ಕ್ರೀಡಾಪಟುಗಳು ಗ್ಲಾಮರ್‌ ಲುಕ್‌ನಲ್ಲಿ ಕಾಣಿಸಿಕೊಳ್ಳೋದೇ ತಪ್ಪಾ?


Team Udayavani, Nov 11, 2017, 3:00 AM IST

44.jpg

ಭಾರತ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಮಿಥಾಲಿ ರಾಜ್‌ ಕ್ರೀಸ್‌ನಲ್ಲಿ ಎದುರಾಳಿ ಬೌಲರ್‌ಗಳನ್ನು ಚೆಂಡಾಡುತ್ತಾರೆ. ಹೀಗಾಗಿ ಇವರು ಮಹಿಳಾ ತಂಡದ ಸಚಿನ್‌ ತೆಂಡುಲ್ಕರ್‌ ಎಂದೇ ಖ್ಯಾತಿ ಪಡೆದಿದ್ದಾರೆ. ದಶಕಗಳಿಂದ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಕಿರೀಟ ಇವರಿಗಿದೆ. 

ಆದರೆ ಇತ್ತೀಚೆಗೆ ಲಂಡನ್‌ನಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್‌ ನಂತರ ಮಿಥಾಲಿ ಅಂಗಳದ ಆಚೆಗೂ ಸದ್ದು ಮಾಡ್ತಿದ್ದಾರೆ. ಅದು ಹಾಟ್‌ ಹಾಟ್‌ ಆಗಿ ಕಾಣಿಸಿಕೊಳ್ಳುವ ಮೂಲಕ. ಇದು ಟೀಕಾಕಾರರಿಗೆ ಆಹಾರವಾಗಿದೆ. ಸಿನಿಮಾದವರು ಬಿಕಿನಿ ತೊಟ್ಟರೆ ಸೂಪರ್‌ ಅನ್ನುವ ಜನ ಕ್ರೀಡಾಪಟುಗಳು ಸ್ವಲ್ಪ ಬೋಲ್ಡ್‌ ಆಗಿ ಕಾಣಿಸಿಕೊಂಡರೂ ಸಂಪ್ರದಾಯ, ಸಂಸ್ಕೃತಿ ಹೆಸರಲ್ಲಿ ಕೆಂಡಕಾರುತ್ತಾರೆ ಅನ್ನುವುದು ಮತ್ತೂಮ್ಮೆ ಸಾಬೀತಾಗಿದೆ.

ಇದೆಲ್ಲ ಆರಂಭವಾಗಿದ್ದು, ಮಿಥಾಲಿ ರಾಜ್‌ ಟ್ವೀಟರ್‌ನಲ್ಲಿ ಸ್ನೇಹಿತೆಯರ ಜತೆಗಿರುವ ಫೋಟೋವನ್ನು ಅಪ್‌ಲೋಡ್‌ ಮಾಡಿದಾಗ. ಆ ಫೋಟೋದಲ್ಲಿ ಮಿಥಾಲಿ ಅಲ್ಪ ಸ್ವಲ್ಪ ಎದೆಯ ಭಾಗ ಕಾಣಿಸುವಂತಹ ಬಟ್ಟೆಯನ್ನು ತೊಟ್ಟಿದ್ದರು. ಇದನ್ನು ನೋಡಿದ ಅಭಿಮಾನಿಗಳು ಮಿಥಾಲಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇನ್ನೇನು ಈ ಘಟನೆ ಮರೆಯುತ್ತಾ ಬಂತು ಅನ್ನುವ ಸಮಯದಲ್ಲೇ ಮಿಥಾಲಿ ಬೋಲ್ಡ್‌ ಆಗಿ ಕಾಣಿಸುವಂತಹ ಫೋಟೋ ಶೂಟ್‌ ಮಾಡಿಸಿಕೊಂಡು ಮತ್ತೂಮ್ಮೆ ಟೀಕಾಕಾರರ ಬಾಯಿಗೆ ಸಿಕ್ಕಿಬಿದ್ದಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದು ಸೌಂಡ್‌ ಮಾಡುತ್ತಿದೆ.

ಗ್ಲಾಮರ್‌ ಲೂಕ್‌ಗೂ ಸೈ
ಟೆನಿಸ್‌ ಆಟಗಾರ್ತಿಯರು ಹೆಚ್ಚು ಗ್ಲಾಮರ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಮರಿಯಾ ಶರಪೋವಾ ತನ್ನ ಆಟದ ಜತೆಗೆ ಸೌಂದರ್ಯದಿಂದಲೂ ಪ್ರಸಿದ್ಧಿಯಾದವರು. ಆಕೆಯ ಪಂದ್ಯವಿದ್ದಾಗ ಅಭಿಮಾನಿಗಳು ಆಕೆಯನ್ನು ನೋಡುವ ಉದ್ದೇಶದಿಂದಲೇ ಕ್ರೀಡಾಂಗಣಕ್ಕೆ ನುಗ್ಗುತ್ತಾರೆ. ಅದೇ ರೀತಿ ಭಾರತೀಯ ಕ್ರೀಡಾಪಟುಗಳ ವಿಷ್ಯಕ್ಕೆ ಬಂದರೆ ಟೆನಿಸ್‌ ತಾರೆ ಸಾನಿಯಾ ಮಿರ್ಜಾ, ಸ್ಕ್ವಾಷ್‌ ಆಟಗಾರ್ತಿ ದೀಪಿಕಾ ಪಳ್ಳಿಕಲ್‌, ಬ್ಯಾಟಿ¾ಂಟನ್‌ ಪ್ರತಿಭೆ ಜ್ವಾಲಾ ಗುಟ್ಟಾ…ಹೆಚ್ಚು ಗ್ಲಾಮರ್‌ ಆಗಿ ಕಾಣಿಸಿಕೊಳ್ಳುತ್ತಾರೆ. ಇವರಿಗೆ ಹೆಚ್ಚು ಹೆಚ್ಚು ಜಾಹೀರಾತುಗಳಲ್ಲಿ ಅವಕಾಶ ಸಿಕ್ಕಿದೆ ಅಂದ್ರೆ ಅದು ಕೇವಲ ಇವರ ಆಟದಿಂದ ಮಾತ್ರ ಅಲ್ಲ. ಅವರಲ್ಲಿರುವ ಗ್ಲಾಮರ್‌ ಲುಕ್‌ ಕೂಡ ಕಾರಣ ಅನ್ನುವುದನ್ನು ಅಲ್ಲಗೆಳೆಯಲಾಗದು.

ಬೋಲ್ಡ್‌ ಫೋಟೋ ಶೂಟ್‌ ತಪ್ಪಾ?

ಬಾಲಿವುಡ್‌, ಹಾಲಿವುಡ್‌ ಅಷ್ಟೇಕೆ ನಮ್ಮ ಸ್ಯಾಂಡಲ್‌ವುಡ್‌ನ‌ಲ್ಲಿಯೂ ನಟಿಯರು ಬೋಲ್ಡ್‌ ಫೋಟೋ ಶೂಟ್‌ ಮಾಡಿಸಿಕೊಳ್ಳುತ್ತಾರೆ. ಅಲಿಯಾ ಭಟ್‌, ಶ್ರದ್ಧಾ ಕಪೂರ್‌ ಬಿಕಿನಿ ತೊಟ್ಟು ಮಾದಕವಾಗಿ ಫೋಟೋ ಶೂಟ್‌ ಮಾಡಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಾಗ ಅವರನ್ನು ಸೌಂದರ್ಯದ ದೇವತೆಗಳು ಎಂದೇ ಕರೆದವರಿದ್ದಾರೆ. ಆದರೆ ಕ್ರೀಡಾಪಟುಗಳಾದ ಸಾನಿಯಾ ಮಿರ್ಜಾ, ಜ್ವಾಲಾ ಗುಟ್ಟಾ…ಸ್ವಲ್ಪ ಹಾಟ್‌ ಆಗಿ ಕಾಣಿಸಿಕೊಂಡಾಗ ಟೀಕಿಸಿದ್ದಾರೆ. ಇದೀಗ ಮಿಥಾಲಿ ರಾಜ್‌ ಸರದಿ ಅಷ್ಟೇ.
 

ಟಾಪ್ ನ್ಯೂಸ್

ಏರ್‌ಇಂಡಿಯಾ ಮಾರಾಟ ಒಪ್ಪಂದ ಪತ್ರಕ್ಕೆ ಸಹಿ

ಏರ್‌ಇಂಡಿಯಾ ಮಾರಾಟ ಒಪ್ಪಂದ ಪತ್ರಕ್ಕೆ ಸಹಿ

ಆನ್‌ಲೈನ್‌ ದಾಳಿ: ಶಮಿ ಬೆಂಬಲಕ್ಕೆ ಸಹಸ್ರ ಮಂದಿ

ಆನ್‌ಲೈನ್‌ ದಾಳಿ: ಶಮಿ ಬೆಂಬಲಕ್ಕೆ ಸಹಸ್ರ ಮಂದಿ

ನವೆಂಬರ್‌ ಅಂತ್ಯಕ್ಕೆ ಮತ್ತೊಂದು ಲಸಿಕೆ?

ನವೆಂಬರ್‌ ಅಂತ್ಯಕ್ಕೆ ಮತ್ತೊಂದು ಲಸಿಕೆ?

ರಾಜಧಾನಿಯಲ್ಲಿ ಎವೈ 4.2 ರೂಪಾಂತರಿ ಪ್ರಕರಣ ವರದಿ

ರಾಜಧಾನಿಯಲ್ಲಿ ಎವೈ 4.2 ರೂಪಾಂತರಿ ಪ್ರಕರಣ ವರದಿ

ಟಿ20 ವಿಶ್ವಕಪ್‌: ಅಫ್ಘಾನ್‌ಗೆ ಭರ್ಜರಿ ಗೆಲುವು

ಟಿ20 ವಿಶ್ವಕಪ್‌: ಅಫ್ಘಾನ್‌ಗೆ ಭರ್ಜರಿ ಗೆಲುವು

ಉಪ ಚುನಾವಣೆ ಬಿಜೆಪಿ ಹಣ ಹಂಚುವ ಮೂಲಕ ಗೆಲ್ಲಲು ಯತ್ನ: ಸುರ್ಜೆವಾಲ ಆರೋಪ

ಉಪ ಚುನಾವಣೆ ಬಿಜೆಪಿ ಹಣ ಹಂಚುವ ಮೂಲಕ ಗೆಲ್ಲಲು ಯತ್ನ: ಸುರ್ಜೆವಾಲ ಆರೋಪ

ಉ.ಪ್ರ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ 10 ಲಕ್ಷ ರೂ.ವರೆಗಿನ ಚಿಕಿತ್ಸೆ ಉಚಿತ!

ಉ.ಪ್ರ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ 10 ಲಕ್ಷ ರೂ.ವರೆಗಿನ ಚಿಕಿತ್ಸೆ ಉಚಿತ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಪತ್ತೆಯಾಗದ ಬಾಲಕನ ದೇಹ : ಕಾಳಿ ನದಿಯಲ್ಲಿ ಮುಂದುವರಿದ ಶೋಧ ಕಾರ್ಯಾಚರಣೆ

udayavani youtube

ಬಾಲಕನನ್ನು ಮೊಸಳೆ ಎಳೆದೊಯ್ದ ಪ್ರಕರಣ : ಬಾಲಕನ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

udayavani youtube

ಸೋತವನ ವಿರುದ್ದವೇ ಶರಣಾಗಿದ್ದೀಯ‌: ಸಿದ್ದರಾಮಯ್ಯಗೆ ಶ್ರೀನಿವಾಸ ಪ್ರಸಾದ್ ಟಾಂಗ್

udayavani youtube

ಚಿಕ್ಕಮಗಳೂರು : ಕೆರೆಯಲ್ಲಿ ಈಜಲು ಹೋದ ಬಾಲಕ ನೀರಲ್ಲಿ ಮುಳುಗಿ ಸಾವು

udayavani youtube

ಶ್ರೀರಂಗಪಟ್ಟಣ ತಾಲೂಕಿನಾದ್ಯಂತ ಭಾರೀ ಮಳೆಗೆ ಸೇತುವೆ ಮುಳುಗಡೆ ರೈತರ ಬೆಳೆ ನಾಶ

ಹೊಸ ಸೇರ್ಪಡೆ

ಏರ್‌ಇಂಡಿಯಾ ಮಾರಾಟ ಒಪ್ಪಂದ ಪತ್ರಕ್ಕೆ ಸಹಿ

ಏರ್‌ಇಂಡಿಯಾ ಮಾರಾಟ ಒಪ್ಪಂದ ಪತ್ರಕ್ಕೆ ಸಹಿ

ಆನ್‌ಲೈನ್‌ ದಾಳಿ: ಶಮಿ ಬೆಂಬಲಕ್ಕೆ ಸಹಸ್ರ ಮಂದಿ

ಆನ್‌ಲೈನ್‌ ದಾಳಿ: ಶಮಿ ಬೆಂಬಲಕ್ಕೆ ಸಹಸ್ರ ಮಂದಿ

ನವೆಂಬರ್‌ ಅಂತ್ಯಕ್ಕೆ ಮತ್ತೊಂದು ಲಸಿಕೆ?

ನವೆಂಬರ್‌ ಅಂತ್ಯಕ್ಕೆ ಮತ್ತೊಂದು ಲಸಿಕೆ?

ರಾಜಧಾನಿಯಲ್ಲಿ ಎವೈ 4.2 ರೂಪಾಂತರಿ ಪ್ರಕರಣ ವರದಿ

ರಾಜಧಾನಿಯಲ್ಲಿ ಎವೈ 4.2 ರೂಪಾಂತರಿ ಪ್ರಕರಣ ವರದಿ

ಟಿ20 ವಿಶ್ವಕಪ್‌: ಅಫ್ಘಾನ್‌ಗೆ ಭರ್ಜರಿ ಗೆಲುವು

ಟಿ20 ವಿಶ್ವಕಪ್‌: ಅಫ್ಘಾನ್‌ಗೆ ಭರ್ಜರಿ ಗೆಲುವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.