ಲಾಂಗ್‌ಜಂಪ್‌ನಲ್ಲಿ ಸಂಶೀರ್‌ ಚಿನ್ನದ ವೀರ

24 ವರ್ಷಗಳ ಹಿಂದಿನ ದಾಖಲೆ ಅಳಿಸಿದ ಹಳ್ಳಿ ಹೈದ

Team Udayavani, Aug 3, 2019, 5:00 AM IST

z-3

ಅಂದು ಬೆರಗುಗಣ್ಣಿನಿಂದಲೇ ಕೋಟ್ಯಂತರ ಕನಸುಗಳು ಕಾಣುತ್ತಿದ್ದ ಆ ಬಾಲಕ. ಇಂದು ಅಥ್ಲೆಟಿಕ್ಸ್‌ನಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಸಾಧಕನಾಗಿದ್ದಾನೆ. ಆತ ಪುಟ್ಟ ಹಳ್ಳಿಯ ಹುಡುಗ. ಈಗ ಅಥ್ಲೆಟಿಕ್ಸ್‌ ಕ್ಷೇತ್ರದಲ್ಲಿ ಸಾಧನೆಯ ಮೂಲಕವೇ ತನ್ನೆಲ್ಲ ಕಷ್ಟಗಳಿಗೆ ಉತ್ತರ ಕಂಡುಕೊಂಡಿದ್ದಾನೆ. ಆತನ ಸಾಧನೆಯೇ ಒಂದಷ್ಟು ಯುವಕರಿಗೆ ಸ್ಫೂರ್ತಿಯಾಗಬಲ್ಲದು.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಜಯನಗರದ ಬಡ ಕುಟುಂಬದ ಪುಟ್ಟ ಮನೆಯ ನಿವಾಸಿ ಎಸ್‌.ಇ. ಸಂಶೀರ್‌ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಪದಕ ಗೆಲ್ಲಬೇಕು ಎಂದು ಪಣತೊಟ್ಟಿರುವ ಚಿನ್ನದ ಹುಡುಗ.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯ ಅಥ್ಲೆಟಿಕ್ಸ್‌ ಕೂಟದ ಲಾಂಗ್‌ಜಂಪ್‌ ಸ್ಪರ್ಧೆಯಲ್ಲಿ 24 ವರ್ಷಗಳ ಹಿಂದಿನ ದಾಖಲೆ ಅಳಿಸಿ ಹೊಸ ಕೂಟ ದಾಖಲೆ ಬರೆದು ಸುಳ್ಯದ ಕೀರ್ತಿಗೆ ಚಿನ್ನದ ಗರಿ ತೊಡಿಸಿದ ಈತ ಬಡತನದ ಬದುಕಿನಲ್ಲಿ ಪರಿಶ್ರಮಪಟ್ಟು ಸಾಧಕನಾದ ಕತೆಯೇ ರೋಚಕ.

ಪುಟ್ಟ ಮನೆಯ ಹುಡುಗ
ಎಸ್‌.ಎಂ. ಇಬ್ರಾಹಿಂ-ಆಯಿಷಾ ದಂಪತಿಯ ಎರಡನೇ ಪುತ್ರ ಸಂಶೀರ್‌ ಅವರ ಕುಟುಂಬಕ್ಕೆ ಜಯನಗರದಲ್ಲಿ 10 ಸೆಂಟ್ಸ್‌ ಜಾಗ, ಮನೆ ಬಿಟ್ಟರೆ ಬೇರೇನೂ ಇಲ್ಲ. ಬೆಂಗಳೂರಿನಲ್ಲಿ ಉದ್ಯೋಗಿ ಆಗಿರುವ ಅಣ್ಣ ಸಂಶುದ್ದೀನ್‌, ಕೆಲ ಕಾಲ ಅರಬ್‌ ದೇಶದಲ್ಲಿದ್ದ ತಂದೆಯ ಸಂಪಾದನೆ ಕುಟುಂಬಕ್ಕಿದ್ದ ದಾರಿ. ಸಂಶೀರ್‌ಗೆ ರೈಲ್ವೇಯಲ್ಲಿ ಉದ್ಯೋಗ ಸಿಕ್ಕಿದ ಬಳಿಕ ತಂದೆ ಇಬ್ರಾಹಿಂ ಊರಿಗೆ ಮರಳಿದ್ದಾರೆ.

ಹೈಸ್ಕೂಲ್‌ನಲ್ಲಿ ಆರಂಭ
ದುಗಲಡ್ಕ ಸರಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ಕ್ರೀಡಾ ಕ್ಷೇತ್ರಕ್ಕೆ ಕಾಲಿಟ್ಟ ಸಂಶೀರ್‌ ಉದ್ದಜಿಗಿತ, ತ್ರಿವಿಧ ಜಿಗಿತ, ಜಾವೆಲಿನ್‌ನಲ್ಲಿ ಆಸಕ್ತಿ ಹೊಂದಿದ್ದರು. ಆರಂಭದಲ್ಲಿ ಮಾವ ಯೂಸುಫ್‌ ಅವರ ಪ್ರೋತ್ಸಾಹ ಸಂಶೀರ್‌ಗೆ ಸ್ಫೂರ್ತಿ ನೀಡಿತ್ತು. ಪಿಯುಸಿಗೆ ಮೂಡುಬಿದಿರೆ ಆಳ್ವಾಸ್‌ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ಕೋಟಾದಡಿ ಸೇರ್ಪಡೆಗೊಂಡರು. ಪದವಿ ಮುಗಿಸಿ ಪ್ರಸ್ತುತ ಮುಂಬೈ ರೈಲ್ವೇಯಲ್ಲಿ ಉದ್ಯೋಗಿಯಾಗಿದ್ದಾರೆ. ರೈಲ್ವೆಯ ತಿರುವನಂತಪುರದ ಇಂಡಿಯನ್‌ ಅಥ್ಲೆಟಿಕ್ಸ್‌ ತರಬೇತಿ ಸಂಸ್ಥೆಯಲ್ಲಿ ಕಳೆದ 4 ವರ್ಷಗಳಿಂದ ಲಾಂಗ್‌ಜಂಪ್‌ನಲ್ಲಿ ಅಭ್ಯಾಸ ನಿರತರಾಗಿದ್ದು, ಹಲವು ಕೂಟಗಳಲ್ಲಿ ಕರ್ನಾಟಕ ಹಾಗೂ ಭಾರತವನ್ನು ಪ್ರತಿನಿಧಿಸಿದ್ದಾರೆ.

ಪದಕಗಳ ಸರಮಾಲೆ
ರಾಷ್ಟ್ರೀಯ ಸ್ಕೂಲ್‌ ಗೇಮ್‌ ಫೆಡರೇಶನ್‌ ಕ್ರೀಡಾಕೂಟ, ಮಂಗಳೂರು ವಿ.ವಿ. ಮಟ್ಟದ ಕ್ರೀಡಾಕೂಟ, ಆಲ್‌ ಇಂಡಿಯಾ ಅಂತರ್‌ ವಿ.ವಿ. ಕ್ರೀಡಾಕೂಟ, ನ್ಯಾಷನಲ್‌ ಓಪನ್‌ ಗೇಮ್ಸ್‌, 55ನೇ ಸೀನಿಯರ್‌ ಇಂಟರ್‌ಸ್ಟೇಚ್‌ ಕ್ರೀಡಾಕೂಟ, ದಿಲ್ಲಿ ಸೀನಿಯರ್‌ ಫೆಡರೇಶನ್‌ ಕಪ್‌, ತುರ್ಕ್‌ಮೆನಿಸ್ಥಾನ್‌ ಅಂತಾರಾಷ್ಟ್ರೀಯ ಚಾಂಪಿಯನ್‌ ಶಿಪ್‌, ಚೆನ್ನೈ ಸೀನಿಯರ್‌ ಒಪನ್‌ ಚಾಂಪಿಯನ್‌ಶಿಪ್‌, ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌, ಏಷ್ಯನ್‌ ಹೊರಾಂಗಣ ಗೇಮ್ಸ್‌… ಹೀಗೆ ಹತ್ತು ಹಲವು ಕ್ರೀಡಾಕೂಟದಲ್ಲಿ ಭಾಗಹಿಸಿರುವ ಸಂಶೀರ್‌ ಹಲವು ದಾಖಲೆಯೊಂದಿಗೆ ಪದಕ ಗೆದ್ದಿದ್ದಾರೆ.

24 ವರ್ಷದ ದಾಖಲೆ ಅಳಿಸಿದರು
ಬೆಂಗಳೂರಿನಲ್ಲಿ ಜು. 27-28ರಂದು ನಡೆದ ರಾಜ್ಯ ಅಥ್ಲೆಟಿಕ್ಸ್‌ನಲ್ಲಿ ಆಳ್ವಾಸ್‌ ಸಂಸ್ಥೆಯನ್ನು ಪ್ರತಿನಿಧಿಸಿದ್ದ ಸಂಶೀರ್‌ ಲಾಂಗ್‌ಜಂಪ್‌ ಫೈನಲ್‌ನ ಮೊದಲ ಹಂತದಲ್ಲಿ 7.91 ಮೀ. ದೂರ ಜಿಗಿದು ಹೊಸ ಕೂಟ ದಾಖಲೆ ನಿರ್ಮಿಸಿದ್ದಾರೆ. 1995ರಲ್ಲಿ ಸಿ. ಕುಂಜುಮೋನ್‌ ಹೆಸರಿನಲ್ಲಿದ್ದ 7.86 ಮೀ. ದಾಖಲೆಯನ್ನು ಮೀರಿ ಈ ಸಾಧನೆ ತೋರಿರುವುದು ವಿಶೇಷ.

ನನ್ನ ಕ್ರೀಡಾ ಸಾಧನೆಗೆ ಮಾವ, ತಂದೆ, ತಾಯಿ, ಅಣ್ಣ ಹಾಗೂ ಮೂಡುಬಿದಿರೆ ಆಳ್ವಾಸ್‌ ಶಿಕ್ಷಣ ಸಂಸ್ಥೆ ಕಾರಣ. ಬಡತನದ ಬದುಕಾಗಿದ್ದರೂ, ಇವರೆಲ್ಲರ ಪ್ರೋತ್ಸಾಹದಿಂದ ಈ ಸಾಧನೆ ಸಾಧ್ಯವಾಯಿತು’
– ಸಂಶೀರ್‌, ಅಥ್ಲೀಟ್‌

– ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.