ಒಂದೇ ಮಳೆನೀರು, ಎರಡು ಸಮುದ್ರಕ್ಕೆ!

Team Udayavani, Feb 1, 2020, 6:08 AM IST

onde-mala

ಕುಕ್ಕೆ ಸುಬ್ರಮಣ್ಯಕ್ಕೆ ಹೋಗಲು 2-3 ಹಾದಿಗಳುಂಟು. ಅವುಗಳಲ್ಲಿ ಬಿಸಿಲೇ ಘಾಟ್ ಮಾರ್ಗ ಕೂಡ ಒಂದು. ಈ ಮಾರ್ಗ ಸರಿಯಿಲ್ಲದ ಕಾರಣ, ಹೆಚ್ಚು ಜನರು ಇಲ್ಲಿ ಪಯಣಿಸಲು ಇಚ್ಛಿಸುವುದಿಲ್ಲ. ಆದರೆ, ಈ ಮಾರ್ಗದಲ್ಲಿ ಅದ್ಭುತವಾದ ರಮಣೀಯ ತಾಣಗಳಿವೆ. ಅವುಗಳಲ್ಲಿ ಬಿಸಿಲೇ ವ್ಯೂ ಪಾಯಿಂಟ್‌ ಬಹಳ ಜನಪ್ರಿಯ. ಇಲ್ಲಿಗೆ ಬಹಳ ಹತ್ತಿರದಲ್ಲೇ ಇರುವ ಮಂಕನಹಳ್ಳಿಯ “ರಿಡ್ಜ್ ಪಾಯಿಂಟ್‌ ಸ್ಮಾರಕ’, ನಿಜಕ್ಕೂ ಒಂದು ವಿಸ್ಮಯ.

ರಿಡ್ಜ್ ಎಂದರೆ, ಅಂಚು ಎಂದರ್ಥ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿಯ ಮಂಕನಹಳ್ಳಿಯಲ್ಲಿ ಬೀಳುವ ಮಳೆ ನೀರು, ಎರಡು ಸಮುದ್ರಗಳನ್ನು ಸೇರುತ್ತದೆ! ಈ ವಿಶೇಷವನ್ನು ದಾಖಲಿಸುವ ಒಂದು ಸ್ಮಾರಕ ಸ್ತಂಭವನ್ನು ಸ್ವಾತಂತ್ರ್ಯಪೂರ್ವದಲ್ಲಿಯೇ ಬ್ರಿಟಿಷ್‌ ಅಧಿಕಾರಿಗಳು ಸ್ಥಾಪಿಸಿದ್ದಾರೆ. ಮಂಕನಹಳ್ಳಿಯಲ್ಲಿ ಬಿದ್ದ ಒಂದು ಭಾಗದ ಮಳೆ ನೀರು, ಝರಿಯಾಗಿ ಪೂರ್ವ ದಿಕ್ಕಿಗೆ ಹರಿದು ಸಮೀಪದಲ್ಲಿ ಸಕಲೇಶಪುರ ಸಮೀಪ ಹೇಮಾವತಿಯ ಒಡಲನ್ನು ಸೇರುತ್ತದೆ.

ಅಲ್ಲಿಂದ ಅದು ಕೆ.ಆರ್‌. ಪೇಟೆ ತಾಲೂಕಿನ ಸಂಗಾಪುರ ಸಮೀಪದ ತ್ರಿವೇಣಿ ಸಂಗಮದಲ್ಲಿ ಕಾವೇರಿ ನದಿಯಲ್ಲಿ ಲೀನವಾಗಿ, ಮುಂದೆ ತಮಿಳುನಾಡಿನಲ್ಲಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಮಂಕನಹಳ್ಳಿಯ ಮತ್ತೂಂದು ಭಾಗದಲ್ಲಿ ಬಿದ್ದ ಮಳೆನೀರು, ಪಶ್ಚಿಮದ ಕಡೆ ಚಲಿಸಿ, ಕುಮಾರ ಪರ್ವತ ಶ್ರೇಣಿಯ ಬೆಟ್ಟಕುಮರಿ ಪ್ರದೇಶದಲ್ಲಿ ಕಾಣಸಿಗುವ ಅಡ್ಡಹೊಳೆ, ಪುಷ್ಪ ಗಿರಿ ಪ್ರದೇಶದ ಹೊಳೆಗಳಲ್ಲಿ ಮಿಳಿತವಾಗಿ ಕುಕ್ಕೆ ಸುಬ್ರಮಣ್ಯ ಪವಿತ್ರ ಕ್ಷೇತ್ರದಲ್ಲಿ “ಕುಮಾರ ಧಾರಾ’ ನದಿಯೆಂಬ ಹೆಸರು ಗಳಿಸುತ್ತದೆ.

ಅಲ್ಲಿ ಅದು ಕಾಡಿನಲ್ಲಿ ನಾರು, ಬೇರು, ಗಿಡ ಮೂಲಿಕೆಗಳನ್ನು ಬಳಸಿ, ಔಷಧಿಯುಕ್ತ ನೀರಾಗಿ, ಜನರೊಳಗೂ ನಂಬಿಕೆಯನ್ನು ಬಿತ್ತುತ್ತದೆ. ಈ ನದಿಯಲ್ಲಿ ಮಿಂದರೆ ಆರೋಗ್ಯಕ್ಕೆ ಒಳ್ಳೆಯದೆಂಬ ಭಾವನೆ ಹಲವರಲ್ಲಿದೆ. ಮುಂದೆ ಗುಂಡ್ಯಾ ನದಿಯ ಮೂಲಕ ನೇತ್ರಾವತಿ ನದಿಯ ಜೊತೆ ಸಾಗಿ, ಮಂಗಳೂರಿನ ಸಮೀಪ ಅರಬ್ಬೀ ಸಮುದ್ರವನ್ನು ಸೇರುತ್ತದೆ. ಒಂದೇ ಊರಿನ ನೆತ್ತಿ ಮೇಲೆ ಬಿದ್ದ ನೀರು, ಎರಡು ಸಾಗರ ಸೇರುವ ವಿಸ್ಮಯ ಇದಾಗಿದೆ.

* ಬಾಲಸುಬ್ರಹ್ಮಣ್ಯ ಕೆ.ಎಸ್‌.

ಟಾಪ್ ನ್ಯೂಸ್

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

1-ewqe

Olympics ಅರ್ಹತೆ ತಪ್ಪುವ ಭೀತಿಯಲ್ಲಿ ದೀಪಕ್‌, ಸುಜೀತ್‌

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

1-wqewqewq

Doping: ಶಾಲು ಚೌಧರಿ ದೋಷಮುಕ್ತ

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.