ವಯಸ್ಸು ಮೂವತ್ತಾರೋ? ಇಪ್ಪತ್ತಾರೋ?


Team Udayavani, Feb 3, 2018, 3:20 AM IST

2-vgg.jpg

ಜೀವನದಲ್ಲಿ ಒಂದಾದರೂ ಗ್ರ್ಯಾನ್‌ಸ್ಲಾಮ್‌ ಗೆಲ್ಲಬೇಕು ಅನ್ನುವ ಕನಸು ಪ್ರತಿಯೊಬ್ಬ ಟೆನಿಸ್‌ ಆಟಗಾರನಿಗೂ ಇರುತ್ತದೆ. ಆ ಕನಸನ್ನು ನನಸು ಮಾಡಿಕೊಳ್ಳಲು ಎಲ್ಲ ಆಟಗಾರರೂ ಹಗಲಿರುಳು ಶ್ರಮಿಸುತ್ತಾರೆ. ಗೆದ್ದಾಗ ನಿಟ್ಟುಸಿರುಬಿಟ್ಟು ಆನಂದಬಾಷ್ಪ ಸುರಿಸುತ್ತಾರೆ. ಆದರೆ ರೋಜರ್‌ ಫೆಡರರ್‌ ಹಾಗಲ್ಲ, ಇಂದು 20 ಗ್ರ್ಯಾನ್‌ಸ್ಲಾಮ್‌ ಒಡೆಯನಾಗಿದ್ದರೂ ಆತನಲ್ಲಿರುವ ಗೆಲುವಿನ ಹಸಿವು ಮಾಸಿಲ್ಲ. 36ನೇ ವಯಸ್ಸಿನಲ್ಲಿಯೂ ಛಲದಿಂದ ಆಡಿ ಬಿಸಿ ರಕ್ತದ ಯುವಕರನ್ನು ಸೋಲಿಸಿ ಭಾವುಕರಾಗಿ ಆನಂದಬಾಷ್ಪ ಚೆಲ್ಲುತ್ತಾರೆ! ಇದನ್ನೆಲ್ಲ ನೋಡಿದರೆ, ಫೆಡರರ್‌ಗೆ ವಯಸ್ಸು ಮೂವತ್ತಾರೋ? ಇಪ್ಪತ್ತಾರೋ? ಎಂದು ಯೋಚಿಸುವಂತಾಗಿದೆ. 

ಕ್ರಿಕೆಟ್‌, ಟೆನಿಸ್‌, ಫ‌ುಟ್ಬಾಲ್‌, ಹಾಕಿ, ಅಥ್ಲೆಟಿಕ್ಸ್‌… ಸೇರಿದಂತೆ ಬಹುತೇಕ ಕ್ರೀಡೆಯಲ್ಲಿ 36 ವರ್ಷ ಅನ್ನುವುದು ಕ್ರೀಡಾಪಟುವಿಗೆ ಮುಪ್ಪು ಇದ್ದಂತೆ. ಯಾವುದೇ ಸ್ಪರ್ಧೆಯಿದ್ದರೂ 18 ರಿಂದ 25 ವರ್ಷದೊಳಗಿನ ಬಿಸಿ ರಕ್ತದ ಯುವಕರ ಜತೆ ಕಾದಾಡಲು ಸಾಧ್ಯವಾಗುವುದಿಲ್ಲ. ವಯಸ್ಸು ಹೆಚ್ಚಾದಂತೆ ಆಟದ ಅಂಗಳದಲ್ಲಿ ವೇಗವಾಗಿ ಓಡಾಡಲು ದೇಹ ಸ್ಪಂದಿಸುವುದಿಲ್ಲ. ಆಗ ಅನಿವಾರ್ಯವಾಗಿ ಕ್ರೀಡಾಪಟುಗಳು ನಿವೃತ್ತಿಯ ಹಾದಿ ತುಳಿಯುತ್ತಾರೆ. ಆದರೆ ಟೆನಿಸ್‌ ದಿಗ್ಗಜ ರೋಜರ್‌ ಫೆಡರರ್‌ಗೆ ವಯಸ್ಸು ಅನ್ನುವುದು ಕೇವಲ ಅಂಕಿ ಸಂಖ್ಯೆ ಅಷ್ಟೇ, ಇದು ಆಸ್ಟ್ರೇಲಿಯಾ ಓಪನ್‌ನಲ್ಲಿ ಮತ್ತೂಮ್ಮೆ ಸಾಬೀತಾಯ್ತು!

20 ಗ್ರ್ಯಾನ್‌ಸ್ಲಾಮ್‌ ಕಿರೀಟ ಪಡೆದಿರುವ ಸ್ವಿಜರ್ಲೆಂಡ್‌ನ‌ ಫೆಡರರ್‌ಗೆ 36 ವರ್ಷ 6 ತಿಂಗಳು. ಸಾಮಾನ್ಯವಾಗಿ ಟೆನಿಸ್‌ನಲ್ಲಿ ಇದು ನಿವೃತ್ತಿ ಪಡೆಯುವ ವಯಸ್ಸು. ಇದೇ ಕಾರಣಕ್ಕೆ 2017ಕ್ಕೂ ಮುನ್ನ ಫೆಡರರ್‌ ನಿವೃತ್ತಿ ಪಡೆಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಯಾಕೆಂದರೆ, ಫೆಡರರ್‌ 2012ರಲ್ಲಿ ವಿಂಬಲ್ಡನ್‌ ಗ್ರ್ಯಾನ್‌ಸ್ಲಾಮ್‌ ಗೆದ್ದ ನಂತರ, 5 ವರ್ಷಗಳ ಕಾಲ ಒಂದೇ ಒಂದು ಗ್ರ್ಯಾನ್‌ಸ್ಲಾಮ್‌ ಗೆದ್ದಿರಲಿಲ್ಲ. ಆದರೆ, 2017ರಲ್ಲಿ ಗೆದ್ದ ಆಸ್ಟ್ರೇಲಿಯನ್‌ ಓಪನ್‌, ಮತ್ತೆ ಫೆಡರರ್‌ ಯುಗವಿನ್ನೂ ಮುಗಿದಿಲ್ಲ ಎಂದು ಸಾರಿ ಹೇಳಿತು. ಆ ನಂತರ ವಿಂಬಲ್ಡನ್‌, ಯುಎಸ್‌ ಓಪನ್‌ ಗೆದ್ದಿದ್ದ ಫೆಡರರ್‌ ಇದೀಗ 6ನೇ ಬಾರಿಗೆ ಆಸ್ಟ್ರೇಲಿಯನ್‌ ಓಪನ್‌ ಗೆದ್ದಿದ್ದಾರೆ.

ಟೆನಿಸ್‌ ಸಿಂಗಲ್ಸ್‌ನ ಪ್ರಸಕ್ತ ಕಾಲಮಾನದಲ್ಲಿ 25 ವರ್ಷದ ಆಜುಬಾಜಿನಲ್ಲಿರುವ ಪ್ರಬಲ ತಾರೆಯರಾದ ದಕ್ಷಿಣ ಕೊರಿಯಾದ ಚುಂಗ್‌ ಹ್ಯುಯಾನ್‌, ಹಂಗೇರಿಯ ಮಾರ್ಟನ್‌ ಫೋಕೊವಿಕ್ಸ್‌, ಜರ್ಮನಿಯ ಜನ್‌ ಲೆನಾರ್ಡ್‌ ಸ್ಟ್ರಾಫ್, ಕ್ರೊವೇಷ್ಯಾದ ಮರಿನ್‌ ಸಿಲಿಕ್‌ಗೆ, 36 ವರ್ಷದ ಫೆಡರರ್‌ ವಿರುದ್ಧ ಮಹತ್ವದ ಪಂದ್ಯಗಳಲ್ಲಿ ಗೆಲುವು ಪಡೆಯಲು ಸಾಧ್ಯವಾಗುತ್ತಿಲ್ಲ. ಕೈಯಲ್ಲಿ ರ್ಯಾಕೆಟ್‌ ಹಿಡಿದು ನಿಂತರೆ, ಯುವಕರೂ ನಾಚುವಂತೆ ಫೆಡರರ್‌ ಸರ್ವ್‌ ಮಾಡುತ್ತಾರೆ. ಎದುರಾಳಿ ಹೊಡೆತಕ್ಕೆ ಅಷ್ಟೇ ವೇಗದಲ್ಲಿ ರಿಟರ್ನ್ಸ್ ನೀಡುತ್ತಾರೆ. ಟೆನಿಸ್‌ ಆಟ ಆರಂಭಿಸಿದ ದಿನಗಳಲ್ಲಿ ಇದ್ದ ಉತ್ಸಾಹವನ್ನೇ ಇಂದಿಗೂ ಕಾಯ್ದುಕೊಂಡಿದ್ದಾರೆ.

2003ರಲ್ಲಿ ಮೊದಲ ಗ್ರ್ಯಾನ್‌ಸ್ಲಾಮ್‌
ರೋಜರ್‌ ಫೆಡರರ್‌ಗೆ ಮೊದಲ ಗ್ರ್ಯಾನ್‌ಸ್ಲಾಮ್‌ ಸಿಕ್ಕಿದ್ದು, 2003ರಲ್ಲಿ. ಅಂದಿನ ದಿನಗಳಲ್ಲಿ ಬಲಿಷ್ಠ ಆಟಗಾರನಾಗಿದ್ದ ಆಸ್ಟ್ರೇಲಿಯಾದ ಮಾರ್ಕ್‌ ಫಿಲಿಪೌಸಿಸ್‌ ವಿಂಬಲ್ಡನ್‌ನಲ್ಲಿ ಫೈನಲ್‌ ತಲುಪಿದ್ದರು. ಆಗಷ್ಟೇ ಟೆನಿಸ್‌ ಜಗತ್ತಿನಲ್ಲಿ ತನ್ನ ಹೆಸರು ದಾಖಲಿಸಲು ಸಿದ್ಧನಾಗಿದ್ದ ಫೆಡರರ್‌ ಕೂಡ ಫೈನಲ್‌ ತಲುಪಿದ್ದರು. 

ಪಂದ್ಯಕ್ಕೂ ಮುನ್ನ ಇದು ಮಾರ್ಕ್‌ಗೆ ಸುಲಭದ ತುತ್ತು ಎಂದೇ ಎಣಿಸಲಾಗಿತ್ತು. ಆದರೆ ಅಲ್ಲಿ ಆಗಿದ್ದೇ ಬೇರೆ. ಅಂದು 21 ವರ್ಷದ ಯುವಕನಾಗಿದ್ದ ಫೆಡರರ್‌ ಪಂದ್ಯವನ್ನು 7-6 (7-5), 6-2, 7-6(7-3) ಗೆದ್ದು ವೃತ್ತಿ ಜೀವನದಲ್ಲಿ ಮೊದಲ ಗ್ರ್ಯಾನ್‌ಸ್ಲಾಮ್‌ ಕಿರೀಟ ಪಡೆದರು.

20 ವರ್ಷದ ನಂತರವೂ ಅದೇ ಉತ್ಸಾಹ
1998ರಲ್ಲಿ ಮೊದಲ ಬಾರಿಗೆ ಹಿರಿಯರ ವಿಭಾಗದಲ್ಲಿ ಆಡಲು ಆರಂಭಿಸಿದ ಫೆಡರರ್‌ ಪದಾರ್ಪಣೆ ಮಾಡಿದ ಒಂದೇ ವರ್ಷದಲ್ಲಿಯೇ ಅಗ್ರ 100 ಶ್ರೇಯೊಂಕದೊಳಗೆ ಸ್ಥಾನ ಗಿಟ್ಟಿಸಿಕೊಂಡರು. 2002 ರಿಂದ 2016ರೊಳಗೆ ಸತತವಾಗಿ ಅಗ್ರ 10 ಶ್ರೇಯಾಂಕದೊಳಗೆ ಸ್ಥಾನವನ್ನು ಕಾಯ್ದುಕೊಂಡ ಖ್ಯಾತಿ ಅವರದು. ಎಟಿಪಿ ಶ್ರೇಯಾಂಕದಲ್ಲಿ 302 ವಾರಗಳ ಕಾಲ ನಂ.1 ಸ್ಥಾನ ಕಾಯ್ದುಕೊಂಡು ಇತಿಹಾಸ ನಿರ್ಮಿಸಿದ್ದಾರೆ.

ಸದ್ಯಕ್ಕೆ ಸವಾಲು ನೀಡುವವರು ಯಾರು?
ಕಳೆದ 10 ವರ್ಷಗಳಿಂದ ರೋಜರ್‌ ಫೆಡರರ್‌ಗೆ ಸವಾಲಾದವರೆಂದರೆ ಅದು ರಫಾಯೆಲ್‌ ನಡಾಲ್‌, ನೊವಾಕ್‌ ಜೊಕೊವಿಚ್‌, ಆ್ಯಂಡಿ ಮರ್ರೆ…ಸೇರಿದಂತೆ ಬೆರಳೆಣಿಕೆಯ ಆಟಗಾರರು ಮಾತ್ರ. ಇವರಲ್ಲಿ ಫೆಡರರ್‌ ಅವರನ್ನು ಹೆಚ್ಚು ಕಾಡಿಸಿದ್ದು, ನಡಾಲ್‌. ಇವರು 38 ಬಾರಿ ಮುಖಾಮುಖೀಯಾಗಿದ್ದಾರೆ. ಅದರಲ್ಲಿ ಫೆಡರರ್‌ 15 ಪಂದ್ಯ ಗೆದ್ದರೆ, 23 ಪಂದ್ಯದಲ್ಲಿ ಸೋತಿದ್ದಾರೆ. ಜೊಕೊ ವಿರುದ್ಧ 45 ಮುಖಾಮುಖೀಯಲ್ಲಿ 22ರಲ್ಲಿ ಗೆದ್ದರೆ, 23 ಬಾರಿ ಸೋಲುಂಡಿದ್ದಾರೆ. ಮರ್ರೆ ವಿರುದ್ಧ 25 ಬಾರಿ ಆಡಿದ್ದಾರೆ. ಅದರಲ್ಲಿ 14ರಲ್ಲಿ ಗೆಲುವು, 11ರಲ್ಲಿ ಸೋಲುಂಡಿದ್ದಾರೆ. ಆದರೆ ಇದೀಗ ನಡಾಲ್‌ ಗಾಯದಲ್ಲಿರುವುದೇ ಜಾಸ್ತಿ. ಸ್ಟಾನ್‌ ವಾವ್ರಿಂಕಾ ಮೊದಲಿನ ಫಾರ್ಮ್ ಉಳಿಸಿಕೊಂಡಿಲ್ಲ. ಉಳಿದಂತೆ ಜೊಕೊ, ಮರ್ರೆ ಕೂಡ ಗಾಯದಿಂದ ಬಳಲಿ ಫಾರ್ಮ್ ಕಳೆದುಕೊಂಡಿದ್ದಾರೆ. ಹೀಗಾಗಿ 2018ರಲ್ಲಿ ನಡೆಯಲಿರುವ ಫ್ರೆಂಚ್‌ ಓಪನ್‌, ವಿಂಬಲ್ಡನ್‌, ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ನಲ್ಲಿ ಫೆಡರರ್‌ಗೆ ಸವಾಲು ನೀಡುವವರು ಯಾರು ಅನ್ನುವುದೇ ಪ್ರಶ್ನೆಯಾಗಿದೆ.

ಪ್ರಶಸ್ತಿ ಮೊತ್ತವೇ 732 ಕೋಟಿ ರೂ.
20 ವರ್ಷದ ವೃತ್ತಿ ಜೀವನದಲ್ಲಿ ಫೆಡರರ್‌ ಗೆದ್ದ ಒಟ್ಟು ಪ್ರಶಸ್ತಿಯ ಸಂಖ್ಯೆ 96. ಅದರಲ್ಲಿ 20 ಗ್ರ್ಯಾನ್‌ಸ್ಲಾಮ್‌ ಕಿರೀಟ. ಒಟ್ಟು ಪ್ರಶಸ್ತಿಯ ಮೊತ್ತವೇ 732 ಕೋಟಿ ರೂ. ಇನ್ನು ಜಾಹೀರಾತಿನಿಂದ ಗಳಿಸಿದ ಮೊತ್ತ ಸಾವಿರಾರು ಕೋಟಿ ರೂ., ಮುಂದಿನ 3-4 ವರ್ಷಗಳ ಕಾಲ ಇದೇ ಫಾರ್ಮ್ ಉಳಿಸಿಕೊಂಡರೆ ಫೆಡರರ್‌ ಬಳಿ ಇರುವ ಪ್ರಶಸ್ತಿ ಮೊತ್ತವೇ ಸಾವಿರ ಕೋಟಿ ದಾಟಿದರೂ ಅಚ್ಚರಿ ಇಲ್ಲ.

ಮಂಜು ಮಳಗುಳಿ

ಟಾಪ್ ನ್ಯೂಸ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.