ಐಪಿಎಲ್‌ನಲ್ಲಿ ಡಿಲ್ಲಿಗೇಕೆ ದುರ್ಗತಿ ? 


Team Udayavani, May 12, 2018, 11:45 AM IST

6.jpg

ಐಪಿಎಲ್‌ನಲ್ಲಿ ಸದ್ಯ ಆಡುತ್ತಿರುವ ಉಳಿದೆಲ್ಲ ತಂಡಗಳು ಒಂದು ಬಾರಿಯಾದರೂ ಫೈನಲ್‌ ತಲುಪಿವೆ. 5 ತಂಡಗಳು ಪ್ರಶಸ್ತಿ ಗೆದ್ದಿವೆ. ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳದ ದುರದೃಷ್ಟವಂತ ತಂಡವೆಂದರೆ ಡೆಲ್ಲಿ ಡೇರ್‌ ಡೆವಿಲ್ಸ್‌ ಮಾತ್ರ! ಈ ತಂಡವನ್ನು ಐಪಿಎಲ್‌ನ ದ.ಆಫ್ರಿಕಾ ತಂಡವೆನ್ನಬಹುದು. ಎಲ್ಲ ಸಾಮರ್ಥ್ಯವಿದ್ದರೂ ವಿಶ್ವಕಪ್‌ ಗೆಲ್ಲುವಲ್ಲಿ ಎಡವಿರುವ ದ.ಆಫ್ರಿಕಾದಂತೆ, ಡೆಲ್ಲಿ ಡೇರ್‌ ಡೆವಿಲ್ಸ್‌ ಕೂಡ ಯೋಗ್ಯತೆ ಇದ್ದರೂ ಕಪ್‌ ಅನ್ನು ಮಾತ್ರ ಪ್ರತಿಬಾರಿ ಬಿಟ್ಟುಕೊಡುತ್ತಲೇ ಬಂದಿದೆ. 

ಐಪಿಎಲ್‌ನಲ್ಲಿ ಒಮ್ಮೆಯೂ ಫೈನಲ್‌ಗೇರದ ತಂಡ ಯಾವುದು? ಐಪಿಎಲ್‌ನಲ್ಲಿ ದ.ಆಫ್ರಿಕಾವನ್ನು ಹೋಲುವ ನತದೃಷ್ಟ ತಂಡ ಯಾವುದು? ಉತ್ತರ: ಡೆಲ್ಲಿ ಡೇರ್‌ ಡೆವಿಲ್ಸ್‌. ಐಪಿಎಲ್‌ನಲ್ಲಿ ಸದ್ಯ ಆಡುತ್ತಿರುವ ಉಳಿದೆಲ್ಲ ತಂಡಗಳು ಒಂದು ಬಾರಿಯಾದರೂ ಫೈನಲ್‌ ತಲುಪಿವೆ. 5 ತಂಡಗಳು ಪ್ರಶಸ್ತಿ ಗೆದ್ದಿವೆ. ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳದ ದುರದೃಷ್ಟವಂತ ತಂಡವೆಂದರೆ ಡೆಲ್ಲಿ ಡೆವಿಲ್ಸ್‌ ಮಾತ್ರ! ಈ ತಂಡವನ್ನು ಐಪಿಎಲ್‌ನ ದ.ಆಫ್ರಿಕಾ ತಂಡವೆನ್ನಬಹುದು. ಎಲ್ಲ ಸಾಮರ್ಥ್ಯವಿದ್ದರೂ ವಿಶ್ವಕಪ್‌ ಗೆಲ್ಲುವಲ್ಲಿ ಎಡವಿರುವ ದ.ಆಫ್ರಿಕಾದಂತೆ ಡೆಲ್ಲಿ ಡೆವಿಲ್ಸ್‌ ಕೂಡ ಯೋಗ್ಯತೆ ಇದ್ದರೂ ಕಪ್ಪನ್ನು ಮಾತ್ರ ಪ್ರತಿಬಾರಿ ಬಿಟ್ಟುಕೊಡುತ್ತಲೇ ಬಂದಿದೆ.

ಇದುವರೆಗೆ ನಡೆದಿರುವ ಏಕದಿನ ವಿಶ್ವಕಪ್‌, ಟಿ20 ವಿಶ್ವಕಪ್‌ನಲ್ಲಿ ಒಮ್ಮೆಯೂ ದ.ಆಫ್ರಿಕಾ ಗೆದ್ದಿಲ್ಲ. ಪ್ರತಿ ಬಾರಿಯೂ ಕಪ್‌ ಗೆಲ್ಲುವ ಮೆಚ್ಚಿನ ತಂಡಗಳಲ್ಲೊಂದಾಗಿಯೇ ಸ್ಪರ್ಧೆಗಿಳಿಯುವ ಆಫ್ರಿಕಾ ಸೆಮಿಫೈನಲ್‌ನಲ್ಲೋ, ಅದಕ್ಕೂ ಮುನ್ನವೋ ಎಡವಟ್ಟು ಮಾಡಿಕೊಂಡು ಹೊರಬೀಳುತ್ತದೆ. ಆ ತಂಡದಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಕೊರತೆಯೇ ಎಂದರೆ ವಿಶ್ವಶ್ರೇಷ್ಠರ ಸಾಲೇ ಇರುತ್ತದೆ, ಬೌಲರ್‌ಗಳಿಗೆ ಕೊರತೆಯೇ ಎಂದರೆ ವಿಶ್ವದ ಘಾತಕ ವೇಗಿಗಳ ದಂಡೇ ಅಲ್ಲಿರುತ್ತದೆ. ಇನ್ನು ಕ್ಷೇತ್ರರಕ್ಷಣೆಯಲ್ಲಿ ಆ ತಂಡವನ್ನು ಮೀರಿಸುವವರೇ ಇಲ್ಲ. ಅಂತಹದ್ದರಲ್ಲಿ ಯಾಕೆ ಸೋಲುತ್ತದೆ? ಈ ಪ್ರಶ್ನೆಗೆ ಇದುವರೆಗೆ ಉತ್ತರ ಸಿಕ್ಕಿಲ್ಲ. ಇದುವರೆಗಿನ ಆμÅಕಾ ತಂಡದ ಸೋಲುಗಳನ್ನು ವಿಶ್ಲೇಷಿಸಿದಾಗ ಅದರಲ್ಲಿ ಮನೋವೈಜ್ಞಾನಿಕ ಅಂಶವೇ ಹೆಚ್ಚಾಗಿದೆ. ಅಂದರೆ ಗೆಲ್ಲಲೇಬೇಕಾದ ಸಂದರ್ಭದಲ್ಲಿ ಒತ್ತಡಕ್ಕೊಳಗಾಗುತ್ತದೆ. ಸಣ್ಣಪುಟ್ಟ ತಪ್ಪುಗಳನ್ನೆಲ್ಲ ಮಾಡುತ್ತದೆ. ಒಂದು ರೀತಿಯಲ್ಲಿ ಬದುಕಿನ ನೇರ ಜ್ಞಾನವೇ ಇಲ್ಲದ ಬುದ್ಧಿವಂತ ವಿದ್ಯಾರ್ಥಿಯ ರೀತಿ ಈ ತಂಡ ವರ್ತಿಸುತ್ತದೆ. ಡೆಲ್ಲಿಯ ಸ್ಥಿತಿ ಹಾಗಿಲ್ಲ. ಐಪಿಎಲ್‌ನಂತಹ ಕೂಟಗಳಲ್ಲಿ ಇಂತಹ ದಡ್ಡತನ ಮಾಡುವುದಕ್ಕೆ ಯಾವ ಫ್ರಾಂಚೈಸಿಯೂ ಬಿಡುವುದಿಲ್ಲ. ಆದರೂ ಡೆಲ್ಲಿ ಫೈನಲ್‌ಗೇರಿಲ್ಲ ಯಾಕೆ? ಬಹುಶಃ ದುರದೃಷ್ಟ!

ಸೆಹವಾಗ್‌ ಅವಧಿಯಲ್ಲಿ ಶ್ರೇಷ್ಠ ಸಾಧನೆ
ವೀರೇಂದ್ರ ಸೆಹವಾಗ್‌ ಡೆಲ್ಲಿ ಡೆವಿಲ್ಸ್‌ಗೆ ನಾಯಕರಾಗಿದ್ದಾಗ ಆ ತಂಡ ಶ್ರೇಷ್ಠ ಎನ್ನಿಸುವಂತಹ ಸಾಧನೆ ಮಾಡಿತ್ತು. ಐಪಿಎಲ್‌ ಆರಂಭದ ಮೊದಲೆರಡು ವರ್ಷಗಳಲ್ಲಿ ಅಂದರೆ 2008, 2009ರಲ್ಲಿ ಈ ತಂಡ ಸೆಮಿಫೈನಲ್‌ಗೇರಿತ್ತು (ಆಗ ಐಪಿಎಲ್‌ನಲ್ಲಿ ಪ್ಲೇಆಫ್ ವ್ಯವಸ್ಥೆ ಇರಲಿಲ್ಲ). ಆಗ ನಾಯಕರಾಗಿದ್ದ ವೀರೇಂದ್ರ ಸೆಹವಾಗ್‌ ಅತ್ಯುತ್ತಮ ಫಾರ್ಮ್ನಲ್ಲಿದ್ದರು. ಐಪಿಎಲ್‌ನಲ್ಲಿ ಸತತ 5 ಅರ್ಧಶತಕ ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯನ್ನು ಸೆಹವಾಗ್‌ ಪಡೆದುಕೊಂಡಿದ್ದು ಇದೇ ಹಂತದಲ್ಲಿ. 2010ರಲ್ಲಿ ಸೆಹವಾಗ್‌ ತಾವೇ ನಾಯಕತ್ವ ಬಿಟ್ಟುಕೊಟ್ಟರು. ನಂತರ ನಾಯಕ ಪಟ್ಟಕ್ಕೆ ಏರಿದರು ಗೌತಮ್‌ ಗಂಭೀರ್‌, ಅವರ ಅವಧಿಯಲ್ಲಿ ತಂಡ ಲೀಗ್‌ ಹಂತದಲ್ಲೇ ಹೊರಬಿತ್ತು. 2011ರಲ್ಲಿ ಗಂಭೀರ್‌ ಕೋಲ್ಕತಾ ನೈಟ್‌ರೈಡರ್ಸ್‌ ತಂಡದ ನಾಯಕರಾದ ಪರಿಣಾಮ ಮತ್ತೆ ನಾಯಕತ್ವ ಸೆಹವಾಗ್‌ ಹೆಗಲಿಗೇರಿತು. ಆ ವರ್ಷವೂ ತಂಡದ ಸ್ಥಿತಿ ಸುಧಾರಿಸಲಿಲ್ಲ. 2012ರಲ್ಲಿ ಸೆಹವಾಗ್‌ ಸಾಹಸದಿಂದ ಮತ್ತೆ ಪ್ಲೇಆಫ್ಗೇರಿತು. ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವೆಂಬ ಖ್ಯಾತಿಯಿದ್ದರೂ ದುರಾದೃಷ್ಟವಶಾತ್‌ ಪ್ಲೇಆಫ್ನಲ್ಲಿ ಎರಡೂ ಪಂದ್ಯ ಸೋತು ಹೋಯಿತು! ಇದೇ ಕೊನೆ ಅಲ್ಲಿಂದ ಇಲ್ಲಿಯವರೆಗೆ ಡೆಲ್ಲಿ ಲೀಗ್‌ ಹಂತದಲ್ಲೇ ಹೊರಹೋಗಿದೆ. 

ನಿರ್ದೇಶಕ ಬದಲಾದರೂ ಚಿತ್ರಕಥೆ ಸುಧಾರಿಸಿಲ್ಲ

ಹತ್ತೂ ಆವೃತ್ತಿಗಳ ದುರಂತ ಕಥೆಯನ್ನು ನೋಡಿದ ನಂತರ ಡೆಲ್ಲಿಯ ಸ್ಥಿತಿ 11ನೇ ಐಪಿಎಲ್‌ನಲ್ಲಾದರೂ ಬದಲಾಗಲಿ ಎಂಬ ನಿರೀಕ್ಷೆಯಿಂದ ತಂಡದ ಮಾಲೀಕರು ಪೂರ್ಣವಾಗಿ ಹೊಸ ತಂಡವನ್ನೇ ಸಿದ್ಧಪಡಿಸಿದರು. ಡೆಲ್ಲಿಯನ್ನು ಬಿಟ್ಟು ಹೋಗಿದ್ದ ಗೌತಮ್‌ ಗಂಭೀರ್‌ರನ್ನು ಮತ್ತೆ ಕರೆಸಿ ತಂಡದ ನಾಯಕತ್ವ ಕೊಟ್ಟರು. ತನ್ನ ವೃತ್ತಿಜೀವನದ ಅಂತಿಮ ಘಟ್ಟದಲ್ಲಿರುವ ಗಂಭೀರ್‌ಗೆ ಇದು ಇಷ್ಟದ ವಿಚಾರವೇ ಆಗಿತ್ತು. ಅವರು ಹೊಸ ಹುಮ್ಮಸ್ಸಿನಲ್ಲೇ ನಾಯಕತ್ವ ವಹಿಸಿಕೊಂಡರು. ಪರಿಣಾಮ….? ಸ್ವತಃ ಗಂಭೀರ್‌ ಫಾರ್ಮ್ಗಾಗಿ ಒದ್ದಾಡಿದರು. ಅವರ ಬ್ಯಾಟ್‌ನಿಂದ ರನ್‌ ಹರಿಯಲಿಲ್ಲ, ತಂಡ ಸೋಲುವುದು ತಪ್ಪಲಿಲ್ಲ. ಇದನ್ನು ಮನಗಂಡ ಗಂಭೀರ್‌ ನಾಯಕತ್ವವನ್ನು ತಾನೇ ಬಿಟ್ಟುಕೊಟ್ಟು ಶ್ರೇಯಸ್‌ ಅಯ್ಯರ್‌ರನ್ನು ಅಲ್ಲಿ ಕೂರಿಸಿದರು.

ಅಷ್ಟುಮಾತ್ರವಲ್ಲ ತಂಡದಿಂದಲೂ ಹೊರಗುಳಿದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ಬಾರಿ ನನಗೆ ಸಂಬಳವೇ ಬೇಡ ಉಚಿತವಾಗಿ ಆಡುತ್ತೇನೆಂದು ಘೋಷಿಸಿದರು. ಕ್ರಿಕೆಟ್‌ನಲ್ಲಿ ಇಂತಹ ನಿರ್ಧಾರ ಮಾಡುವಂತಹ ತ್ಯಾಗಮಯಿಗಳು ಬಹಳ ಕಡಿಮೆ. ಗಂಭೀರ್‌ ಸಿಡುಕ, ಹೊಂದಿಕೊಳ್ಳುವುದಿಲ್ಲ, ಜಗಳಗಂಟ ಎಂದೆಲ್ಲ ಕರೆಸಿಕೊಂಡಿದ್ದಾರೆ. ಆದರೆ ಗಂಭೀರ್‌ ಮಾತ್ರ ತಾನು ಸ್ವಾಭಿಮಾನಿ, ಯಾರ ಹಂಗೂ ತನಗೆ ಬೇಡ ಎಂದು ಪದೇ ಪದೇ ಸಾಬೀತುಮಾಡಿದ್ದಾರೆ. ಅದೇನೆ ಇರಲಿ; ಕ್ರಿಕೆಟ್‌ ಇತಿಹಾಸದಲ್ಲೇ ಧೀಮಂತ ಎನಿಸುವಂತಹ ನಿರ್ಧಾರವನ್ನು ಗಂಭೀರ್‌ ಮಾಡಿದರೂ ಅದು ಸ್ವಲ್ಪ ತಡವಾಯಿತು ಎನಿಸುತ್ತದೆ. ಅವರು ಜಾಗ ಬಿಡುವಾಗ ಆಗಲೇ ದೆಹಲಿ 6 ಪಂದ್ಯವಾಡಿ 5 ಸೋತಾಗಿತ್ತು. ಆ ಹಂತದಲ್ಲಿ ಪರಿಸ್ಥಿತಿಗೆ ತೇಪೆ ಹಾಕುವುದು ಸ್ವಲ್ಪ ಕಷ್ಟದ
ಕೆಲಸ.

ಆದರೂ ನಾಯಕತ್ವ ಹೊತ್ತುಕೊಂಡ ಶ್ರೇಯಸ್‌ ಅಯ್ಯರ್‌ ತಮ್ಮ ಕೈಲಾದ ಎಲ್ಲವನ್ನೂ ಮಾಡಿದ್ದಾರೆ. ಅದ್ಭುತವಾಗಿ ಬ್ಯಾಟ್‌ ಬೀಸಿ ಕೆಲ ಪಂದ್ಯ ಗೆದ್ದುಕೊಟ್ಟಿದ್ದಾರೆ. ನಾಯಕನಾಗಿ ತಮ್ಮ ಚಾಕಚಕ್ಯತೆಯನ್ನು ತೋರಿಸಿದ್ದಾರೆ. ಮೊನ್ನೆ ರಾಜಸ್ಥಾನ್‌ ವಿರುದ್ಧ ಅಂತಿಮ ಹಂತದಲ್ಲಿ ಅವರು ಮಾಡಿದ ಬೌಲಿಂಗ್‌ ಬದಲಾವಣೆಗಳು ಎಲ್ಲರಿಗೂ ಅವರನ್ನು ಹೊಸ ದೃಷ್ಟಿಯಿಂದ ನೋಡಲು ನೆರವಾದವು. ಅವರ ನಾಯಕತ್ವದಲ್ಲಿ ದೆಹಲಿ 4 ಪಂದ್ಯವಾಡಿ 2 ಗೆದ್ದು 2 ಸೋತಿದೆ (ಮೇ 6ರಷ್ಟೊತ್ತಿಗೆ). ಡೆಲ್ಲಿ ತಂಡದ ಬ್ಯಾಟಿಂಗ್‌, ಬೌಲಿಂಗ್‌, ಮನಃಸ್ಥಿತಿಯಲ್ಲೂ ಸುಧಾರಣೆಯಾಗಿದೆ. ಈ ಐಪಿಎಲ್‌ನ ಕೊನೆಯ ಹಂತದಲ್ಲಿ ಡೆಲ್ಲಿ ಆಡಿರುವ ರೀತಿಯನ್ನು ನೋಡಿದಾಗ ಮುಂದಿನ ಆವೃತ್ತಿಯಲ್ಲಿ ಅದು “ಐಪಿಎಲ್‌ನದ.ಆಫ್ರಿಕಾ’ ಎಂಬ ಹಣೆಪಟ್ಟಿಯಿಂದ ಹೊರಬರುವ ಎಲ್ಲ ಸಾಧ್ಯತೆಗಳು ಕಾಣುತ್ತಿದೆ. ಹಾಗೆಯೇ ಗಂಭೀರ್‌ ಕ್ರಿಕೆಟ್‌ಗೆ ನಿವೃತ್ತಿ ಹೇಳುವ ಲಕ್ಷಣಗಳು ದಟ್ಟವಾಗಿವೆ!

 ನಿರೂಪ 

ಟಾಪ್ ನ್ಯೂಸ್

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

Online Bitcoin Gambling Enterprises: An Overview to Betting with Cryptocurrency

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

police crime

Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.