ಹೆಮ್ಮೆಯ ನಾರಿ ನಮ್ಮ ಚಿನ್ನದ ಮೇರಿ


Team Udayavani, Dec 28, 2018, 4:49 PM IST

2-fsf.jpg

ಮಹಿಳಾ ಬಾಕ್ಸರ್‌ ಮೇರಿ ಕೋಮ್‌ ಭಾರತದ ಅಪ್ಪಟ ಚಿನ್ನ. ಅಂದುಕೊಂಡಿದ್ದನ್ನು ಸಾಧಿಸುವ ಛಲಗಾರ್ತಿ. ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ವೀರ ವನಿತೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 6 ಬಾರಿ ಚಿನ್ನದ ಪದಕ ಭೇಟೆಯಾಡಿದ ವಿಶ್ವದ ಏಕೈಕ ಬಾಕ್ಸರ್‌. ಇಷ್ಟೆಲ್ಲ ಸಾಧನೆ ಮಾಡಿದರೂ ಮೇರಿ ಸಿಂಪಲ್‌ ಆ್ಯಂಡ್‌ ಸ್ವೀಟ್‌. ಅಂತಹ ಸಾಧಕಿ ಕಥೆ ಎಲ್ಲರಿಗು ಮಾದರಿ ಹಾಗೂ ಸ್ಫೂರ್ತಿಯಾಗಿದೆ. 

ಅದು 2001ರ ನವೆಂಬರ್‌ ಡಿಸೆಂಬರ್‌ ಸಮಯ. ಅಮೆರಿಕದ ಪೆನ್ಸಿಲ್ವೇನಿಯಾ ದಲ್ಲಿ ನಡೆಯಲಿದ್ದ ವಿಶ್ವಮಟ್ಟದ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಪ್ರತಿನಿಧಿಸಿ ಅಮೆರಿಕಕ್ಕೆ ಹೊರಟು ನಿಂತಿದ್ದ ಅವಳಲ್ಲಿ  ಅರವತ್ತು ರೂಪಾಯಿ ಕೂಡ ಇರಲಿಲ್ಲ. ಹೀಗೆ ಅವರಿವರು ನೀಡಿದ ಸಹಾಯ ಹಸ್ತದಿಂದ ಆ ಸ್ಪರ್ಧೆಯಲ್ಲಿ ಮೊಟ್ಟಮೊದಲ ಬಾರಿಗೆ ಭಾರತಕ್ಕೆ ಬೆಳ್ಳಿ ಪದಕ ಗೆದ್ದು ಕೊಟ್ಟ ಆ ವೀರ ನಾರಿಯೇ ಈ ಬಾಕ್ಸರ್‌ ಮೇರಿ ಕೋಮ್‌.

ಮಣಿಪುರದ ಕಣ್ಮಣಿ: ದೇಶದ ಅತ್ಯಂತ ಹಿಂದುಳಿದ ಬುಡಕಟ್ಟು ಜನಾಂಗದ ಕಡುಬಡತನದ ಹಿನ್ನೆಲೆಯಿಂದ ಬಂದು ದೇಶಕ್ಕೆ ಹೆಮ್ಮೆ ತರುವ ಕ್ರೀಡಾಳು ವಾದ ಹಿರಿಮೆ, ಸಾಧನೆ, ಮೇರಿ ಕೋಮ…ಳದ್ದು. ಮಣಿಪುರದ ಚುರಾಚಂದಾಪುರ್‌ ಜಿÇÉೆಯ ಮೊಯಿರಾಂಗ್‌ ಲಂಖಾಯ… ನ ಕಾಂಗಿr ಎಂಬ ಕುಗ್ರಾಮದಲ್ಲಿ ಮಾರ್ಚ್‌ 1, 1983ರಂದು ಜನಿಸಿದರು. ತಂದೆ ಮಾಂಗೆrà ಅಕಾಮ… ಕೋಮ…. ತಾಯಿ ಮ್ಯಾಂಗೆrà ಟೋನಾ³ ಕೋಮ… ದಂಪತಿಗಳ ಮೂವರು ಮಕ್ಕಳಲ್ಲಿ ಮೇರಿ ಕಿರಿಯ ಸುಪುತ್ರಿ. ತಂದೆಯ ಬಾಕ್ಸಿಂಗ್‌ ವಿರೋಧದ ನಡುವೆ ಛಲಬಿಡದ ಛಲಗಾತಿಯ ಹಾಗೆ ತಾವಂದುಕೊಂಡಿದ್ದನ್ನು ಸಾಧಿಸಿದ ದಿಟ್ಟ ಮಹಿಳೆ. 

ದಾಖಲೆಗಳ ನಾರಿ ಚಿನ್ನದ ಮೇರಿ:  ತಮ್ಮ ವಿಶಿಷ್ಟವಾದ ಆಕ್ರಮಣ ಶೈಲಿಯ, ಬಲಿಷ್ಠವಾದ ಪಂಚಗಳಿಂದ ಎದುರಾಳಿಗಳಿಗೆ ಬೆವರಿಳಿಸುವ ಮೇರಿ ದಾಖಲೆಗಳ ಒಡತಿಯೇ ಸರಿ. ಅವರು ಸ್ಪರ್ಧಿಸಿರುವ, ಜಯಿಸಿರುವ ಪದಕ ಪಟ್ಟಿಗಳನ್ನು ಒಮ್ಮೆ ನೋಡಿದರೆ ಒಂದೊಂದು ಬಾಕ್ಸಿಂಗ್‌ ಪಂಚುಗಳಿಂದ ತಿಂದ ಏಟು, ಅನುಭವಿಸಿದ ನೋವು ಅರಿವಾಗುತ್ತದೆ. ಇದುವರೆಗೂ ಏಳು ಬಾರಿ ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ ಅಖಾಡಕ್ಕಿಳಿದ ಮೇರಿ ಹತ್ತು ಹಲವಾರು ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಚಿನ್ನದ ಪದಕಕ್ಕೆ ಕೊರಳೊಡಿ¨ªಾರೆ. ಈ ಸಾಧನೆ ಮಾಡಿದ ಏಕೈಕ ಮಹಿಳಾ ಬಾಕ್ಸರ್‌ ಎಂಬ ಬಿರುದು ಕೂಡ ಮೇರಿಯವರ ಸಾಧನೆಯ ಹಿರಿಮೆಗೆ ಹಿಡಿದ ಕನ್ನಡಿಯಾಗಿದೆ.
ಮೊದಲ ಬಾರಿಗೆ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ ಅಖಾಡಕ್ಕಿಳಿದ ಮೇರಿಗೆ 18 ವರ್ಷ, 2001ರ ಅಮೆರಿಕಾದ ಸಾðಂಟನ್‌ ನಗರದಲ್ಲಿ ನಡೆದ 48 ಕೆ.ಜಿ ವಿಭಾಗದಲ್ಲಿ ಟರ್ಕಿಯ  ಹೌಲಾ ಸಾಹಿನ್‌ ವಿರುದ್ಧ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ದ್ವಿತೀಯ ಬಾರಿಗೆ 2002ರ ಟರ್ಕಿಯ ಅಂತಾಲ್ಯದಲ್ಲಿ ನಡೆದ 45 ಕೆಜಿ ವಿಭಾಗದಲ್ಲಿ ಉತ್ತರ ಕೊರಿಯಾದ ಜಾಂಗ್‌-ಸಾಂಗ್‌ ಎ ವಿರುದ್ಧ ಮೊದಲ ಬಾರಿಗೆ ಸ್ವರ್ಣ ಪದಕಕ್ಕೆ ಮುತ್ತಿಟ್ಟರು. ಮೂರನೇ ಬಾರಿ 2005 ರ ರಷ್ಯಾದ ಪೊಡೊಲ್ಕ್$Õದಲ್ಲಿ ನಡೆದ 46 ಕೆ.ಜಿ ವಿಭಾಗದಲ್ಲಿ ಉತ್ತರ ಕೊರಿಯಾದ ಜಾಂಗ್‌ ಓಕ್‌ ವಿರುದ್ಧ ದ್ವಿತೀಯ ಬಾರಿ ಸ್ವರ್ಣ ಪದಕ ಜಯಿಸಿದರು. ನಾಲ್ಕನೇ ಬಾರಿ 2006ರ ಭಾರತದÇÉೇ ನಡೆದ 46 ಕೆ.ಜಿ ವಿಭಾಗದಲ್ಲಿ ರೊಮೇನಿಯಾದ ಸ್ಟೇಲುಟಾ ಡುಟಾ ವಿರುದ್ಧ ತೃತೀಯ ಬಾರಿಗೆ ಸ್ವರ್ಣ ಪದಕಕ್ಕೆ ಮುತ್ತಿಟ್ಟು ಸಂಭ್ರಮಿಸಿದರು.

ಐದನೇ ಬಾರಿ 2008 ರ ಚೀನಾದ ನಿಂಗ್ಬೋ ಸಿಟಿ ಯಲ್ಲಿ ನಡೆದ 46 ಕೆಜಿ ವಿಭಾಗದಲ್ಲಿ ರೊಮೇನಿಯಾದ ಸ್ಟೇಲುಟಾ ಡುಟಾ ವಿರುದ್ಧ ಬಂಗಾರದ ಪದಕವನ್ನು ಬಾಚಿದರು. ಆರನೇ ಬಾರಿ 2010ರ ಬ್ರಿಡ್ಜ್ಟೌನ್‌ನಲ್ಲಿ  48 ಕೆಜಿ ವಿಭಾಗದಲ್ಲಿ ತೃತೀಯ ಬಾರಿಗೆ ಸ್ಟೇಲುಟಾ ಡುಟಾ ವಿರುದ್ಧ ಸೆಣಸಾಡಿ ಐದನೇ ಬಾರಿಗೆ ಸ್ವರ್ಣ ಪದಕ ಗೆದ್ದು ಸಂಭ್ರಮಿಸಿದರು. ಪ್ರಸ್ತುತ 2018ರ ನವದೆಹಲಿಯಲ್ಲಿ ನಡೆದ 48 ಕೆಜಿ ವಿಭಾಗದ ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಉಕ್ರೇನಿನ ಹನ್ನಾ ಓಕೋಟಾ ವಿರುದ್ಧ ಸೆಣಸಾಡಿ ಸ್ವರ್ಣ ಪದಕಕ್ಕೆ ಕೊರಳೊಡ್ಡಿದರು. ಇದರೊಂದಿಗೆ ಬಾಕ್ಸಿಂಗ್‌ ಲೋಕದ ಅನಭಿಷಕ್ತ ರಾಣಿಯಾಗಿ,ಈ ಸಾಧನೆ ಮಾಡಿದ ಏಕೈಕ ಮಹಿಳಾ ಬಾಕ್ಸರ್‌ ಎನಿಸಿಕೊಂಡಿ¨ªಾರೆ. ಹಾಗೆ ಕ್ಯೂಬಾದ ಫೆಲಿಕ್ಸ್‌ ಸೇವನ್‌ ಅವರು ಪುರುಷರ ವಿಭಾಗದಲ್ಲಿ ಮಾಡಿರುವ ಸಾಧನೆಯನ್ನು ಸರಿಗಟ್ಟಿ¨ªಾರೆ.

ಬೆಳ್ಳಿ ತೆರೆಯ ಮೇಲೆ ಮೇರಿ ಕೋಮ… ಬದುಕು: ಮ್ಯಾಗ್ನಿಫಿಸೆಂಟ್‌ ಮೇರಿ ಎಂಬ ಎರಡು ಪದಗಳು ಸಾಕು ಭಾರತದ ಬಾಕ್ಸಿಂಗ್‌ ಲೋಕದ ದಿಗ್ಗಜೆಯ ಹಿರಿಮೆಯನ್ನು ಜಗಕೆ ಸಾರಲು.ಮೇರಿಯವರ ಬದುಕಿನ ಹೋರಾಟವನ್ನು ಬೆಳ್ಳಿ ತೆರೆಯ ಮೇಲೆ ತಂದಿದ್ದು  2014 ಸೆಪ್ಟಂಬರ್‌ 5ರಂದು. ಇಲ್ಲಿ ಕೋಮ… ಪಾತ್ರಕ್ಕೆ ಬಣ್ಣ ಹಚ್ಚಿ ಜೀವ ತುಂಬಿದ್ದು  ಪ್ರಿಯಾಂಕಾ ಛೋಪ್ರಾ,ಮೇರಿ ಸ್ನೇಹಿತ ಹಾಗೂ ಗಂಡನ ಪಾತ್ರದಲ್ಲಿ ದರ್ಶನ್‌ ಕುಮಾರ್‌. ಕೋಚ್‌ ಪಾತ್ರದಲ್ಲಿ ನರ್ಜಿತ್‌ ಸಿಂಗ್‌ ಅಚ್ಚುಕಟ್ಟಾಗಿ ತಮ್ಮ ಪಾತ್ರಗಳನ್ನು ನಿರ್ವಹಿಸಿ¨ªಾರೆ. ಸಂಜಯ… ಲೀಲಾ ಬನ್ಸಾಲಿ ಚಿತ್ರಕ್ಕೆ ಹಣ ಹೂಡಿದ್ದರು. ಓಮಂಗ್‌ ಕುಮಾರ್‌ ಚಿತ್ರಕ್ಕೆ ಆಕ್ಷನ್‌ಕಟ್‌ ಹೇಳಿ¨ªಾರೆ. ಇನ್ನು ಚಿತ್ರದಲ್ಲಿ ಮನತಣಿಸುವ, ಸಂಗೀತವಿದ್ದು ಶಶಿ ಸುಮನ್‌, ರೋಹಿತ್‌ ಕುಲಕರ್ಣಿ, ಶಿವಂ ಶಶಿ ಸಂಗೀತ ನಿರ್ದೇಶನವಿದೆ. 

UNBREAKABLE  ಎಂಬ ಆತ್ಮಕಥನ: ತಮ್ಮ ಬಾಕ್ಸಿಂಗ್‌ ಹೋರಾಟದ ಬದುಕಿನಲ್ಲಿ ಸವೆಸಿದ, ಕ್ರಮಿಸಿದ ಹಾದಿ ಹಾಗೂ ಹಲವು ಏಳು ಬೀಳುಗಳ ಕುರಿತು, ಕ್ರೀಡಾ ಪಟುಗಳ ಬದುಕಿನ ಬಗ್ಗೆ,ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಮಹಿಳಾ ಮಣಿಗಳು ಅನುಭವಿಸುವ ಯಾತನೆ ಬಗ್ಗೆ  ಖೀNಆRಉಅಓಅಆಔಉ ಎಂಬ 140 ಪುಟಗಳ ಆತ್ಮಕತೆ ಯನ್ನು ಹೊರತಂದಿ¨ªಾರೆ.ಇದು ನವಂಬರ್‌ 19, 2013 ರಂದು ಬಿಡುಗಡೆಯಾಗಿದೆ. ಹಾಗೂ ತಮ್ಮ ವಯಕ್ತಿಕ ಜೀವನದ ಕುರಿತು, ಸವಿಸ್ತಾರವಾಗಿ ಆತ್ಮ ಕಥೆಯಲ್ಲಿ  ವಿವರಿಸಿ¨ªಾರೆ. ಅದರಲ್ಲಿನ ಪ್ರತಿಯೊಂದು ಪುಟಗಳು ರೋಮಾಂಚಕ. 

ಭವಿಷ್ಯದ ಬಾಕ್ಸರ್‌ಗಳ ತಯಾರಿಕೆ: ದೇಶದ ಬಾಕ್ಸಿಂಗ್‌ ಕ್ರೀಡಾ ಪ್ರತಿಭೆಗಳನ್ನು ಹುರುದುಂಬಿಸಿ, ಮಣಿಪುರದ ಇಂಫಾಲ… ವೆಸ್ಟ್‌ ಲಾಂಗೋಲ… ಗಿರಿ ಬೆಟ್ಟಗಳಡಿಯಲ್ಲಿ ವಿಶಾಲವಾದ 3.3 ಎಕರೆಗಳಷ್ಟು ವಿಸ್ತಾರವಾದ ಸುಸಜ್ಜಿತವಾದ ಕಟ್ಟಡದಲ್ಲಿ ಮೇರಿ ಕೋಮ… ಸಾಯಿ ಬಾಕ್ಸಿಂಗ್‌ ಅಕಾಡೆಮಿ ತೆರೆದಿ¨ªಾರೆ. ಇದು ಇಂಫಾಲ… ನಗರದಿಂದ 10 ಕಿ.ಮೀ. ದೂರದಲ್ಲಿದೆ. ದೇಶದ ಭವಿಷ್ಯದ ನೂರಾರು ಬಾಕ್ಸರ್‌ಗಳು ಮೇರಿಯವರ ಗರಡಿಯಲ್ಲಿ ಪಳಗುತ್ತಿ¨ªಾರೆ.
ರಾಜ್ಯ ಸಭೆ ಸದಸ್ಯೆ ಮೇರಿ: ಮೇರಿ ಕೋಮ… ಬಾಕ್ಸರ್‌ ಅಲ್ಲದೆ ಹತ್ತು ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿ¨ªಾರೆ. ಅಲ್ಲದೇ ಏಪ್ರಿಲ… 25 2016ರಿಂದ  ಏಪ್ರಿಲ… 24 2022 ರವರೆಗೆ ರಾಜ್ಯಸಭೆಗೆ ನಾಮನಿರ್ದೇಶನಗೊಂಡು ಸಂಸದೆಯಾಗಿ¨ªಾರೆ.

ಸುಖ ದಾಂಪತ್ಯ, ಮೂವರು ಮಕ್ಕಳು:  ಪ್ರತಿ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎನ್ನುವ ಮಾತಿದೆ. ಆದರೆ ಮೇರಿ ಬದುಕಿನಲ್ಲಿ ಕಥೆ ಬೇರೆಯದೇ ಇದೆ.ತಮ್ಮ ಬಹು ದಿನಗಳ ಕಾಲದ ಗೆಳೆಯ ಓಮರ್‌ ಕೋಮ… ಅವರೊಂದಿಗೆ 2005 ರಲ್ಲಿ ವಿವಾಹವಾದ ಮೇರಿ ತಮ್ಮೆಲ್ಲ ಸಾಧನೆಗಳಿಗೂ ಪತಿಯ ಬೆಂಬಲವನ್ನು ಮರೆಯುವುದಿಲ್ಲ.2007 ರಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮೇರಿ,ರೆಚುಟಗÌರ ಕೋಮ…, ಖುಪ್ನಿà ವರ್‌ ಕೋಮ…,ಪ್ರಿನ್ಸ್‌ ಕೋಮ…, ಮೂವರು ಮು¨ªಾದ ಮಕ್ಕಳ ತಾಯಿ ಮೇರಿ. 35 ರ ಪ್ರಾಯದ ಮೇರಿ, ಗಂಡನಿಗೆ ತಕ್ಕ ಮಡದಿಯಾಗಿ ಮು¨ªಾದ ಮಕ್ಕಳ ತಾಯಿಯಾಗಿ ಸುಖಸಂಸಾರ ನಡೆಸುತ್ತಿದ್ದಾರೆ. ದೇಶದ ಅನೇಕ ಮಹಿಳಾ ಕ್ರೀಡಾ ಪಟುಗಳು ಮದುವೆಯ ನಂತರ  ಕ್ರೀಡಾಂಗಣದತ್ತ ವಿಮುಖರಾಗುವುದೇ ಹೆಚ್ಚು.ಆದರೆ ಈ ವಿಷಯದಲ್ಲಿ ಮೇರಿ 18 ವರ್ಷಗಳ ಬಾಕ್ಸಿಂಗ್‌ ರಿಂಗ್‌ನ ಸೆಣಸಾಟದ ಅವಧಿಯಲ್ಲಿ ಅವರ ಆಟ ಮತ್ತಷ್ಟು ಪರಿಪಕ್ವಗೊಂಡಿದೆ.ಈಗಲೂ ಅವರ ಪಂಚಗಳ ವೇಗ ಹುಲಿಯ ಪಂಜಾಪ್ರಹಾರದಷ್ಟೇ ಚುರುಕಾಗಿದ್ದು ಎದುರಾಳಿಯ ಮುಂದೆ ಜಾಣ್ಮೆಯ ಆಟವನ್ನು ಪ್ರದರ್ಶಿಸುತ್ತ ಬಂದಿ¨ªಾರೆ.
ಪ್ರತಿ ಸಾಧನೆಯ ಹಿಂದೆ ಒಂದು ಹೋರಾಟವಿರುತ್ತದೆ. ಹತ್ತು ಹಲವು ಅವಮಾನ,ಪರಿಶ್ರಮ,ಛಲವಿರುತ್ತದೆ, ಸಾಧನೆಯೆಂಬುದು ತಿರುಕನ ಕನಸಲ್ಲಿ ಆನೆ ಹಾಕಿದ ಗೆಲುವಿನ ಹಾರ ಅಲ್ಲವೇ ಅಲ್ಲ, ಮೇರಿ ಕೋಮ… ಬದುಕಿನ ಪುಟಗಳನ್ನು ಓದಿದರೆ ಅವಳು ಈ ಸಾಧನೆಗೆ ಪಟ್ಟ ಪರಿ ಎಂಥದು ಎಂಬುದು ತಿಳಿಯುತ್ತದೆ. 

ಮೇರಿ ಗೆದ್ದ ಪದಕಗಳು
ವರ್ಷ    ಸ್ಥಳ    ಪದಕ

2012    ಲಂಡನ್‌ (ಒಲಿಂಪಿಕ್ಸ್‌)    ಕಂಚು
2002    ಅಂತಾಲ್ಯ (ವಿಶ್ವ ಕೂಟ)    ಚಿನ್ನ
2005    ಪೊಡೊಲ್ಸ್‌$R(ವಿಶ್ವ ಕೂಟ)    ಚಿನ್ನ
2006    ನವದೆಹಲಿ (ವಿಶ್ವ ಕೂಟ)    ಚಿನ್ನ
2008    ನಿಂಗ್ಬೊ ಸಿಟಿ     (ವಿಶ್ವ ಕೂಟ)    ಚಿನ್ನ
2010    ಬ್ರಿಡ್ಜ್ಟೌನ್‌ (ವಿಶ್ವ ಕೂಟ)    ಚಿನ್ನ
2018    ನವದೆಹಲಿ (ವಿಶ್ವ ಕೂಟ)    ಚಿನ್ನ    

ಪ್ರಶಾಂತ್‌ ಶಂಕ್ರಪ್ಪ  ಮೇಟಿ

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.