ಐಪಿಎಲ್‌ ಬೆಟ್ಟಿಂಗ್‌ ಕಥೆ! 


Team Udayavani, Apr 29, 2017, 11:34 AM IST

6.jpg

ಆಟದ ಜೂಜಾಟಕ್ಕೆ ಸಂಬಂಧಿಸಿದಂತೆ ದೇಶದ ಕಾನೂನು ಗೊಂದಲಕಾರಿಯಾಗಿದೆ. ದೇಶದೊಳಗಿನ ಬೆಟ್ಟಿಂಗ್‌ ನಿಷೇಧಕ್ಕೊಳಗಾಗಿದ್ದರೂ ಬೇರೆಡೆ ನಡೆಯುವ ಬೆಟ್ಟಿಂಗ್‌ನಲ್ಲಿ ಭಾರತೀಯ ಪಾಲ್ಗೊಳ್ಳುವುದು ಸರಿಧಿ ಅಥವಾ ತಪ್ಪು ಎನ್ನುವ ವಿಚಾರದಲ್ಲಿ ಕಾಯ್ದೆ ಮೌನವಾಗಿದೆ! ಆನ್‌ಲೈನ್‌ ಬೆಟ್ಟಿಂಗ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ಭರಪೂರ. ಹಣ ವರ್ಗಾಯಿಸುವುದಕ್ಕೆ ಮಾತ್ರ ಸರ್ಕಸ್‌ ಮಾಡಬೇಕು. ಅಂತಹ ರಂಗೋಲಿ ಕೆಳಗೆ ನುಸುಳುವ ಕೆಲಸವೂ ನಡೆಯುತ್ತಿರಬಹುದು!

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಆರ್‌ಸಿಬಿ ಹಾಗೂ ಸನ್‌ರೈಸರ್ ನಡುವಿನ ಪಂದ್ಯ ಆರಂಭ ಮಳೆಯಿಂದ ತಡವಾಗಿತ್ತು. ಅಂತಜಾìಲ ತೆರೆದು ನೋಡಿದರೆ ಅಲ್ಲೂ ಆಟದ್ದೇ ಸುದ್ದಿ, ಆದರದು ಕ್ರಿಕೆಟ್‌ ಅಂಕಣದ್ದಲ್ಲ, ಈ ಆಟ ಜೂಜಾಟದ್ದು. ಆಂಗ್ಲ ಪತ್ರಿಕೆಗಳ ಆನ್‌ಲೈನ್‌ ಆವೃತ್ತಿಗಳಲ್ಲಿ ಸುದ್ದಿಗಳ ಸರಮಾಲೆ. ಹಿಂದೂಸ್ತಾನ್‌ ಟೈಮ್ಸ್‌ ಹೇಳಿತ್ತು, ಸ್ನೇಹಿತರಿಂದ 25 

ವರ್ಷದ ಯುವಕನ ಮೇಲೆ ಹಲ್ಲೆ. ಪಶ್ಚಿಮ ಬಂಗಾಳದಲ್ಲಿ ಕೆಕೆಆರ್‌ ಪಂದ್ಯದ ಸಂದರ್ಭದಲ್ಲಿ ನಡೆದ ಇಂತಹ ಘಟನೆ ಈ 12 ಘಂಟೆಗಳಲ್ಲಿ ಎರಡನೆಯದು. ದಿ ಹಿಂದೂ ಇನ್ನೊಂದುಮಾಹಿತಿ ನೀಡಿತ್ತು, ಬೆಟ್ಟಿಂಗ್‌; ಇನ್ನೊಂದು ಗ್ಯಾಂಗ್‌ ಪತ್ತೆ. ಐಪಿಎಲ್‌ ಬೆಟ್ಟಿಂಗ್‌ ಹಿನ್ನೆಲೆಯಲ್ಲಿ ನಾಲ್ವರ ಬಂಧನದ ಸುದ್ದಿ ಬಿತ್ತರಿಸಿದ್ದು ಟೈಮ್ಸ್‌ ಆಫ್ ಇಂಡಿಯಾ.

ಐಪಿಎಲ್‌ನದ್ದು ಬೆಟ್ಟಿಂಗ್‌ ವಿಚಾರದಲ್ಲಿ ತೀರಾ ಕೆಟ್ಟ ಅನುಭವ. ಬೆಟ್ಟಿಂಗ್‌ನ ವಿವಾದಕ್ಕೆ ಆಟಗಾರರನ್ನು  ಆಡಳಿತಗಾರರನ್ನೋ ಕಳೆದುಕೊಂಡಿದ್ದರೆ ಚೂರೇ ಬೇಜಾರಾಗಬಹುದಿತ್ತು. ಆದರೆ ಐಪಿಎಲ್‌ ತನ್ನ ಎರಡು ತಂಡಗಳನ್ನೇ ಈ ಬೆಟ್ಟಿಂಗ್‌ ಚಕ್ರವ್ಯೂಹದಲ್ಲಿ ಕಳೆದುಕೊಂಡಿದೆ. ಐಪಿಎಲ್‌ನಲ್ಲಿ ಚಾಂಪಿಯನ್‌ ಆಗಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಕೊನೆ ಪಕ್ಷ ಎರಡು ವರ್ಷ ತೆರೆಮರೆಗೆ ಸರಿಯುವಂತಾಯಿತು.

ಕೆಲವು ಕಡೆ ಬೆಟ್ಟಿಂಗ್‌ ಕಾನೂನುಬದ್ಧ!
ವಿಶ್ವದ ಹಲವು ದೇಶಗಳಲ್ಲಿ ಬೆಟ್ಟಿಂಗ್‌ ಕಾನೂನುಬದ್ಧ. ಆನ್‌ಲೈನ್‌ನಲ್ಲಿ ಇದೇ ಐಪಿಎಲ್‌ ಪಂದ್ಯಗಳಲ್ಲಿ ತಂಡಗಳ ಬೆಟ್ಟಿಂಗ್‌ ರೇಟಿಂಗ್‌ ಬಗ್ಗೆ ಉದ್ದುದ್ದದ ವಿಶ್ಲೇಷಣೆಗಳಿವೆ. ಅಂತಜಾìಲದ ಮೂಲಕವೇ ಬೆಟ್ಟಿಂಗ್‌ ಮಾಡಿ ಹಣ ಪಾವತಿಸಬಹುದಾದ ಅವಕಾಶವೂ ಇದೆ. ಉದಾಹರಣೆಗೆ ಬೆಟ್‌ ವಿಕ್ಟರ್‌ ಎಂಬ ಬೆಟ್ಟಿಂಗ್‌ ವೆಬ್‌ ರಾಯಲ್ಸ್‌ ಚಾಲೆಂಜರ್ಗೆ 15/8 ಎಂದು ನಿರ್ಧರಿಸಿದೆ. ಸುಮಾರು 28 ಬೆಟ್ಟಿಂಗ್‌ ವೆಬ್‌ಗಳಲ್ಲಿ ಮೂರು ವೆಬ್‌ಗಳು ಐಪಿಎಲ್‌ನ ಪ್ರತಿಯೊಂದು ಫ‌ಲಿತಾಂಶ, ಇತರ ಪ್ರದರ್ಶನಗಳ ಬೆಟ್ಟಿಂಗ್‌ ನಡೆಸಿದೆ.

ಭಾರತದಲ್ಲಿ ಬೆಟ್ಟಿಂಗ್‌ ನಿಷಿದ್ಧ. ಇದರ ಉಲ್ಲಂಘನೆ ಶಿûಾರ್ಹ ಅಪರಾಧ. 1867ರ ವೇಳೆಗೇ ಬ್ರಿಟಿಷ್‌ ಸರ್ಕಾರ ಗ್ಯಾಬ್ಲಿಂಗ್‌ ನಿಷೇಧ ಹೇರಿ ಕಾಯ್ದೆಯನ್ನು ಮಾಡಿದ್ದು ಇವತ್ತಿಗೂ ಜಾರಿಯಲ್ಲಿದೆ. ಭಾರತದ ಮೇಲೆ ಮಹಾತ್ಮಾಗಾಂಧಿಯವರ ಪ್ರಭಾವ ಕೂಡ ಈ ನಿಲುವಿನಲ್ಲಿ ದೊಡ್ಡ ಮಟ್ಟದ ಬದಲಾವಣೆಗಳಾಗದಿರಲು ಕಾರಣ. ಆದರೆ ಇತ್ತೀಚೆಗಷ್ಟೇ ಗೋವಾದಲ್ಲಿ ಕ್ಯಾಸಿನೋಗಳಿಗೆ ಅಧಿಕೃತ ಮನ್ನಣೆ ನೀಡಲಾಗಿದೆ. ಪ್ಲೇವಿನ್‌ ಲಾಟರಿಯ ಮೂಲಕ ಸಿಕ್ಕಿಂ ಇಡೀ ದೇಶದ ಗಮನ ಸೆಳೆದಿದೆಯಲ್ಲದೆ ಅದರ ಪ್ರಗತಿ ನಾಗಾಲೋಟದಲ್ಲಿದೆ. ಅಷ್ಟೇಕೆ, ಬೆಂಗಳೂರು ಸೇರಿದಂತೆ ವಿವಿಧೆಡೆ ಇಂಡಿಯನ್‌ ಡರ್ಬಿ ಮೊದಲಾದ ಕುದುರೆ ರೇಸ್‌ ಚಾಲ್ತಿಯಲ್ಲಿದೆ. ಇವು ಜೂಜಾಟ ಅಲ್ಲವೇ? ಕಾನೂನಿನ ಒಳಸುಳಿಗಳೇ ಹಾಗೆ, ಪ್ರಶ್ನೆಗೆ ನಿಲುಕವು!

ಬೆಟ್ಟಿಂಗ್‌ನ್ನು ಕಾನೂನುಬದ್ಧಗೊಳಿಸಬೇಕು ಎಂಬ ಕೂಗು ಹಾಕುವವರು ಸಾಕ್ಷ್ಯಗಳನ್ನು ಮಹಾಭಾರತದಂತ ಮಹಾನ್‌ ಗ್ರಂಥಗಳಿಂದಲೇ ಹೆಕ್ಕಿ ತಂದಾರು. ಪಾಂಡವರ ಹಿರಿಯ ಇಂತದ್ದೇ ಬೆಟ್ಟಿಂಗ್‌ನಲ್ಲಿ ಹೆಂಡತಿಯನ್ನೇ ಅಡವಿಟ್ಟಿರಲಿಲ್ಲವೇ? ಜೂಜು ಎಂಬುದು ಮಾನವ ಸಹಜ ಕ್ರಿಯೆ. 
ನಾವೇ ನೋಡಿ, ಐಪಿಎಲ್‌ ನಡೆಯುವಾಗ ಇವತ್ತು ಕ್ರಿಸ್‌ ಗೇಲ್‌ ಶತಕ ಬಾರಿಸಲಿದ್ದಾನೆ ಎಂದು ಹೇಳುವ ಭವಿಷ್ಯ ಮಿತ್ರರಲ್ಲಿ ವಾದವಾಗಿ ಬೆಳೆದು, ಗೇಲ್‌ ಶತಕ ಬಾರಿಸಿದರೆ ನಾನು ನಿನಗೆ ನೂರು ರೂಪಾಯಿ ಕೊಡುವೆ, ಅವ ಶತಕ ಬಾರಿಸಿದ್ದರೆ ನೀನು 100 ರೂ. ಕೊಡಬೇಕು ಎಂಬ ಸವಾಲು ಸ್ವರೂಪದಲ್ಲಿ ಮತ್ತದೇ ಜೂಜು ತುಳುಕಾಡುತ್ತದೆ. ನಮ್ಮ ರಕ್ತದಲ್ಲಿಯೇ “ಜೂಜು ಜೀವನ ಮಾಡುತ್ತಿರುವಾಗ ಅದಕ್ಕೊಂದು ತಡೆ ಮಾಡುವುದು ಅನಧಿಕೃತ ಜೂಜಿಗಷ್ಟೇ ಕಾರಣವಾಗುತ್ತದೆ.

ನಮ್ಮೂರಲ್ಲಿ ಹಂಗ್ಯಾಕಿಲ್ಲ?
ಇದರ ಬದಲು ಬೆಟ್ಟಿಂಗ್‌ ಆಸಕ್ತರಿಗೆ ಅಧಿಕೃತ ಆಟಕ್ಕೆ ಅವಕಾಶ ಕೊಟ್ಟು ತೆರಿಗೆ ಸಂಗ್ರಹಿಸಿದರೆ ದೇಶ ಅಭಿವೃದ್ಧಿ ಪಥದಲ್ಲಿ ನಡೆಯುತ್ತದೆ. ಆಟಕ್ಕಿರುವ ಬಹುರೂಪಿ ಅಂಶ ಬೆಟ್ಟಿಂಗ್‌ ಅಂಶವನ್ನು ಪೋ›ತ್ಸಾಹಿಸುತ್ತದೆ. ಕ್ರಿಕೆಟ್‌ ಅಂತೂ ಬೆಟ್ಟಿಂಗ್‌ ವಿಷಯ ಸೃಷ್ಟಿಯಲ್ಲಿ ಬ್ರಹ್ಮಾಂಡವೇ ಸರಿ. 

ಟಾಸ್‌ನಿಂದ ಆರಂಭಿಸಿ ಆಡುವ ಹನ್ನೊಂದು, ಮೊದಲ ಓವರ್‌, ಕೊಡುವ ಬೌಂಡರಿ, ನೋಬಾಲ್‌, ಬ್ಯಾಟ್ಸ್‌ಮನ್‌ನ ರನ್‌, ಸಿಕ್ಸರ್‌… ಸಾವಿರ 
ಸಾವಿರ ವಿಷಯಗಳ ಮೇಲೆ ಬೆಟ್ಟಿಂಗ್‌ ಮಾಡಬಹುದು. ಅನಧಿಕೃತವಾಗಿ, ಆನ್‌ಲೈನ್‌ನಲ್ಲಿ ಬೆಟ್ಟಿಂಗ್‌ಗೆ ಅವಕಾಶ ಸಿಗುವ ಬದಲು ಅದಕ್ಕೊಂದು ಅಧಿಕೃತತೆ ತಂದುಕೊಟ್ಟರೆ ಸರ್ಕಾರಕ್ಕೆ ದೊಡ್ಡ ಪ್ರಮಾಣದಲ್ಲಿ ತೆರಿಗೆ, ಪರವಾನಗಿ ಶುಲ್ಕ ಹರಿದುಬರುತ್ತದೆ. ಇದರಿಂದ ಅಭಿವೃದ್ಧಿ ಮಂತ್ರ ಹೇಳಬಹುದು ಎಂಬ ವಾದವೂ ಹೆಚ್ಚುತ್ತಿದೆ.

ಕ್ರಿಕೆಟ್‌ ಮ್ಯಾಚ್‌ ಫಿಕ್ಸಿಂಗ್‌ನ ಕರಾಳ ರೂಪವನ್ನು ನೋಡಿದವರು ನಾವು. ಸಾಂ ಕ ಆಟದಲ್ಲಿ ಮ್ಯಾಚ್‌ ಫಿಕ್ಸಿಂಗ್‌ ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ದಕ್ಷಿಣ ಆಫ್ರಿಕಾದ ಹ್ಯಾನ್ಸಿ ಕ್ರೋನಿಯೇ, ಭಾರತದ ಮಹಮದ್‌ ಅಜರುದ್ದೀನ್‌ ಶಾಕಿಂಗ್‌ ಪ್ರತಿಕ್ರಿಯೆಯನ್ನು ತಮ್ಮ ಪ್ರಾಯೋಗಿಕ ನೆಲೆಯಲ್ಲಿಯೇ ಕೊಟ್ಟಿದ್ದವರು. 

ಅಷ್ಟೇಕೆ, ಇತ್ತೀಚೆಗೆ ಯಾವುದೇ ಪಂದ್ಯ ನಾಟಕೀಯ ತಿರುವು ಪಡೆದರೆ ಮ್ಯಾಚ್‌ ಫಿಕ್ಸಿಂಗ್‌ ಶಂಕೆ ಮೂಡುತ್ತದೆ. ಆಟದ ರೋಮಾಂಚನವನ್ನು ಅನುಭವಿಸಲು ಈಗ ಕಷ್ಟ ಕಷ್ಟ. ಅದರಲ್ಲೂ ಕ್ರಿಕೆಟ್‌ ಬೆಟ್ಟಿಂಗ್‌ ಮಾಫಿಯಾದ ಸುಲಭ ತುತ್ತು. ತಂಡವೊಂದು ಟಾಸ್‌ ಗೆದ್ದರೆ ಏನು ಮಾಡುತ್ತದೆ ಎಂಬ ಬೆಟ್ಟಿಂಗ್‌ನಲ್ಲಿ ನಾಯಕನೊಬ್ಬನನ್ನು “ಖರೀದಿಸಿದರೆ ಸಾಕು! ಬೌಲರ್‌, ಬ್ಯಾಟ್ಸ್‌ ಮನ್‌ ವೈಯುಕ್ತಿಕ ಪ್ರದರ್ಶನದ ಕುರಿತಾಗಿ ಕೂಡ ಬೆಟ್ಟಿಂಗ್‌ ನಿರ್ದೇಶಿಸಬಹುದು. ಶ್ರೀಶಾಂತ್‌, ಅಜಿತ್‌ ಶಾಂಡಿಲಾ, ಅಂಕಿತ್‌ ಚವ್ಹಾಣ್‌ ನೆನಪಾಗುತ್ತಾರೆ. ಆಟ ಆಟವಾಗಿರಬೇಕು. ಹಾಗಾಗಿ ಬೆಟ್ಟಿಂಗ್‌ ಬೇಡ. ಇದರ ತೆರಿಗೆ ಹಣದಿಂದ ಪ್ರಗತಿಯ ಮಾತೂ ಅಸಹ್ಯ ಎಂಬ ಪ್ರತಿವಾದವೂ ಇದೆ.

ಒಂದು ಸಮನ್ವಯವಂತೂ ಬೇಕು. ಬೆಟ್ಟಿಂಗ್‌ ಒಂದು ಉದ್ಯಮವಾಗಬಲ್ಲದು. ಇದಕ್ಕೆ ಅಧಿಕೃತ ವ್ಯವಸ್ಥೆಯ ಚೌಕಟ್ಟು ಇದ್ದಾಗ ಬೇಲಿ ಹಾರಿ ಮೇಯುವಿಕೆ ಕಡಿಮೆಯಾಗಬಹುದು. ಕ್ರಿಕೆಟ್‌ನೆ°à ತೆಗೆದುಕೊಂಡರೆ ಅದರ ಸಾಂ ಕ ಮಾದರಿಗೆ ಅನ್ವಯಿಸುವ ಅಂಶಗಳನ್ನಷ್ಟೇ ಬೆಟ್ಟಿಂಗ್‌ಗೆ ಪಣಕ್ಕಿಡಬಹುದು. ಐಪಿಎಲ್‌ನ ಲೆಕ್ಕಾಚಾರದಲ್ಲಿ ಪಂದ್ಯದ ಸೋಲು ಗೆಲುವು, ಟೂರ್ನಿಯ ಗರಿಷ್ಠ ರನ್‌, ಅತಿ ಹೆಚ್ಚಿನ ವಿಕೆಟ್‌ ತರಹದ ಉತ್ತಮ ಸಾಧನೆ ವಿಚಾರಗಳಲ್ಲಿ ಬೆಟ್ಟಿಂಗ್‌ ನಡೆದರೆ ಅದು ಗುಣಮಟ್ಟಕ್ಕೆ ಪೂರಕ. ಆನ್‌ಲೈನ್‌ನಲ್ಲಿ ಮಾತ್ರ ಪಾವತಿ ಇರುವ ಬೆಟ್ಟಿಂಗ್‌ಗೆ ಅವಕಾಶ ಕಲ್ಪಿಸಿದರೆ ಖುದ್ದು ಕೇಂದ್ರ ಸರ್ಕಾರ ಇಲ್ಲಿ ತೊಡಗಬಹುದಾದ “ಬ್ಯಾಡ್‌ ಎಲಿಮೆಂಟ್‌ಗಳ ಮೇಲೊಂದು ಕಣ್ಣಿಡುವುದೂ ಸುಲಭ!

ಜೂಜಾಡಿ, ನಮ್ಮೂರಲ್ಲಷ್ಟೇ ಬೇಡ!
ಆಟದ ಜೂಜಾಟಕ್ಕೆ ಸಂಬಂಧಿಸಿದಂತೆ ದೇಶದ ಕಾನೂನು ಗೊಂದಲಕಾರಿಯಾಗಿದೆ. ದೇಶದೊಳಗಿನ ಬೆಟ್ಟಿಂಗ್‌ ನಿಷೇಧಕ್ಕೊಳಗಾಗಿದ್ದರೂ ಬೇರೆಡೆ ನಡೆಯುವ ಬೆಟ್ಟಿಂಗ್‌ನಲ್ಲಿ ಭಾರತೀಯ ಪಾಲ್ಗೊಳ್ಳುವುದು ಸರಿ ಅಥವಾ ತಪ್ಪು ಎನ್ನುವ ವಿಚಾರದಲ್ಲಿ ಕಾಯ್ದೆ ಮೌನವಾಗಿದೆ! ಆನ್‌ಲೈನ್‌ ಬೆಟ್ಟಿಂಗ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ಭರಪೂರ. ಹಣ ವರ್ಗಾಯಿಸುವುದಕ್ಕೆ ಮಾತ್ರ ಸರ್ಕಸ್‌ ಮಾಡಬೇಕು. ಅಂತಹ ರಂಗೋಲಿ ಕೆಳಗೆ ನುಸುಳುವ ಕೆಲಸವೂ ನಡೆಯುತ್ತಿರಬಹುದು!

ಕೊನೆಯ ಸಾಲಿಗೆ ಬರುವ ವೇಳೆಗೆ ಆನ್‌ಲೈನ್‌ ಉದಯವಾಣಿಯಲ್ಲಿ ಒಂದು ಸುದ್ದಿ ಫ್ಲಾಶ್‌ ಆಗುತ್ತಿದೆ, ಶಿವಮೊಗ್ಗದಲ್ಲಿ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರು ಬೆಟ್ಟಿಂಗ್‌ ಆರೋಪದ ಮೇಲೆ ಏಳು ಜನರನ್ನು ಬಂಧಿಸಿದ್ದಾರೆ. 

ಏನಿದು ಬೆಟ್ಟಿಂಗ್‌?

ಐಪಿಎಲ್‌ನ್ನೇ ಎದುರಿಗಿಟ್ಟುಕೊಳ್ಳೋಣ. ಆನ್‌ಲೈನ್‌ ಬೆಟ್ಟಿಂಗ್‌ನಲ್ಲಿ ತಂಡವೊಂದರ ಆಡ್‌ 15/8 ಎಂದಿದೆ ಎಂತಾದರೆ, ಬುಕ್ಕಿ ನೀವು ಪಾವತಿಸುವ 8 ರೂ.ಗೆ ನಿಮ್ಮ ಬೆಟ್‌ ಗೆದ್ದರೆ 15 ರೂ. ಮರಳಿಸುತ್ತಾನೆ. ನೀವು ಕಟ್ಟಿದ 8 ರೂ. ಕೂಡ ವಾಪಾಸು. ಅಂದರೆ 8 ರೂ. ಹಾಕಿ ನೀವು 23 ರೂ. ಸಂಪಾದಿಸುತ್ತೀರಿ. ಇವತ್ತು ಆರ್‌ಸಿಬಿ ಮೇಲೆ ಹಣ ತೊಡಗಿಸಿ ಆ ತಂಡವೇ ಐಪಿಎಲ್‌ ಗೆದ್ದರೆ ಜೂಜುದಾರ ಹುರ್ರೆà! ಅದೇ ಡೆಲ್ಲಿ ಡೇರ್‌ಡೆವಿಲ್ಸ್‌ ಮೇಲೆ 2 ರೂ. ಹಾಕಿದರೆ 9 ರೂ. ಬಂದೀತು. ಈ ರೀತಿ ಪ್ರತಿ ತಂಡಕ್ಕೆ ಆಡ್‌ ರೇಟಿಂಗ್‌ ಇರುತ್ತದೆ.

ಅದೇ ರೀತಿ ಭುವನೇಶ್ವರ ಕುಮಾರ್‌ ಟಾಪ್‌ ಬೌಲರ್‌ ಆಗುತ್ತಾನೆ ಎಂಬ ಬೆಟ್‌ಗೆ 7 ರೂ.ಗೆ 4 ರೂ. ಅಷ್ಟೇ ಸಿಗುತ್ತದೆ. ಬೆಟ್ಟಿಂಗ್‌ನಲ್ಲಿ ಖಚಿತ ಫ‌ಲಿತಾಂಶದ ಸಾಧ್ಯತೆ ಇದ್ದಾಗ ತೊಡಗಿಸುವ ಹಣಕ್ಕೆ ಕಡಿಮೆ ಪ್ರತಿಫ‌ಲವಿರುತ್ತದೆ. ಎಷ್ಟೋ ಬಾರಿ ಹಾಕಿದ ಹಣವಷ್ಟೇ ಮರಳಿ ಬರುವ ಸಾಧ್ಯತೆ ಇರುತ್ತದೆ. ದುರ್ಬಲರ ಮೇಲೆ  ಬೆಟ್ಟಿಂಗ್‌ ಮಾಡಿದರೆ ರಿಟರ್ನ್ಸ್ ಜಾಸ್ತಿ. ಈ ಹಂತದಲ್ಲಿಯೇ ಜೂಜುಕೋರರು ಫಿಕ್ಸಿಂಗ್‌ಗೆ ಮುಂದಾಗುವುದು. ಆನ್‌ಲೈನ್‌ ಬೆಟ್ಟಿಂಗ್‌ ವ್ಯವಹಾರದಲ್ಲಿ ಇಂತಹ ಚಟುವಟಿಕೆಗಳ ಮೇಲೆ ಕಣ್ಣಿಡಲು ಸಾಧ್ಯ.

 ಮಾ.ವೆಂ.ಸ.ಪ್ರಸಾದ್‌

ಟಾಪ್ ನ್ಯೂಸ್

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.