹಾಕಿತ್ತು. ಇದರಿಂದಾಗಿ ಕ್ರೀಡಾಂಗಣದ ಕಡೆಗೆ ಹೆಚ್ಚಿನ ಜನ ಬಂದಿಲ್ಲ. ಒಟ್ಟಾರೆ ಐಸಿಸಿ ವಿಶ್ವಕಪ್‌ ಆಯೋಜನೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು. ಮಳೆಗೂ ಮುನ್ನ ಅಥವಾ ನಂತರದ ದಿನಗಳಲ್ಲಿ ಕೂಟ ಆಯೋಜಿಸಿದ್ದರೆ ಜನರನ್ನು ಹೆಚ್ಚು ಕರೆತರಬಹುದಿತ್ತು.


ಈ ವಿಭಾಗದಿಂದ ಇನ್ನಷ್ಟು

  • ಡಾ.ಕೆ. ಶಿವರಾಮ ಕಾರಂತರ "ಮೂಕಜ್ಜಿಯ ಕನಸುಗಳು' ಈಗ ಸಿನಿಮಾ ತೆರೆಯ ಮೇಲೆ ಎದ್ದುಬಂದಿದ್ದಾಳೆ. ಆ ಚಿತ್ರದಲ್ಲಿ ಆಕೆಯ ಪಾಲಿಗೆ ಧ್ಯಾನಪೀಠವೇ ಆಗಿಹೋಗಿರುವುದು, ಒಂದು...

  • ಭಾರತದ ಮೊದಲನೇ ಕರಡಿ ಧಾಮದ ಖ್ಯಾತಿ, ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ದರೋಜಿ ಕರಡಿ ಧಾಮದ್ದು. ಈ ಧಾಮಕ್ಕೀಗ ಭರ್ತಿ 25 ವರ್ಷ. ಕರಡಿ- ಮಾನವರ ಸಂಘರ್ಷ ತಡೆಯುವ...

  • ಕನ್ನಡ ದೃಶ್ಯ ಜಗತ್ತನ್ನು ಕಲಾತ್ಮಕವಾಗಿ ಶ್ರೀಮಂತಗೊಳಿಸಿದ ಕೆಲವೇ ಕೆಲವು ನಿರ್ದೇಶಕರ ಪೈಕಿ ಗಿರೀಶ್‌ ಕಾಸರವಳ್ಳಿ ಕೂಡ ಒಬ್ಬರು. ಚೊಚ್ಚಲ ನಿರ್ದೇಶನ, "ಘಟಶ್ರಾದ್ಧ'...

  • ರಘುರಾಮನು ವನರಾಮನಾಗಿ ಆರಾಮದಿಂದ ಇದ್ದ ಸ್ಥಳವೇ ಚಿತ್ರಕೂಟ. ರಾಮ, ಲಕ್ಷ¾ಣ, ಸೀತೆಯರ ಚಿತ್ತಾಪಹಾರ ಮಾಡಿದ್ದ ಚಿತ್ರಕೂಟವು ಪ್ರವಾಸಿಗರ ಚಿತ್ತವನ್ನೂ ಅಪಹರಿಸುವಷ್ಟು...

  • ಸದ್ಗುರು ಕ್ಷೇತ್ರಗಳ ಸಾಲಿನಲ್ಲಿ ವರದಪುರದ ಶ್ರೀಧರಾಶ್ರಮ, ಭಕ್ತರ ಜನಮಾನಸದಲ್ಲಿ ಹೆಸರು ಮಾಡಿರುವ ತಾಣ. ಸುಂದರ ಬೆಟ್ಟದ ತಪ್ಪಲಿನಲ್ಲಿ, ಮಲೆನಾಡಿನ ಹಸಿರಿನ ತಂಪಿನಲ್ಲಿರುವ...

ಹೊಸ ಸೇರ್ಪಡೆ