ಬೆಟ್ಟದ ಕೆಂದು ಕೊಕ್ಕರೆ 

Team Udayavani, Sep 15, 2018, 4:46 PM IST

8.jpg

 ಇತರೆ ಕೊಕ್ಕರೆಗಳಿಗೆ ಹೋಲಿಸಿದರೆ ಇದರ ಚುಂಚು ಚಿಕ್ಕದು.Malayan Night-Heron  (Gorsachius melanolophus) Raffles RM -Indian Pond heron+  ಚಿಕ್ಕ ಹಕ್ಕಿಗಳ ಚುಂಚು ಗುಲಾಬಿ ಬಣ್ಣ ಇದ್ದರೆ -ಬೆಳೆದ ಹಕ್ಕಿಯ ಚುಂಚು ಕಂದುಗಪ್ಪಿನಿಂದ ಕೂಡಿರುತ್ತದೆ.  ಇದು ಕೊಕ್ಕರೆಯಾದರೂ ನೀರ ಸಮೀಪದಲ್ಲಿ ಇರದೇ -ಸಮಶೀತೋಷ್ಣ ಮತ್ತು ದೊಡ್ಡ ಮರದ ಕಾಡಿನಲ್ಲೇ ಇರುವುದೇ ಹೆಚ್ಚು. 

ಟೈಗರ್‌ ಬಿಟರಿನ್‌, ಕಂದುಗೆಂಪು ಕೊಕ್ಕರೆ… ಹೀಗೆ ಈ ಹಕ್ಕಿಗೆ ಅನೇಕಾನೇಕ ಹೆಸರುಗಳಿವೆ. ಮಲೆ ಎಂದರೆ ಬೆಟ್ಟ. ದೊಡ್ಡ ಮರಗಳಿರುವ ಎತ್ತರದ ಗುಡ್ಡದಲ್ಲಿ ಈ ಕೊಕ್ಕರೆ ಹೆಚ್ಚಾಗಿ ನೆಲೆ ಗೊಳ್ಳುವುದರಿಂದ ಮಲೆಯ ಹೆರಾನ್‌ ಎಂಬ ಹೆಸರೂ ಇದಕ್ಕೆ ಬಂದಿದೆ ಅನ್ನುತ್ತಾರೆ. ಜೊತೆಗೆ, ಇವು  ಮಲೇಶಿಯಾದಲ್ಲಿ ಹೆಚ್ಚಾಗಿರುವುದರಿಂದಲೂ ಇದರ ಹೆಸರಿನ ಜೊತೆ ಮಲೆಯ ಹೆರಾನ್‌ ಎಂದು ಸೇರಿಸಲಾಗಿದೆ ಅನ್ನುವುದೂ ಉಂಟು. 

ಈ ಹಕ್ಕಿ  ಹಗಲಲ್ಲಿ ಮರ , ಇಲ್ಲವೇ ಗಿಡಗಳ ಮರೆಯಲ್ಲಿ ಸುಮ್ಮನೆ ಕುಳಿತಿರುತ್ತದೆ. ಆಗ ಇದರ ಇರುವಿಕೆಯೇ ತಿಳಿಯುವುದಿಲ್ಲ. ರಾತ್ರಿಯ ವೇಳೆ ಇದರ ಚಟುವಟಿಕೆ ಹೆಚ್ಚು -ಹಾಗಾಗಿ ಇದಕ್ಕೆ ಮಲೆಯನ್‌ ನೈಟ್‌ ಹೆರಾನ್‌- ಅಂದರೆ ರಾತ್ರಿ ಕೆಂದು ಗುಪ್ಪಿ ಅಂತಲೂ ಕರೆಯುತ್ತಾರೆ.

 ತನ್ನ ಕುತ್ತಿಗೆಯನ್ನು ಕುಗ್ಗಿಸಿ ಮುದುಡಿ ಕುಳಿತುಕೊಳ್ಳುವ ಭಂಗಿಗೆ ಗುಪ್ಪಿ ಎನ್ನುತ್ತಾರೆ. ಇದು ಆ ಭಂಗಿಯಲ್ಲಿ ಕೂರುವುದರಿಂದ ಗುಪ್ಪಿ ಹಕ್ಕಿ ಎಂಬ ಹೆಸರಿಂದಲೂ ಕರೆಯುವುದುಂಟು. ಈ ವರ್ಷ ಪಶ್ಚಿಮ ಘಟ್ಟದ ನಮ್ಮ ಊರು ಮೂರೂರಿನಲ್ಲಿ ಈ ಹಕ್ಕಿ ಕಾಣಿಸಿತು.  ಒಂದೂವರೆ ತಿಂಗಳಿಗಿಂತ ಹೆಚ್ಚು ಸಮಯ ಇದರ ಗೂಡು, ಮೊಟ್ಟೆ, ಸ್ವಭಾವ -ಮರಿಗಳ ಬೆಳವಣಿಗೆಯ ಹಂತ-ಅಧ್ಯಯನ ನಡೆಸಿದ್ದೇನೆ. ಇದೊಂದು ಅಪರೂಪದ ಹಕ್ಕಿ. ಜಗತ್ತಿನ ವಿವಿಧ ಭಾಗದಲ್ಲಿ -ಕವಲು ಬಣ್ಣದ ಮೂರು ಛಾಯೆಯಲ್ಲಿ ಇದನ್ನು ಕಾಣಬಹುದು. ಮೂರೂರಿನಲ್ಲಿ ನೋಡಲು ಸಿಕ್ಕಿದ್ದು -ಕಂದು ಗೆಂಪು ಬಣ್ಣ ಇರುವ ಹಕ್ಕಿ. 

ಪಶ್ಚಿಮಘಟ್ಟ ಪ್ರದೇಶ, ದಕ್ಷಿಣಕ್ಕೆ ನೀಲಗಿರಿ, ಕೇರಳ, ಆಂಧ್ರ, ಅಸ್ಸಾಂ, ಫಿಲಿಫೈನ್ಸ್‌, ಅಮೆರಿಕಾಗಳಲ್ಲೂ ಇದರ ಪ್ರಬೇಧಗಳಿವೆ. ಆದರೆ ನಿಕೋಬಾರ್‌ನಲ್ಲಿರುವ ಉಪಜಾತಿ ಸ್ವಲ್ಪ ಬೇರೆಯಾಗಿದೆ.  ಈ ಹಕ್ಕಿಗೆ  ಗಾಬರಿಯಾದಾಗ ಈ ಜುಟ್ಟು ನಿಮಿರಿ- ನಿಲ್ಲುವುದು. ಕ್ವಾಕ್‌, ಕ್ವಾಕ್‌ ಎಂದು ಕೂಗುತ್ತಾ ಹಾರಿ, ಮರಗಳ ಅಥವಾ ಬಿದಿರು ಮೆಳೆಗಳಲ್ಲಿ ಮಾಯವಾಗುವುದು. ಇದು ಕುಳಿತಾಗ ಮುಂಭಾಗದಿಂದ ನೋಡಿದರೆ -ರೆಕ್ಕೆಯ ಪ್ರ„ಮರಿ ಗರಿಗಳ ಎರಡೂ ಅಂಚಿನಲ್ಲಿರುವ ಬಿಳಿ ಬಣ್ಣ- ಇದರ ಕಂದುಗೆಂಪು ರೆಕ್ಕೆ ಅಂಚಿನಲ್ಲಿ ಕಾಣುತ್ತದೆ. ಬಿಳಿ ಮತ್ತು ಕಪ್ಪು ರೇಖೆಯಿಂದ ಕೂಡಿದ ಇದರ ಕುತ್ತಿಗೆ,  ಎದೆಯ ಮಧ್ಯ ಇರುವ ಚುಕ್ಕೆ ಕಾಣುತ್ತದೆ.  ದೂರದಿಂದ ನೋಡಿದಾಗ ಇದು ಮರದ ಬಿರುಕಲು ಒಟ್ಟೆಯಂತೆ ಭಾಸವಾಗುವುದು. ಈ ಕೊಕ್ಕರೆ ಕುತ್ತಿಗೆಯನ್ನು ಉದ್ದಮಾಡಿ ಕುಳಿತಾಗ ಪರ್ಪಲ್‌ ಹೆರಾನದ ಬದನೆಕಾಯಿ ಬಣ್ಣದ ಕೊಕ್ಕರೆಯೋ ಎಂಬ ಭ್ರಮೆ ಮೂಡಿಬಿಡುತ್ತದೆ. ಕುತ್ತಿಗೆ ಭಾಗದಲ್ಲಿ ಗಾಳಿ ತುಂಬಿಕೊಂಡಾಗ ದೊಡ್ಡ ಚೀಲದಂತೆ ಕಾಣಿಸುತ್ತದೆ.  ಕಾಡು,  ಬಿದಿರು, ದೊಡ್ಡ ಮರಗಳಿರುವ ಜಾಗ ಇದಕ್ಕೆ ಪ್ರಿಯ.  ಪ್ರಬುದ್ಧಾವಸ್ಥೆà ತಲುಪಿದ ಹಕ್ಕಿ ಮತ್ತು ಮರಿ-ಇನ್ನೂ ಪ್ರೌಢಾವಸ್ಥೆ ತಲುಪದ ಹಕ್ಕಿಯ ಬಣ್ಣದಲ್ಲಿ ಬದಲಾವಣೆ ಕಾಣಬಹುದು. 

 ಇತರೆ ಕೊಕ್ಕರೆಗಳಿಗೆ ಹೋಲಿಸಿದರೆ ಇದರ ಚುಂಚು ಚಿಕ್ಕದು. ಚಿಕ್ಕ ಹಕ್ಕಿಗಳ ಚುಂಚು ಗುಲಾಬಿ ಬಣ್ಣ ಇದ್ದರೆ -ಬೆಳೆದ ಹಕ್ಕಿಯ ಚುಂಚು ಕಂದುಗಪ್ಪಿನಿಂದ ಕೂಡಿರುತ್ತದೆ.  ಇದು ಕೊಕ್ಕರೆಯಾದರೂ ನೀರ ಸಮೀಪದಲ್ಲಿ ಇರದೇ -ಸಮಶೀತೋಷ್ಣ ಮತ್ತು ದೊಡ್ಡ ಮರದ ಕಾಡಿನಲ್ಲೇ ಇರುವುದೇ ಹೆಚ್ಚು. ಇದು ಕೆಲವೊಮ್ಮೆ ನೆಲದ ಮೇಲೆ ಓಡಾಡಿ, ಎರೆಹುಳುಗಳನ್ನು ಎಲೆ ಇಲ್ಲವೇ, ಮಣ್ಣು ಕೆದಕಿ ಸಣ್ಣು ಪುಟ್ಟ ಹುಳುಗಳನ್ನು ಹಿಡಿಯುತ್ತದೆ.  ಇದರ ಚಿಕ್ಕ ಚುಂಚು ಮತ್ತು ರೆಕ್ಕೆಯಲ್ಲಿರುವ ಬಿಳಿ ಬಣ್ಣ ಇದನ್ನು ಇತರ ಗುಪ್ಪಿಗಳಿಂದ ಪ್ರತ್ಯೇಕವಾಗಿ ಗುರುತಿಸಲು ಸಹಾಯಕವಾಗಿದೆ. 
 
ನೀರಿಗೆ ಹತ್ತಿರವಿರುವ ಕಾಡು, ಮರಗಳನ್ನೇ ಗೂಡು ಕಟ್ಟಲು ಆಯ್ಕೆ ಮಾಡಿಕೊಳ್ಳುತ್ತದೆ.  ಮರದ ಟಿಸಿಲು ಇರುವ ಜಾಗ-ಭೂಮಿಗೆ ಸಮಾನಾಂತರವಾದ ಟೊಂಗೆಯಲ್ಲಿ-ಸುಮಾರು 5 ರಿಂದ 10 ಮೀ ಎತ್ತರದಲ್ಲಿ ಗೂಡು ಕಟ್ಟುತ್ತದೆ. ಜನ ನಡೆದಾಡುವ ದಾರಿಯ ಮೇಲ್ಬದಿಯಲ್ಲೂ ಇದು ಗೂಡು ಗಂಡು -ಹೆಣ್ಣು ಸೇರಿ ಗೂಡು ಕಟ್ಟುತ್ತದೆ. ಗೂಡು ಕಟ್ಟಿ ಮುಗಿಸಿದಾಗ ಮೊದಲ ಮೊಟ್ಟೆ ಇಡುವುದು ಸ್ವಲ್ಪ ಅಂತರದಲ್ಲಿ ಒಂದೊಂದೇ ಮೊಟ್ಟೆ ಇಡುವುದು. 43 ದಿನದಲ್ಲಿ ಮೊಟ್ಟೆ ಒಡೆದು ಮರಿಯಾಗುತ್ತದೆ.  ಪೂರ್ಣ ಪ್ರಮಾಣದ ಹಕ್ಕಿಯಾಗಲು 2 ವರ್ಷವಾಗುತ್ತದೆ. 

ಪಿ. ವಿ. ಭಟ್‌ ಮೂರೂರು

ಟಾಪ್ ನ್ಯೂಸ್

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!

Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.