Udayavni Special

ಸಾಲು ಮರದ “ತಿಮ್ಮಪ್ಪ’!

ಸಾಲ ಮಾಡಿ,ಊರು ಹಸಿರು ಮಾಡುವ ಸಂತ

Team Udayavani, Jul 13, 2019, 4:37 PM IST

salu-mara1-copy-copy

ಚಾಮರಾಜ ನಗರದ ಯಾವುದೇ ರಸ್ತೆಗಾದರೂ ಹೋಗಿ, ಅಲ್ಲಿ ವೆಂಕಟೇಶ್‌ ನೆಟ್ಟ ಸಾಲು ಸಾಲು ಗಿಡ-ಮರಗಳೇ ಕಾಣಿಸುತ್ತವೆ.ಸ್ವಂತ ಖರ್ಚಿ ನಿಂದ, ಬ್ಯಾಂಕಿನಿಂದ ಸಾಲವನ್ನೂ ಪಡೆದು,3ಸಾವಿರಕ್ಕೂ ಅಧಿಕ ಗಿಡಗಳನ್ನು ನೆಟ್ಟ, ಅಪರೂಪದ ಪರಿಸರಪ್ರೇಮಿ. ವೆಂಕಟೇಶ್‌ರನ್ನು,ಅವ ರ ಅತ್ಯಾಪ್ತರು “ತಿಮ್ಮಪ್ಪ’ಅಂತಲೇ ಕರೆ ಯು ವು ದ ರಿಂದ, ಚಾಮರಾಜನಗರದ ಪಾಲಿಗೆ ಇವ ರೇ “ಸಾಲು ಮ ರದ ತಿಮ್ಮಪ್ಪ’!

ಚಾಮರಾಜ ನಗರದ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ಸುಮ್ಮನೆ ನಡೆದು ಹೋಗುತ್ತಿದ್ದರೆ, ಕನ್ನ ಡದ ಚಿತ್ರ ಗೀತೆಗಳು ಹಿನ್ನೆ ಲೆಯಲ್ಲಿ ತೇಲಿ ಬಂದಂತೆ ಅನ್ನಿಸಿ, ಮನಸ್ಸು-ಶರೀ ರವು ಒಟ್ಟೊ ಟ್ಟಿ ಗೆ ತಂಪಾಗುತ್ತದೆ. ಆ ಸಂಗೀತದ ಸೊಗಡು ಬಂದಿದ್ದು ಎಲ್ಲಿಂದ ಎಂದು ತಿರುಗಿ ನೋಡಿದರೆ,ಅಲ್ಲೇನು ಯಾರೂ ರೇಡಿ ಯೋದ ಹಾಡನ್ನಾಗಲೀ, ಟಿವಿಯ ಶೋ ವ ನ್ನಾಗಲಿ,ಪ್ಲೇ ಮಾಡುತ್ತಿರುವುದಿಲ್ಲ. ಹಾದಿಯ ಪಥಿಕರೆಲ್ಲರ ಪಕ್ಕದಲ್ಲೂ ಡಾ.ರಾಜ್‌ ಕುಮಾರ್‌,ಪಿ.ಬಿ.ಶ್ರೀನಿವಾಸ್‌, ಜೇಸು ದಾಸ್‌,ಎಸ್‌.ಜಾನಕಿ,ಪಿ.ಸುಶೀಲಾ,ಎಸ್ಪಿಬಿ,ವಾಣಿ ಜಯರಾಂ ಅವರು ನಿಂತಂತೆ ಅನ್ನಿಸುತ್ತದೆ. ಇಲ್ಲಿ ಈ ಗಾನ ದಿಗ್ಗಜರೆಲ್ಲರೂ,ಹಸಿರು ಮರಗಳಾಗಿ, ಪಥಿಕರಿಗೆ ತಂಗಾಳಿ ಸೋಕಿಸುತ್ತಿರುತ್ತಾರೆ.

ಈ ವಿಸ್ಮಯಕ್ಕೆ ಕಾರಣ ಕರ್ತ ಒಬ್ಬ ಶ್ರೀಸಾಮಾನ್ಯ. ಅವ ರು ಸಿ.ಎಂ.ವೆಂಕ ಟೇಶ್‌.ಕೆಲ ವರುಷಗಳ ಹಿಂದೆ,ಅಣ್ಣಾವ್ರ ಜನ್ಮದಿನದ ನಿಮಿತ್ತ ಹಾದಿ ಯು ದ್ದಕ್ಕೂ ಮರ ಗ ಳನ್ನು ನೆಟ್ಟು, ಅದಕ್ಕೆ ಈ ಗಾನ ಗಾರುಡಿಗರ ಹೆಸ ರ ನ್ನಿ ತ್ತರು. ಕೇವಲ ಇದೊಂದೇ ಬೀದಿ ಯಲ್ಲ, ಚಾಮ ರಾ ಜ ನಗ ರದ ಯಾವುದೇ ರಸ್ತೆಗಾದ ರೂ ಹೋಗಿ, ಅಲ್ಲಿ ವೆಂಕ ಟೇಶ್‌ ನೆಟ್ಟ ಸಾಲು ಸಾಲು ಗಿಡ- ಮರ ಗಳೇ ಕಾಣಿ ಸು ತ್ತವೆ. ಸ್ವಂತ ಖರ್ಚಿ ನಿಂದ, ಬ್ಯಾಂಕಿ ನಿಂದ ಸಾಲ ವನ್ನೂ ಪಡೆದು, 3 ಸಾವಿ ರಕ್ಕೂ ಅಧಿಕ ಗಿಡ ಗ ಳನ್ನು ನೆಟ್ಟ, ಅಪ ರೂ ಪದ ಪರಿ ಸರ ಪ್ರೇಮಿ. ಹಾಗೆ ನೆಟ್ಟ ಗಿಡ ಗ ಳ ನ್ನು ಪುಟ್ಟ ಮಕ್ಕ ಳಂತೆ ಮಾತಾ ಡಿ ಸುತ್ತಾ, ನಿತ್ಯವೂ ನೀರು, ಗೊಬ್ಬರ ನೀಡಿ, ಪೊರೆ ಯು ವ ಹಸಿ ರು ಜೀವಿ. ವೆಂಕ ಟೇಶ್‌ರನ್ನು, ಅವ ರ ಅತ್ಯಾಪ್ತರು “ತಿಮ್ಮ ಪ್ಪ’ ಅಂತಲೇ ಕರೆ ಯು ವು ದ ರಿಂದ, ಚಾಮ ರಾ ಜ ನ ಗ ರದ ಪಾಲಿಗೆ ಇವ ರೇ “ಸಾಲು ಮ ರದ ತಿಮ್ಮ ಪ್ಪ’!

ರಸ್ತೆ ಅಗಲೀಕರಣದ ನೆಪದಲ್ಲಿ ಯಾವಾಗ, ಇಲ್ಲಿನ ಮರಗಳು ಧರೆಗುರು ಳಿದವೋ, ಅಂದಿನಿಂದಲೇ ವೃಕ್ಷ ಸಂತತಿ ಬೆಳೆ ಸುವ ಸಾಹ ಸಕ್ಕೆ ಸಂತ ನಂತೆ ಧುಮುಕಿದರು, ವೆಂಕಟೇಶ್‌. ಸಾಲು ಮರದ ತಿಮ್ಮಕ್ಕನನ್ನು ನಗ ರಕ್ಕೆ ಆಹ್ವಾನಿಸಿ, ನೂರಾರು ಗಿಡಗಳನ್ನು ನೆಡಿಸಿ, ಬದುಕಿನ ಪರಿ ಸರ ಚಳ ವ ಳಿಗೆ ಚಾಲನೆ ಕೊಟ್ಟರು. ಇಂದಿಗೂ ಅವರು ಇಲ್ಲಿನ ರಸ್ತೆಯ ಇಕ್ಕೆಲಗಳಲ್ಲಿ ಗಿಡಗಳನ್ನು ನೆಡುತ್ತಲೇ ಬಂದಿದ್ದಾರೆ. ವೃತ್ತಿಯಲ್ಲಿ ಆಡಿಟರ್‌, ಎಲ್‌ಐಸಿ ಏಜೆಂಟ್‌ ಆಗಿರುವ ಇವರು, ಸೊಗಸಾಗಿ ಹಾಡುತ್ತಾರೆ ಕೂಡ. ಆಡಿಟರ್‌ ಕೆಲಸದಿಂದ ಬಂದ ಹಣವನ್ನು ಮನೆಯ ಖರ್ಚಿಗೆ ಬಳಸಿ, ಎಲ್‌ಐಸಿ ಪ್ರತಿನಿಧಿಯಾಗಿ ದುಡಿದಿದ್ದನ್ನು, ಗಿಡಗಳಿಗೆ ಸುರಿಯುತ್ತಿದ್ದಾರೆ.

ಗಿಡ ನೆಡಲು ಬ್ಯಾಂಕಿನಿಂದ ಸಾಲ!
ಮನೆ ಕಟ್ಟಲು, ವಾಹನ ಕೊಳ್ಳಲು ಸಾಲ ತೆಗೆದುಕೊಳ್ಳುವುದನ್ನು ನೋಡಿದ್ದೇವೆ. ಆದರೆ, ಸಾರ್ವಜನಿಕ ಕೆಲಸಕ್ಕಾಗಿ, ಊರು ತುಂಬಾ ಗಿಡಗಳನ್ನು ನೆಟ್ಟು ಬೆಳೆಸಲು ಸಾಲ ತೆಗೆದುಕೊಂಡವರು ವೆಂಕ ಟೇಶ್‌. ತಮ್ಮ ಸಂಪಾದನೆಯಿಂದ ಇಷ್ಟು ಗಿಡಗಳನ್ನು ನೆಡಲು ಸಾಧ್ಯವಿಲ್ಲವೆಂದು ತಿಳಿ ದಾಗ, ಗಿಡಗಳ ಆರೈಕೆಗೆಂದೇ, ಚಾಮರಾಜನಗರದ ಕಾರ್ಪೊರೇಷನ್‌ ಬ್ಯಾಂಕಿನಿಂದ 10 ಲಕ್ಷ ರೂ. ಸಾಲ ಪಡೆದಿದ್ದಾರೆ, ಈ ಪುಣ್ಯಾತ್ಮ! ಬೆಂಗಳೂರು, ಮೈಸೂರು, ಚಾಮರಾಜನಗರ ನರ್ಸರಿಗಳಿಂದ ಗಿಡಗಳನ್ನು ತಂದಿದ್ದಾರೆ. ಇದಕ್ಕೆ ತಗುಲಿದ್ದು, ಬರೋಬ್ಬರಿ 14 ಲಕ್ಷ ರೂ.!

ಗಿಡ ನೆಟ್ಟರೆ ಸಾಕೇ..?
ಕೇವಲ ಗಿಡ ನೆಡುವುದಷ್ಟೇ ಅಲ್ಲ… ನೆಟ್ಟ ಗಿಡ ಬಲಿಷ್ಠ ವಾಗಿ ಬೆಳೆಯುವವರೆಗೂ ನೀರು ಹಾಕಿ ಪೋಷಿಸುವ, ಟ್ರೀ ಗಾರ್ಡ್‌ ಹಾಕಿ ರಕ್ಷಿಸುವ, ಗಿಡಕ್ಕೆ ಅಗತ್ಯ ಗೊಬ್ಬರ ಹಾಕುವ ಕೆಲಸವನ್ನು ವೆಂಕಟೇಶ್‌ ತೋಟದ ಮಾಲಿಯಂತೆ ಶ್ರದ್ಧೆಯಿಂದ ಮಾಡುತ್ತಿದ್ದಾರೆ. ಟ್ಯಾಂಕರ್‌ನಿಂದ ನೀರು ತರಿಸಿ, ವಾರಕ್ಕೊಮ್ಮೆ ಅಥವಾ ಎರಡು ಬಾರಿ ನೀರು ಪೂರೈ ಸು ತ್ತಾರೆ. ನೆಟ್ಟ ನಂತರ ಮಧ್ಯದಲ್ಲಿ ಒಣಗಿ ಹೋದರೆ, ಅಂಥ ಜಾಗದಲ್ಲಿ ಮತ್ತೆ ಗಿಡ ನೆಡು ವು ದನ್ನು ಮರೆಯುವುದಿಲ್ಲ.

ಗಿಡ ನೆಟ್ಟು ಪೋಷಿಸುವ ಕೆಲಸ ಅಷ್ಟು ಸುಲಭದ್ದಲ್ಲ. ಉದ್ಯಾನವನದಲ್ಲೋ, ಊರಾಚೆ ಒಂದು ತೋಪಿನಂಥ ಜಾಗದಲ್ಲೋ ಗಿಡಗಳನ್ನು ನೆಟ್ಟು ಪೋಷಿಸಬಹುದು. ಆದರೆ, ಪಟ್ಟಣ ಪ್ರದೇಶದಲ್ಲಿ ರಸ್ತೆ ಬದಿಯಲ್ಲಿ ಗಿಡ ನೆಟ್ಟರೆ, ಕೆಲವು ಅಂಗಡಿಗಳವರು ತಮ್ಮ ಅಂಗಡಿ ಕಾಣುವುದಿಲ್ಲವೆಂದು ಗಿಡಗಳನ್ನು ಕಿತ್ತು ಹಾಕುತ್ತಾರೆ. ಮೇಕೆ ಕುರಿಗಳು ಅದನ್ನು ತಿನ್ನಲೂಬಹುದು. ಹೀಗೆಲ್ಲ ಅಡೆತಡೆಗಳು ಆದಾ ಗ, ತಾಳ್ಮೆ ಕಳೆದುಕೊಳ್ಳದೆ, ಪೋಷಿಸುವುದೂ ಇವರಿಗೆ ಕರಗತ.

ವೈವಿಧ್ಯಮ ಹಸಿರು ಜಗತ್ತು
ವಿವಿಧ ಜಾತಿಯ ಗಿಡಗಳನ್ನು ಎಲ್ಲೆಲ್ಲಿಂದಲೋ ತಂದು ನೆಟ್ಟಿದ್ದಾರೆ, ವೆಂಕ ಟೇ ಶ್‌. ಮಹಾಗನಿ, ಹೊಂಗೆ, ನೇರಳೆ, ಕಾಡು ಬಾದಾಮಿ, ಬೇವು, ಹೆಬ್ಬೇವು, ಬುಗುರಿ ಗಿಡ, ಆಕಾಶ ಮಲ್ಲಿಗೆ, ಗಸಗಸೆ ಮಾತ್ರವಲ್ಲದೆ, ನಮಗೆ ಹೆಸರೇ ಗೊತ್ತಿಲ್ಲದ ಅನೇಕ ಜಾತಿಯ ಗಿಡಗಳನ್ನು ನೆಟ್ಟಿದ್ದಾರೆ. ಗಾಳಿ ಮಳೆಗೆ ಮುರಿದು ಬೀಳಬಹುದಾದ ಪ್ರಭೇದಗಳನ್ನು ಬಿಟ್ಟು, ಕಾಂಡ ಭದ್ರ ಇರುವ ಸಸ್ಯ ಪ್ರಭೇದವನ್ನೇ ಆಯ್ದುಕೊಂಡಿರುವುದು ವಿಶೇಷ.

ಚಾಮರಾಜನಗರದಲ್ಲಿ 100 ಅಡಿಯ ಬಿ. ರಾಚಯ್ಯ ಜೋಡಿರಸ್ತೆಯಿದ್ದು, ಇಲ್ಲಿದ್ದ ಎಲ್ಲ ಮರಗಳನ್ನೂ ಅಗಲೀಕರಣಕ್ಕಾಗಿ ಕಡಿಯಲಾಗಿತ್ತು. ಈಗ ಅಲ್ಲಿ ಹೂ ಬಿಡುವ ಗಿಡಗಳನ್ನು ವೆಂಕಟೇಶ್‌ ನೆಡುತ್ತಿದ್ದಾರೆ. ಸಣ್ಣ ಗಿಡಗಳನ್ನು ನೆಟ್ಟರೆ ಬೆಳೆಯುವುದು ನಿಧಾನವೆಂದು ಯೋಚಿಸಿ, ಈಗಾಗಲೇ 6-8 ಅಡಿ ಎತ್ತರ ಬೆಳೆದಿರುವ ಗಿಡಗಳನ್ನು ಬೆಂಗಳೂರಿನಿಂದ ತಲಾ 1 ಸಾವಿರ ರೂ. ಕೊಟ್ಟು ತಂದಿದ್ದಾರೆ! ಇವುಗಳಿಗೆ ಮೊದಲ ಹಂತಕ್ಕೆ 2 ಲಕ್ಷ ರೂ. ವೆಚ್ಚವಾಗಿದೆ. ಪಕ್ಷಿಗಳಿಗೆ ಹಣ್ಣು ದೊರಕಲಿ ಎಂಬ ಉದ್ದೇಶದಿಂದ ಜಂಬು ನೇರಳೆ, ಗಸೆಗಸೆ, ಕಾಡು ಬಾದಾಮಿ ಸೇರಿ ಹಣ್ಣು ಬಿಡುವ ಗಿಡಗಳನ್ನು ನೆಟ್ಟು, ಅವು ಗಳ ಹಸಿವು ನೀಗಿ ಸುವ ಪ್ರಯತ್ನವನ್ನೂ ಮಾಡಿ ದ್ದಾ ರೆ. ಇಲ್ಲಿನ “ಸಂಪಿಗೆ ರಸ್ತೆ’ಯಲ್ಲಿ, ಕೇವಲ ಸಂಪಿಗೆ ಗಿಡಗಳನ್ನೇ ನೆಟ್ಟು, ಇಡೀ ಹಾದಿ ಗಮ್ಮೆ ನ್ನುವ ದಿನ ಗ ಳಿ ಗಾಗಿ ಎದುರು ನೋಡು ತ್ತಿ ದ್ದಾ ರೆ.
“ಹಣ-ಆಸ್ತಿ ಮಾಡಿದರೆ,ಅದು ನನ್ನ ಸಂಸಾರಕ್ಕಷ್ಟೇ ಪ್ರಯೋಜನ. ಅದರ ಬದಲು,ಊರ ಜನರಿಗೆ ನೆರಳು ನೀಡಿದರೆ ಅದೇ ಮಾನ ವೀ ಯ ಸಂಪತ್ತು. ನಾನು ನೆಟ್ಟ ಗಿಡಗಳು ಹತ್ತಾರು ವರ್ಷದಲ್ಲಿ ದೊಡ್ಡ ಮರಗಳಾದಾಗ, ಅದರ ನೆರಳಿನಲ್ಲಿ ಕುಳಿತ ಜನರನ್ನು ನೋಡಿ, ಈ ಬದುಕು ಸಾರ್ಥ ಕವಾಯಿತು ಎಂದು ತೃಪ್ತಿ ಪಡುತ್ತೇನೆ’ಎನ್ನುತ್ತಾರೆ, ವೆಂಕಟೇಶ್‌.ಅಂದಹಾಗೆ,ಇವರ ಜನುಮ ದಿನವೂ ಜೂನ್‌ 5ರ ವಿಶ್ವಪರಿಸರ ದಿನದಂದೇ!

ಖರ್ಚು ಎಷ್ಟಾಗುತ್ತೆ?
7-8 ಅಡಿ ಬೆಳೆದಿರುವ ದೊಡ್ಡ ಗಿಡಕ್ಕೆ 1000 ರೂ.! ಸಣ್ಣ ಗಿಡಗಳಿಗೆ 200-300 ರೂ. ತಗುಲುತ್ತದೆ. ಇದನ್ನು ನೆಡಲು 6 ಮಂದಿ ಕೂಲಿಕಾರ್ಮಿಕರನ್ನು ನೇಮಿಸಿಕೊಂಡಿದ್ದಾರೆ. ಇವರಿಗೆ ಗಿಡ ನೆಡುವ ತರಬೇತಿಯನ್ನೂ ಕೊಟ್ಟಿದ್ದಾರೆ. ಇವರಿಗೆ ದಿನಕ್ಕೆ 600 ರೂ. ಕೂಲಿ ನೀಡಬೇಕು. ಇದಲ್ಲದೇ ಗೂಡ್ಸ್‌ ಆಟೋಗೆ ದಿನಕ್ಕೆ 1200 ರಿಂದ 1500 ರೂ. ವರೆಗೆ ಬಾಡಿಗೆ ನೀಡಬೇಕು. ಗಿಡ ನೆಡುವ ಸಂದರ್ಭದಲ್ಲಿ ದಿನಕ್ಕೆ 5 ಸಾವಿರ ರೂ. ಖರ್ಚಾಗುತ್ತದೆ. ಇಷ್ಟು ಹಣವನ್ನು ವೆಂಕಟೇಶ್‌ ಅವರೇ ಭರಿಸುತ್ತಾರೆ.

ಆಭರಣ ಅಡವಿಟ್ಟ ಪತ್ನಿ!
ಪತಿಯ ಈ ಕೆಲಸಕ್ಕೆ ಪತ್ನಿ ನೆರವೂ ದೊಡ್ಡದು. ಯಾವುದೋ ಸಂದರ್ಭದಲ್ಲಿ, ಗಿಡಗಳನ್ನು ನೆಡಲು ಒಂದು ಲಕ್ಷ ರೂ. ಅಗ ತ್ಯ ವಿತ್ತು. “ಆಗ ತನ್ನ ಆಭರಣಗಳನ್ನು ಗಿರವಿ ಇಟ್ಟು ನನಗೆ 1 ಲಕ್ಷ ರೂ.ಗಳನ್ನು ನನ್ನ ಪತ್ನಿ ಜಯಲಕ್ಷ್ಮಿ ನೀಡಿದಳು’ ಎನ್ನು ವಾಗಲೂ ವೆಂಕಟೇಶ್‌ ಸಣ್ಣಗೆ ನಗು ತ್ತಲೇ ಇದ್ದ ರು.

ಚಿತ್ರ- ಲೇಖನ: ಬನಶಂಕರ ಆರಾಧ್ಯ

ಟಾಪ್ ನ್ಯೂಸ್

ರಮೇಶ್‌ ಪೊವಾರ್‌ ಮತ್ತೆ ಭಾರತೀಯ ವನಿತಾ ತಂಡದ ಪ್ರಧಾನ ಕೋಚ್‌ ಆಗಿ ನೇಮಕ

ರಮೇಶ್‌ ಪೊವಾರ್‌ ಮತ್ತೆ ಭಾರತೀಯ ವನಿತಾ ತಂಡದ ಪ್ರಧಾನ ಕೋಚ್‌ ಆಗಿ ನೇಮಕ

ವೃತ್ತಿ ಬದುಕಿನ ಒಂದು ಸಾವಿರದ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್‌ಗೆ ಸೋಲು

ವೃತ್ತಿ ಬದುಕಿನ ಒಂದು ಸಾವಿರದ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್‌ಗೆ ಸೋಲು

ಕೋವಿಡ್‌ ವ್ಯಾಕ್ಸಿನ್‌ ಪಡೆದ ಟೀಮ್‌ ಇಂಡಿಯಾದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌

ಕೋವಿಡ್‌ ವ್ಯಾಕ್ಸಿನ್‌ ಪಡೆದ ಟೀಮ್‌ ಇಂಡಿಯಾದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌

ಸ್ಪಿನ್ನರ್‌ ಯಜುವೇಂದ್ರ ಚಹಲ್‌ ಹೆತ್ತವರಿಗೆ ಕೋವಿಡ್ ಸೋಂಕು

ಸ್ಪಿನ್ನರ್‌ ಯಜುವೇಂದ್ರ ಚಹಲ್‌ ಹೆತ್ತವರಿಗೆ ಕೋವಿಡ್ ಪಾಸಿಟಿವ್

ದ.ಕ. ಜಿಲ್ಲೆ: ವಾರಾಂತ್ಯ ಕರ್ಫ್ಯೂ ಇಲ್ಲ :  ಜಿಲ್ಲಾಧಿಕಾರಿ ಸ್ಪಷ್ಟನೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ಇಲ್ಲ :  ಜಿಲ್ಲಾಧಿಕಾರಿ ಸ್ಪಷ್ಟನೆ

yyyeeee

ರಾಕೆಟ್ ದಾಳಿಯಲ್ಲಿ ಮಡಿದ ಕೇರಳದ ಸೌಮ್ಯ ಕುಟುಂಬದ ಜವಾಬ್ದಾರಿ ಹೊತ್ತ  ಇಸ್ರೇಲ್ ಸರ್ಕಾರ

13-11

ಅದ್ಧೂರಿ ಕಲ್ಯಾಣ ಮಹೋತ್ಸವ ಕನಸಿಗೆ ಕೊರೊನಾ ಕೊಕ್ಕೆ !ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

life journey

ಬಾರೋ ಸಾಧಕರ ಕೇರಿಗೆ

life story

ನಿರ್ಮಲ ಪ್ರೇಮದ ಆಲಯದಲ್ಲಿ ದೇವರು ಉಳಿದುಕೊಂಡ…

cycle-yatri

ಸೈಕಲ್‌ ಯಾತ್ರಿಕನ ಕನಸು

bili-saheb

ಬಿಳಿ ಸಾಹೇಬನ ಬೇಂದ್ರೆ

sagarotttara

ಸಾಗರೋತ್ತರ ದೇಶಗಳಲ್ಲಿ ರಾಮಾಯಣ

MUST WATCH

udayavani youtube

ತನ್ನ ಮದುವೆಗೆ ತಾನೇ ಬ್ಯಾಂಡ್ ಬಾರಿಸಿದ ಮದುಮಗ

udayavani youtube

ಸರ್ವಾಧಿಕಾರಿ ಧೋರಣೆಗೆ ಆಕ್ರೋಶ : ಉನ್ನಾವ್ನಲ್ಲಿ ವೈದ್ಯರಿಂದ ಸಾಮೂಹಿಕ ರಾಜೀನಾಮೆ

udayavani youtube

ಬೆಂಗಳೂರು: ಮನೆ ಬಾಗಿಲಿಗೆ ಬರಲಿದೆ ಆಕ್ಸಿಜನ್‌ ಬಸ್‌

udayavani youtube

18 ರಿಂದ 44 ವರ್ಷ ವಯೋಮಾನದವರಿಗೆ ಸದ್ಯಕ್ಕಿಲ್ಲ ಲಸಿಕೆ

udayavani youtube

ಕರಾವಳಿಯಲ್ಲಿ ಚಂಡಮಾರುತ ವಾರ್ನಿಂಗ್!

ಹೊಸ ಸೇರ್ಪಡೆ

ರಮೇಶ್‌ ಪೊವಾರ್‌ ಮತ್ತೆ ಭಾರತೀಯ ವನಿತಾ ತಂಡದ ಪ್ರಧಾನ ಕೋಚ್‌ ಆಗಿ ನೇಮಕ

ರಮೇಶ್‌ ಪೊವಾರ್‌ ಮತ್ತೆ ಭಾರತೀಯ ವನಿತಾ ತಂಡದ ಪ್ರಧಾನ ಕೋಚ್‌ ಆಗಿ ನೇಮಕ

ವೃತ್ತಿ ಬದುಕಿನ ಒಂದು ಸಾವಿರದ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್‌ಗೆ ಸೋಲು

ವೃತ್ತಿ ಬದುಕಿನ ಒಂದು ಸಾವಿರದ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್‌ಗೆ ಸೋಲು

13-22

ಹಬ್ಬದಾಚರಣೆಯಲ್ಲಿ ಗೊಂದಲ ಬೇಡ

13-21

ದಾದಿಯರ ಸೇವೆ ಅವಿಸ್ಮರಣೀಯ

13-20

ಕೊರೊನಾ ತಡೆಗೆ ತಂಡವಾಗಿ ಕೆಲಸ ಮಾಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.