ರೋಜರ್‌ ಫೆಡರರ್‌ ಪ್ರಶ್ನಾತೀತ ಸಾಧಕ


Team Udayavani, Feb 4, 2017, 10:24 AM IST

6.jpg

ಸಚಿನ್‌ ತೆಂಡೂಲ್ಕರ್‌, ರಾಹುಲ್‌ ದ್ರಾವಿಡ್‌, ಟೆನಿಸಿಗ ಸ್ಟೀಫ‌ನ್‌ ಎಡºರ್ಗ್‌, ರೋಜರ್‌ ಫೆಡರರ್‌….ಇವರನ್ನು ನಾವು ಪ್ರಶಸ್ತಿಗಳು, ವಿಜಯಗಳ ಹೊರತಾಗಿಯೂ ಗೌರವಿಸಬೇಕು. ಇತ್ತೀಚೆಗೆ ದ್ರಾವಿಡ್‌, ನನ್ನ ಸಾಧನೆ ಡಾಕ್ಟರೇಟ್‌ ಪದವಿಯ ಮಟ್ಟದಲ್ಲ ಎಂದು ವಿನಮ್ರವಾಗಿ ನಿರಾಕರಿಸಿದ್ದು ಸ್ಮರಣೀಯ. ಇಗೋ ಕಾಡದ ಸಚಿನ್‌ ಕಥೆಗಳು ಚಿರಪರಿಚಿತ. ಸದ್ಯದ ಟೆನಿಸ್‌ ರಂಗದ “ಹಿರಿಯ ಕಲಾವಿದ ಸ್ವಿರ್ಜರ್‌ಲೆಂಡ್‌ನ‌ ರೋಜರ್‌ ಫೆಡರರ್‌ ಕೂಡ ಕಳೆದ 5 ವರ್ಷಗಳಿಂದ ಒಂದೇ ಒಂದು ಗ್ರ್ಯಾನ್ ಸ್ಲಾಂ ಗೆಲ್ಲದಿರಬಹುದು. ಆದರೂ ಅವರು ತಮ್ಮ ಸಭ್ಯತೆಯಿಂದಲೇ ಮನದಲ್ಲಿ ಚಿರಸ್ಥಾಯಿ.

ಇಂತಿಪ್ಪ ಫೆಡರರ್‌ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ವರ್ಷದ ಮೊದಲ ಗ್ರ್ಯಾನ್ ಸ್ಲಾಂ ಸಿಂಗಲ್ಸ್‌ ಪ್ರಶಸ್ತಿಯನ್ನು ಗಳಿಸಿದ್ದಾರೆ. ಈ ಸಂದರ್ಭದಲ್ಲಿ ಹರಿದಾಡಿದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ಟೆನಿಸ್‌ ಅಭಿಮಾನಿಗಳು ಮಾಡಿದ್ದಾರೆ. ಪ್ರಶ್ನಾತೀತ ಸಾಧಕ ಫೆಡರರ್‌ ಅವರನ್ನು ವಿವರಿಸಲು ಪ್ರಶ್ನೋತ್ತರದ ಮಾದರಿಯೇ ಒಂದು ವೈರುದ್ಧದ ಪ್ರತಿಮೆ. ಆಸ್ಟ್ರೇಲಿಯನ್‌ ಓಪನ್‌ಗೆ ಮುನ್ನ ಫೆಡರರ್‌ ಈ ಬಾರಿ ಗ್ರಾಕ್ಯನ್‌ ಸ್ಲಾಂ ಗೆಲ್ಲುತ್ತಾರೆ ಎಂದಿದ್ದರೆ ನಂಬುವವರು ಕಡಿಮೆಯಿದ್ದರು. 

ಫೆಡರರ್‌ ಸಾಧನೆ ಅಪ್ರತಿಮವೇ? 
nಪ್ರತಿಪಾದನೆ: ಕ್ಯಾರಿಯರ್‌ನಲ್ಲಿ ವಿಶ್ವದ ಎರಡನೇ ಗರಿಷ್ಠ ಸಿಂಗಲ್ಸ್‌ ಗ್ರ್ಯಾನ್ ಸ್ಲಾಂ ಗೆದ್ದಿರುವುದು ಪೀಟ್‌ ಸಾಂಪ್ರಾಸ್‌ ಹಾಗೂ ರಫೆಲ್‌ ನಡಾಲ್‌. ಅವರ ಬಳಿ 14 ಸ್ಲಾಂಗಳಿವೆ. ಫೆಡರರ್‌ ಬಳಿ ಇರುವುದು 18! ಈ ನಾಲ್ಕರ ಅಂತರವನ್ನು ದಾಟುವುದು ನಿವೃತ್ತ ಸಾಂಪ್ರಾಸ್‌ಗೆ ಅಸಾಧ್ಯ. ನಡಾಲ್‌ರ ವಯಸ್ಸು ಹಾಗೂ ಈಗಿನ ಫಿಟೆ°ಸ್‌ ಹಿನ್ನೆಲೆಯಲ್ಲಿ ಸಂಭಾವ್ಯತೆ ಕಡಿಮೆ. ಉಳಿದಿರುವುದು ನೋವಾಕ್‌ ಜೊಕೊವಿಚ್‌. ಸಾಧನೆ ಸಮಗೊಳಿಸಲು ತಮ್ಮ 12 ಗ್ರ್ಯಾನ್ ಸ್ಲಾಂಗಳಿಗೆ ಇನ್ನೂ ಆರು ಸೇರಿಸುವುದು ಕಷ್ಟ ಕಷ್ಟ! 

ವಿಶ್ವದ ಟಾಪ್‌ 2 ಆಟಗಾರರಾದ ಜೊಕೊವಿಚ್‌, ಆ್ಯಂಡಿ ಮರ್ರೆ ಆರಂಭಿಕ ಸುತ್ತಲ್ಲೇ ಸೋತಿದ್ದು….
ಪ್ರತಿಪಾದನೆ: ಈ ಬಾರಿ ಫೆಡರರ್‌ಗೆ ಸಿಕ್ಕಿದ್ದು 17ನೇ ಶ್ರೇಯಾಂಕ. ಇದನ್ನು ಶ್ರೇಯಾಂಕ ಅನ್ನುವದಕ್ಕಿಂತ ಕ್ರಮಾಂಕ ಎಂಬುದೇ ಹೆಚ್ಚು ಸರಿ. ಟಾಪ್‌ 16ಗೆ ಮಾತ್ರ ಎದುರಾಳಿಗಳ ಪ್ಯಾನಿಂಗ್‌ ಮಾಡಲಾಗುತ್ತದೆ. ಅಷ್ಟಕ್ಕೂ ತಮ್ಮ ಪ್ರಶಸ್ತಿಯ ದಾರಿಯಲ್ಲಿ ಫೆಡರರ್‌ ನಾಲ್ವರು ಟಾಪ್‌ 10 ಆಟಗಾರರನ್ನು ಪರಾಭವಗೊಳಿಸಿದ್ದು ಗಮನೀಯ. ಥಾಮಸ್‌ ಬೆಡ್ರಿಚ್‌(10), ಕಿ ನಿಶಿಕುರಿ(5), ಉಪಾಂತ್ಯದಲ್ಲಿ 4ನೇ ಶ್ರೇಯಾಂಕದ ಸ್ಟಾನ್‌ ವಾಂವ್ರಿಂಕಾ. ಫೈನಲ್‌ನಲ್ಲಿ ಎದುರಿಸಿದ ರಫೆಲ್‌ ನಡಾಲ್‌ರ ಸೀಡ್‌ ಒಂಬತ್ತು. ಶ್ರೇಯಾಂಕದ ಅನುಕೂಲಗಳಿದ್ದೂ ನಿರ್ಣಾಯಕ ಹಂತಕ್ಕೆ ಬಾರದ ಆಟಗಾರರ ಫಾರಂ ಜೊತೆ ಫೆಡರರ್‌ರ ಸಾಧನೆಯ ಮಾತನಾಡುವುದು ಮೊಸರಲ್ಲಿ ಕಲ್ಲು ಹುಡುಕಿದಂತೆ!

ರಫಾ ಎದುರು ಗೆದ್ದಿದ್ದು ಕೂಡ ಫೆಡರರ್‌ಗೆ ತಮ್ಮನ್ನು ರುಜುವಾತು ಪಡಿಸಲು ಪೂರಕವಾಗಿರಬೇಕು?
ಪ್ರತಿಪಾದನೆ: ನಿಜ, ಒಂದು ಕಾಲದಲ್ಲಿ ಫೆಡರರ್‌ರ 15 ಗ್ರ್ಯಾನ್‌ ಸ್ಲಾಂ ಸಾಧನೆಯನ್ನು ಮುರಿಯುವ ಸಾಮರ್ಥ್ಯ ಹೊಂದಿದ ವ್ಯಕ್ತಿ ಎಂತಲೇ ನಡಾಲ್‌ ವರ್ಣಿತರಾಗಿದ್ದರು. ಈ ಕ್ಲೇ ಕೋರ್ಟ್‌ ಸ್ಪೆಶಲಿಸ್ಟ್‌ ಫೆಡರರ್‌ಗೆ ಅತಿ ಹೆಚ್ಚು ಕಾಟ ಕೊಟ್ಟ ವ್ಯಕ್ತಿ ಕೂಡ. ಗ್ರ್ಯಾನ್  ಸ್ಲಾಂಗಳಲ್ಲೇ ಪರಸ್ಪರರ 11 ಮುಖಾಮುಖೀಯಲ್ಲಿ ಫೆಡರರ್‌ 9 ಬಾರಿ ರಫಾಗೆ ಮಣಿದಿದ್ದಾರೆ. 2004ರಲ್ಲಿ ಮಿಯಾಮಿ ಟೂರ್ನಿಯಲ್ಲಿ 22ರ ಫೆಡರರ್‌ 17ರ ನಡಾಲ್‌ರನ್ನು ಮೊದಲ ಬಾರಿ ಎದುರಿಸಿದ್ದರು. ಅವತ್ತು ನಡಾಲ್‌ ವಿಜೇತರಾಗಿದ್ದರು. ಮುಂದಿನ 13 ವರ್ಷಗಳ ಕಾಲಾವಧಿಯಲ್ಲಿ ನಡೆದ 35 ಮುಖಾಮುಖೀಗಳಲ್ಲಿ ನಡಾಲ್‌ ಗೆಲುವು 23. ಫೆಡರರ್‌ ಕೂಡ ತಮ್ಮ ಕ್ಯಾರಿಯರ್‌ನಲ್ಲಿ ಎದುರಿಸಿದ ಅತಿ ಪ್ರಬಲ ಆಟಗಾರ ನಡಾಲ್‌ ಎಂದೇ ತಿಳಿಸುತ್ತಾರೆ. ಹಾಗಾಗಿ ಈ ಆಸ್ಟ್ರೇಲಿಯನ್‌ ಗೆಲುವು ಹೆಚ್ಚು ಸಾರ್ಥಕ ಅರ್ಥಗಳನ್ನು ಹೊಂದಿದೆ.

ರೋಜರ್‌ ಫೆಡರರ್‌ಗೆ ಪ್ರಾಯ ಮರುಕಳಿಸಿದೆಯೇ?
n ಪ್ರತಿಪಾದನೆ:  35 ವರ್ಷ ಮೀರಿದ ಫೆಡರರ್‌ ಅತಿ ಹಿರಿಯ ಗ್ರ್ಯಾನ್ ಸ್ಲಾಂ ವಿಜೇತರ ದಾಖಲೆ ಪಟ್ಟಿಗೆ ಸೇರಿದರು. 1972ರಷ್ಟು ಹಿಂದೆ 37ರ ಕೆನ್‌ ರೋಸ್‌ವಾಲ್‌ ಈ ಹಿರಿಯ ಸಾಧನೆ ಮಾಡಿದ್ದರು. 2012ರಲ್ಲಿ ವಿಂಬಲ್ಡನ್‌ ಟೂರ್ನಿ ಗೆದ್ದ ನಂತರ 1665 ದಿನ ಫೆಡರರ್‌ ಮತ್ತೂಂದು ಗ್ರ್ಯಾನ್‌ಸ್ಲಾಂ ಇಲ್ಲದೆ ರ್ಯಾಕೆಟ್‌ ಬೀಸುವಂತಾಗಿತ್ತು. ಅದರಲ್ಲೂ ಸುಮಾರು ಆರು ತಿಂಗಳ ಕಾಲ ಮಂಡಿಯ ಸಮಸ್ಯೆಯಿಂದ ಟೆನಿಸ್‌ನಿಂದ ದೂರವುಳಿದಿದ್ದ ಫೆಡರರ್‌ ಹಿಂದಿನ ಪ್ರತಿಭೆಯ ಪಳೆಯುಳಿಕೆಯಂತಿದ್ದರು ಎಂಬುದೂ ಕೂಡ ವಾಸ್ಥವವೇ. ಆಸ್ಟ್ರೇಲಿಯನ್‌ ಓಪನ್‌ ನಂತರದ ಅವರ ಸಂದರ್ಶನಗಳನ್ನು ಗಮನಿಸಿದರೆ 2017ರಲ್ಲಂತೂ ಅವರು ನಿವೃತ್ತಿ ಘೋಷಿಸುವ ಇರಾದೆ ಕಂಡುಬರುತ್ತಿಲ್ಲ. ಇಂದಿನ ಗಾಯದ ಸಮಸ್ಯೆಗಳ ಎಲ್ಲ ಆಟಗಾರರು ಕೂಡ ಒಮ್ಮೆಗೆ ಬರಲಿರುವ ಗ್ರ್ಯಾನ್‌ಸ್ಲಾಂನಲ್ಲಿ ಆಡುವ ವಿಚಾರವನ್ನಷ್ಟೇ ಯೋಚಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ, ಪ್ರಾಯ ಮರುಕಳಿಸಿದೆ!

ರೋಜರ್‌ರಿಂದ ಇನ್ನಷ್ಟು ಗ್ರ್ಯಾನ್‌ಸ್ಲಾಂ ನಿರೀಕ್ಷಿಸಬಹುದೇ?
n ಪ್ರತಿಪಾದನೆ: ನಡಾಲ್‌ ವಿರುದ್ಧ ಆಡಿದ ಆಸ್ಟ್ರೇಲಿಯನ್‌ ಓಪನ್‌ ಫೈನಲ್‌ ಆ ಗ್ರ್ಯಾನ್‌ಸ್ಲಾಂನಲ್ಲಿ ಅವರು ಆಡಿದ 100ನೇ ಪಂದ್ಯ. 87 ಗೆಲುವು, 13 ಸೋಲು. ವಿಂಬಲ್ಡನ್‌ನಲ್ಲಿ 84 ಗೆದ್ದು, 11 ಸೋತಿದ್ದಾರೆ. ಯುಎಸ್‌ನಲ್ಲಿ 78-11ರ ಅನುಪಾತ. ಇಲ್ಲೆಲ್ಲ ಇರುವ ಸಿಂಥೆಟಿಕ್‌, ಹುಲ್ಲು, ಕಾಂಕ್ರೀಟ್‌ ಅಂಕಣ ಫೆಡರರ್‌ರ ಆಟದ ಶೈಲಿಗೆ ಹೆಚ್ಚು ಹೊಂದಿಕೆಯಾಗುತ್ತದೆ. ಇದೇ ಕಾರಣದಿಂದ ಅವರು ಆಡಿದರೂ ಎಂದರೆ ಅವರನ್ನು ಫೇವರಿಟ್‌ಗಳ ಪಟ್ಟಿಗೆ ಸೇರಿಸಲೇಬೇಕು. ಈ ಮಾತು ಫ್ರೆಂಚ್‌ ಓಪನ್‌ಗೆ ಅಷ್ಟಾಗಿ ಅನ್ವಯಿಸುವುದಿಲ್ಲ. ಇಲ್ಲಿ ಕೇವಲ 65 ಪಂದ್ಯದಲ್ಲಿ ಜಯ ಸಂಪಾದಿಸಿರುವ ಫೆಡ್‌ 16ರಲ್ಲಿ ಪರಾಭವಗೊಂಡಿದ್ದಾರೆ. ಒಂದು ನಿರ್ದಿಷ್ಟ ಗ್ರ್ಯಾನ್‌ಸ್ಲಾಂನಲ್ಲಿ ಕಡಿಮೆ ಪಂದ್ಯವಾಡಿ ಹೆಚ್ಚು ಪಂದ್ಯದಲ್ಲಿ ಪರಾಜಿತವಾಗಿರುವುದು ಆಟಗಾರನಿಗೆ ಅಗ್ಗಳಿಕೆಯಲ್ಲ. ಅಷ್ಟಕ್ಕೂ ಬರಲಿರುವುದೇ ಕ್ಲೇ ಕೋರ್ಟ್‌ ಹೊಂದಿರುವ ಫ್ರೆಂಚ್‌ ಓಪನ್‌! ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಕೊನೆಪಕ್ಷ ನೇರ ಅಭಿಮತ ವ್ಯಕ್ತವಾಗಿಲ್ಲ ಎಂದು ದೂರಬಹುದು. ಅಗ್ರ ಆಟಗಾರರ ಗೆಲುವುಗಳಲ್ಲಿ ಫಾರಂಗಿಂತ ಫಿಟೆ°ಸ್‌ ಪ್ರಮುಖವಾಗಿರುತ್ತದೆ. ಫೆಡರರ್‌ ಈ ಬಾರಿ ಮೆಲ್ಬರ್ನ್ನಲ್ಲಿ ಉಪಾಂತ್ಯ ಹಾಗೂ ಅಂತಿಮ ಪಂದ್ಯದಲ್ಲಿ ಮೆಡಿಕಲ್‌ ಟೈಂ ಔಟ್‌ ತೆಗೆದುಕೊಂಡಿದ್ದಾರೆ. ಅವರ ಫಿಟೆ°ಸ್‌ ಶೇ. 100ರಷ್ಟಿಲ್ಲ. ಫ್ರೆಂಚ್‌ ಓಪನ್‌ನಲ್ಲಿ ಫೆಡರರ್‌ ಅವಕಾಶ ಸೀಮಿತ. ಆದರೆ  ವಿಂಬಲ್ಡನ್‌ನ ಹುಲ್ಲಿನಂಕಣ ಅವರ ಇನ್ನೊಂದು ಗ್ರ್ಯಾನ್‌ಸ್ಲಾಂ ಆಸೆಯನ್ನು ಚಿಗುರಿಸಬಲ್ಲದು!

ನಡಾಲ್‌ ವಿರುದ್ಧ ಆಡಿದ ಆಸ್ಟ್ರೇಲಿಯನ್‌ ಓಪನ್‌ ಫೈನಲ್‌ ಆ ಗ್ರ್ಯಾನ್‌ಸ್ಲಾಂನಲ್ಲಿ ಅವರು ಆಡಿದ 100ನೇ ಪಂದ್ಯ. 87 ಗೆಲುವು, 13 ಸೋಲು. ವಿಂಬಲ್ಡನ್‌ನಲ್ಲಿ 84 ಗೆದ್ದು, 11 ಸೋತಿದ್ದಾರೆ. ಯುಎಸ್‌ನಲ್ಲಿ 78-11ರ ಅನುಪಾತ. ಇಲ್ಲೆಲ್ಲ ಇರುವ ಸಿಂಥೆಟಿಕ್‌, ಹುಲ್ಲು, ಕಾಂಕ್ರೀಟ್‌ ಅಂಕಣ ಫೆಡರರ್‌ರ ಆಟದ ಶೈಲಿಗೆ ಹೆಚ್ಚು ಹೊಂದಿಕೆಯಾಗುತ್ತದೆ.

ಫೆಡರರ್‌ ಡ್ರಾಪ್‌ ಶಾಟ್‌!
ಒಂದು ಹಳೆ ಕಥೆ. ಆದರೆ ನಿಜದ ಅರ್ಥದಲ್ಲಿ ರೋಜರ್‌ ಫೆಡರರ್‌ರ ಮಾನವೀಯ ಮುಖವನ್ನು ಹಾಗೂ ಅವರ ಕಿಲಾಡಿತನವನ್ನು ಒಂದೇಟಿಗೆ ಹೇಳುತ್ತದೆ.ನಿವೃತ್ತ ಟೆನಿಸಿಗ ಜಿಂ ಕುರಿಯರ್‌ ಟಿವಿ ವೀಕ್ಷಣೆಕಾರರಾಗಿ ಕೆಲಸ ಮಾಡುತ್ತಿದ್ದರು. ಇನ್ನೇನು ಆಸ್ಟ್ರೇಲಿಯನ್‌ ಓಪನ್‌ ಆರಂಭವಾಗಲಿಕ್ಕಿತ್ತು. ಕ್ಯಾಮರಾ, ಮೈಕ್‌ ಸಮೇತ ಫೆಡರರ್‌ಗೆ ಪ್ರಶ್ನೆ ಒಗೆದರು. ಯಾರು ನಿಮ್ಮ ಈ ಬಾರಿಯ ಪ್ರಬಲ ಎದುರಾಳಿ? ಫೆಡರರ್‌ರದು ಜಾಣ್ಮೆಯ, “ಪೊಲಿಟಿಕಲಿ ಕರೆಕ್ಟ್ ಉತ್ತರ. ತಮ್ಮ ನಂತರದ ಮೂರು ಶ್ರೇಯಾಂಕಿತರು. ನೆಟ್‌ವರ್ಕ್‌ ಸೆವೆನ್‌ನ ಕುರಿಯರ್‌ಗೆ ಸ್ಪಷ್ಟ ಉತ್ತರದ ಬಯಕೆ. ಅವರ ಒತ್ತಡವನ್ನು ಫೆಡ್‌ ತಳ್ಳಿಹಾಕಿದರು.

ಈ ಹಂತದಲ್ಲಿ ಕುರಿಯರ್‌ ದಾಳ ಬದಲಿಸಿದರು. “ನೋಡಿ, ಫೆಡರರ್‌, ಸ್ಪಷ್ಟ ಉತ್ತರ ನೀಡಿದರೆ ನಾಳೆ ನೀವು ಸುನಾಮಿ ಸಂತ್ರಸ್ತರಿಗಾಗಿ ನಿಧಿ ಸಂಗ್ರಹಕ್ಕಾಗಿ ಹರಾಜಿಗಿಡುವ ರ್ಯಾಕೆಟ್‌ಗೆ ನಾನು ಮೂರು ಸಾವಿರ ಆಸ್ಟ್ರೇಲಿಯನ್‌ ಡಾಲರ್‌ ಕೂಗುತ್ತೇನೆ. ಏನಂತೀರಿ? ಈಗ ಫೆಡ್‌ ತಟಕ್ಕನೆ ಉತ್ತರಿಸಿಬಿಟ್ಟರು, ಇದೇ ಆಸ್ಟ್ರೇಲಿಯಾದ ಲೆಯrನ್‌ ಹೆವಿಟ್‌, ಧಾರಾಳ ಉತ್ತರ, ಮುಖದಲ್ಲಿ ಕಳ್ಳನಗು! 
ಹರಾಜಿನಲ್ಲಿ ಭಾಗವಹಿಸುವ ದೊಡ್ಡ ಸಂಖ್ಯೆಯ ಆಸ್ಟ್ರೇಲಿಯನ್ನರು ಈ ಉತ್ತರಕ್ಕೆ ಮರುಳಾಗುವುದನ್ನು ಮರೆತು ಬಿಡಿ, ಇತ್ತ ದುಡಿಮೆಗೆಂದು ಆಸ್ಟ್ರೇಲಿಯಾಕ್ಕೆ ಹೋಗಿದ್ದ ಕುರಿಯರ್‌ ಪುಟ್ಟ ಉತ್ತರಕ್ಕೆ ದುಬಾರಿ ಬೆಲೆ ತೆತ್ತು ಬೆಪ್ಪಾದರು!

ಮಾ.ವೆಂ.ಸ.ಪ್ರಸಾದ್‌

ಟಾಪ್ ನ್ಯೂಸ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

14-

Kasaragodu: ಹಣದ ವಿವಾದ: ಪೆಟ್ರೋಲ್‌ ಸುರಿದು ಮಹಿಳೆಯ ಕೊಲೆಗೆ ಯತ್ನ

13-mulleria

Mulleria: ವ್ಯಕ್ತಿಯ ನಿಗೂಢ ಸಾವು : ತಲೆಗೆ ಗಂಭೀರ ಗಾಯ ಮರಣಕ್ಕೆ ಕಾರಣ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

9-

Chamarajanagara: ಪ್ರಮೋದ್ ಆರಾಧ್ಯಗೆ ಯುಪಿಎಸ್‌ಸಿ 671 ರ‍್ಯಾಂಕ್‌  


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

16

Crime: ಸುಳ್ಯ ಭಾಗದ ಅಪರಾಧ ಸುದ್ದಿಗಳು

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.