Udayavni Special

ಚಿಕ್ಕ ಹಸಿರು ಕೊಕ್ಕರೆ 


Team Udayavani, Nov 10, 2018, 2:29 PM IST

5.jpg

ಇದನ್ನು ಹಸಿರು ಕೊಕ್ಕಿನ ಹಕ್ಕಿ ಅಂತಲೂ ಕರೆಯುತ್ತಾರೆ.  ಇದು ಹಾರುವಾಗ ಕೊಕ್‌, ಕೊ ಕ್ರೊಕ್‌ ಎಂಬ ಕೂಗು ಹಾಕುತ್ತದೆ. Little Green Heron (Butorides striatus)  R- Village Hen+
  
ಕೊಕ್ಕರೆಗಳನ್ನು ಬಕ ಪಕ್ಷಿಯ ಗುಂಪಿಗೆ ಸೇರಿಸಲಾಗಿದೆ. ಇದು ಗಂಭೀರ ನಡಿಗೆಯ ಹಕ್ಕಿ.  ಚಿಕ್ಕ ಹಸಿರು ಕೊಕ್ಕರೆ , ಬೆಳ್ಳಕ್ಕಿ ಗುಂಪಿಗೆ ಸೇರಿದೆ. ಇದು ಜವಗು ಸಂಚಾರಿ ಹಕ್ಕಿ.   ನದಿ, ಕೆರೆ, ಗಜನಿ ಪ್ರದೇಶ, ಅಣೆ ಕಟ್ಟಿನ ಹಿನ್ನೀರ ಪ್ರದೇಶ, ಕೆಸರು ಗದ್ದೆ ಇರುವ ಭಾಗದಲ್ಲಿ ವಾಸ ಮಾಡುತ್ತದೆ.  ಮಳೆಗಾಲದಲ್ಲಿ ನೀರು ನಿಲ್ಲುವ ಹೊಂಡ, ಕೆರೆ, ಕಟ್ಟೆ ಮುಂತಾದ ಜಾಗವನ್ನು ತನ್ನ ಇರುನೆಲೆಯಾಗಿ ಮಾಡಿಕೊಳ್ಳುತ್ತದೆ. ಈ ಹಕ್ಕಿ  ‘ಆಡೇìಡಿಯಾ’ ಕುಟುಂಬಕ್ಕೆ ಸೇರಿದೆ.  ಕಪ್ಪು ಬಿಟರಿನ್‌, ರಾತ್ರಿ ಬಕ ಪಕ್ಷಿಗಳು ಈ ಹಕ್ಕಿಯನ್ನು ತುಂಬಾ ಹೋಲುತ್ತವೆ.  ಹಸಿರು ಮೈಬಣ್ಣ, ಕುತ್ತಿಗೆ ಭಾಗದಲ್ಲಿಯ ಕೆಂಪು ಗರಿಯಿಂದ ಇತರೆ ಹಕ್ಕಿಗಳಿಂದ ಬೇರ್ಪಡಿಸಬಹುದು.  ಈ ಹಕ್ಕಿಯನ್ನು ಇತರ ಕೊಕ್ಕರೆಗಳಿಗೆ ಹೋಲಿಸಿದರೆ, ಗಾತ್ರದಲ್ಲಿ ಇದು ಚಿಕ್ಕದು.  

ಕೊಕ್ಕರೆಗಳಲ್ಲಿ, ಚುಂಚಿನಲ್ಲಿ ವೈವಿಧ್ಯತೆ ಕಾಣಬಹುದು.  ಕೂಗು ಆಧರಿಸಿಯೇ ಸುಮಾರು 64 ವಿಧದ ಹಕ್ಕಿಗಳನ್ನು ಗುರುತಿಸಲಾಗಿದೆ. ಚಿಕ್ಕ ಹಸಿರು ಕೊಕ್ಕರೆಯು ಕುತ್ತಿಗೆಯನ್ನು ಸದಾ ಕುಗ್ಗಿಸಿಕೊಂಡಿರುವಂತೆ ಭಾಸವಾಗುತ್ತದೆ. ತರುಣ ಹಕ್ಕಿಯ ನೆತ್ತಿಗೆ ಹಸಿರು ಮಿಶ್ರಿತ ಕಪ್ಪು ಬಣ್ಣ ಇದೆ.  ರೆಕ್ಕೆ ಮತ್ತು ಬೆನ್ನಿನ ಭಾಗ ಹಸಿರು ಛಾಯೆಯ ಕಪ್ಪು , ಕೆಳಗೆ ಬಂದಂತೆ ದಟ್ಟ ಹಸಿರು ಇಲ್ಲವೇ ನೀಲಿ ಛಾಯೆ ಕಾಣುವುದು. ಕುತ್ತಿಗೆಯು ಪಾರ್ಶ್ವದಲ್ಲಿ ಕಂದು ಕೆಂಪು ರೋಮಗಳಿಂದ ಆವೃತವಾಗಿದೆ. 
ಮುಂದೆ ಕುತ್ತಿಗೆ ಮಧ್ಯದಲ್ಲಿ ಮೇಲಿನಿಂದ ಕೆಳಕ್ಕೆ ಬಂದಂತೆ ಮಸಕು ಬಿಳಿ ಬಣ್ಣದಿಂದ ಕೂಡಿದೆ.  ಅದರ ಮೇಲೆ ಮೇಲಿನಿಂದ ಕೆಳಗೆ -ಕಂದು ಗೆರೆ ಕೆಳಮುಖವಾಗಿದೆ. ಹೊಟ್ಟೆ ಭಾಗ -ತಿಳಿ ಬೂದು ಬಣ್ಣ,  ಕಾಲು ಸ್ವಲ್ಪ ಕುಳ್ಳು ಎನಿಸಿದರೂ ದಪ್ಪ ಮತ್ತು ಸದೃಢವಾಗಿದೆ.  ಚೂಪಾದ ಕಪ್ಪು ಚುಂಚಿದೆ. ಕಾಲಿನಲ್ಲಿ ಮುಂದೆ ಮೂರು ಮತ್ತು ಹಿಂದೆ ಒಂದು ಬೆರಳಿದೆ.  ಹಳದಿ ಬೆರಳಿನ ತುದಿಯಲ್ಲಿ ಹರಿತವಾದ ಕಪ್ಪು ಉಗುರು ಇದೆ. ಇದರಿಂದ ಬೇಟೆಯನ್ನು ಗಟ್ಟಿಯಾಗಿ ಹಿಡಿದಿಕೊಂಡು ಹಾರಲು ಸಹಾಯಕವಾಗಿದೆ.  ಈ ಹಕ್ಕಿ  ಕೆಸರು ಪ್ರದೇಶದಲ್ಲಿ ತಪಸ್ಸು ಮಾಡುತ್ತಿರುವಂತೆ ಸುಮ್ಮನೆ ಕುಳಿತಿರುತ್ತದೆ.  

 ಗಂಡು-ಹೆಣ್ಣು ಆಕಾರ ಬಣ್ಣ, ನಿಲುವಿನಲ್ಲಿ ಒಂದೇ ರೀತಿ ಇವೆ. ಆದರೆ ಹೆಣ್ಣು ಹಕ್ಕಿಯ ಬಣ್ಣ ಸ್ವಲ್ಪ ಮುಸುಕು. ಗಂಡು ಹಕ್ಕಿಯ, ನೆತ್ತಿ ಕುತ್ತಿಗೆ, ರೆಕ್ಕೆ ಬಣ್ಣ ಅಷ್ಟು ಹೊಳಪಿಲ್ಲ. ಸ್ವಲ್ಪ ತಿಳಿ ಬಣ್ಣ ಇದೆ. ಇದರಿಂದ ಹೆಣ್ಣು-ಗಂಡನ್ನು ಸುಲಭವಾಗಿ ಗುರುತಿಸಬಹುದು. ಮರಿಮಾಡುವ ಸಮಯದಲ್ಲಿ ಇದರ ಕುತ್ತಿಗೆ ಪಾಶ್ವದಲ್ಲಿ ಗರಿ ಉದ್ದ ಇರುತ್ತದೆ. ಮತ್ತು ಕಂದುಗೆಂಪಾಗಿರುತ್ತದೆ. ಇದು ಕ್ಯೂವ್‌ ಅಂತಲೂ, ಒಳದನಿಯಲ್ಲಿ ಕುಕ್‌, ಕುಕ್‌ ಅಂತಲೂ ಕೂಗುದುತ್ತದೆ. ತನ್ನ ಗೂಡು ನಿರ್ಮಿಸುವ ಸ್ಥಳವನ್ನು ನಿರ್ಧರಿಸಲು ಕುಕ್‌, ಕುಕ್‌ ಎಂಬ ಕೂಗನ್ನು ಹೊರಡಿಸುತ್ತದೆ. 

ಪಿ.ವಿ. ಭಟ್‌ ಮೂರೂರು

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಗದಗ ವೃದ್ಧೆಗೆ ಕೋವಿಡ್ ಸೋಂಕು: ಸಂಪರ್ಕದಲ್ಲಿದ್ದ ಎಲ್ಲಾ 45 ಮಂದಿ ನಿರಾಳ

ಗದಗ ವೃದ್ಧೆಗೆ ಕೋವಿಡ್ ಸೋಂಕು: ಸಂಪರ್ಕದಲ್ಲಿದ್ದ ಎಲ್ಲಾ 45 ಮಂದಿ ನಿರಾಳ

zoom-app-desktop

ಏನಿದು ಜೂಮ್ ಆ್ಯಪ್ ? ತಂತ್ರಜ್ಞಾನ ದೈತ್ಯರಿಗೆ ಟಕ್ಕರ್ ಕೊಟ್ಟ ಇದರ ವಿಶೇಷತೆಗಳೇನು ?

ಮದ್ಯದ ಅಂಗಡಿ ಕಳ್ಳತನ ತಡೆಗೆ ಸೆಕ್ಯೂರಿಟಿ ಗಾರ್ಡ್ ನೇಮಕಕ್ಕೆ ಸೂಚನೆ

ಮದ್ಯದ ಅಂಗಡಿ ಕಳ್ಳತನ ತಡೆಗೆ ಸೆಕ್ಯೂರಿಟಿ ಗಾರ್ಡ್ ನೇಮಕಕ್ಕೆ ಸೂಚನೆ

ಮಿತಿಮೀರುತ್ತಿದೆ covid-19: ಏ.14ರ ನಂತರ ಲಾಕ್ ಡೌನ್ ಮುಂದುವರಿಕೆ; ಪ್ರಧಾನಿ ಸುಳಿವು

ಮಿತಿಮೀರುತ್ತಿದೆ covid-19: ಏ.14ರ ನಂತರ ಲಾಕ್ ಡೌನ್ ಮುಂದುವರಿಕೆ; ಪ್ರಧಾನಿ ಸುಳಿವು

ರಾಜ್ಯದ 15 ಹಾಟ್ ಸ್ಪಾಟ್ ಏ.30ರವರೆಗೆ ಸಂಪೂರ್ಣ ಲಾಕ್ ಡೌನ್: ಉತ್ತರಪ್ರದೇಶ ಸರ್ಕಾರ

ರಾಜ್ಯದ 15 ಹಾಟ್ ಸ್ಪಾಟ್ ಏ.30ರವರೆಗೆ ಸಂಪೂರ್ಣ ಲಾಕ್ ಡೌನ್: ಉತ್ತರಪ್ರದೇಶ ಸರ್ಕಾರ

ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣಿಸುತ್ತಿರಲಿಲ್ಲ ಧೋನಿ !

ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣಿಸುತ್ತಿರಲಿಲ್ಲ ಧೋನಿ !

ಕೋವಿಡ್ ಗೆ ಔಷಧಿ; ಸಂಜೀವಿನಿ ಪರ್ವತದ ಬಗ್ಗೆ ಉಲ್ಲೇಖಿಸಿ ಮೋದಿಗೆ ಬ್ರೆಜಿಲ್ ಪ್ರಧಾನಿ ಪತ್ರ

ಕೋವಿಡ್ ಗೆ ಔಷಧಿ; ಸಂಜೀವಿನಿ ಪರ್ವತದ ಬಗ್ಗೆ ಉಲ್ಲೇಖಿಸಿ ಮೋದಿಗೆ ಬ್ರೆಜಿಲ್ ಪ್ರಧಾನಿ ಪತ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cycle-yatri

ಸೈಕಲ್‌ ಯಾತ್ರಿಕನ ಕನಸು

bili-saheb

ಬಿಳಿ ಸಾಹೇಬನ ಬೇಂದ್ರೆ

sagarotttara

ಸಾಗರೋತ್ತರ ದೇಶಗಳಲ್ಲಿ ರಾಮಾಯಣ

ondu-kote

ಒಂದು ಕೋಟೆ ಯಾನ

koodali

ಕೂಡಲಿ ಊಟದ ಸೊಗಸು

MUST WATCH

udayavani youtube

Coronavirus Lockdown : ಮಟ್ಟುಗುಳ್ಳ ಮಂದಗತಿಯ ಮಾರುಕಟ್ಟೆ Saddens Muttugulla Growers

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

ಹೊಸ ಸೇರ್ಪಡೆ

avalu-tdy-6

ಹೇಮಾ ಮಾಲಿನಿ ಥರ ಇದ್ದೀಯ.

ಗದಗ ವೃದ್ಧೆಗೆ ಕೋವಿಡ್ ಸೋಂಕು: ಸಂಪರ್ಕದಲ್ಲಿದ್ದ ಎಲ್ಲಾ 45 ಮಂದಿ ನಿರಾಳ

ಗದಗ ವೃದ್ಧೆಗೆ ಕೋವಿಡ್ ಸೋಂಕು: ಸಂಪರ್ಕದಲ್ಲಿದ್ದ ಎಲ್ಲಾ 45 ಮಂದಿ ನಿರಾಳ

zoom-app-desktop

ಏನಿದು ಜೂಮ್ ಆ್ಯಪ್ ? ತಂತ್ರಜ್ಞಾನ ದೈತ್ಯರಿಗೆ ಟಕ್ಕರ್ ಕೊಟ್ಟ ಇದರ ವಿಶೇಷತೆಗಳೇನು ?

08-April-40

ಗಡಿ ಭಾಗದ ಸರಹದ್ದಿನಲ್ಲಿ ಚೆಕ್‌ಪೋಸ್ಟ್‌ ತೆರೆಯಲು ಕ್ರಮ

ಮನೆಯಿಂದ ಹೊರಬರುವ ಮುನ್ನ ಮಾಸ್ಕ್ ಧರಿಸಿ: ಜನರಿಗೆ ಮಹಾರಾಷ್ಟ್ರ ಸಿಎಂ

ಮನೆಯಿಂದ ಹೊರಬರುವ ಮುನ್ನ ಮಾಸ್ಕ್ ಧರಿಸಿ: ಜನರಿಗೆ ಮಹಾರಾಷ್ಟ್ರ ಸಿಎಂ