ಶಾಂತಿಮಂತ್ರ ಹೇಳುವ ಸಂಸ್ಕಾರದ ಪಾಠ ಕೇಳಿಸಿಕೊಳ್ಳಿ…

Team Udayavani, Apr 20, 2019, 6:02 PM IST

ಯಾವಾಗ ಮನಸ್ಸು ಒಂದು ಶುಭಕರವಾದ ವಿಷಯವನ್ನು ಕೇಳಿಸಿಕೊಳ್ಳುವುದೋ ಆಗ, ಅದರ ವಿಚಾರ, ವಿಷಯಗಳಲ್ಲಿಯೇ ಆಸಕ್ತವಾಗುವುದು. ಅಮಂಗಳಕರವಾದ ಅಥವಾ ಕೆಟ್ಟ ವಿಚಾರವನ್ನು ಕೇಳಿದಾಗ ಮನಸ್ಸು ಕೂಡ ಅತ್ತ ಹೊರಳುವುದೇ ಹೆಚ್ಚು.

ಒಂದು ಶುಭಕಾರ್ಯ, ಒಂದು ಶುಭ ಸಮಾರಂಭ, ಒಂದು ದೇವತಾಕಾರ್ಯ ಮೊದಲಾದವುಗಳನ್ನು ಆರಂಭಿಸುವಾಗ ಶಾಂತಿಮಂತ್ರದಿಂದ ಆರಂಭಿಸಿ, ಅಂತ್ಯದಲ್ಲೂ ಶಾಂತಿಮಂತ್ರವನ್ನು ಹೇಳುವುದೇ ಸತ್ಸಂಪ್ರದಾಯ. ಇದು ಹಲವರಿಗೆ ತಿಳಿದಿರುವ ಸಂಗತಿ. ನಾಳೆ ಏನಾಗಬೇಕು? ಎಂದು ಕೇಳಿದರೆ ಉತ್ತರ, ಒಳ್ಳೆಯದಾಗಬೇಕಷ್ಟೆ ಎಂಬುದು.

ಈ ಒಳ್ಳೆಯದಾಗುವುದು ಎಂದರೆ ಏನು? ಕನಸಿನಲ್ಲಿ ಕಂಡ ಸಂಪತ್ತು ಮನೆ ಎದುರು ಬಂದು ಬೀಳುವುದೇ ಅಥವಾ ಬಯಸಿದ ಅಧಿಕಾರವೊಂದು ನಾಳೆ ಇದ್ದಕ್ಕಿದ್ದಂತೆ ದೊರೆಯುವುದೇ? ಏನೂ ಕಷ್ಟವೇ ಇಲ್ಲದೆ ಬದುಕುವುದೇ? ಇವ್ಯಾವುದೂ ಅಲ್ಲ. ಒಂದು ನೆಮ್ಮದಿಯ ಬದುಕು. ಒಳ್ಳೆಯ ಬದುಕಿಗೆ ಮನಸ್ಸೂ ಒಳ್ಳೆಯದಾಗಿರಬೇಕು. ಅಷ್ಟೇ ಅಲ್ಲದೆ, ಸುತ್ತಲಿನ ಸಮಾಜ-ಸಂಸ್ಕೃತಿ, ಪ್ರಕೃತಿ, ನುಡಿ-ನಡೆ ಎಲ್ಲವೂ ಒಳ್ಳೆಯದಾಗಿದ್ದರೆ ಮಾತ್ರ ನಾಳೆಗಳು ಒಳ್ಳೆಯ ದಿನಗಳಾಗುತ್ತವೆ. ಈ ಒಳ್ಳೆಯದು ಎಂಬುದೂ ವ್ಯಕ್ತಿಗತವೇ ಬಿಡಿ. ಹಾಗಾಗಿ, ಎಲ್ಲರಿಗೂ ಒಳ್ಳೆಯದಾದರೆ ಅಷ್ಟು ಸಾಕು.

ಶಾಂತಿ ನೆಮ್ಮದಿ
ಒಳ್ಳೆಯ ಸಂಸ್ಕಾರದಿಂದ ಒಳ್ಳೆಯ ಸಂಸ್ಕೃತಿ. ಒಳ್ಳೆಯ ಸಂಸ್ಕೃತಿಯಿಂದ ಎಲ್ಲ ನಡೆ-ನುಡಿಗಳೂ ಉತ್ತಮವೇ ಆಗಿ ಒಳ್ಳೆಯದೇ ಆಗುತ್ತದೆ. ಹಾಗಾಗಿಯೇ, ಶಾಂತಿಮಂತ್ರ ಯಾವಾಗಲೂ ಅಂತಹ ಒಳ್ಳೆಯ ಆಶಯವನ್ನು ಹೊಂದಿರುತ್ತದೆ. ಶಾಂತಿ ಎಂದರೆ ನೆಮ್ಮದಿ. ಶಾಂತಿಯುತವಾದ ಮನಸ್ಸು ಎಲ್ಲರದ್ದೂ ಆಗಿದ್ದಾಗ ಎಲ್ಲರಿಗೂ ನೆಮ್ಮದಿ. ಹೀಗೊಂದು ಶಾಂತಿ ಮಂತ್ರವಿದೆ.

ಓಂ ಭದ್ರಂ ಕರ್ಣೇಭಿಃ
ಶ್ರುಣುಯಾಮ ದೇವಾಃ |
ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ |
ಸ್ಥಿರೈರಂಗೈಸ್ತುಷ್ಟುವಾಂಸಸ್ತನೂಭಿವ್ಯìಶೇಮ
ದೇವಹಿತಂ ಯದಾಯುಃ||
ಓಂ ಶಾಂತಿಃ ಓಂ ಶಾಂತಿಃ ಓಂ ಶಾಂತಿಃ ||

ಈ ಶ್ಲೋಕದ ಅರ್ಥ ಹೀಗಿದೆ: ಹೇ ದೇವತೆಗಳೇ, ಮಂಗಳವಾದುದನ್ನು ಕಿವಿಗಳಿಂದ ಕೇಳ್ಳೋಣ. ಹೇ ಪೂಜಾರ್ಹರೇ, ಪವಿತ್ರವಾದುದನ್ನು ಕಣ್ಣುಗಳಿಂದ ನೋಡೋಣ. ದೃಢವಾದ ಅವಯವಗಳಿಂದಲೂ ಮತ್ತು ಶರೀರಗಳಿಂದಲೂ ಕೂಡಿ, ನಿಮ್ಮನ್ನು ಸ್ತುತಿಸುವವರಾಗಿ ದೇವನಿಂದ ವಿಧಿಸಲ್ಪಟ್ಟ ಆಯಸ್ಸನ್ನು ಹೊಂದೋಣ. ಮಗುವೊಂದು ಪ್ರತಿಯೊಂದನ್ನೂ ಮೊತ್ತಮೊದಲು ಕಲಿಯುವುದು ಕೇಳುವಿಕೆ ಮತ್ತು ನೋಡುವಿಕೆಯಿಂದಲೇ.

ಪ್ರತಿಯೊಬ್ಬ ಮನುಷ್ಯನಿಗೂ, ಬದುಕಿನ ಪ್ರತಿಹಂತದಲ್ಲೂ ಹೀಗೇಯೇ. ಒಂದು ಕಲ್ಪನೆಗೂ ಕೂಡ ವಾಸ್ತವದ ಯಾವುದೋ ಒಂದು ಎಳೆ ಬೇಕೇಬೇಕು. ಹಾಗೆಯೇ ಯೋಚನೆಯೊಂದು ನಮ್ಮನ್ನು ಆವರಿಸಲು ಅಥವಾ ಮನಸ್ಸಿನಲ್ಲಿ ಯೋಚನೆ ಹುಟ್ಟಲು ಕಾರಣವಾಗುವುದೇ ಈ ಕೇಳಿದ್ದು ಮತ್ತು ನೋಡಿದ ಪ್ರಸಂಗ.

ಹುಲಿಯೊಂದನ್ನು ನೋಡಿದವನಿಗೆ ಆತ ಸಿಂಹವನ್ನು ನೋಡದೇ ಹೋದರೂ ಅದು ಹೇಗಿರುತ್ತದೆ ಎಂಬುದರ ಅರಿವು ಮೂಡಿಸುವುದು ಸುಲಭ. ಯಾವಾಗ ಮನಸ್ಸು ಒಂದು ಶುಭಕರವಾದ ವಿಷಯವನ್ನು ಕೇಳಿಸಿಕೊಳ್ಳುವುದೋ ಆಗ, ಅದರ ವಿಚಾರ, ವಿಷಯಗಳಲ್ಲಿಯೇ ಆಸಕ್ತವಾಗುವುದು. ಅಮಂಗಳಕರವಾದ ಅಥವಾ ಕೆಟ್ಟ ವಿಚಾರವನ್ನು ಕೇಳಿದಾಗ ಮನಸ್ಸು ಕೂಡ ಅತ್ತ ಹೊರಳುವುದೇ ಹೆಚ್ಚು. ಹಾಗಾಗಿ, ಈ ಮಂತ್ರದಲ್ಲಿ ಮಂಗಳಕರವಾದದ್ದೇ ಕಿವಿಗೆ ಬೀಳಲಿ ಎಂಬ ಆಶಯವಿದೆ.
ನೋಡುವುದೂ ಕೂಡ ಪವಿತ್ರವಾದದ್ದೇ ಇರಲಿ ಎಂಬ ಮತ್ತೂಂದು ಸದಾಶಯ.

ಸಂಸ್ಕಾರಯುತವಾದ ಕಾರ್ಯಗಳು ಕಣ್ಣಿಗೆ ಬಿದ್ದಾಗ ಮನಸ್ಸು ಕೂಡ ಅದರ ಕಡೆಯೇ ಆಕರ್ಷಿತವಾಗಿ ದೇಹವನ್ನು ಅದರಲ್ಲಿ ತೊಡಗಿಸಲು ಅಣಿಯಾಗುತ್ತದೆ. ಅಂತೆಯೇ, ಕ್ರೌರ್ಯದಂತಹ ಸಂಸ್ಕಾರ ರಹಿತವಾದ ಸಂಗತಿಗಳನ್ನು, ಕಣ್ಣು ನೋಡುತ್ತಾ ಇದ್ದಾಗ ಮನಸ್ಸು ಅದಕ್ಕೇ ಒಗ್ಗಿಕೊಂಡು ಅದು ಕೆಟ್ಟದು ಎಂಬುದು ಅರಿವಾಗದೇ ಅಂತಹ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಮುಂದಾಗುವುದು ಸಹಜ. ಹಾಗಾಗಿಯೇ, ಉತ್ತಮವಾದದ್ದು ಮಾತ್ರ ನಮ್ಮ ಕಿವಿಯನ್ನು ಸೇರಬೇಕು, ಕಣ್ಣುಗಳು ಅದನ್ನಷ್ಟೇ ನೋಡಬೇಕು. ಒಂದು ಸುಸಂಸ್ಕೃತಿಯ ಮೂಲ ಹುಟ್ಟಿಗೆ ಕಾರಣವಾಗುವ ಅಂಶಗಳು ಈ ಶಾಂತಿ ಮಂತ್ರಗಳಲ್ಲಿ ಅಡಕವಾಗಿವೆ.

ಇಂತಹ ಶಾಂತಿಮಂತ್ರಗಳು ನಮ್ಮನ್ನು ಆಗಾಗ ಎಚ್ಚರಿಸುತ್ತ, ಸನ್ಮಾರ್ಗದಲ್ಲಿಯೇ ಬದುಕನ್ನು ನಿರ್ವಹಿಸಲು ಪ್ರೇರಕವಾಗಿವೆ. ಆಗಾಗ ಇವನ್ನು ಕೇಳುತ್ತಿರಬೇಕು ಮತ್ತು ಅದಕ್ಕೂ ಹೆಚ್ಚಾಗಿ ಅವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು.

— ವಿಷ್ಣು ಭಟ್‌ ಹೊಸಮನೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • "ಶಾಂತಿ ಹುಟ್ಟುವುದೇ ನಗುವಿನಿಂದ' ಎನ್ನುವ ಜೀವನತತ್ತ್ವದಲ್ಲಿ ನಂಬಿಕೆಯಿಟ್ಟು, ದೀನರ, ರೋಗಿಗಳ, ನಿರ್ಗತಿಕರಿಗೆ ವಾತ್ಸಲ್ಯದ ಚಿಕಿತ್ಸೆ ನೀಡಿದವರು, ಮದರ್‌ ತೆರೇಸಾ....

  • ರಾಜಧಾನಿ ಬೆಂಗಳೂರಿಗೆ ಬಂದವರೆಲ್ಲರೂ ಭೇಟಿ ನೀಡುವ ದೇವಸ್ಥಾನ, ಶ್ರೀ ರಾಧಾಕೃಷ್ಣ ಮಂದಿರ ಅಥವಾ ಇಸ್ಕಾನ್‌. ರಾಜಾಜಿನಗರದ ಹರೇ ಕೃಷ್ಣ ಬೆಟ್ಟದ ಮೇಲಿರುವ ಈ ದೇಗುಲ,...

  • ಕ್ರಿಕೆಟ್‌ ಮೈದಾನದಲ್ಲಿದ್ದಾಗ ಉರಿಉರಿದು ಬೀಳುತ್ತಿದ್ದ ಭಾರತ ಕ್ರಿಕೆಟ್‌ ತಂಡದ ಮಾಜಿ ವೇಗದ ಬೌಲರ್‌ ಎಸ್‌.ಶ್ರೀಶಾಂತ್‌, ಈಗ ತಣ್ಣಗಾಗಿದ್ದಾರೆ. 2011ರ ನಂತರ ಅವರ...

  • ವಿಶ್ವ ಕ್ರಿಕೆಟ್‌ನ ದೇವರೆಂದೇ ಒಂದುಕಾಲದಲ್ಲಿ ಅಭಿಮಾನಿಗಳಿಂದ ಆರಾಧಿಸಲ್ಪಟ್ಟಿದ್ದ ಸಚಿನ್‌ ತೆಂಡುಲ್ಕರ್‌ರ ಒಂದೊಂದೇ ದಾಖಲೆಗಳು ಹಿಂದಕ್ಕೆ ಬೀಳುತ್ತಿವೆ....

  • ಪ್ರಕೃತಿ ನಿರ್ಮಿತ ಸುಂದರ ಮಡಿಲಿನಲ್ಲಿ, ಹಚ್ಚ ಹಸಿರಿನ ಬೆಟ್ಟಗಳ ಮಧ್ಯದಲ್ಲಿರುವ ಸಿದ್ಧೇಶ್ವರ ಇಲ್ಲಿ ಸ್ವಯಂಭೂ ಲಿಂಗ ಸ್ವರೂಪಿ. ಬೆಳಗಾವಿ ಜಿಲ್ಲೆಯ ರಾಮದುರ್ಗ...

ಹೊಸ ಸೇರ್ಪಡೆ