ಸಾಲೂರಿನ ಆಂಜನೇಯ : ಭಕ್ತರ ಪಾಲಿನ ಆಪದ್ಬಾಂದವ

Team Udayavani, Sep 15, 2018, 4:40 PM IST

ಸಾಲೂರಿನಲ್ಲಿ, ವೀರಶೈವ ಲಿಂಗಾಯತ ಮತಕ್ಕೆ ಸೇರಿದ ಗುರುಪರಂಪರೆಯ ಹಿನ್ನೆಲೆ ಹೊಂದಿದ ಮಠಗಳಿವೆ. ಸಂಪೂರ್ಣ ಶಿವಾರಾಧನೆಯ ವಾತಾರವಣ ಹೊಂದಿರುವ ಈ ಗ್ರಾಮದಲ್ಲಿ ಆಂಜನೇಯನ ದೇವಾಲಯ ಇರುವುದು ಸ್ವಾರಸ್ಯದ ಸಂಗತಿಯಾಗಿದೆ. 

ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ತಾಲೂಕಿನ ಸಾಲೂರು ಗ್ರಾಮದಲ್ಲಿರುವ ಶ್ರೀ ಆಂಜನೇಯ ಸ್ವಾಮಿ, ಭಕ್ತರ ಕಷ್ಟಕ್ಕೆ ನೆರವಾಗುವ ಆಪದ್ಭಾಂದವ ಎನ್ನುವ ಖ್ಯಾತಿ ಗಳಿಸಿದೆ. ಶಿಕಾರಿಪುರ-ಆನಂದಪುರ ಮುಖ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಈ ದೇವಾಲಯ ಪೂರ್ವಾಭಿಮುಖವಾಗಿದೆ. ದೇವಾಲಯಕ್ಕೆ ಪ್ರಾಚೀನ ಇತಿಹಾಸವಿದೆ. ಕೆಳದಿ ಅರಸು ಮನೆತನದ ಪ್ರಸಿದ್ಧ ರಾಜ ಶಿವಪ್ಪನಾಯಕನ ಸಾಮ್ರಾಜ್ಯ ಇಲ್ಲಿಯವರೆಗೂ ವಿಸ್ತರಿಸಿತ್ತು ಎಂಬ ಮಾತುಗಳಿವೆ. ಸುಂಕ ವಸೂಲಿ ಮತ್ತು ಆಡಳಿತದ ಭದ್ರತೆಗೆ ಶಿವಪ್ಪ ನಾಯಕನು ಹಲವು ಗ್ರಾಮಗಳಲ್ಲಿ ತನ್ನ ನಂಬಿಗಸ್ಥ ಕುಟುಂಬಸ್ಥರನ್ನು ನೇಮಿಸಿದ್ದನು. ಸಾಲೂರಿಗೆ ಹಿಂದೆ ಭದ್ರಗಿರಿನಗರ ಎಂಬ ಹೆಸರಿತ್ತು. ಊರಿನ ಬಾಗಿಲಿನಲ್ಲಿರುವ ಈ ಆಂಜನೇಯ ಗುಡಿಯನ್ನು ಶಿವಪ್ಪ ನಾಯಕ ಅಭಿವೃದ್ಧಿ ಪಡಿಸಿ, ನಿತ್ಯ ಪೂಜೆಗೆ ವ್ಯವಸ್ಥೆ ಕಲ್ಪಿಸಿದ್ದನು ಎನ್ನುತ್ತದೆ ಇತಿಹಾಸ. ಈ ಗ್ರಾಮದ ಮುಖ್ಯ ರಸ್ತೆಯ ಬದಿಗಳಲ್ಲಿ ಸಾಲಾಗಿ ಮಾವು, ಹುಣಸೆ, ಆಲ ಇತ್ಯಾದಿ ಮರಗಳನ್ನು ಬೆಳೆಸಲಾಗಿತ್ತು. ಸಾಲಾಗಿ ಮರಗಳಿರುವ ಊರು ಎಂಬ ಕಾರಣದಿಂದ ಸಾಲು ಮರದೂರು ಎಂಬ ಹೆಸರು ಬಂದು, ಆನಂತರ ಸಾಲೂರು ಎಂದಾಯಿತು. ಬಿದನೂರು ನಗರದ ದಾಳಿಯ ಸಂದರ್ಭದಲ್ಲಿ ಪರಕೀಯರ ದಾಳಿ ಈ ಗ್ರಾಮದ ವರೆಗೂ ತಟ್ಟಿತ್ತು. ಪರಕೀಯರ ದಾಳಿಯಿಂದ ದೇಗುಲ ಹಾಳಾಗಿದ್ದರಿಂದ ಮತ್ತು ಸುತ್ತಮುತ್ತಲ ಜನರ ವಲಸೆಯ ಕಾರಣದಿಂದ  ಹಲವು ವರ್ಷ ಪೂಜೆ ಪುನಸ್ಕಾರಗಳಿಲ್ಲದೆ ಉಳಿದಿತ್ತು. 

ಸಾಲೂರು  ಗ್ರಾಮದಲ್ಲಿ, ಕರ್ನಾಟಕದಲ್ಲಿಯೇ ಅಪರೂಪವೆನಿಸುವಂಥ ಪುರಾಣ ಪ್ರಸಿದ್ಧವಾದ ಪಂಚಲಿಂಗ ದೇವಾಲಯಗಳಿವೆ. ಶಿಕಾರಿಪುರ-ಆನಂದಪುರಂ ಮುಖ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಖಂಡುಗ ಶಿವಾಲಯ, ಪೂರ್ವ ದಿಕ್ಕಿನ ಗಡಿಭಾಗದಲ್ಲಿ ಭದ್ರೇಶ್ವರ ಶಿವಾಲಯ, ಪಶ್ಚಿಮ ದಿಕ್ಕಿನ ಗಡಿಭಾಗದಲ್ಲಿ ವಿಶ್ವೇಶ್ವರ ಶಿವಾಲಯ, ಹಿರೇಮಠದ ಮುಂಭಾಗದಲ್ಲಿ ಬ್ರಹೆ¾àಶ್ವರ, ಗ್ರಾಮವು ಮಧ್ಯಭಾಗದಲ್ಲಿ ರುದ್ರೇಶ್ವರ ಶಿವಾಲಯವೂ ಇದೆ. ಇಷ್ಟೇ ಅಲ್ಲದೆ, ಈ ಗ್ರಾಮದಲ್ಲಿ ವೀರಶೈವ ಲಿಂಗಾಯತ ಮತಕ್ಕೆ ಸೇರಿದ ಐದು ಗುರುಪರಂಪರೆ ಹೊಂದಿರುವ ಐದು (ಪಂಚ) ಮಠಗಳನೂ ಹೊಂದಿತ್ತು. ಅವುಗಳೆಂದರೆ ಹಿರೇಮಠ, ಆರಾಧ್ಯಮಠ, ಗಡ್ಲಮಠ, ಚಿಕ್ಕಮಠ ಮತ್ತು ಸಾವಿರ ಮಠ. ಆದರೆ ಈಗ ಅಸ್ತಿತ್ವದಲ್ಲಿರುವ ಮಠಗಳು ಹಿರೇಮಠ ಮತ್ತು ಆರಾಧ್ಯ ಮಠಗಳು ಮಾತ್ರ.

ಈ ಎಲ್ಲ ದೃಷ್ಟಿಯಿಂದ ನೋಡಿದರೆ, ಶಿವಾರಾಧನೆಯ ವಾತಾವರಣ ಹೊಂದಿರುವ ಈ ಗ್ರಾಮದ ಹೃದ್ಯಭಾಗದಲ್ಲಿ ಶ್ರೀ ಆಂಜನೇಯ ದೇವಾಲಯ ಇರುವುದು ಸ್ವಾರಸ್ಯ ಸಂಗತಿಯಾಗಿದೆ. 

ಈಗ ದೇವಾಲಯ ಇರುವ ಸ್ಥಳದಲ್ಲಿ ಸುಮಾರು 50 ವರ್ಷಗಳ ಹಿಂದೆ ಗರಡಿ ಮನೆ ಇತ್ತು. ಇದೇ ಗರಡಿಮನೆಯ ಆವರಣವನ್ನು ಸೇರಿಸಿ ಸರಕಾರಿ ಪ್ರಾಥಮಿಕ ಶಾಲೆಯನ್ನು ಆರಂಭಿಸಲಾಗಿತ್ತು.   ಶಾಲೆಯಲ್ಲಿ ನಡೆಯುವ ಪ್ರಮುಖ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ಈ ದೇವರಿಗೂ ಪೂಜೆ ಸಲ್ಲಿಸಲಾಗುತ್ತಿತ್ತು. ಸರಕಾರಿ ಪ್ರಾಥಮಿಕ ಶಾಲೆಗೆ ಪ್ರತ್ಯೇಕ ಕಟ್ಟಡ ನಿರ್ಮಾಣವಾದ ನಂತರ ಈ ಸ್ಥಳ ದೇವರ ಗುಡಿಯಾಗಿ ಬದಲಾಯಿತು.  2008ರಲ್ಲಿ ಈ ಸ್ಥಳದಲ್ಲಿ ಸರಕಾರದ ಅನುದಾನದಿಂದ ಸಮುದಾಯ ಭವನ ನಿರ್ಮಿಸಲಾಯಿತು. ಇದರಿಂದ ದೇವರ ಪೂಜೆ, ಉತ್ಸವಗಳಿಗೆ ಹೆಚ್ಚು ಅನುಕೂಲವಾಯಿತು. ದೇವರ ವಿಗ್ರಹ ಭಿನ್ನವಾದ ಕಾರಣ ಶಿಕಾರಿಪುರ ತಾಲೂಕಿನ ನೂಲಿಗೆರೆಯ ಶಿಲ್ಪಿಯೊಬ್ಬರಿಂದ ಮೂಲ ಮೂರ್ತಿಯ ಮಾದರಿಯ ಹೊಸ ವಿಗ್ರಹ ಕೆತ್ತಿಸಿ, ಪುನರ್‌ ಪ್ರತಿಷ್ಠಾಪನಾ ಮಹೋತ್ಸವ ನಡೆಸಲಾಯಿತು.

ಸಾಲೂರಿನ ಹನುಮನಿಗೆ ಶ್ರಾವಣ ಮಾಸದಲ್ಲಿ ನಿತ್ಯವೂ ಬೆಳಗ್ಗೆ ವಿಶೇಷ ಅಲಂಕಾರ, ಪೂಜೆ ನಡೆಯುತ್ತದೆ. ದಸರಾ ಸಂದರ್ಭದಲ್ಲಿ ಪಾಡ್ಯ ದಿಂದ ನವಮಿಯವರೆಗೆ ವಿಜೃಂಭಣೆಯ ಪೂಜೆ ಮತ್ತು ಕೊನೆಯ ದಿನ  ವಿಜಯದಶಮಿಯಂದು ಸೀಮೋಲ್ಲಂಘನ ಮತ್ತು ಪಲ್ಲಕ್ಕಿ ಉತ್ಸವ ನಡೆಸಲಾಗುತ್ತದೆ. ಎಲ್ಲಾ ಹಬ್ಬಗಳಂದು ಗ್ರಾಮದ ಭಕ್ತರು ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸುತ್ತಾರೆ. 

ಫೋಟೋ ಮತ್ತು ಲೇಖನ-ಎನ್‌.ಡಿ.ಹೆಗಡೆ ಆನಂದಪುರಂ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • "ಮನುಷ್ಯ ಚಿಂತೆ ಬಿಟ್ಟು, ನೆಮ್ಮದಿ ಕಾಣಲು ತಿಂಥಣಿಗೆ ಬರಬೇಕು' ಎಂಬ ಮಾತಿದೆ. ತಿಂಥಣಿ ಮೌನೇಶ್ವರನಿಗೆ ಜಾತಿ, ಧರ್ಮ ಮೀರಿದ ಭಕ್ತರಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ...

  • ಕರ್ನಾಟಕದ ವಾಸ್ತುಶಿಲ್ಪದ ಕೊಡುಗೆಯಲ್ಲಿ ಶೈವ ದೇಗುಲಗಳ ಪಾತ್ರ ಗಣನೀಯ. ಕದಂಬರ ಕಾಲದಿಂದಲೂ ಹಲವು ಶೈವ ಗುಡಿಗಳು ನಮ್ಮ ನಾಡಿನಲ್ಲಿ ನಿರ್ಮಾಣಗೊಂಡಿದ್ದು, ಅವುಗಳಲ್ಲಿ...

  • ಕುಪ್ಪಳಿಯಲ್ಲಿನ ಕುವೆಂಪು ಮನೆಯ ಒಳಕೋಣೆಯಲ್ಲಿ ಅಡಿಯಿಟ್ಟಾಗ ಸೆಳೆದದ್ದು "ಬಾಣಂತಿ ಕೋಣೆ' ಎಂಬ ಹಣೆಪಟ್ಟಿ ಹೊತ್ತ ಕೋಣೆ. ಕಬ್ಬಿಣದ ತೊಟ್ಟಿಲು, ಮರದ ತೊಟ್ಟಿಲು,...

  • ಬಹುತೇಕ ಭಾರತೀಯ ಸಂಸ್ಕೃತಿಗೆ ಹತ್ತಿರವಿರುವ ದೇಶ ಶ್ರೀಲಂಕಾ. ಈ ಸಾಂಸ್ಕೃತಿಕ ಬೆಸುಗೆಗೆ ಕಾರಣ, ರಾಮಾಯಣದ ಖಳನಾಯಕ ರಾವಣ. ರಾವಣನ ಆ ಸಾಮ್ರಾಜ್ಯ ಈಗ ಹೇಗಿದೆ ಎಂಬುದರ...

  • ಸಂಗಮೇಶ ಅವರು ಕಳೆದ 7 ವರ್ಷಗಳಿಂದ ಸ್ವರಕ್ತದಿಂದ ಚಿತ್ರ ಬಿಡಿಸುತ್ತಿದ್ದಾರೆ. ಇದುವರೆಗೆ 300 ಸಾಧಕರ ಚಿತ್ರವನ್ನು ನೆತ್ತರಿನ ಮೂಲಕವೇ ಚಿತ್ರಿಸಿರುವುದು ವಿಶೇಷ... ಕಲೆ-...

ಹೊಸ ಸೇರ್ಪಡೆ