ಬಿಸಿಲೂರಿನಲ್ಲೊಂದು ತಣ್ಣನೆಯ ಟ್ರೀ ಪಾರ್ಕ್‌

Team Udayavani, Jun 1, 2019, 9:39 AM IST

ರುದ್ರಾಕ್ಷಪುರ ಅರಣ್ಯ ಪ್ರದೇಶದಲ್ಲಿರ ಸಾಲು ಮರದ ತಿಮ್ಮಕ್ಕನ ಹೆಸರಿನ ಪಾರ್ಕ್‌ ಇದೆ. ಆ ಪಾರ್ಕ್‌ನಲ್ಲಿ ಜಿಂಕೆ, ಕಡವೆ, ಹುಲಿ, ಆನೆಯಷ್ಟೇ ಅಲ್ಲ, ಅನಕೊಂಡವೂ ಇದೆ…

ಕೊಪ್ಪಳದಿಂದ ಹೊಸಪೇಟೆ ಹಾದಿಯಲ್ಲಿ 17 ಕಿ.ಮೀ.ಕ್ರಮಿಸಿದರೆ ಗಿಣಗೇರಾ ಗ್ರಾಮಕ್ಕೆ ಹೊಂದಿಕೊಂಡಂತೆ ರಸ್ತೆಯ ಬಲ ಭಾಗದಲ್ಲಿ ರುದ್ರಾಪುರ ಅರಣ್ಯ ಪ್ರದೇಶವಿದೆ. ಅಲ್ಲಿ ನೀರಿನಿಂದ ದಂಡಿಗೆ ಬಂದು ಬಾಯಿ ತೆರೆದುಕೊಂಡು, ಬಿಸಿಲು ಕಾಯಿಸುತ್ತಿರುವ ಮೊಸಳೆಗಳು, ದೊಡ್ಡ ಕಲ್ಲಬಾವಿ, ಮರಿಯನ್ನು ಮುದ್ದಾಡುತ್ತಿರುವ ಆನೆಗಳು,ಬೆದರಿದ ಚಿಗರಿಗಳ ಹಿಂಡು, ಬೇಟೆಯಾಡುತ್ತಿರುವ ತೋಳ, ಹುಲಿ, ೌಹಾರಿ ಕತ್ತೆತ್ತಿ ಆತಂಕದಿಂದ ಅತ್ತಿತ್ತ ನೋಡುತ್ತಿರುವ ಹರಣಿಗಳು, ಕಡವೆಗಳು… ಹೀಗೆ ಕಾಡಿನಿಂದ ನಾಡಿನ ಪ್ರಾಣಿಗಳೆಲ್ಲಾ ನಾಡಿಗೆ ಬಂದು ಬಿಟ್ಟಿವೆಯೇನೋ ಅನಿಸುತ್ತವೆ. ಇಷ್ಟೆಲ್ಲಾ ಪ್ರಾಣಿಗಳು ಎಲ್ಲಿಂದ ಬಂದವು ?

ಅಚ್ಚರಿಪಡಬೇಡಿ.
ಇವೆಲ್ಲ ಜೀವಂತ ಪ್ರಾಣಿಗಳಲ್ಲ. ಕುರುಚಲು ಕಾಡಿನ ಗಿಡಗಳ ನಡುವೆ ಅಲ್ಲಲ್ಲಿ ನಿಲ್ಲಿಸಿರುವ ಪ್ರಾಣಿಗಳ ಪ್ರತಿಕೃತಿಗಳು. ಇದುವೇ ಸಾಲು ಮರದ ತಿಮ್ಮಕ್ಕ ವೃಕ್ಷ$ ಉದ್ಯಾನವನ . ಈ ಮರೋದ್ಯಾನ ಪ್ರದೇಶವನ್ನು ಆಕರ್ಷಕ ವಿನ್ಯಾಸದ ಗೇಟ್‌ ಸ್ವಾಗತಿಸುತ್ತದೆ. ಬಿರುಬಿಸಿಲಿನ ನಾಡಲ್ಲಿ ಮರೋದ್ಯಾನ ನಿರ್ಮಾಣ ಸ್ವಾಗತಾರ್ಹ. ಫ್ಯಾಕ್ಟರಿಗಳ ದಟ್ಟ ಹೊಗೆ, ಧೂಳುಗಳ ನಡುವೆ ಹಸಿರು ಚಿಗುರುವುದೇ ಕಷ್ಟ. ಈ ಬೆಟ್ಟ ಪ್ರದೇಶದಲ್ಲಿ ನೀರಿಗೂ ಬರ. ಈ ಪ್ರತಿಕೂಲ ಸವಾಲುಗಳ ನಡುವೆಯೂ ಅರಣ್ಯ ಬೆಳೆಸುವ, ಉದ್ಯಾನ ನಿರ್ಮಿಸುವ ಪ್ರಯತ್ನ ಯಶಸ್ಸು ಕಂಡಿದೆ.

ಗೇಟಿನಿಂದ ಒಳಗಡೆ ಬರುತ್ತಿದ್ದರಂತೆ, ಟಿಕೆ ಟ್‌ ಕೌಂಟರ್‌ ಮೇಲ್ಗಡೆ ಮೂರು ಮಂಗಗಳು ಕಣ್ಣು,ಬಾಯಿ, ಕಿವಿ ಮುಚ್ಚಿಕೊಂಡು “ಕೆಟ್ಟದ್ದನ್ನು ನೋಡಬೇಡ, ಕೆಟ್ಟದ್ದನ್ನು ಮಾತಾಡಬೇಡ,ಕಟ್ಟದನ್ನು ಕೇಳಬೇಡ’ ಎಂಬ ಸಂದೇಶವನ್ನು ಬಂದವರಿಗೆ ನೀಡುತ್ತವೆ. ಮುಂದೆ ಸಾಗಿದರೆ ಬಲಗಡೆ ನಾಲ್ಕೈದು ಅಡಿ ಎತ್ತರದ ಅಣಬೆ ಬೆಳೆದು ನಿಂತಿವೆ. ಅವುಗಳ ಮೇಲೆ ವಿವಿಧ ಕೀಟಾಣುಗಳು ಹಾಗೂ ಪಾತರಗಿತ್ತಿಗಳು ಕುಳಿತು ರಸಗವಳವನ್ನು ಹೀರುತ್ತಿವೆ. ಎಡಕ್ಕೆ ಎರಡೂ ಕೈಗಳಲ್ಲಿ ಪೃಥ್ವಿ ಹಿಡಿದು,ರಕ್ಷಿ$ಸಲು ಮರ ಬೆಳೆಸುವ ಸಂದೇಶ ನೀಡುವ ಕಲಾಕೃತಿ ಆಕರ್ಷಣೀಯವಾಗಿದೆ. ಅದರ ಹಿಂದೆ ಗರಿಬಿಚ್ಚಿ ಕುಣಿಯುವ ನವಿಲುಗಳ ದೃಶ್ಯ ನಯನ ಮನೋಹರ

ಕುರುಚಲು ಕಾಡಿನಲ್ಲಿ ಅಲ್ಲಲ್ಲಿ ಕಾಡುಪ್ರಾಣಿಗಳ ಪ್ರತಿಕೃತಿಗಳನ್ನು ಅನಾವರಣ ಮಾಡಲಾಗಿದೆ.
ಮರ ಕಡಿಯಬೇಡಿ ಎಂಬ ಸಂದೇಶ ಸಾರುವ ಶಿಲ್ಪ ಮಾರ್ಮಿಕವಾಗಿದೆ.ಕೊಡಲಿ ಎತ್ತಿದ ವ್ಯಕ್ತಿಯನ್ನು ತಾಯಿ-ಮಗ ಮರವನ್ನು ತಬ್ಬಿಕೊಂಡು ಕಡಿಯಬೇಡ ಎಂದು ಬೇಡುತ್ತಿದ್ದಾರೆ. ಮುಂದೆ ಶಾಲಾ ಮಕ್ಕಳ ಸಮವಸ್ತ್ರದಲ್ಲಿರುವ ಪುಟಾಣಿಗಳು ಮರವನ್ನು ಅಪ್ಪಿಕೊಂಡು ನಿಂತಿವೆ. ಈ ದೃಶ್ಯಗಳು ಪ್ರವಾಸಿಗರ ಮನ ಕಲಕದೇ ಬಿಡವು. ಸಾಲು ಮರದ ತಿಮ್ಮಕ್ಕನ ಹೆಸರಿಟ್ಟಿರುವ ಸಾರ್ಥಕತೆಯನ್ನು ಇವು ಸಾರಿ ಸಾರಿ ಹೇಳುತ್ತವೆ.

ರಂಗಮಂದಿರದ ಮುಂದೆ ದೊಡ್ಡ ಕÇÉಾವೆ ಇದೆ. ಅದರ ಮುಂದೆ ನೀರು ತುಂಬಿದ ಕೊಳ.
ಕೊಳದ ದಂಡೆಯಲ್ಲಿ ಬಾಯಿ ತೆರೆದು ಬೇಟೆಗಾಗಿ ಕಾದಿರುವ ಮೊಸಳೆಗಳ ಮೂರ್ತಿಗಳಿವೆ. ಕೊಳದ ಮಧ್ಯದಲ್ಲೊಂದು ಮರ, ಭೂಮಂಡಲವನ್ನೇ ಎತ್ತಿ ಹಿಡಿದಿರುವ ದೃಶ್ಯ ಸುಂದರವಾಗಿದೆ. ಭೂಮಂಡಲವನ್ನು ಹಸಿರೆಲೆಗಳು ಮುತ್ತಿಕೊಂಡಿವೆ. ಹಸಿರಿದ್ದರೆ ಭೂಮಿಯ ಮೇಲೆ ಉಸಿರು ಎಂಬ ಸಂದೇಶವನ್ನು ಸಾರುವಂತೆ. ರಂಗಮಂದಿರದ ಬಯಲಿನ ಎಡಕ್ಕೆ ಮರಕ್ಕೆ ಸುತ್ತಿಹಾಕಿಕೊಂಡು ಬಾಯಿ ತೆರದಿರುವ ಅನಕೊಂಡ ಎಂಥವರಿಗೂ ಭಯ ಹುಟ್ಟಿಸುತ್ತದೆ.

ಕುರುಚಲು ಕಾಡಿನ ನಡುವೆ ಸೀಳಿದಂತೆ ಕಾಣುವ ದಾರಿಯಲ್ಲಿ ಸಾಗಿದರೆ ಪ್ರತಿಕೃತಿಗಳ ಪ್ರಾಣಿ ಲೋಕ ಮಕ್ಕಳಿಂದ ಮುದುಕರವರೆಗೆ ಎಲ್ಲರನ್ನೂ ರಂಜಿಸುವುದು. ಬೃಹತ್‌ ಬೆಟ್ಟದ ಬ್ಯಾಕ್‌ ಡ್ರಾಪ್‌ನಲ್ಲಿ ಇಡೀ ಮರೋದ್ಯಾನ ,ಉದ್ಯಾನದ ಒಳಗಿರುವ ಗರಿಬಿಚ್ಚಿ ಹರಡಿರುವ ಹಚ್ಚ ಹಸುರಿನ ಗಿಡಗಳು,ಕಿರುದಾರಿಗಳು,ಕಾಡುಪ್ರಾಣಿಗಳ ದೃಶ್ಯಾವಳಿಗಳು ಬಿಸಿಲೂರಿನಲ್ಲಿರುವುದನ್ನೇ ಮರೆಸುತ್ತವೆ. ಈ ಮರೋದ್ಯಾನಕ್ಕೆ ಶಿಗ್ಗಾವಿ ಗೋಟಗೋಡಿ ಬಳಿಯ ರಾಕ್‌ ಗಾರ್ಡನ್‌ ರುವಾರಿ ಸೊಲಬಕ್ಕನವರ ಮಾರ್ಗದರ್ಶನ ಮಾಡಿ¨ªಾರೆ. ಕಡಿ,ಕಬ್ಬಿಣ, ಸಿಮೆಂಟ…, ಮರಳು, ಇಟ್ಟಿಗೆ ಬಳಸಿ ವಿಭಿನ್ನ ಶೈಲಿಯಲ್ಲಿ ನಿರ್ಮಾಣಗೊಂಡಿರುವುದು ಈ ‘ಟ್ರೀ-ಪಾರ್ಕ್‌ ‘ನ ವಿಶೇಷ.

ಮಕ್ಕಳನ್ನು ಕರೆದುಕೊಂಡು ಈ ಮರೋದ್ಯಾನಕ್ಕೆ ಹೋಗಲು ಅಡ್ಡಿಯಿಲ್ಲ. ಮಕ್ಕಳು ಕುತೂಹಲಕ್ಕೆ ಪ್ರಾಣಿಗಳನ್ನು ಮುಟ್ಟುವುದು,ತಟ್ಟುವುದು, ಜಗ್ಗಾಡುವುದನ್ನು ಮಾಡದಂತೆ ಪಾಲಕರು ಕಾಳಜಿ ವಹಿಸಬೇಕು. ಸೆಕ್ಯುರಿಟಿಗಳ ಸೇವೆ ಇರದಿದ್ದರಿಂದಾಗಿ ಕೆಲವು ಪ್ರಾಣಿಗಳು ಊನಗೊಂಡಿವೆ. ಪ್ರವೇಶ ಫೀ ಪಡೆಯುತ್ತಿರುವ ಸರಕಾರ ಇವುಗಳ ರಕ್ಷ$ಣೆಯತ್ತ ಗಮನ ಹರಿಸಬೇಕು. ಈ ಕೈಕಂಕರ್ಯಕ್ಕೆ ಸಾರ್ವಜನಿಕರೂ ಸಹಕರಿಸಬೇಕು.ಅಂದಾಗ ಮಾತ್ರ ಇದು ಬಹು ಕಾಲ ಬಾಳೀತು! ಬೆಳಗೀತು !!

ಡಾ.ಕರವೀರಪ್ರಭು ಕ್ಯಾಲಕೊಂಡ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಅನ್ನ, ಅಕ್ಷರ, ಆಶ್ರಯ ನೀಡುವ ತ್ರಿವಿಧ ದಾಸೋಹಕ್ಕೆ ಶ್ರೀ ಸಿದ್ಧಗಂಗಾ ಮಠ ಜಗತøಸಿದ್ಧಿ. ಶ್ರೀ ಮಠದ ಪ್ರಸಾದ ಸೇವಿಸಲೆಂದೇ ದೂರ ದೂರದ ಊರುಗಳಿಂದ ಭಕ್ತರು ಆಗಮಿಸುತ್ತಾರೆ....

  • ಮಳೆ ನಿಂತರೂ ಹನಿಗಳು ಉದುರುತ್ತಿರುತ್ತವೆ. ಅಂತೆಯೇ ವಿಶ್ವಕಪ್‌ ಕೂಡ. ಮಹಾನ್‌ ಕೂಟ ಮುಗಿದರೂ ಆಟಗಾರರ ಸಾಧನೆ ಇನ್ನೂ ಹಚ್ಚ ಹಸಿರಾಗಿದೆ. ಮತ್ತೂಮ್ಮೆ ನಮ್ಮೆಲ್ಲರ...

  • ಲೋಹಿತ ವಂಶದವನೊಬ್ಬನಿಗೆ ದೇವರಿರುವ ಹುತ್ತದ ಕನಸು ಬೀಳುತ್ತೆ. ಅದನ್ನು ಆತ ಹುಡುಕುತ್ತಾ ಇಲ್ಲಿಗೆ ಬಂದಾಗ, ನರಸಿಂಹ ಸ್ವಾಮಿಯು ಪ್ರತ್ಯಕ್ಷನಾಗುತ್ತಾನೆ. ನರಸಿಂಹನ...

  • ನಾವು ಓದಿದ, ಆಸಕ್ತರು ಓದಬಹುದಾದ ಪುಸ್ತಕಗಳ ಸಂಕ್ಷಿಪ್ತ ಪರಿಚಯ, ಹೊಸ ಪ್ರಕಟಣೆಗಳ ಅವಲೋಕನ ಈ ಅಂಕಣದಲ್ಲಿ ಪ್ರಕಟವಾಗಲಿದೆ... ಇರಲೇಬೇಕಾದ ಬೀಜದ ಬುಟ್ಟಿ ರೈತರ...

  • - ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ಸಾಹಿತಿ 1969ರ ಹೊತ್ತಿಗೆ: ಚಿತ್ರಕೂಟದ ಮನೆಯಲ್ಲಿದ್ದರು. ಜುಲೈ 20ನೇ ತಾರೀಖು, ನಾಲ್ಕು ಗಂಟೆ, ಹದಿನೇಳು ನಿಮಿಷ, 43ನೇ ಸೆಕೆಂಡ್‌... ಮನುಷ್ಯನ...

ಹೊಸ ಸೇರ್ಪಡೆ