Udayavni Special

ಹನುಮಗಿರಿಯ ಪಂಚಮುಖಿ ಆಂಜನೇಯ 


Team Udayavani, Aug 11, 2018, 12:12 PM IST

100.jpg

ಪೂರ್ವದಲ್ಲಿ ಸಹ್ಯಾದ್ರಿ ಬೆಟ್ಟ ಸಾಲುಗಳ ರಮಣೀಯ ದೃಶ್ಯ ಮಲೆನಾಡಿನ ಹಚ್ಚನೆಯ ಹಸಿರು, ಪಶ್ಚಿಮದಲ್ಲಿ ಸಮುದ್ರ ಕರಾವಳಿಯ ಪ್ರಶಾಂತ ವಾತಾವರಣ , ಮಧ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ  ಪುತ್ತೂರಿನಿಂದ ಕಾವು ಮಾರ್ಗವಾಗಿ 22 ಕಿ.ಮೀ ಸಾಗಿದಾಗ ಸಿಗುವ ರಮಣೀಯ ಪ್ರದೇಶವೇ ಈಶ್ವರಮಂಗಲ. ಇಲ್ಲಿರುವ ವಿದ್ಯಾ ಸಂಸ್ಥೆಗಳ ಜೊತೆಯಲ್ಲಿ ಚಾಚಿಕೊಂಡಿರುವ ಉನ್ನತ ಪ್ರದೇಶವೇ ಹನುಮಗಿರಿ. 

ಇತಿಹಾಸ
ಮಹಾಶಕ್ತಿ ಸ್ವರೂಪಿಯಾಗಿರುವ ಶ್ರೀ ಆಂಜನೇಯ ಸ್ವಾಮಿ ನೆಲೆ ನಿಂತ ಪುಣ್ಯ ಕ್ಷೇತ್ರವೇ ಹನುಮಗಿರಿ. ಪ್ರಸ್ತುತ ವಿಶಾಲವಾದ ಸಭಾಭವನವನ್ನು ಹೊಂದಿರುವುದು ಕ್ಷೇತ್ರದ ಹೆಗ್ಗಳಿಕೆ. 

ವಿಶ್ವದಲ್ಲೇ  ಅತಿ ದೊಡ್ಡದಾದ ಆಂಜನೇಯ ಮೂರ್ತಿ ಎಂಬ ಹೆಗ್ಗಳಿಕೆ ಇದಕ್ಕಿದೆ.   ಅಂದರೆ,  ಸುಮಾರು 13 ಅಡಿ ಎತ್ತರದ ಶ್ರೇಷ್ಠ ಕೃಷ್ಣ ಶಿಲೆಯಲ್ಲಿ ಕೆತ್ತಿದ ಪಂಚಮುಖೀ ಆಂಜನೇಯ ಏಕ ಶಿಲಾ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. 
ಶ್ರೀರಾಮ-ಹನುಮರ ಜೀವನದ ದಿವ್ಯ ಸಂದೇಶವನ್ನು ಸಾರುವ ಕಲ್ಲು ಬಂಡೆಗಳಲ್ಲಿ ವಿಶ್ವದ ಏಕೈಕ ಶಿಲಾ ನಿರ್ಮಿತ ಮಾನಸೋದ್ಯಾನವಿದೆ. ಪುಟಾಣಿ ಮಕ್ಕಳಿಗೆ ಕುಣಿದು ಕುಪ್ಪಳಿಸಲು ಆಟದ ಸ್ಥಳವಿದೆ.  ಹನುಮಂತ ದೇವರು,  ನರಸಿಂಹ, ವರಾಹ, ಹಯಗ್ರೀವ ಮತ್ತು ಗರುಡ ಈ ಐದು ಮುಖಗಳನ್ನು ಹೊಂದಿದೆ.  ಇಲ್ಲಿನ ಆಂಜನೇಯ ವಿಗ್ರಹದೊಂದಿಗೆ ಸಂಜೀವಿನಿ ಉದ್ಯಾನವನವಿರುವುದು ಇನ್ನೊಂದು ವಿಶೇಷ.  ಹನುಮಂತನು ಸಂಜೀವಿನಿಗಾಗಿ ದ್ರೋಣಾಚಲವನ್ನು ಎತ್ತಿ ತಂದ ಸಾಹಸಮಯ ಕಾರ್ಯ ನೆನಪಿಸುವ ಸಂಜೀವಿನಿಯಂತಹ ಜೀವ ಸಂರಕ್ಷಕ ಗಿಡಮೂಲಿಕೆಗಳು, ಔಷಧೀಯ ಸಸ್ಯಗಳು ಇಲ್ಲಿವೆ.  ಗೋವುಗಳ ಸಂರಕ್ಷಣೆಗೆ ಗೋವು ಶಾಲೆ ಕೂಡ ಸ್ಥಾಪನೆಯಾಗಿದೆ. ಹನುಮಂತನ ಮುಂದೆ ನಿಂತು, ಭಕ್ತಿಯಿಂದ ಪ್ರಾರ್ಥನೆ ಮಾಡಿದರೆ ಎಲ್ಲಾ  ಕಾಯಿಲೆ, ಸಮಸ್ಯೆಗಳು ನಿವಾರಣೆಯಾಗುತ್ತದೆ ಎನ್ನುವುದು ಭಕ್ತರ ನಂಬಿಕೆ. 

ಸಾಂಸ್ಕೃತಿಕ ಕ್ಷೇತ್ರ
 ಇಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ರಾಮ ಹನುಮರ ಪುಣ್ಯ ಚರಿತ್ರೆಯ ಪಠಣ, ಭಜನೆ, ಸಂಕೀರ್ತನೆ, ಪ್ರವಚನ, ಪಾರಾಯಣಗಳು ನಡೆಯುತ್ತಿರುತ್ತವೆ.  ದೇವಾಲಯದಲ್ಲಿ ಜಾತ್ರೆ ನಡೆಯುತ್ತದೆ. ಈ ಸಂದರ್ಭದಲ್ಲಿ ಜನಸಾಗರವೇ ಹರಿದುಬರುತ್ತದೆ.  

ವಿಶ್ವದಲ್ಲೇ ಅತಿ ಎತ್ತರದ್ದು ಎಂದು ಹೇಳಲಾಗುವ, 22 ಅಡಿ ಎತ್ತರದ ಕೃಷ್ಣ ಶಿಲೆಯಲ್ಲಿ ರಚಿಸಲಾದ ಕೋದಂಡ ರಾಮನ ವಿಗ್ರಹ ಇಲ್ಲಿ ಪ್ರತಿಷ್ಠಾಪನೆಯಾಗಿದೆ. ಕ್ಷೇತ್ರದಲ್ಲಿ ಶನಿದೋಷ ನಿವಾರಣೆಗಾಗಿ, ಮುಖ್ಯ ಪ್ರಾಣ ಪೂಜೆಯೂ ನಡೆಯುತ್ತದೆ. ದೇವಾಲಯದಲ್ಲಿ ರಂಗಪೂಜೆಯು ನಡೆಯುತ್ತದೆ. ಇಲ್ಲಿ ವಿಶೇಷವಾಗಿ ಶ್ರೀ ಕ್ಷೇತ್ರದಲ್ಲಿ ಸಮಾಜದ ತೀರ ಹಿಂದುಳಿದ ಮತ್ತು ಅನಾಥ ಮಕ್ಕಳ ಕಲ್ಯಾಣಕ್ಕಾಗಿ ಉಚಿತ ವಸತಿ , ಆಹಾರ , ಶಿಕ್ಷ$ಣ, ಆರೋಗ್ಯ ಇತ್ಯಾದಿ ಸೌಲಭ್ಯಗಳನ್ನು ಸಂಸ್ಥೆ ನೋಡಿಕೊಳ್ಳುತ್ತದೆ. ವೈದ್ಯಕೀಯ ಚಿಕಿತ್ಸೆಯು ಉಚಿತವಾಗಿ ಲಭ್ಯವಿದೆ. 

 ಹನುಮಗಿರಿಯ ಹಚ್ಚ ಹಸುರಿನ ಉದ್ಯಾನ ವನ ವೀಕ್ಷಿಸಲು ಎರಡು ಕಣ್ಣು ಸಾಲದು. ಛಾಯಾಗ್ರಹಕರಿಗೆ ಹೇಳಿ ಮಾಡಿಸಿದ ಸ್ಥಳ. ಫೋಟೋ ತೆಗೆಯಲು ಆರಂಭಿಸಿದರೆ ಸಂಜೆ ಆದರೂ ಯಾರಿಗೂ ಅರಿವಿಲ್ಲದಂತೆ ಮನಸ್ಸಿಗೆ ಮುದ ನೀಡುವ ರಮಣೀಯ ಸ್ಥಳ. 

ಹರ್ಷಿತಾ ಕುಲಾಲ ಕಾವು 
 

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Tewatia-1

ರಾಜಸ್ಥಾನ ರಾಯಲ್ಸ್ ಗೆಲ್ಲಿಸಿದ ರಾಹುಲ್ ಸ್ಪೋಟಕ ಬ್ಯಾಟಿಂಗ್!

ಹಾವೇರಿ: 117ಜನರಿಗೆ ಸೋಂಕು ದೃಢ ; ಇಬ್ಬರು ಸಾವು

ಹಾವೇರಿ: 117ಜನರಿಗೆ ಸೋಂಕು ದೃಢ ; ಇಬ್ಬರು ಸಾವು

ವಿಜಯಪುರದಲ್ಲಿ ಕೆ–ಸೆಟ್‌ ಪರೀಕ್ಷೆ ಬರೆದ 4614 ಪರೀಕ್ಷಾರ್ಥಿಗಳು

ವಿಜಯಪುರದಲ್ಲಿ ಕೆ–ಸೆಟ್‌ ಪರೀಕ್ಷೆ ಬರೆದ 4614 ಪರೀಕ್ಷಾರ್ಥಿಗಳು

Mayank-01

ರಾಹುಲ್–ಮಯಾಂಕ್ ಭರ್ಜರಿ ಬ್ಯಾಟಿಂಗ್ ಜೊತೆಯಾಟ: ರಾಯಲ್ಸ್ ಬೆವರಿಳಿಸಿದ ‘ಹುಡುಗರು’!

ತಾಯಿ ಚಿಕಿತ್ಸೆಗೆ ಮಾಡಿದ ಸಾಲ ತೀರಿಸಲಾಗದೆ ಯುವಕ ಆತ್ಮಹತ್ಯೆ! ಜಿಲ್ಲೆಯಲ್ಲಿ ಎರಡನೇ ಸಾವು

ತಾಯಿ ಚಿಕಿತ್ಸೆಗೆ ಮಾಡಿದ ಸಾಲ ತೀರಿಸಲಾಗದೆ ಯುವಕ ಆತ್ಮಹತ್ಯೆ! ಜಿಲ್ಲೆಯಲ್ಲಿ ಎರಡನೇ ಸಾವು

ಚಾಮರಾಜನಗರ ; ಕಾವಿಡ್ ಸೋಂಕಿಗೆ ಓರ್ವ ಸಾವು! 44 ಹೊಸ ಪ್ರಕರಣ

ಚಾಮರಾಜನಗರ ; ಕೋವಿಡ್ ಸೋಂಕಿಗೆ ಓರ್ವ ಸಾವು! 44 ಹೊಸ ಪ್ರಕರಣ

ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಮನೆಗೆ ಕೆಪಿಸಿಸಿ ಅಧ್ಯಕ್ಷ ಭೇಟಿ-ಯೋಗಕ್ಷೇಮ ವಿಚಾರಣೆ

ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಮನೆಗೆ ಕೆಪಿಸಿಸಿ ಅಧ್ಯಕ್ಷ ಭೇಟಿ-ಯೋಗಕ್ಷೇಮ ವಿಚಾರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cycle-yatri

ಸೈಕಲ್‌ ಯಾತ್ರಿಕನ ಕನಸು

bili-saheb

ಬಿಳಿ ಸಾಹೇಬನ ಬೇಂದ್ರೆ

sagarotttara

ಸಾಗರೋತ್ತರ ದೇಶಗಳಲ್ಲಿ ರಾಮಾಯಣ

ondu-kote

ಒಂದು ಕೋಟೆ ಯಾನ

koodali

ಕೂಡಲಿ ಊಟದ ಸೊಗಸು

MUST WATCH

udayavani youtube

ಕರಿಮೆಣಸು ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

ಕೋವಿಡ್ ‌ನಿಂದ ಶಬರಿಮಲೆಗೂ ಕೋಟಿ ಕೋಟಿ ನಷ್ಟ!

udayavani youtube

A girl sticthes 300 masks for Indian Army Soldiers | Covid Warrior | Udayavani

udayavani youtube

ಪೊಲೀಸರಿಗೆ ಮುಂದೆಯೂ ಸಹಕಾರ ಕೊಡುತ್ತೇನೆ: ನಾಲ್ಕು ಗಂಟೆ ಸಿಸಿಬಿ ವಿಚಾರಣೆ ಎದುರಿಸಿದ ಅನುಶ್ರೀ

udayavani youtube

Padma Shri SPB: A journey of Legendary Singer | S P Balasubrahmanyamಹೊಸ ಸೇರ್ಪಡೆ

Tewatia-1

ರಾಜಸ್ಥಾನ ರಾಯಲ್ಸ್ ಗೆಲ್ಲಿಸಿದ ರಾಹುಲ್ ಸ್ಪೋಟಕ ಬ್ಯಾಟಿಂಗ್!

ಹಾವೇರಿ: 117ಜನರಿಗೆ ಸೋಂಕು ದೃಢ ; ಇಬ್ಬರು ಸಾವು

ಹಾವೇರಿ: 117ಜನರಿಗೆ ಸೋಂಕು ದೃಢ ; ಇಬ್ಬರು ಸಾವು

ನೀವು ಶ್ವಾನಪ್ರಿಯರೇ? ಹಾಗಿದ್ದರೆ ರೇಬಿಸ್‌ ಬಗ್ಗೆ ತಿಳಿಯಿರಿ

ನೀವು ಶ್ವಾನಪ್ರಿಯರೇ? ಹಾಗಿದ್ದರೆ ರೇಬಿಸ್‌ ಬಗ್ಗೆ ತಿಳಿಯಿರಿ

ವಿಜಯಪುರದಲ್ಲಿ ಕೆ–ಸೆಟ್‌ ಪರೀಕ್ಷೆ ಬರೆದ 4614 ಪರೀಕ್ಷಾರ್ಥಿಗಳು

ವಿಜಯಪುರದಲ್ಲಿ ಕೆ–ಸೆಟ್‌ ಪರೀಕ್ಷೆ ಬರೆದ 4614 ಪರೀಕ್ಷಾರ್ಥಿಗಳು

edition-tdy-1

ಸೂಕ್ತ ಮುನ್ನೆಚ್ಚರಿಕೆ, ಸರಿಯಾದ ಸಮಯಕ್ಕೆ ಚಿಕಿತ್ಸೆ ರೇಬಿಸ್‌ ಕಾಯಿಲೆ ತಡೆಗೆ ನಿರ್ಣಾಯಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.