Udayavni Special

ಸಾಗರೋತ್ತರ ದೇಶಗಳಲ್ಲಿ ರಾಮಾಯಣ

ಇಲ್ಲಿ ಭಾರತದ್ದೇ ಸಂಸ್ಕೃತಿ ಬಿಂಬ

Team Udayavani, Mar 14, 2020, 6:10 AM IST

sagarotttara

ರಾಮಾಯಣದಲ್ಲಿ ರಾಮನ ಸೈನ್ಯ ಸಾಗರ ದಾಟುವುದು ಒಮ್ಮೆ ಮಾತ್ರ. ಆದರೆ, ಈ ನಮ್ಮ ರಾಮಾಯಣದ ಕಥಾನಕ ಹಲವಾರು ಸಮುದ್ರಗಳನ್ನು ದಾಟಿ ಸಾವಿರಾರು ಮೈಲು ದೂರ ಪಯಣಿಸಿ, ಆಯಾ ದೇಶ ಭಾಷೆಗಳಲ್ಲಿ, ಅಲ್ಲಿನ ಸಾಹಿತ್ಯ- ಸಂಗೀತ- ನೃತ್ಯ- ಶಿಲ್ಪಕಲಾ ಪ್ರಕಾರಗಳಲ್ಲಿ ಇಂದಿಗೂ ರಾರಾಜಿಸುತ್ತಿದೆ…

ರಾಮಾಯಣದ ಕಾಲಘಟ್ಟದಲ್ಲಿಯೇ ಸಾಗರೋತ್ತರ ನಾಡುಗಳೊಂದಿಗೆ ಸಂಪರ್ಕವಿದ್ದ ಸಂಗತಿಯನ್ನು ವಾಲ್ಮೀಕಿಗಳು ಹೇಳುತ್ತಾರೆ. ರಾವಣನಿಂದ ಅಪಹೃತಳಾದ ಸೀತೆಯನ್ನು ಹುಡುಕಲು ತನ್ನ ಸೈನ್ಯವನ್ನು ಕಳುಹಿಸುವ ಸಮಯದಲ್ಲಿ ಸುಗ್ರೀವನು ಸಾಗರದಾಚೆಯ ಅನೇಕ ನಾಡುಗಳ ವಿವರ ಕೊಡುತ್ತಾ, “ಸಪ್ತ ರಾಜ್ಯಗಳ ಸೊಬಗನ್ನು ಹೊಂದಿರುವ ಯವ (ಜಾವಾ) ದ್ವೀಪಗಳನ್ನೂ, ಹೇರಳವಾದ ಚಿನ್ನದ ಗಣಿಗಳಿಂದ ಕೂಡಿರುವ ಸುವರ್ಣ ದ್ವೀಪಗಳನ್ನೂ (ಸುಮಾತ್ರಾ) ಹೆಸರಿಸುತ್ತಾನೆ.

“ಯತ್ನವಂತೋ ಯವದ್ವೀಪಮ್‌ ಸಪ್ತ ರಾಜ್ಯೋಪಶೋಭಿತಮ್‌| ಸುವರ್ಣ ರೂಪ್ಯಕಮ್‌ ದ್ವೀಪಮ್‌ ಸುವರ್ಣಾಕಾರ ಮಂಡಿತಮ್‌||’ (4-40-30 ರಾಮಾಯಣ: ಕಿಷ್ಕಿಂದಾಕಾಂಡ) ಅಲ್ಲಿಯೇ, ಬರ್ಮಾ ಹಾಗೂ ಇನ್ನಿತರ ಪ್ರದೇಶಗಳ ವಿವರವೂ ಕಾಣುತ್ತದೆ. ಸಂಸ್ಕೃತದಲ್ಲಿ “ಯವ’ ಎಂದರೆ “ಬಾರ್ಲಿ’. “ಬಾರ್ಲಿ’ಯ ಆಕಾರದಲ್ಲಿರುವುದರಿಂದ “ಯವ’ ಎಂದು ಕರೆಯುತ್ತಿದ್ದ ಆ ಪ್ರದೇಶವೇ ಈಗ “ಜಾವಾ’ ಹಾಗೂ “ಸುವರ್ಣ ದ್ವೀಪ’ವೆಂದು ಅಲ್ಲಿ ಹೇಳಿರುವುದು, “ಸುಮಾತ್ರಾ’ ಎಂದು ಗುರುತಿಸಬಹುದು. ಹೀಗೆ, ಸಿಂಹಪುರ- ಸಿಂಗಾಪೂರ್‌, ಕಂಬಜರ ನಾಡು- ಕಾಂಬೋಡಿಯಾ ಆಗಿ ಬದಲಾದ ಅನೇಕ ಹೆಸರುಗಳನ್ನು ಗಮನಿಸಬಹುದು.

ಸಾಗರದಾಚೆ ಹಬ್ಬಿದ ಬಗೆ:
ರಾಮಾಯಣದಲ್ಲಿ ರಾಮನ ಸೈನ್ಯ ಸಾಗರ ದಾಟುವುದು ಒಮ್ಮೆ ಮಾತ್ರ. ಆದರೆ, ಈ ನಮ್ಮ ರಾಮಾಯಣದ ಕಥಾನಕ ಹಲವಾರು ಸಮುದ್ರಗಳನ್ನು ದಾಟಿ ಸಾವಿರಾರು ಮೈಲು ದೂರ ಪಯಣಿಸಿ, ಆಯಾ ದೇಶ ಭಾಷೆಗಳಲ್ಲಿ, ಅಲ್ಲಿನ ಸಾಹಿತ್ಯ- ಸಂಗೀತ- ನೃತ್ಯ- ಶಿಲ್ಪಕಲಾ ಪ್ರಕಾರಗಳಲ್ಲಿ ಇಂದಿಗೂ ರಾರಾಜಿಸುತ್ತಿದೆ. ಆದರೆ, ಭಾರತದಿಂದ ಯಾವುದೇ ರಾಜರು ತಮ್ಮ ಸೈನ್ಯದೊಂದಿಗೆ ಹೋಗಿ ಬೇರೆ ದೇಶವನ್ನು ಆಕ್ರಮಣ ಮಾಡಿದ್ದು ಚರಿತ್ರೆಯ ಪುಟಗಳಲ್ಲಿ ಕಾಣುವುದಿಲ್ಲ.

ಪೂರ್ವ ಪ್ರಸಕ್ತ ಶಕೆಯ (BCE) 1ನೇ ಶತಮಾನದಿಂದಲೇ ಸಾಗರದಾಚೆಯ ನಾಡುಗಳಿಗೆ ವ್ಯಾಪಾರ ವಹಿವಾಟುಗಳಿಗಾಗಿ ಹೋಗುತ್ತಿದ್ದ ಭಾರತೀಯರು ಅಲ್ಲಿನ ಜನರೊಂದಿಗೆ ಬೆರೆತು, ಅಲ್ಲಿ ನಮ್ಮ ಸಂಸ್ಕೃತಿಯನ್ನು ಹರಡಿ, ರಾಜ್ಯಭಾರವನ್ನೂ ನಡೆಸಿದ ಹಲವು ಉದಾಹರಣೆಗಳು ಸಿಗುತ್ತವೆ. ಅದರೊಂದಿಗೆ ಧರ್ಮ ಪ್ರಸಾರಕ್ಕಾಗಿ ವ್ಯಾಪಕವಾಗಿ ಪ್ರವಾಸ ಮಾಡುತ್ತಿದ್ದ ಬೌದ್ಧ ಧರ್ಮದ ಗುರುಗಳ ಪ್ರಭಾವವೂ ಅಲ್ಲಿ ಕಾಣುತ್ತದೆ. ಹಾಗಾಗಿ ಇಂದು, ನಾವು ಆ ದೇಶಗಳಿಗೆ ಹೋದಾಗ ನಮ್ಮ ದೇಶವನ್ನೇ ಕನ್ನಡಿಯಲ್ಲಿ ಕಂಡಂತಾಗುತ್ತದೆ.

ಕವಿ- ಶಿಲ್ಪಿಗಳಿಗೆ ಪ್ರೇರಣೆ: ನಮ್ಮ ರಾಮಾಯಣ- ಮಹಾಭಾರತ ಮಹಾಕಾವ್ಯಗಳು ಆಗ್ನೇಯ ರಾಷ್ಟ್ರಗಳಲ್ಲಿಯೂ ಕವಿಗಳಿಗೆ, ಶಿಲ್ಪಿಗಳಿಗೆ ಆಕರವಾಗಿರುವುದು ಕಂಡುಬರುತ್ತದೆ. ರಾಮಕಥೆ ಹಾಡಾಗಿ ಹರಿದು ಹೋದಕಡೆಯಲ್ಲೆಲ್ಲಾ ಆಯಾ ಪ್ರದೇಶದ ರಾಜರು, ರಾಜ ರಾಮನ ಆದರ್ಶವನ್ನು ಇಟ್ಟುಕೊಂಡು ತಮ್ಮ ನಾಡನ್ನು ರಾಮರಾಜ್ಯವನ್ನಾಗಿಸಲು ಪ್ರಯತ್ನಿಸಿದರು. ಇದಕ್ಕೆ ಮುಖ್ಯವಾದ ಕಾರಣವೆಂದರೆ, ರಾಮಕಥೆಯಲ್ಲಿರುವ ಸಾರ್ವತ್ರಿಕ ಗುಣ. ಇಂಥ ಒಂದು ಕಥೆ ಎಲ್ಲಿ ಬೇಕಾದರೂ ನಡೆದಿರಬಹುದು ಅಥವಾ ಎಲ್ಲಿ ಬೇಕಾದರೂ ನಡೆಯಬಹುದು. ಕೆಟ್ಟ ವಿಚಾರಗಳ ಮೇಲೆ ಒಳ್ಳೆ ವಿಚಾರಗಳ ವಿಜಯವನ್ನು ಯಾರು ತಾನೆ ಆಶಿಸುವುದಿಲ್ಲ?

ರಾಮಾಯಣದ ನಾನಾ ರೂಪಗಳು: ರಾಮ- ಲಕ್ಷ್ಮಣ- ಸೀತೆ- ಮಾರುತಿ- ರಾವಣರು ಸಂಕೇತಿಸುವ ತತ್ತÌಗಳ ಆಳಕ್ಕಿಳಿದು ಹಲವಾರು ಹೊಸ ಆಯಾಮಗಳಲ್ಲಿ ರಾಮಾಯಣಗಳು ಸೃಷ್ಟಿಯಾಗಿವೆ ಎನ್ನಬಹುದು. ಅದರಲ್ಲೂ ಆಗ್ನೇಯ ರಾಷ್ಟ್ರಗಳಲ್ಲಿ ರಚಿತವಾಗಿರುವ ರಾಮಾಯಣಗಳ ಅಧ್ಯಯನ ಹಲವು ರೋಚಕ ವಿಚಾರಗಳನ್ನು ತಿಳಿಸುತ್ತದೆ. ಥಾಯ್ಲೆಂಡಿನ “ರಾಮ್‌ ಕೀನ್‌’ (ರಾಮಕೀರ್ತಿ), ಮಯನ್ಮಾರಿನ “ರಾಮತ್ಯಾಗಿನ್‌’ ಮತ್ತು “ಮಹಾರಾಮ’, ಕಾಂಬೋಡಿಯಾದ “ರಾಮ್‌ ಖೇರ್‌’, ಲಾವೋ ದೇಶದ ರಾಮಾಯಣ- ಫ‌ ಲಕ್‌ ಫ‌ ಲಾಮ್‌ (ಲಕ್ಷ್ಮಣ- ರಾಮ) “ಪಲಕ್‌ ಪಲಂಗ್‌’, “ರಾಮಜಾತಕ’, ಮಲಯಾದ “ಹಿಕಾಯತ್‌’ ಸೇರಿ ರಾಮ ಹಾಗೂ ಇಂಡೋನೇಷ್ಯಾದ “ಕಾಕವಿನ್‌ ರಾಮಾಯಣ’ಗಳು ಪ್ರಖ್ಯಾತವಾಗಿವೆ.

ಅಯುಥಾಯದ ರಾಮಮಂದಿರ: ಥಾಯ್ಲೆಂಡಿನ ಅಯುಥಾಯದಲ್ಲಿ, ಬೃಹತ್‌ ರಾಮಮಂದಿರದ ನಿರ್ಮಾಣಕ್ಕೆ ಭೂಮಿ ಪೂಜೆ ನಡೆದಿದೆ. ಬ್ಯಾಂಕಾಕ್‌ ನಗರದ ಹೃದಯ ಭಾಗದಲ್ಲಿ ಹರಿಯುವ ಚಾವೊ ಫ‌ಯ ನದಿಯ ತಟದಲ್ಲಿ ಈ ರಾಮಮಂದಿರದ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ.

* ಡಾ. ಜಯಂತಿ ಮನೋಹರ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

pulwama

ಪುಲ್ವಾಮ ಎನ್ ಕೌಂಟರ್: ಓರ್ವ ಉಗ್ರನನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

–tiktok

ಫೇಸ್ ಬುಕ್, ಇನ್ ಸ್ಟಾಗ್ರಾಂ ನಲ್ಲಿ ಟಿಕ್ ಟಾಕ್ ಮಾದರಿಯ ಫೀಚರ್ ? ಇಲ್ಲಿದೆ ಮಾಹಿತಿ

ತೆಂಗಿನೆಣ್ಣೆಯಿಂದ ಕೋವಿಡ್ ನಿಯಂತ್ರಣ?

ತೆಂಗಿನೆಣ್ಣೆಯಿಂದ ಕೋವಿಡ್ ನಿಯಂತ್ರಣ?

ಗೂರ್ಖಾಗಳಿಗೆ ವರವಾಯ್ತು ನಿವಾಸ ದೃಢೀಕರಣ ಪತ್ರ

ಗೂರ್ಖಾಗಳಿಗೆ ವರವಾಯ್ತು ನಿವಾಸ ದೃಢೀಕರಣ ಪತ್ರ

ಐಪಿಎಲ್‌ ಆತಿಥ್ಯಕ್ಕೆ ಒಲವು ತೋರಿದ ನ್ಯೂಜಿಲ್ಯಾಂಡ್‌

ಐಪಿಎಲ್‌ ಆತಿಥ್ಯಕ್ಕೆ ಒಲವು ತೋರಿದ ನ್ಯೂಜಿಲ್ಯಾಂಡ್‌

ಕತ್ತಲಲ್ಲಿ ದೇಹಗಳಿಗೆ ಅಪ್ಪಳಿಸಿತು ಗುಂಡು : ಪ್ರತ್ಯಕ್ಷದರ್ಶಿ

ಕತ್ತಲಲ್ಲಿ ದೇಹಗಳಿಗೆ ಅಪ್ಪಳಿಸಿತು ಗುಂಡು : ಪ್ರತ್ಯಕ್ಷದರ್ಶಿ

ಮುಖಂಡರೇ ಮೇಲ್ಪಂಕ್ತಿ ಆಗಲಿ

ಮುಖಂಡರೇ ಮೇಲ್ಪಂಕ್ತಿ ಆಗಲಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cycle-yatri

ಸೈಕಲ್‌ ಯಾತ್ರಿಕನ ಕನಸು

bili-saheb

ಬಿಳಿ ಸಾಹೇಬನ ಬೇಂದ್ರೆ

ondu-kote

ಒಂದು ಕೋಟೆ ಯಾನ

koodali

ಕೂಡಲಿ ಊಟದ ಸೊಗಸು

venu

ವೇಣು ವಿಸ್ಮಯ

MUST WATCH

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani

udayavani youtube

Manoj Kumar : Success story of Indigenous Dairy Farmer from Moodbidri


ಹೊಸ ಸೇರ್ಪಡೆ

pulwama

ಪುಲ್ವಾಮ ಎನ್ ಕೌಂಟರ್: ಓರ್ವ ಉಗ್ರನನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

yogi birthday

“ಒಂಬತ್ತನೇ ದಿಕ್ಕಿ’ನಲ್ಲಿ ಯೋಗಿ ಹುಟ್ಟುಹಬ್ಬ!

ಕೋವಿಡ್ ಕರ್ತವ್ಯದ ಮಧ್ಯೆ ನೋಟಿಸ್‌ ಜಾರಿ ಗುಮ್ಮ!

ಕೋವಿಡ್ ಕರ್ತವ್ಯದ ಮಧ್ಯೆ ನೋಟಿಸ್‌ ಜಾರಿ ಗುಮ್ಮ!

aari-vaikunta

ಕುಂಬಳಕಾಯಿ ಒಡೆದ “ದಾರಿ ಯಾವುದಯ್ಯಾ ವೈಕುಂಠಕ್ಕೆ’

ಕೇರಳ ಸರಕಾರದ ಕಠಿನ ತೀರ್ಮಾನ ; ಕರ್ನಾಟಕದ ದಾರಿ ಬಂದ್‌!

ಕೇರಳ ಸರಕಾರದ ಕಠಿನ ತೀರ್ಮಾನ ; ಕರ್ನಾಟಕದ ದಾರಿ ಬಂದ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.