ಗೋಕರ್ಣದ ಪುಸ್ತಕ ಸಮುದ್ರ:ವೇದಶ್ವರರ ಗ್ರಂಥಾಲಯದಲ್ಲಿ ಓದೇಶ್ವರರ ಸಾಲು!


Team Udayavani, Jun 24, 2017, 5:21 PM IST

699.jpg

 ಗೋಕರ್ಣಕ್ಕೆ ಹೋದ ರೆ ನೀವು ನೀವು ರಾಮತೀರ್ಥಕ್ಕೆ  ಹೋಗಲು ಮರೆಯಬೇಡಿ. ಅಲ್ಲಿಗೆ  ಹೋದ ಮೇಲೆ ಗುಡ್ಡ ದ ಮೇಲೆ ಹತ್ತುವುದನ್ನು ಮರೆತೀರಿ ಜೋಕೆ. ಅ ಲ್ಲಿ ನಿಂತು ಸಮು ದ್ರದ ತುಂಟಾ ಟವನ್ನಷ್ಟೇ ನೋಡಿ  ಬಂದರೆ ಪ್ರಯೋ ಜನವಿಲ್ಲ.  ರಾಮತೀರ್ಥದ ಮೇಲಾಗದಲ್ಲಿ ಮೆಟ್ಟಿಲುಗಳನ್ನು ಹತ್ತಿ ಹೋದರೆ ಅಲ್ಲಿ ಪುಸ್ತಕ ಸಮುದ್ರವಿದೆ. ಮಗುಳುನಗುವ ವೇದೇಶ್ವರರ ಹಿಂದೆ ಲಕ್ಷಾಂತರ ಪುಸ್ತ ಕಗಳಿವೆ. ಅದರಲ್ಲಿ ಮಿಂದು ಬನ್ನಿ. 

ಗೋಕರ್ಣ ಎಂದ ಕ್ಷಣ ಮನದಲ್ಲಿ ರಾಚುವುದು ಆ ಮಹಾಬಲೇಶ್ವರನ ಆತ್ಮಲಿಂಗದ ಸನ್ನಿಧಾನ.  ಕ್ರಿಯಾ ಕರ್ಮಗಳನ್ನು ಮಾಡಿಸಲು ಹಿಂದೆ ಬೀಳುವ ಅರ್ಚಕರು , ತಾಜಾ ದೇಸಿ ತರಕಾರಿಗಳನ್ನು ಮಾರುತ್ತ ಕುಳಿತಿರುವ ಗೌಡತಿಯರು, ಮಿರುಗುವ ಸಮುದ್ರ ತೀರದಲ್ಲಿ ಉದ್ದುದ್ದ ರಾಚಿ ಬಿದ್ದಿರುವ ಮರಳಿನ ಮೇಲೆ ಅಡ್ಡಡ್ಡ ಮಲಗಿರುವ ವಿದೇಶಿಗರು , 
ಸುಂಯ್ಯನೇ ಬೀಸುವ ಗಾಳಿಯ ತಾಳಕ್ಕೆ ನರ್ತಿಸುವ ಅಲೆಗಳ ಮಜವನ್ನು ನೋಡುತ್ತ ತಾವೂ ಜೊತೆಯಾಗುವ ಪ್ರವಾಸಿಗರು … ಗೋಕರ್ಣವೆಂದರೆ ಬರಿ ಇಷ್ಟೇನಾ? ಅಲ್ಲ, ಖಂಡಿತ ಇಷ್ಟೇ ಅಲ್ಲ, ಇವೆಲ್ಲದರ ಜೊತೆಗೆ ಗೋಕರ್ಣವು ಕನ್ನಡ ಸಾರಸ್ವತ ಲೋಕಕ್ಕೆ ತನ್ನದೇ ಆದ ಅನಘÂì ರತ್ನಗಳನ್ನು ಕೊಟ್ಟಿದೆ. ಗೌರೀಶ ಕಾಯ್ಕಿಣಿ, ಯಶವಂತ ಚಿತ್ತಾಲರಂ  ಥ ಘಟಾನುಘಟಿಗಳು ಹಾಕಿಕೊಟ್ಟಂತಹ ಮೇಲ್ಪಂಕ್ತಿಯನ್ನು  ಜಯಂತ ಕಾಯ್ಕಿಣಿ ,ಚಿಂತಾಮಣಿ ಕೊಡ್ಲೆಕೆರೆಯಂತಹ ಹೊಸ ಪೀಳಿಗೆಯ ಸಾಹಿತಿಗಳು ಮುನ್ನಡೆಸುತ್ತಿದ್ದಾರೆ. ಇಷ್ಟೇ ಅಲ್ಲದೇ ಈ ನೆಲದಲ್ಲಿ ಸ್ವಾತಂತ್ರ್ಯ ಹೋರಾಟದ ಸ್ಪಷ್ಟ ಗುರುತುಗಳನ್ನೂ  ಗೋಕರ್ಣದಲ್ಲಿ ಕಾಣಬಹುದು.  ಈ ಮಣ್ಣಿನಲಿ ಆಡಿ ಬೆಳೆದ ಅನೇಕರು ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ. 

  ಇಂತಹ ಪುಣ್ಯ ಭೂಮಿಯಲ್ಲಿ ನೇಪಥ್ಯದಲ್ಲಿದ್ದು, ಪ್ರಚಾರಗಳಿಂದ ದೂರ ಉಳಿದು ಸುಮಾರು 78 ವರ್ಷಗಳಿಂದ ಸತತವಾಗಿ ತಮ್ಮ ಸಾಹಿತ್ಯ ಸಂಗ್ರಹದ ಹುಚ್ಚಿಗೆ ಜೀವನವನ್ನೇ ಮುಡಿಪಾಗಿಟ್ಟಿರುವವ ರು ಈ ಗಣಪತಿ ವೇದೇಶ್ವರರು. 

 ಇವರ ಆರಂಭದ ದಿನ ಗಳೇ  ಕುತೂಹಲಕಾರಿ. 

1939ರ ಸಮಯ . 9 ರ ಹರೆಯದ ವೇದ ಶ್ವ ರ ರಿ ಗೆ ಅದು ಹೇಗೋ ಓದಿನ ಹುಚ್ಚು ಶುರುವಾಗಿತ್ತು. ಶಾಲೆಗೆ ಹೋಗಿ ಬಂದ ಸಹಪಾಠಿಗ‌ಳು ಆಡಲು ಮೈದಾನದತ್ತ ಮುಖ ಮಾಡಿದರೆ ಈ ಹುಡುಗ ತನ್ನ ಗೆಳೆಯರ್ಯಾರ ಕೈಗೂ ಸಿಗುತ್ತಿರಲಿಲ್ಲ. ಪರಿಚಯಸ್ಥರ ಮನೆಗೆ ಹೋಗಿ ಓದಲು ಪುಸ್ತಕಗಳನ್ನು ಬೇಡಿ ತರುತ್ತಿದ್ದ.  ಈತ ಕ್ರಮೇಣ ಒಂದಾಣೆ, ಎರಡಾಣೆಗೆಲ್ಲ ಪುಸ್ತಕಗಳನ್ನು ಖರೀದಿಸಿ ಸಂಗ್ರಹಿಸಲಾರಂಭಿಸಿದ. 1940ರಲ್ಲಿ ತನ್ನ ಗೆಳೆಯರನ್ನು ಪುಸಲಾಯಿಸಿ ಗೋಕರ್ಣದಲ್ಲಿ “ಸ್ಟಡಿ ಸರ್ಕಲ್‌’ ಎಂಬ ಗ್ರಂಥಾಲಯ ಸ್ಥಾಪಿಸಿದ. ಇದು ತಾಲ್ಲೂಕಿನ ಪ್ರಥಮ ಮತ್ತು ಜಿಲ್ಲೆಯ ಎರಡನೇ ಗ್ರಂಥಾಲಯ. ಹೀಗೆ ನೆರವೇರಿತು ಜ್ಞಾನದ ಖಜಾನೆಯ ಶಂಕುಸ್ಥಾಪನೆ. 

ಎಲ್ಲ ಆರಂಭಗಳಂತೆ ಇವರಿಗೂ ಸಹ ಮೊದ ಮೊದಲು ಹಣದ ಅಭಾವ ಕಾಡಿತು . ಆದರೇನಂತೆ ? 
ಎಲ್ಲ  ಖ್ಯಾತನಾಮ ಸಾಹಿತಿಗಳಿಗೆ, ವಿಜ್ಞಾನಿಗಳಿಗೆ, ವಿದ್ವಾಂಸರಿಗೆ , ಪ್ರಕಾಶಕರಿಗೆ , ಸಂಸ್ಥೆಗಳಿಗೆ ವೇದೇಶ್ವರರು ಪತ್ರದ ಮುಖೇನ ಬರೆದು ತಮ್ಮ ಉದ್ದೇಶದ ಬಗ್ಗೆ ವಿವರಿಸಿದರು. ಪುಸ್ತಕ ದಾನ ಮಾಡಿ ಅಂತ ಕೋರಿಕೊಂಡರು. ಕಾಲಕ್ರಮೇಣ ಫ‌ಲ ನೀಡಿದ ಈ ಪ್ರಯತ್ನದಿಂದ ಎಲ್ಲೆಡೆಯಿಂದ ಪುಸ್ತಕಗಳ ಒಳ ಹರಿವು ಆರಂಭವಾಯಿತು.  

ಗೋಕರ್ಣದ ಖ್ಯಾತ ಸಂಸ್ಕೃತ ಪಂಡಿರು ವೈ ದ್ಯರಾದ ಶರ್ಮರು ಗಣಪತಿ ವೇದೇಶ್ವರರ ಗುರು. ಇವರ ಪ್ರಭಾವದಲ್ಲಿ ಬೆಳೆದ ಗಣಪತಿಯವರಿಗೆ ಚಿಕ್ಕವಯಸ್ಸಿನಲ್ಲಿಯೇ ನಾಟಕ, ಯಕ್ಷಗಾನದ ಹುಚ್ಚು ಅಂಟಿಕೊಂಡಿತು. ಗೆಳೆಯರ ಗುಂಪು ಕಟ್ಟಿ ನಾಟಕಗಳನ್ನಾಡುತ್ತಿದ್ದ ಇವರು ನಂತರ ತಮ್ಮ ಗುರುಗಳ ಪುತ್ರಿಯನ್ನೇ ವಿವಾಹವಾದರು. ಪುಸ್ತಕಗಳ ಜೊತೆಗೆ ನಾಣ್ಯ , ಅಂಚೆ ಚೀಟಿ ,ಮಕ್ಕಳ ಶಾಲಾ ಆಟಿಕೆ ಹೀಗೆ ನಾ ನಾ ಸಂಗ್ರಹದ ಆಸಕ್ತಿ ವಿಸ್ತರಿಸಿತು. ಹೀಗೆ ಸಂಗ್ರಹಿಸಿದ ಪುಸ್ತಕ ವಸ್ತುಗಳು ಈಗ ಅಪರೂಪದ ಭಂಡಾರವಾಗಿ ನಿಂತಿವೆ .

ಇವರು ಸಂಗ್ರಹಿಸಿರುವ ವಸ್ತುಗಳ ವಿಷಯಕ್ಕೆ ಬರುವುದಾದರೆ, ಸುಮಾರು 200ಕ್ಕೂ ಹೆಚ್ಚು ಪ್ರಖ್ಯಾತ ಸಾಹಿತಿಗಳ ಸ್ವಹಸ್ತಾಕ್ಷರದ ಪುಸ್ತಕಗಳಿವೆ. ಬಹುತೇಕ ಎಲ್ಲ ದೇಶಗಳ ನಾಣ್ಯಗಳು, ಲೆಕ್ಕಕ್ಕೆ ಸಿಗದಷ್ಟು ಅಂಚೆಚೀಟಿಗಳು…ಹೀಗೆ ಇದೊಂದು ಅಮಿತ ಸಂಗ್ರಹಾಲಯ, ಗಣಪತಿ ವೇದೇಶ್ವರರ ಇಷ್ಟು ವರ್ಷಗಳ ಸಾಧನೆಯ ಪ್ರತೀಕ. ಆದರೆ ಈ ಸಾಧನೆಯ ಹಾದಿ ಮಾತ್ರ ಸುಲಭದ್ದಾಗಿರಲಿಲ್ಲ. ಸಾಮಾನ್ಯ ಪೌರೋಹಿತ್ಯ ಕುಟುಂಬದಲ್ಲಿ ಹುಟ್ಟಿದ ವೇದೇಶ್ವರರು ತಮ್ಮ ಪೂರ್ತಿ ಜೀವನವನ್ನೇ ಈ ಹವ್ಯಾಸಕ್ಕೆ ಮುಡಿಪಾಗಿಟ್ಟರು. ಪತಿಯ ಈ ತಪಸ್ಸಿಗೆ ಸಾಥ್‌ ನೀಡಿ ತಮ್ಮ ಕುಟುಂಬವನ್ನು ಮುನ್ನಡೆಸಿದ್ದು ಅವರ ಪತ್ನಿ. ಇಂತಹ ಅದ್ಭುತ ಭಂಡಾರವನ್ನು ಬೆಳೆಸಿ ಕಾಪಾಡಿಕೊಂಡು ಹೋಗಲು ಆರ್ಥಿಕ ಶಕ್ತಿ ಮತ್ತು ಸ್ಥಳಾವಕಾಶ ಎರಡೂ ಇಳಿವಯಸ್ಸಿನ ವೇದೇಶ್ವರರಲ್ಲಿ ಇರಲಿಲ್ಲ. ಹೀಗಾಗಿ ಒಂದು ಹಂತದಲ್ಲಿ ಇದು ತಮ್ಮ ಮಿತಿಯನ್ನು ದಾಟಿ ಹೋಗುತ್ತಿರುವುದನ್ನು ಅವರೂ ಮನಗಂಡಿದ್ದರು. ಆದರೆ ಯಾವುದೇ ಪರಿಸ್ಥಿತಿಯಲ್ಲಿ ಕೈಚೆಲ್ಲಲು ಅವರಲ್ಲಿರುವ  ಛಲಗಾರ ಮಾತ್ರ ಬಿಡಲಿಲ್ಲ. 

ಇಂತಹ ಪರಿಸ್ಥಿತಿಯಲ್ಲಿ ಅವರ ಹೋರಾಟದ ಕಥೆ‌ಗೊಂದು ತಿರುವು ಸಿಕ್ಕಿತು. ಸುಮಾರು ಹತ್ತು ವರ್ಷಗಳಿಂದ ಸತತವಾಗಿ ಗೋಕರ್ಣಕ್ಕೆ ಬರುತ್ತಿದ್ದ,  ಟಬೇಟ ಅಲಿಯಾಸ ಎಂಬ ಫ್ರಾನ್ಸ್‌ ನ ಪ್ರವಾಸಿಗನೊಬ್ಬ 2007ರಲ್ಲಿ ಈ ಗ್ರಂಥಾಲಯ ಪ್ರವೇಶಿಸಿದ. ಅಲ್ಲಿನ ಪುಸ್ತಕ ಸಂಪತ್ತನ್ನು ಕಂಡು ಬೆರಗಾದ ಆತ, ವೇದೇಶ್ವರರು ಅದನ್ನು ಕಾಪಾಡಲು ಪಡುತ್ತಿರುವ ಪಡಿಪಾಟಲನ್ನು ಕಂಡು ಮರುಗಿದ.  ಇಂತಹದೊಂದು ಅಪರೂಪದ ಸಂಪತ್ತನ್ನು ಉಳಿಸಿಕೊಳ್ಳಬೇಕೆಂಬುದು ಆತನ ಮನಸ್ಸಿಗೆ ಹೊಳೆದದ್ದೇ ತಕ್ಷಣ ಕಾರ್ಯಪ್ರ ವೃತ್ತನಾದ ಆತ “ಪಂದ್ರಾತಾ ಸರ್ಕಲ್‌’ ಎಂಬ ಸಂಸ್ಥೆ ಹುಟ್ಟು ಹಾಕಿ,  ಫ್ರಾನ್ಸ್‌ನಲ್ಲಿರುವ ತನ್ನ ಎಲ್ಲ ಸಂಪರ್ಕಗಳಿಂದ, ಸಂಘ ಸಂಸ್ಥೆಗಳಿಂದ ದೇಣಿಗೆ ಕೂಡಿಸಿದ ನಂತರ, ವೇದೇಶ್ವರರ ಮಾವನವರ ಹೆಸರಿನಲ್ಲಿದ್ದ ಗೋಕರ್ಣದ ರಾಮತೀರ್ಥದ ಬಳಿಯ ಒಂದು ಎಕರೆ ಜಾಗದಲ್ಲಿ ಸುಮಾರು 40 ಲಕ್ಷ ರೂಪಾಯಿ ವೆಚ್ಚದಲ್ಲಿ ಒಂದು  ವಿಶಾಲ ಗ್ರಂಥಾಲಯವನ್ನು ನಿರ್ಮಿಸಿಕೊಟ್ಟಿದ್ದಾರೆ.  2012ರಿಂದ ಅಲ್ಲಿ ಕಾರ್ಯಾರಂಭ ಮಾಡಿರುವ ಈ ಪುಸ್ತಕ ಸಂಗ್ರಹಾಲಯವನ್ನು  ಸಂಪೂರ್ಣ ಗಣಕೀಕರಣಗೊಳಿಸುವುದರತ್ತ  ಟಬೇಟ ಅಲಿಯಾಸ ಜೊತೆಗೆ ಆತನ ಪತ್ನಿ ಪಿಕೇಟ ದಾಪ್ನೆ ಮುಂದಾಗಿದ್ದಾರೆ. ಹೀಗೆ ನಾ ವೆ ಲ್ಲ ರೂ ಪಾಲಿಸಿ ಪೋ ಷಿಸಬೇಕಾಗಿದ್ದ ಅಪರೂಪದ ಸಂಗ್ರಹಾಲಯವನ್ನು ವಿದೇಶಿಗನೊಬ್ಬ ಕಾಪಾಡುವುದನ್ನು ನೋಡಬೇಕಾದ ಪ್ರಮೇಯ ಎದು ರಾ ಗಿ ದೆ.

ವಾಚನಾಲಯದ ಪುಸ್ತಕಗಳನ್ನು ಮಕ್ಕಳಂತೆ ಕಾಪಾಡಿಕೊಂಡು ಬಂದ ವೇದೇಶ್ವರರ ಈ ಕೈಂಕರ್ಯಕ್ಕೆ ಬೆನ್ನೆಲುಬಾಗಿ ನಿಂತಿದ್ದು ಅವರ ಪತ್ನಿ ಶಚಿದೇವಿ. ಅತ್ತ ಪತಿ ತನ್ನ ಪೂರ್ತಿ ಸಮಯವನ್ನು ವಾಚನಾಲಯದ ಕಾರ್ಯಕ್ಕಾಗಿ ಮೀಸಲಿಟ್ಟರೆ ಇತ್ತ ಸಂಸಾರದ ನೊಗವನ್ನು ಇವರು ಸಮರ್ಥವಾಗಿ ನಿಭಾಯಿಸಿದರು. ಹೆಚ್ಚಿನ ಸಮಯವನ್ನು ವಾಚನಾಲಯದಲ್ಲೇ ಕಳೆಯುತ್ತಿದ್ದ ವೇದೇಶ್ವರರಿಗೆ ಮಡದಿಯಿಂದ ಅಲ್ಲೇ ಊಟೋಪಹಾರ ಪೂರೈಕೆಯಾಗುತ್ತಿತ್ತು. ಆದರೆ ಈಗ ಇಳಿವಯಸ್ಸಿನಲ್ಲಿ ಬೆಟ್ಟ ಹತ್ತಿ ಮನೆಯಿಂದ ಅಡುಗೆಯನ್ನು ಹೊತ್ತು ತರುವುದು ಅವರಿಗೂ ಅಸಾಧ್ಯವಾದುದರಿಂದ ವೇದೇಶ್ವರರ ಕಿರಿಯ ಮಗ ತಂದೆಯೊಡನೆ ವಾಚನಾಲಯದಲ್ಲೇ ಉಳಿದು ಅಪ್ಪನ ಸೇವಗೈಯ್ಯುತ್ತಿದ್ದಾರೆ.

 ಪುಸ್ತಕಗಳನ್ನು ಕಲೆಹಾಕುವುದು ಒಂದು ಶ್ರಮದಾಯಕ ಕೆಲಸವಾದರೆ ಅವುಗಳನ್ನು ಕಾಪಾಡುವುದು ಇನ್ನೂ ತ್ರಾಸದಾಯಕ. ಮರದ ಪೆಟ್ಟಿಗೆಗಳಲ್ಲಿ,  ಸಂದೂಕುಗಳಲ್ಲಿ ಬಟ್ಟೆಸುತ್ತಿ ಕಾಪಾಡಿಕೊಂಡು ಬಂದಿರುವ ವೇದೇಶ್ವರರು ಈಗಲೂ ಸಹ ಖುದ್ದು ತಾವೇ ನೋಡಿಕೊಳ್ಳುತ್ತಾರೆ. ಇಳಿವಯಸ್ಸಲ್ಲೂ ಯಾವಯಾವ ಪುಸ್ತಕಗಳು ಎಲ್ಲಿವೆಯೆಂದು ಗೊತ್ತಿರುವುದು ಸ್ವತ‚ ಅವರಿಗೊಬ್ಬರಿಗೆಯೇ. ಮೊದಲೆಲ್ಲ ಓದುಗರಿಗೆ ಹೊರಗೆ ತೆಗೆದುಕೊಂಡು ಹೋಗಲು ಅವಕಾಶವಿತ್ತು. ಆದರೆ ಕೊಂಡುಹೋದ ಅಮೂಲ್ಯ ಪುಸ್ತಕಗಳು ವಾಪಸ್ಸುಬಾರದೇ ಹೋದ ಅನುಭವಗಳ ನಂತರ ಈಗ ಇದೀಗ ಅದಕ್ಕೆ ಅವಕಾಶವಿಲ್ಲ.  ಹೀಗಾಗಿ ಆಸಕ್ತರು ಇವುಗಳನ್ನು ಹುಡುಕಿಕೊಂಡು ವಾಚನಾಲಯಕ್ಕೆ ಬಂದು ಅಲ್ಲೇ ಕುಳಿತುಕೊಂಡು ಓದಿಕೊಂಡು ಹೋಗುತ್ತಾರೆ. ಇಲ್ಲಿಗೆ ಬರುವವರು ಸಂಶೋಧನೆಯಲ್ಲಿ ತೊಡಗಿಸಿಕೊಂಡವರು. ಆದರೆ ಇಂಥವರ ಸಂಖ್ಯೆಯೂ ಬಹಳ ಕಮ್ಮಿ ಇರುವುದರಿಂದ ಈಗಿನ ಯುವಜನಾಂಗದಲ್ಲಿ ಓದಿನ ಹವ್ಯಾಸ ಕಡಿಮೆಯಾಗಿರುವ ಬಗ್ಗೆ ಸ್ವತಃ ವೇದೇಶ್ವರರಿಗೂ ವಿಷಾದವಿದೆ. 

“ಅಪ್ಪ ಓದಿದ್ದು ಹೆಚ್ಚೇನೂ ಇರದಿದ್ದರೂ ಅವರ ಕೈಬರಹ ಮತ್ತು ಭಾಷೆಯ ಮೇಲಿನ ಹಿಡಿತ ಅದ್ಭುತವಾಗಿತ್ತು. ಕನ್ನಡ ಮತ್ತು ಇಂಗ್ಲೀಷಿನಲ್ಲಿ ಮನಮುಟ್ಟುವಂತೆ ಪತ್ರಗಳನ್ನು ಬರೆಯುತ್ತಿದ್ದ ಅವರು, ಪತ್ರಗಳನ್ನು ಸಂಬಂಧಪಟ್ಟವರಿಗೆ ತಲುಪಿಸಿ ಪುಸ್ತಕ ತರುವ‌ ಕೆಲಸಕ್ಕೆ ನಮ್ಮನ್ನು ಬಳಸಿಕೊಳ್ಳುತ್ತಿದ್ದರು. ನೌಕರಿಗಾಗಿ ಬೆಂಗಳೂರಿನಲ್ಲಿ ಅಲೆದಾಡುತ್ತಿದ್ದ ನಮಗೆ ಊರಿಗೆ ಬಂದಾಗೆಲ್ಲ ಒಂದಿಷ್ಟು ಪತ್ರಗಳನ್ನು ಕೈಗೆ ಕೊಟ್ಟು ಬರುವಾಗ ಪುಸ್ತಕಗಳನ್ನು ಹೊತ್ತು ತರುವ ಅಪ್ಪನ ಫ‌ರ್ಮಾನನ್ನು ನಾವೂ ತಪ್ಪದೆ ಪಾಲಿಸುತ್ತಿದ್ದೆವು’ ಎನ್ನುತ್ತಾರೆ ವೇದೇಶ್ವರರ ದ್ವಿತೀಯ ಪುತ್ರ ಸವೀತ್‌ಕುಮಾರ. 

ವೇದೇಶ್ವರರ ಈ ಸಾಧನೆಯನ್ನು ಸರ್ಕಾರ ಸಂಘ ಸಂಸ್ಥೆಗಳು ಗುರುತಿಸಿವೆ. 1984 ರಲ್ಲಿ ಉತ್ತಮ ಗ್ರಂಥಾಲಯ ರಾಜ್ಯಪ್ರಶಸ್ತಿ ಸಿಕ್ಕಿದೆ.  2004 ರಲ್ಲಿ ವೇದೇಶ್ವರರು ರಾಜ್ಯ ಪ್ರಶಸ್ಥಿಗೆ ಭಾಜನರಾಗಿದ್ದಾರೆ.  87ರ ಹರೆಯದ ಗಣಪತಿ ವೇದೇಶ್ವರರಿಗೀಗ ಹೊಸ ನೆಲೆಯಲ್ಲಿ ಹಳೇ ಕೈಂಕರ್ಯವನ್ನು ಮುಂದುವರೆಸಿದ್ದಾರೆ. ಇಳಿ ವಯಸ್ಸಿನ ಕಾರಣ ಮನೆಯಿಂದ ಗ್ರಂಥಾಲಯಕ್ಕೆ ಓಡಾಡಲಾಗದ ಪರಿಸ್ಥಿತಿಯಲ್ಲಿರುವ ಅವರಿಗೀಗ ಗೃಂಥಾಲಯವೇ ವಾಸಸ್ಥಾನ. ಮುಂದಿನ ಬಾರಿ ಗೋಕರ್ಣಕ್ಕೆ ಭೆಟ್ಟಿ ನೀಡಿದಲ್ಲಿ ಗ್ರಂಥಾಲಯಕ್ಕೊಮ್ಮೆ ಹೊಕ್ಕುಅವರಲ್ಲಿರುವ ಪುಸ್ತಕದಬಗ್ಗೆ ಒಮ್ಮೆ ವಿಚಾರಿಸಿ. ಛಕ್ಕನೆ ಎದ್ದು ನಿಂತು ಪುಸ್ತಕದತ್ತ ಧಾವಿಸುವ ಅವರ ಕಣ್ಣುಗಳಲ್ಲೊಂದು ಮಿಂಚು ಮೂಡುತ್ತದೆ . 

 ಲೈಬ್ರರಿಯಲ್ಲಿ ಏನೇನಿದೆ?
 ಪುರಾತನ ಶೈಲಿಯ ದೇವನಾಗರಿಯ ನಾಲ್ಕು ಸಾವಿರ ಪುಸ್ತಕಗಳು, ಸಂಸ್ಕೃತ ಸಾಹಿತ್ಯದ ಬಹುತೇಕ ಎಲ್ಲ ಪುಸ್ತಕಗಳು , ಸುಮಾರು 600 ವರ್ಷ ಹಳೆಯದಾದ 100 ಕ್ಕೂ  ಹೆ ಚ್ಚು ತಾಳೆಗರಿ ಸಾಹಿತ್ಯದ ಸಂಗ್ರಹಗಳಿವೆ.  ಕನ್ನಡ, ಹಿಂದಿ,ಇಂಗ್ಲೀಷ್‌,ಫ್ರೆಂಚ್‌, ಜರ್ಮನ್‌ ಸೇರಿದಂತೆ ಸುಮಾರು 38 ಭಾಷೆಯ ಪುಸ್ತಕಗಳು ಇಲ್ಲಿ ಲಭ್ಯ. 200 ವರ್ಷಗಳ ಎಲ್ಲ ಕನ್ನಡ ಪಠ್ಯ ಪುಸ್ತಕಗಳು, ಮೈಸೂರು ಅರಮನೆಯ ಪ್ರಕ ಟಿ ಸಿ ದ 36 ಋಗ್ವೇದದ ಎಲ್ಲ 36 ಸಂಪುಟಗಳು , ವಿವಿಧ ಭಾಷೆಗಳ 18 ಪುರಾಣಗಳು, ಉಪನಿಷತ್ತುಗಳು,  ವಿಜ್ಞಾನ , ಜ್ಯೋತಿಷ್ಯಶಾಸ್ತ್ರ, ಖಗೋಳ ಶಾಸ್ತ್ರ ಗಳನ್ನೊಳಗೊಂಡಂತೆಯೇ ಬೇರೆ ಬೇರೆ  ವಿಷಯಗಳಲ್ಲಿ ಬೇರೆ ಬೇರೆ ಭಾಷೆಯಲ್ಲಿ ಬರೆದಿರುವ ಪುಸ್ತಕಗಳು. 
ಮಹಾಭಾರತದ ವಿಶ್ಲೇಷಣೆಯ 33 ಸಂಪುಟಗಳ ಸಂಗ್ರಹ ಇಲ್ಲಿದೆ. ಇದನ್ನು 60 ಖ್ಯಾತ ಸಾಹಿತಿಗಳು 60 ವರ್ಷಗಳಲ್ಲಿ ಸಂಪಾದಿಸಿದ್ದಾರೆ. ಸಂಸ್ಕೃತದಲ್ಲಿರುವ ವಾಚಸ್ಪತ್ಯಂ ಎಂಬ ಸಂಸ್ಕೃತ ವಿಶ್ವಕೋಶವು ಆರು ಭಾಗದಲ್ಲಿದೆ. ಒಂದು ಅಂದಾಜಿನ ಪ್ರಕಾರ ಇಲ್ಲಿರುವ ಪುಸ್ತಕಗಳ ಸಂಖ್ಯೆ ಸುಮಾರು 1 ಲಕ್ಷ .  

ಸರ್‌ಸಿವಿ, ರಾಧಾಕೃಷ್ಣನ್‌ ಹಸ್ತಾಕ್ಷರ ಪುಸ್ತಕಗಳು
ಭಾರತದ ಪ್ರಥಮ ರಾಷ್ಟ್ರಪತಿ ಬಾಬು ರಾಜೇಂದ್ರಪ್ರಸಾದರವರು ಇಲ್ಲಿಗೆ ಭೇಟಿ ನೀಡಿದ್ದಾಗ ಕೊಟ್ಟ ತಮ್ಮ ಹಸ್ಥಾಕ್ಷರದ ಪುಸ್ತಕ ಈ ಖಜಾನೆಯ ಅಪರೂಪಗಳಲ್ಲೊಂದು. ಮಾಜಿ ರಾಷ್ಟ್ರಪತಿ ಡಾ. ಎಸ್‌. ರಾಧಾಕೃಷ್ಣನ್‌ , ನೋ ಬೆ ಲ್‌ ಪ್ರಶಸ್ತಿ ವಿಜೇತ ಸಿ.ವಿ.ರಾಮ ನ್‌, ಜ್ಯೂಲಿಯಸ್‌ ಹಕ್ಸಲೀ , ಅರ್ನಾಲ್ಡ್‌ ಟಾಯ°ಬೀ , ಕುವೆಂಪು , ಡಾ. ಶಿವರಾಮ ಕಾರಂತ  ಹೀಗೆ ಅನೇಕ ದಿಗ್ಗಜರ ಹಸ್ತಾಕ್ಷರವುಳ್ಳ ಪುಸ್ತಕಗಳು ಇಲ್ಲಿ ಲಭ್ಯ. ಪ್ರತಿ ವರ್ಷ ಸುಮಾರು 700 ಹೊಸ ಪುಸ್ತಕಗಳು ಈ ಭಂಡಾರಕ್ಕೆ ಸೇರ್ಪಡೆಯಾಗುತ್ತವೆ. 

 ಸುನೀಲ್‌ ಬಾರ್‌ಕೂರು

ಚಿತ್ರಗಳು: ಶ್ರೀಧರ್‌ಭಟ್‌, ಸವೀತ್‌ಕುಮಾರ್‌ 
 

ಟಾಪ್ ನ್ಯೂಸ್

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

13-

Woman: ಸದಾಕಾಲ ಸಾಧಕಿ ಹೆಣ್ಣು

12-

Sirsi Festival: ನಾವು ಬಂದೇವ ಶಿರಸಿ ಜಾತ್ರೆ ನೋಡಲಿಕ್ಕೆ !

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.