ರಾತ್ರೋ ರಾತ್ರಿ ಘಟಿಸಿದ ಪವಾಡ

ಪುರದ ಪುಣ್ಯಂ- ಕೊಟ್ಟೂರು

Team Udayavani, Jul 13, 2019, 12:53 PM IST

ಬಳ್ಳಾರಿಯ ಈ ತಾಲೂಕು ಕೇಂದ್ರವು ಕೊಟ್ಟೂರೇಶ್ವರ ಸ್ವಾಮಿಯ ನೆಲೆವೀಡು. ಶ್ರೀ ಗುರು ಕೊಟ್ಟೂರೇಶ್ವರರು ಇಲ್ಲಿಗೆ ಕಾಲಿಟ್ಟ ನಂತರ ಪವಾ ಡ ಗಳು ಘಟಿಸಿದವು ಎನ್ನು ವುದು ಪ್ರತೀತಿ. ದೀನ- ದುರ್ಬಲ ರಿಗೆ ಪವಾಡ ಮಾಡಿ ಕೊಡುತ್ತಾ, “ಕೊಡುವ ಊರು’ ಅಂತಲೇ ಖ್ಯಾತಿ ಪಡೆದು, ನಂತರ ಇದು “ಕೊಟ್ಟೂರು’ ಆಯಿತು. ಅದಕ್ಕೂ ಮೊದಲು ಈ ಊರು “ಶಿಖಾಪುರ’ ಆಗಿತ್ತು. ಆಗ ಇಲ್ಲಿ ನೆಲೆ ಸಿದ್ದವೀರ ಭದ್ರೇಶ್ವರ ಸ್ವಾಮಿ ನೆಲೆಸಿದ್ದರಂತೆ. ಒಮ್ಮೆ ಕೊಟ್ಟೂರೇಶ್ವರ ಸ್ವಾಮಿಯು, ಊರೂರು ಸುತ್ತಾ ಡುತ್ತಾ, ಶಿಖಾಪುರಕ್ಕೆ ಬಂದಾಗ, ತಡ ರಾತ್ರಿಯಾಗಿತ್ತಂತೆ. “ಇಂದು ರಾತ್ರಿ ನಾನು ಇಲ್ಲಿಯೇ ತಂಗಬಹುದೇ?’ ಎಂದು ವೀರ ಭದ್ರೇಶ್ವರ ಸ್ವಾಮಿಯ ಬಳಿ, ಕೊಟ್ಟೂರು ಸ್ವಾಮಿಯು ಕೇಳಲು, ಮಲಗಲು ಅನುಮತಿ ದೊರಕಿತು. ಆದರೆ, ಬೆಳಗ್ಗೆ ಎದ್ದಾಗ ಚಿತ್ರಣವೇ ಬದ ಲಾ ಗಿತ್ತು. ಇಡೀ ಸಾನ್ನಿ ಧ್ಯ ವನ್ನು ಶ್ರೀ ಗುರು ಕೊಟ್ಟೂರರೇ ಆವರಿಸಿಕೊಂಡಿದ್ದರಂತೆ. ಈ ಬಗ್ಗೆ ಪ್ರಶ್ನಿಸಿದ ವೀರಭದ್ರ ಸ್ವಾಮಿಗೆ, ಕೊಟ್ಟೂ ರರು ಹೇಳಿದ್ದು ಇಷ್ಟು…”ನೀವು ನಿಮ್ಮ ಸ್ಥಳ ವನ್ನು ನನಗೆ ನೀಡಿ. ನೀವು ಕೊಡದ ಗುಡ್ಡಕ್ಕೆ ಹೋಗಿ ಸಾನ್ನಿಧ್ಯ ವಹಿಸಿಕೊಳ್ಳಿ. ನಿಮ್ಮ ಕ್ಷೇತ್ರವು ಕೊಡದಗುಡ್ಡವೆಂದು ಪ್ರಸಿದ್ಧ ವಾಗಲಿ. ನೀವು ನನಗೆ ನೀಡಿದ ಈ ಶಿಖಾಪುರ, ಕೊಟ್ಟೂರು ಎಂದು ಜನ ಪ್ರಿಯತೆ ಪಡೆಯಲಿ’ ಎಂದು ಹರಸಿದ ರಂತೆ. ಪೌರಾಣಿಕ ಹಿನ್ನೆ ಲೆಯ ಈ ಕೊಟ್ಟೂರು ಸ್ವಾಮಿಗೆ, ಇಲ್ಲಿ ದೇಗುಲವಿದ್ದು, ಜಾತ್ರೆಗೆ ಲಕ್ಷಾಂತ ರ ಜನ ಸೇರುತ್ತಾರೆ.

– ಮಾಳವಿಕಾ ಎಂ.ಕೊಟ್ಟೂರು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಕರಾವಳಿಯ ಕಂಬಳದ ಕಹಳೆ ಜಗದಗಲ ಮೊಳಗಿದೆ. ಕಂಬಳ ಓಟಗಾರನಿಗೆ ಬಹುಪರಾಕ್‌ ಸಿಗುತ್ತಲೇ ಇದೆ. ರಾಜ್ಯಕ್ರೀಡಾಕೂಟದಲ್ಲೂ ಕಂಬಳ ಪ್ರವೇಶಿಸುವ ಮಾತುಗಳು ಕೇಳಿಬರುತ್ತಿವೆ....

  • ಇದು ಬಳ್ಳಾರಿಯ ಬಾಂಬಿ ಕಾಲೋನಿ ಎಂಬ ನತದೃಷ್ಟ ಗ್ರಾಮದ ಕತೆ. 10 ವರ್ಷಗಳ ಹಿಂದೆ ಈ ಊರು ಜನರಿಂದ ತುಂಬಿಕೊಂಡಿತ್ತು. ಶಾಲೆಯಲ್ಲಿ ಮಕ್ಕಳಿದ್ದರು. ಮನೆ ಮುಂದೆ ನಿತ್ಯವೂ...

  • ಕಾಡಿನಲ್ಲಿ ಪ್ರಾಣಿಗಳ ಮಾಯಕ ಚಿತ್ರಲೋಕ ಸೃಷ್ಟಿಸಿ, ಪ್ರಾಣಿಗಳು ಮಾತ್ರವೇ ಅಲ್ಲ, ಮನುಷ್ಯರ ಕಣ್ಣುಗಳಿಗೂ ಮೋಸ ಮಾಡುವ ಕಲಾ ನಿಪುಣ ನಾಗರಾಜ್‌. ಇವರು ಬಿಡಿಸಿದ ಚಿತ್ರಗಳಿಗೆ,...

  • ರಾವಣ, ಸೀತೆಯನ್ನು ಅಪಹರಿಸಿ, ಲಂಕೆಗೆ ಕರೆತಂದಿದ್ದಾನೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ರಾಮ ಬಳಗದಲ್ಲಿ ಮುಂದಿನ ಪ್ರಶ್ನೆ ಎದ್ದು ಕುಳಿತಿತ್ತು: ಲಂಕೆಗೆ ಹೋಗುವುದು...

  • ಈಶ್ವರನು ಶನಿಕಾಟದಿಂದ ಮುಕ್ತನಾದ ಸ್ಥಳ ಮತ್ತು ಶ್ರೀರಾಮನು ಮಾರೀಚ ಮೃಗವಧೆ ಮಾಡಿದ ಸ್ಥಳ ಎಂಬುದಾಗಿ ಸ್ಥಳಪುರಾಣವನ್ನು ಹೊಂದಿ, ನಾಡಿನ ಮೂಲೆಮೂಲೆಯಿಂದ ಭಕ್ತರನ್ನು...

ಹೊಸ ಸೇರ್ಪಡೆ