ಸಂತ್ರಸ್ತರ ದುಃಖಕ್ಕೆ ದನಿಯಾಗಿ…

ಮೇಷ್ಟ್ರು: ವೀರಣ್ಣ ಮಡಿವಾಳರ; ಸೇವೆ: ಪ್ರವಾಹ ಸಂತ್ರಸ್ತರಿಗೆ ನೆರವು

Team Udayavani, Aug 31, 2019, 5:11 AM IST

ಕಳೆದ ಒಂದು ವರುಷದಲ್ಲಿ, ಬೆಳಗಾವಿ ಜಿಲ್ಲೆಯ ಅಂಬೇಡ್ಕರ್‌ ನಗರದ ನಿಡಗುಂದಿ ಶಾಲೆ, ತಾನೇ ನಂಬದಷ್ಟು ಹೊಸತನಗಳಿಗೆ ಮುಖವೊಡ್ಡಿತು. ಶಾಲೆಯ ತುಂಬೆಲ್ಲ, ಕಾಮನಬಿಲ್ಲು ಮೂಡಿತು. ಗೋಡೆಗಳು ಬಣ್ಣಬಣ್ಣದ ಚಿತ್ತಾರ ಹೊತ್ತು, ಮಕ್ಕಳ ಮನೋಲೋಕವನ್ನು ಕದ್ದವು. ಶಾಲೆಯಂಗಳ, ಹೂ ಹಸಿರ ಸೌಂದರ್ಯದಿಂದ ತೂಗಾಡಿತು. “ಸರ್ಕಾರಿ ಶಾಲೆ ನಮ್ಮ ಹೆಮ್ಮೆ’ ಎಂಬ ಅಭಿಯಾನವನ್ನು ಮನ್ನಡೆಸುವಲ್ಲೂ ಈ ಶಾಲೆ ಮುಂಚೂಣಿ. ಈಗ ಈ ಶಾಲೆ ಮತ್ತಷ್ಟು ಅಪ್‌ಡೇಟ್‌ ಆಗಿ, “ಸ್ಮಾರ್ಟ್‌ ಪ್ಲಸ್‌’ ಆಗಿದೆ. ಆಧುನಿಕ ಕಲಿಕೋಪಕರಣಗಳ ಮೂಲಕ ಮಕ್ಕಳು ಡಿಜಿಟಲ್‌ ಶಿಕ್ಷಣ ಪಡೆಯುತ್ತಿದ್ದಾರೆ.

ಈ ಎಲ್ಲ ಕ್ರಾಂತಿಯ ಹಿಂದೆ ಇರುವ ಮೇಷ್ಟ್ರು, ವೀರಣ್ಣ ಮಡಿವಾಳರ. ಕನ್ನಡ ಸಾಹಿತ್ಯದಲ್ಲೂ ಇವರ ಕೊಡುಗೆ ಕಾಣಬಹುದು. ಮೊನ್ನೆ ಇದೇ ಮೇಷ್ಟ್ರು, ಪ್ರವಾಹದ ಹೊತ್ತಿನಲ್ಲಿ ಕೈಕಟ್ಟಿ ಕೂರಲಿಲ್ಲ. ಶಾಲೆಯನ್ನು ಚೆಂದಗಾಣಿಸಲು ಯಾವ ಫೇಸ್‌ಬುಕ್‌ ಗೋಡೆ ನೆರವಾಗಿತ್ತೋ, ಅದೇ ಗೋಡೆಯ ಮೇಲೆ ತಮ್ಮ ನೆಲದ ಸಂಕಟ ಹಂಚಿಕೊಂಡರು. ಪ್ರವಾಹ ಪೀಡಿತ ಹಳ್ಳಿಗಳಿಗೆ ಹೋಗಿ, ಒಬ್ಬ ಸುದ್ದಿಗಾರನಂತೆ ಲೈವ್‌ ವಿಡಿಯೋಗಳ ಮೂಲಕ ಜನರ ಸಂತ್ರಸ್ತ ಬದುಕನ್ನು ಎಲ್ಲರ ಮುಂದಿಟ್ಟರು. ನೆರವು, ಪ್ರವಾಹದಂತೆ ಬಂತು. ಹಾಗೆ ಬಂದ ನೆರವನ್ನು, ಕಷ್ಟದಲ್ಲಿದ್ದ ಜನರಿಗೆ ಮುಟ್ಟಿಸಿದರು. ಆಹಾರ ಧಾನ್ಯ, ಉಡುಪು, ಪುಸ್ತಕ, ಬ್ಯಾಗುಗಳನ್ನು ಸಲ್ಲ ಬೇಕಾದವರಿಗೆ ಸಲ್ಲಿಸಿ, ಪುಣ್ಯ ಕಟ್ಟಿಕೊಂಡರು.
– ಸೋಮು ಕುದರಿಹಾಳ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • "ಮನುಷ್ಯ ಚಿಂತೆ ಬಿಟ್ಟು, ನೆಮ್ಮದಿ ಕಾಣಲು ತಿಂಥಣಿಗೆ ಬರಬೇಕು' ಎಂಬ ಮಾತಿದೆ. ತಿಂಥಣಿ ಮೌನೇಶ್ವರನಿಗೆ ಜಾತಿ, ಧರ್ಮ ಮೀರಿದ ಭಕ್ತರಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ...

  • ಕರ್ನಾಟಕದ ವಾಸ್ತುಶಿಲ್ಪದ ಕೊಡುಗೆಯಲ್ಲಿ ಶೈವ ದೇಗುಲಗಳ ಪಾತ್ರ ಗಣನೀಯ. ಕದಂಬರ ಕಾಲದಿಂದಲೂ ಹಲವು ಶೈವ ಗುಡಿಗಳು ನಮ್ಮ ನಾಡಿನಲ್ಲಿ ನಿರ್ಮಾಣಗೊಂಡಿದ್ದು, ಅವುಗಳಲ್ಲಿ...

  • ಕುಪ್ಪಳಿಯಲ್ಲಿನ ಕುವೆಂಪು ಮನೆಯ ಒಳಕೋಣೆಯಲ್ಲಿ ಅಡಿಯಿಟ್ಟಾಗ ಸೆಳೆದದ್ದು "ಬಾಣಂತಿ ಕೋಣೆ' ಎಂಬ ಹಣೆಪಟ್ಟಿ ಹೊತ್ತ ಕೋಣೆ. ಕಬ್ಬಿಣದ ತೊಟ್ಟಿಲು, ಮರದ ತೊಟ್ಟಿಲು,...

  • ಬಹುತೇಕ ಭಾರತೀಯ ಸಂಸ್ಕೃತಿಗೆ ಹತ್ತಿರವಿರುವ ದೇಶ ಶ್ರೀಲಂಕಾ. ಈ ಸಾಂಸ್ಕೃತಿಕ ಬೆಸುಗೆಗೆ ಕಾರಣ, ರಾಮಾಯಣದ ಖಳನಾಯಕ ರಾವಣ. ರಾವಣನ ಆ ಸಾಮ್ರಾಜ್ಯ ಈಗ ಹೇಗಿದೆ ಎಂಬುದರ...

  • ಸಂಗಮೇಶ ಅವರು ಕಳೆದ 7 ವರ್ಷಗಳಿಂದ ಸ್ವರಕ್ತದಿಂದ ಚಿತ್ರ ಬಿಡಿಸುತ್ತಿದ್ದಾರೆ. ಇದುವರೆಗೆ 300 ಸಾಧಕರ ಚಿತ್ರವನ್ನು ನೆತ್ತರಿನ ಮೂಲಕವೇ ಚಿತ್ರಿಸಿರುವುದು ವಿಶೇಷ... ಕಲೆ-...

ಹೊಸ ಸೇರ್ಪಡೆ