“ಡಿಜೆ’ಖ್ಯಾತಿಯ ಬ್ರಾವೊ ವಿದಾಯ

Team Udayavani, Nov 3, 2018, 3:25 AM IST

ಡ್ವೇನ್‌ ಬ್ರಾವೊ ಎಂಬ ದೌತ್ಯ ಕ್ರಿಕೆಟಿಗನ ಹೆಸರು ಕೇಳಿದಾಗ ಎಂತಹ ಎದುರಾಳಿಯಾದರೂ ಆತನ ಎದೆಯಲ್ಲಿ ಒಂದು ಕ್ಷಣ ಕಂಪನ ಉಂಟಾಗುವುದರಲ್ಲಿ ಅನುಮಾನವಿಲ್ಲ. ಬ್ಯಾಟಿಂಗ್‌ಗೆ ಇಳಿದರೆ ಸ್ಫೋಟಕ ಬ್ಯಾಟ್ಸ್‌ಮನ್‌, ಬೌಲಿಂಗ್‌ಗೆ ಎಸೆದರೆ ಮಿಂಚಿನ ದಾಳಿಗಾರ. ಒಟ್ಟಾರೆ ಬ್ರಾವೊ ಒಬ್ಬ ಸಮರ್ಥ ಆಲ್‌ರೌಂಡರ್‌. ಕೆರಿಬಿಯನ್‌ ದೊರೆ ಧ್ರುವತಾರೆ ಎಸೆದು ಹೆಸರುವಾಗಿಸಿಯಾಗಿರುವ ಬ್ರಾವೊ ವಿಶ್ವದಲ್ಲಿ ಕೋಟ್ಯಂತರ ಅಭಿಮಾನಿ ಬಳಗ ಹೊಂದಿದ್ದಾರೆ. ಇದೀಗ ಬ್ರಾವೊ ವರ್ಣರಂಜಿತ ಕ್ರಿಕೆಟ್‌ ಬದುಕಿಗೆ ವಿದಾಯ ಹೇಳಿದ್ದಾರೆ. ಬ್ರಾವೊ ಹಠಾತ್‌ ವಿದಾಯದಿಂದ ಅಭಿಮಾನಿಗಳಿಗೆ ಬಿಗ್‌ಶಾಕ್‌ ಆಗಿದೆ. 35 ವರ್ಷದ ಬ್ರಾವೊ ಒಟ್ಟು 14 ವರ್ಷಗಳ ಸಂತೃಪ್ತಿಯ ಕ್ರಿಕೆಟ್‌ ಜೀವನ ಕಂಡಿದ್ದಾರೆ. ವಿಂಡೀಸ್‌ಗೆ ಹಲವು ಸ್ಮರಣೀಯ ಗೆಲುವು ತಂದುಕೊಟ್ಟ ಬ್ರಾವೊ ಸಾಧನೆಗಳೇ ಭವಿಷ್ಯದ ಕ್ರಿಕೆಟಿಗರಿಗೆ ಸ್ಫೂರ್ತಿ.  

2 ವರ್ಷದಿಂದ ಅಂ.ರಾ ಪಂದ್ಯ ಆಡಿಲ್ಲ
2016ರ ಸೆಪ್ಟೆಂಬರ್‌ನಿಂದ, ಅಂದರೆ ಸುಮಾರು 2 ವರ್ಷದಿಂದ ಬ್ರಾವೊ ಅಂತಾರಾಷ್ಟ್ರೀಯ ಪಂದ್ಯವನ್ನೇ ಆಡಿಲ್ಲ. ವೆಸ್ಟ್‌  ಇಂಡೀಸ್‌ ಕ್ರಿಕೆಟ್‌ ಮಂಡಳಿಯೊಂದಿಗೆ ವೇತನ ಮತ್ತು ಆಡಳಿತಾತ್ಮಕ ಸಮಸ್ಯೆಗಳ ಕಾರಣದ ತಿಕ್ಕಾಟದಿಂದಾಗಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದಲೇ ದೂರವಾಗಿದ್ದರು. ಈ ವೇಳೆ ಐಪಿಎಲ್‌ನಲ್ಲಿ ಪಾಲ್ಗೊಂಡಿದ್ದನ್ನು ಸ್ಮರಿಸಬಹುದು. 

ಎರಡು ವಿಶ್ವಕಪ್‌ ಗೆದ್ದ  ತಂಡದಲ್ಲಿದ್ದ ಬ್ರಾವೊ
ಬ್ರಾವೊ ಮೂರೂ ಮಾದರಿಗಳಲ್ಲಿ ಒಟ್ಟಾರೆ 2004-2016ರ ಅವಧಿಯಲ್ಲಿ 270 ಅಂತಾರಾಷ್ಟ್ರೀಯ ಪಂದ್ಯ ಆಡಿ¨ªಾರೆ. 40 ಟೆಸ್ಟ್‌, 164 ಏಕದಿನ ಮತ್ತು 66 ಟಿ20 ಪಂದ್ಯವನ್ನು ಒಳಗೊಂಡಿದೆ. ಇದರಲ್ಲಿ 2012 ಮತ್ತು 2016ರ ವಿಶ್ವಕಪ್‌ ಟಿ20ಯ ಎರಡು ಗೆಲುವುಗಳೂ ಸೇರಿವೆ. 

2013ರಲ್ಲಿ ಕೊನೆ ಏಕದಿನ
2013ರಲ್ಲಿ ಡರೆನ್‌ ಸಮಿ ಅವರಿಂದ ವಿಂಡೀಸ್‌ ತಂಡದ ನಾಯಕತ್ವ ವಹಿಸಿಕೊಂಡ ಬ್ರಾವೊ, 2014ರಲ್ಲಿ ಭಾರತ ಪ್ರವಾಸದಲ್ಲಿದ್ದ ವೇಳೆ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿಯೊಂದಿಗೆ ವೇತನ ಪಾವತಿ ಸಂಬಂಧ ಉಂಟಾದ ವಿವಾದದ ಕಾರಣ ಟೂರ್ನಿಯನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿ ತವರಿಗೆ ಮರಳುವ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆ ಸಂದರ್ಭದಲ್ಲಿ ಧರ್ಮಶಾಲಾದಲ್ಲಿ ಆಡಿದ ಏಕದಿನ ಪಂದ್ಯವೇ ಕೊನೆಯ ಬಾರಿಗೆ ಬ್ರಾವೊ ವಿಂಡೀಸ್‌ ತಂಡದಲ್ಲಿ ಕಾಣಿಸಿಕೊಂಡಿದ್ದು.

ಇನ್ನೂ ಇದೆ ಆಟ
ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರೂ, ವೃತ್ತಿಪರ ಕ್ರಿಕೆಟ್‌ನಿಂದ ಬ್ರಾವೋ ಸಂಪೂರ್ಣ ದೂರವಾಗಿಲ್ಲ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಪ್ರತಿನಿಧಿಸುವುದನ್ನು ಮುಂದುವರಿಸಲಿ¨ªಾರೆ. ಬಿಗ್‌ ಬಾಶ್‌, ಕೆರಿಬಿಯನ್‌ ಲೀಗ್‌ ಸೇರಿದಂತೆ ಟಿ20 ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯಗಳಲ್ಲಿ ಆಡಲಿ¨ªಾರೆ. ನನ್ನ ವೃತ್ತಿಪರ ಕ್ರಿಕೆಟ…ಅನ್ನು ಮುಂದುವರಿಸಲಿದ್ದೇನೆ ಮತ್ತು ನೈಜ ಚಾಂಪಿಯನ್‌ ಆಗಿ ಮನರಂಜನೆ ನೀಡಲಿದ್ದೇನೆ’ ಎಂದು ಬ್ರಾವೊ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಟೆಸ್ಟ್‌, ಒನ್‌ ಡೇ, ಟಿ20 ಸಾಧನೆ
40 ಟೆಸ್ಟ್‌ ಪಂದ್ಯ ಆಡಿರುವ ಬ್ರಾವೊ, 71 ಇನಿಂಗ್ಸ್‌ಗಳಿಂದ 31.43ರ ಸರಾಸರಿಯಲ್ಲಿ 2,200 ರನ್‌ ಗಳಿಸಿ¨ªಾರೆ. ಇದರಲ್ಲಿ ಮೂರು ಶತಕ ಮತ್ತು 13 ಅರ್ಧ ಶತಕಗಳಿವೆ. 39.84ರ ಸರಾಸರಿಯಲ್ಲಿ 86 ವಿಕೆಟ್‌ಳನ್ನು ಪಡೆದಿ¨ªಾರೆ. ಎರಡು ಬಾರಿ ಐದು ವಿಕೆಟ್‌ ಸಾಧನೆ ಮಾಡಿ¨ªಾರೆ. 2004ರಲ್ಲಿ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಪಾದಾರ್ಪಣೆ ಮಾಡಿದ್ದ ಬ್ರಾವೊ 2010ರಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಟೆಸ್ಟ್‌ ಆಡಿದ್ದರು. 164 ಏಕದಿನ ಪಂದ್ಯಗಳಲ್ಲಿ 25.37ರ ಸರಾಸರಿಯಲ್ಲಿ 2968 ರನ್‌ ಗಳಿಸಿ¨ªಾರೆ. ಇದರಲ್ಲಿ ಎರಡು ಶತಕ ಮತ್ತು 10 ಅರ್ಧಶತಕಗಳಿವೆ. ಬೌಲಿಂಗ್‌ ವಿಭಾಗದಲ್ಲಿ 29.52ರ ಸರಾಸರಿಯಲ್ಲಿ 199 ವಿಕೆಟ್‌ಗಳನ್ನು ತಮ್ಮ ಖಾತೆಗೆ ಸೇರಿಕೊಂಡಿದ್ದಾರೆ. 66 ಟಿ20 ಪಂದ್ಯಗಳಲ್ಲಿ 59 ಇನಿಂಗ್ಸ್‌ ಗಳಿಂದ 116.53 ಸ್ಟ್ರೇಕ್‌ ರೇಟ್‌ನಲ್ಲಿ 1,142 ರನ್‌ ಗಳಿಸಿ¨ªಾರೆ. ಇದರಲ್ಲಿ ನಾಲ್ಕು ಅರ್ಧಶತಕಗಳಿವೆ. 8.46ರ ಎಕಾನಮಿಯಲ್ಲಿ 1470 ರನ್‌ ನೀಡಿ 52 ವಿಕೆಟ್‌ ಪಡೆದುಕೊಂಡಿ¨ªಾರೆ. 2016ರಲ್ಲಿ ಪಾಕಿಸ್ತಾನದ ವಿರುದ್ಧ ಕೊನೆಯ ಟಿ20 ಪಂದ್ಯ ಆಡಿದ್ದರು.

ಡಿಜೆ ಆಗಿಯೂ ಬ್ರಾವೊ ಜನಪ್ರಿಯ
ಇಂಡಿಯನ್‌ ಪ್ರೀಮಿಯರ್‌ ಕ್ರಿಕೆಟ್‌ ಲೀಗ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಭಾಗವಹಿಸಿದ್ದು, 2008 ರಿಂದ ಸತತವಾಗಿ ಚೆನ್ನೈ ತಂಡದ ಪರ ಆಡಿದ್ದರು. ಇದೂವರೆಗೂ ಐಪಿಎಲ್‌ನಲ್ಲಿ 122 ಪಂದ್ಯಗಳನ್ನಾಡಿರುವ ಬ್ರಾವೊ 1,379 ರನ್‌ 136 ವಿಕೆಟ್‌ ಪಡೆದಿ¨ªಾರೆ. ಗಾಯಕನೂ ಆಗಿರುವ ಬ್ರಾವೊ ತಮ್ಮದೇ ಶೈಲಿಯಲ್ಲಿ ಡಿಜೆ ಮೂಲಕ ಯುವಕರ ಮನಗೆದ್ದಿದ್ದರು. 

ಶ್ರೇಷ್ಠ ಬೌಲಿಂಗ್‌
ಟೆಸ್ಟ್‌: 55/6 
ಏಕದಿನ: 43/6 
ಟಿ20: 22/4 

ಗರಿಷ್ಠ ಮೊತ್ತ 
ಟೆಸ್ಟ್‌: 113 
ಏಕದಿನ: 112 
ಟಿ20: 66 

ಧನಂಜಯ ಆರ್‌.ಮಧು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

 • ಚಾಮರಾಜ ನಗರದ ಯಾವುದೇ ರಸ್ತೆಗಾದರೂ ಹೋಗಿ, ಅಲ್ಲಿ ವೆಂಕಟೇಶ್‌ ನೆಟ್ಟ ಸಾಲು ಸಾಲು ಗಿಡ-ಮರಗಳೇ ಕಾಣಿಸುತ್ತವೆ.ಸ್ವಂತ ಖರ್ಚಿ ನಿಂದ, ಬ್ಯಾಂಕಿನಿಂದ ಸಾಲವನ್ನೂ ಪಡೆದು,3ಸಾವಿರಕ್ಕೂ...

 • ಮಿಲನ ಕ್ರಿಯೆ ವೇಳೆ ಕೀಟಗಳು ತೀರಾ ನಿಶ್ಶಬ್ದತೆ ಬಯಸುತ್ತವೆ. ಇದರ ಫೋಟೋಗ್ರಫಿ ಅಷ್ಟು ಸುಲಭವೂ ಅಲ್ಲ. ನಮ್ಮ ಹೆಜ್ಜೆಯ ಸಪ್ಪಳ, ಅವುಗಳ ಗಮನಕ್ಕೆ ಬಂದರೂ, ಪರಸ್ಪರ ಬೇರ್ಪಡುತ್ತವೆ... ಪ್ರಕೃತಿಯ...

 • ಚಿತ್ರದುರ್ಗದ ತ.ರಾ.ಸು.ರಂಗಮಂದಿರದಲ್ಲಿ ಇತ್ತೀ ಚೆಗೆ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪಲ್ಲಿ ಸಾಹಿತಿ, ಚಿಂತಕ ಡಾ. ರಂಜಾನ್‌ ದರ್ಗಾ ಅವರು ಮಾಡಿದ...

 • ಬಳ್ಳಾರಿಯ ಈ ತಾಲೂಕು ಕೇಂದ್ರವು ಕೊಟ್ಟೂರೇಶ್ವರ ಸ್ವಾಮಿಯ ನೆಲೆವೀಡು. ಶ್ರೀ ಗುರು ಕೊಟ್ಟೂರೇಶ್ವರರು ಇಲ್ಲಿಗೆ ಕಾಲಿಟ್ಟ ನಂತರ ಪವಾ ಡ ಗಳು ಘಟಿಸಿದವು ಎನ್ನು ವುದು...

 • ಕರುನಾಡಿನ ವಾಸ್ತುಶಿಲ್ಪದ ಪರಂಪರೆಯಲ್ಲಿ ಹಲವು ಮಾದರಿಯ ಶಿಖರ  ದೇಗುಲಗಳಿವೆ. ಇದರಲ್ಲಿ ಭೂಮಿಜ ಶೈಲಿಯ ಶಿಖರಗಳದ್ದೂ ಒಂದು ಬಗೆ. ಪಿರಾಮಿಡ್ಡಿನಂತೆ ಮೇಲೆ ಏರುತ್ತಾ,...

ಹೊಸ ಸೇರ್ಪಡೆ

 • ಹೊಸದಿಲ್ಲಿ: ಕರ್ನಾಟಕದ 10 ಮಂದಿ ಅತೃಪ್ತ ಶಾಸಕರು ತಮ್ಮ ರಾಜೀನಾಮೆ ಅಂಗೀಕಾರದ ಬಗ್ಗೆ ನಿರ್ಧಾರ ಕೈಗೊಳ್ಳಲು ಸ್ಪೀಕರ್‌ ರಮೇಶ್‌ ಕುಮಾರ್‌ ವಿಳಂಬ ಮಾಡುತ್ತಿದ್ದಾರೆ...

 • ಬೆಂಗಳೂರು: ರಾಜ್ಯ ಸಮ್ಮಿಶ್ರ ಸರಕಾರದ ಅಗ್ನಿಪರೀಕ್ಷೆಯಾದ ವಿಶ್ವಾಸಮತ ಯಾಚನೆಗೆ ಗುರುವಾರ ಸಮಯ ನಿಗದಿಪಡಿಸಲಾಗಿದ್ದು, ಪ್ರಸಕ್ತ ರಾಜಕೀಯ ಬೆಳವಣಿಗೆಗಳು ತಾರ್ಕಿಕ...

 • ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದ ಸಂಬಂಧ ಶಾಸಕ ಆರ್‌. ರೋಷನ್‌ ಬೇಗ್‌ ಅವರನ್ನು ವಿಶೇಷ ತನಿಖಾ ತಂಡ(ಎಸ್‌ಐಟಿ) ಸೋಮವಾರ ರಾತ್ರಿ ಕೆಂಪೇಗೌಡ ವಿಮಾನ ನಿಲ್ದಾಣ...

 • ಅರಂತೋಡು: ತೊಡಿಕಾನ ಗ್ರಾಮದ ಶಾಲಾ ಬಳಿಯ ಅಂಗನವಾಡಿ ಕಟ್ಟಡ ಕಾಮಗಾರಿ ಹಲವು ವರ್ಷಗಳ ಬಳಿಕ ಪೂರ್ಣಗೊಂಡಿದೆ. ಒಂದು ವಾರದಲ್ಲಿ ಇಲಾಖೆಗೆ ಹಸ್ತಾಂತರ ನಡೆಯಲಿದೆ. 2015ನೇ...

 • ಮಂಜೇಶ್ವರ: ಬರಗಾಲದ ಅಪಾಯ ಎದುರಿಸುತ್ತಿರುವ ನಾಡಿಗೆ ನೀರಿನ ಸಿಂಚನ ನೀಡಬಲ್ಲ ಬಿದಿರನ್ನು ಕಾಸರಗೋಡು ಜಿಲ್ಲೆಯನ್ನು ಬಿದಿರಿನ ರಾಜಧಾನಿಯಾಗಿ ಪರಿವರ್ತಿಸುವ...

 • ಔರಂಗಾಬಾದ್‌: ಇಲ್ಲಿನ ಪಡೇಗಾಂವ್‌ ಪ್ರಾಂತ್ಯದ ಮಿಸ್ಬಾ ಕಾಲನಿಯಲ್ಲಿದ್ದ ಎಟಿಎಂ ಯಂತ್ರವನ್ನು ದೋಚಲು ಬಂದಿದ್ದ ಕಳ್ಳರ ತಂಡವೊಂದನ್ನು 73 ವರ್ಷದ ವೃದ್ಧರೊ ಬ್ಬರು...