Udayavni Special

ಈಕೆ ಭಾರತದ ಮೊದಲ ಮಹಿಳಾ ಬ್ಲೇಡ್‌ ರನ್ನರ್‌


Team Udayavani, Feb 23, 2019, 12:30 AM IST

20.jpg

ಹೆಣ್ಣು ಸಂಸಾರದ ಕಣ್ಣು. ಆಕೆ ಮನಸ್ಸು ಮಾಡಿದರೆ ಎಂತಹ ಕೆಲಸವನ್ನೂ ಮಾಡಬಲ್ಲಳು. ಇದಕ್ಕೆ ದೇಶದ ಮೊದಲ ಮಹಿಳಾ ಬ್ಲೇಡ್‌ ರನ್ನರ್‌ ಕಿರಣ್‌ ಕನೋಜಿಯಾ ಪ್ರತ್ಯಕ್ಷ ಉದಾಹರಣೆ. 

ಕಿಡಿಗೇಡಿಗಳ ಕೃತ್ಯಕ್ಕೆ ಕಾಲು ಕಳೆದುಕೊಂಡರೂ ಕೃತಕ ಕಾಲಿನಲ್ಲೇ ಬ್ಲೇಡ್‌ ರನ್ನರ್‌ ಆಗಿ ಗುರುತಿಸಿಕೊಂಡಿದ್ದು, ದೇಶ, ವಿದೇಶಗಳಲ್ಲಿ ಹೆಸರು ಮಾಡಿದ್ದು, ಕೊನೆಗೆ ಸೈಕ್ಲಿಂಗ್‌ನಲ್ಲಿಯೂ ಮಿಂಚಿದ್ದು ಕಿರಣ್‌ ಕನೋಜಿಯಾ ಸಾಹಸವೇ ಸರಿ. ಅಂತಹ ದಿಟ್ಟ ಸಾಧಕಿ ಮುಂದಿನ ದಿನಗಳಲ್ಲಿ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಕನಸು ಕಾಣುತ್ತಿದ್ದಾರೆ. ಅವರಿಗೆ ಯಶೋಗಾಥೆ ಮುಂದಿನ ಪೀಳಿಗೆಗೆ ಮಾದರಿಯಾಗಬಲ್ಲದು.

ಕಿರಣ್‌ ಕನೋಜಿಯಾ ಯಾರು?
ಕಿರಣ್‌, ಇನ್ಫೋಸಿಸ್‌ನ ಹೈದರಾಬಾದ್‌ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ. 2011ರ ಡಿಸೆಂಬರ್‌ 25 ರಂದು ಕಿರಣ್‌ಗೆ ಜನ್ಮದಿನದ ಸುದಿನವಾಗಿತ್ತು. ಹರಿಯಾಣದ ಫ‌ರೀದಾಬಾದ್‌ನಲ್ಲಿ ತಮ್ಮ ತಂದೆ-ತಾಯಿ ಜೊತೆ ಆಚರಿಸಬೇಕು ಎನ್ನುವುದು ಕಿರಣ್‌ ಆಸೆಯಾಗಿತ್ತು. ಇದಕ್ಕಾಗಿ ಡಿಸೆಂಬರ್‌ 24ರಂದು ಕಿರಣ್‌ ಹೈದರಾಬಾದ್‌ನಿಂದ ಫ‌ರೀದಾಬಾದ್‌ಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು, ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಮನೆಗೆ ಹೋಗುವ ಖುಷಿಯಲ್ಲಿ, ರೈಲಿನ ಕಿಟಕಿ ಬದಿಯಲ್ಲಿ ನೂರಾರು ಕನಸು ಕಾಣುತ್ತಾ ಕುಳಿತಿದ್ದ ಕಿರಣ್‌ಗೆ ಆಘಾತವೊಂದು ಕಾದಿತ್ತು. ಎಲ್ಲಿಂದಲೋ ಬಂದ ಇಬ್ಬರು ಕಳ್ಳರು ಇವರ ಮೇಲೆ ದಾಳಿ ನಡೆಸಿದರು. ಕಿರಣ್‌ ಕೈಯಲ್ಲಿದ್ದ ಬ್ಯಾಗ್‌ ದೋಚಲು ಮುಂದಾದರು. ಬ್ಯಾಗ್‌ ಕಸಿಯುವ ಭರದಲ್ಲಿ ಕಳ್ಳರು ಆಕೆಯನ್ನು ರೈಲಿನಿಂದ ಹೊರ ತಳ್ಳಿ ಬಿಟ್ಟರು. ಟ್ರ್ಯಾಕ್‌ ಮೇಲೆ ಬಿದ್ದ ಕಿರಣ್‌ ಅವರ ಎಡ ಕಾಲಿನ ಮೇಲೆ ರೈಲು ಹಾದು ಹೋಯಿತು. ಅವರ ಕಾಲು ಛಿದ್ರವಾಯಿತು.  

ನೆರವಿಗೆ ಬಂದ ಮೋಹನ್‌ ಗಾಂಧಿ
ಅದುವರೆಗೂ ಜಿಂಕೆಯಂತೆ ನೆಗೆಯುತ್ತಾ, ಹಕ್ಕಿಯಂತೆ ಕನಸಿನ ಆಗಸದಲ್ಲಿ ಹಾರುತ್ತಿದ್ದ ಕಿರಣ್‌ ದುರಂತದಿಂದ ಮಾನಸಿಕವಾಗಿ ಕುಗ್ಗಲಿಲ್ಲ. ಕೃತಕ ಕಾಲು ಜೋಡಿಸಿಕೊಂಡು ಮತ್ತೆ ತನ್ನ ಬದುಕಿನ ಬಂಡಿಯನ್ನು ಸಾಗಿಸಲಾರಂಭಿಸಿದರು. ಹೀಗಿರುವಾಗಲೇ ಹೈದ್ರಾಬಾದ್‌ನ ದಕ್ಷಿಣ್‌ ಪುನರ್ವಸತಿ ಕೇಂದ್ರ, (ಡಿಆಸಿರ್‌) ಕಿರಣ್‌ ನೆರವಿಗೆ ಬಂತು. ಆಕೆಯಲ್ಲಿ ಹೊಸ ಚೈತನ್ಯ ಮೂಡಿಸಿತು. ಡಿಆಸಿರ್‌ ಕೇಂದ್ರದ ಸಲಹೆಗಾರ ಮೋಹನ್‌ ಗಾಂಧಿ ಬ್ಲೇಡ್‌ ಆಕಾರದ, ಓಡಲು ಅನುಕೂಲವಾಗುವ ಕೃತಕ ಕಾಲನ್ನು ಕಿರಣ್‌ ಕಾಲಿಗೆ ಅಳವಡಿಸಿದರು. ಕಾಲು ಕಳೆದುಕೊಂಡ ಪುರುಷ ಓಟಗಾರರ ಗುಂಪಿನಲ್ಲಿ ಕಿರಣ್‌ಗೂ ಸ್ಥಾನ ಕಲ್ಪಿಸಿದರು.

ದೇಶದ ಮೊದಲ ಬ್ಲೇಡ್‌ ರನ್ನರ್‌, ಬ್ಲೇಡ್‌ ಸೈಕ್ಲರ್‌
ಕಿರಣ್‌ರಲ್ಲಿ ಬ್ಲೇಡ್‌ ರನ್ನಿಂಗ್‌ ಬಗ್ಗೆ ಆಸಕ್ತಿ ಮೂಡಿಸಿದರು. ಆದರೆ ಕಿರಣ್‌ ಹಳೆಯ ಕೃತಕ ಕಾಲಿಗೆ ಹೋಲಿಸಿದ್ರೆ, ಈ ಬ್ಲೇಡ್‌ ಆಕಾರದ ಕಾಲು ತುಂಬಾ ಹಗುರವಾಗಿತ್ತು. ಇದು ಕಿರಣ್‌ ದೇಹಕ್ಕೆ ಸರಿಯಾಗಿ ಹೊಂದಿಕೆ ಆಗುತ್ತಿರಲಿಲ್ಲ. ಆದರೆ ಮೋಹನ್‌ ಸಹಾಯದಿಂದ ನಿಧಾನವಾಗಿ ಕಿರಣ್‌ ಓಡಲು ಆರಂಭಿಸಿದರು. ಕಿರಣ್‌ಗೆ ಆರಂಭದಲ್ಲಿ ಭಾರಿ ಕಷ್ಟ ಅನ್ನಿಸತೊಡಗಿತು. ಆದರೆ ಬರಬರುತ್ತಾ ಆಕೆಯ ಮನಸ್ಸಿನಲ್ಲಿ ನಾನು ಓಡಬÇÉೆ ಅನ್ನೋ ವಿಶ್ವಾಸ ಬೆಳೆಯುತ್ತಾ ಸಾಗಿತು. ಅಲ್ಲಿಂದ ಕಿರಣ್‌ ಹಿಂತಿರುಗಿ ನೋಡಲೇ ಇಲ್ಲ. ಕೇವಲ ಮೂರು ವರ್ಷದಲ್ಲಿ ಭಾರತದ ಮೊದಲ ಮಹಿಳಾ ಬ್ಲೇಡ್‌ರನ್ನರ್‌ ಆಗಿ ರೂಪುಗೊಂಡರು. ಜತೆಗೆ ಬ್ಲೇಡ್‌ ಸೈಕ್ಲರ್‌ ಆಗಿಯೂ ಸಾಕಷ್ಟು ರೇಸ್‌, ಜಾಥಾಗಳಲ್ಲಿ ಭಾಗವಹಿಸಿ ಗಮನ ಸೆಳೆದರು. 

ಕಿರಣ್‌ ಸಾಧನೆ ಹಾದಿ
ಹೈದರಾಬಾದ್‌ನಲ್ಲಿ 2013ರ ಮಾರ್ಚ್‌ನಲ್ಲಿ ಮಹಿಳಾ ದಿನದಂದು ನಡೆದ  ಏರ್‌ಟೆಲ್‌ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದರು. ಮೊದಮೊದಲು ಕಾಲು ಹಾಗೂ ಬ್ಲೇಡ್‌ ನಡುವಿನ ಒತ್ತಡದಿಂದ ತುಂಬಾ ನೋವು ತಿನ್ನುತ್ತಿದ್ದರಂತೆ ಕಿರಣ್‌. ಕೆಲವು ಸಲ ಅಭ್ಯಾಸ ನಡೆಸುವ ವೇಳೆ ಕಾಲಿನಿಂದ ರಕ್ತ ಬಂದ ಉದಾಹರಣೆ ಕೂಡ ಇದೆ. ಆ ನೋವಿನಲ್ಲಿ ಒಂದು ಹೆಜ್ಜೆ ಮುಂದೆ ಇಡೋದು ಕಷ್ಟವಾಗಿದ್ದರೂ, ಪ್ರಥಮ ಹಾಫ್ ಮ್ಯಾರಾಥಾನ್‌ನಲ್ಲಿ ಛಲ ಬಿಡದೆ 3 ಗಂಟೆ 30 ನಿಮಿಷದಲ್ಲಿ ಗುರಿ ಮುಟ್ಟಿ ಮೊದಲ ಪದಕಕ್ಕೆ ಮುತ್ತಿಟ್ಟರು. ಎರಡನೇ ಹಾಫ್ ಮ್ಯಾರಥಾನ್‌ನಲ್ಲೂ ತುಂಬಾ ನೋವಿದ್ದರೂ ಸಹ, ಮೊದಲ ಮಾರಥಾನ್‌ಗಿಂತ ಕಡಿಮೆ ಸಮಯ, 2 ಗಂಟೆ 58 ನಿಮಿಷದಲ್ಲಿ ಗುರಿಮುಟ್ಟಿ ಪದಕ ಗಳಿಸಿದರು. ಈಗ ಅದೇ ಅಂತರದ ಮ್ಯಾರಾಥಾನ್‌ನನ್ನು ಕೇವಲ 2 ರಿಂದ ಮೂರು ನಿಮಿಷದಲ್ಲಿ ಓಡಿ ಮುಗಿಸುತ್ತಿಸುವ ಸಾಮರ್ಥ್ಯ ಹೊಂದಿದ್ದಾರೆ ಕಿರಣ್‌, ಹಲವು ಮ್ಯಾರಥಾನ್‌ನಲ್ಲಿ ಪದಕ ಗಳಿಸಿರುವ ಕಿರಣ್‌ ಅವರ ಮುಂದಿನ ಗುರಿ ಪ್ಯಾರಾಲಿಂಪಿಕ್ಸ್‌. 

ಕಿರಣ್‌ ಭಾಗವಹಿಸಿರುವ ಕ್ರೀಡಾಕೂಟಗಳು
5ಓ- ಮಹಿಳಾ ದಿನದಂದು ಸೈಕ್ಲಿಂಗ್‌
75 ಕಿ.ಮೀ.- ಗಚ್ಚಿಬೌಲಿನಿಂದ ವಿಕಾರಾಬಾದ್‌ಗೆ ಸೈಕ್ಲಿಂಗ್‌
25ಕೆ -ಹೈದರಾಬಾದ್‌ ಸೈಕಲ್‌ ಟು ವರ್ಕ್‌ ಕ್ಯಾಂಪೇನ್‌
5ಕೆ – ಏರ್‌ಟೆಲ್‌ ಹೈದರಾಬಾದ್‌ ಮ್ಯಾರಥಾನ್‌
5ಕೆ – ವಿಪ್ರೋ ಸ್ಪಿರಿಟ್‌ 
5ಕೆ – ವೃಕ್ಷ ಉಳಿಸಿ ಆಂದೋಲನ
800 ಮೀ. ಓಟ- ಹೈದರಾಬಾದ್‌ ಕಾರ್ಪೊರೇಟ್‌ ಒಲಿಂಪಿಕ್ಸ್‌ 
      ಚೆನ್ನೈ ಮ್ಯಾರಥಾನ್‌ 10ಕೆ

ಧನಂಜಯ ಆರ್‌, ಮಧು 

ಟಾಪ್ ನ್ಯೂಸ್

ಪೊಲೀಸರ ತ್ಯಾಗ, ಬಲಿದಾನ ಸದಾ ಅವಿಸ್ಮರಣೀಯ :  ಜಿಲ್ಲಾಧಿಕಾರಿ ಕೂರ್ಮಾರಾವ್‌

ಪೊಲೀಸರ ತ್ಯಾಗ, ಬಲಿದಾನ ಸದಾ ಅವಿಸ್ಮರಣೀಯ :  ಜಿಲ್ಲಾಧಿಕಾರಿ ಕೂರ್ಮಾರಾವ್‌

1-www

ಲ್ಯಾಪ್‌ಟಾಪ್‌ಗಳಲ್ಲಿ ಅಡಗಿಸಿಟ್ಟಿದ್ದ 2.19 ಕೋಟಿ ಮೌಲ್ಯದ ಚಿನ್ನ ವಶ !

ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ನ.8ರಂದು ರಾಷ್ಟಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ

ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ನ.8ರಂದು ರಾಷ್ಟಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ

ಕೋವಿಡ್ : ರಾಜ್ಯದಲ್ಲಿಂದು 365 ಹೊಸ ಪ್ರಕರಣಗಳು ಪತ್ತೆ | 443 ಸೋಂಕಿತರು ಗುಣಮುಖ

ಕೋವಿಡ್ : ರಾಜ್ಯದಲ್ಲಿಂದು 365 ಹೊಸ ಪ್ರಕರಣಗಳು ಪತ್ತೆ | 443 ಸೋಂಕಿತರು ಗುಣಮುಖ

jala

ಉತ್ತರಾಖಂಡದಲ್ಲಿ ಜಲಪ್ರಳಯ : 64 ಮಂದಿ ಬಲಿ, 7,000 ಕೋಟಿ ರೂ ನಷ್ಟ

nirani

ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ, ಉದ್ಯೋಗಗಳ ಸೃಷ್ಟಿ: ನಿರಾಣಿ ವಿಶ್ವಾಸ

28

ವಿಪಕ್ಷಗಳ ಟೀಕೆಗಳಿಗೆ ಲಸಿಕೆ ಮೂಲಕ ಉತ್ತರ ನೀಡಿದ್ದೇವೆ: ಕಟೀಲ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

udayavani youtube

ಶ್ರೀರಂಗಪಟ್ಟಣ ಬಾರಿ ಮಳೆಗೆ ಕೊಚ್ಚಿ ಹೋದ ರೈತರ ಬದುಕು

udayavani youtube

ಅಬ್ಬಾ ಬದುಕಿದೆ ಬಡ ಜೀವ ! ಚಿರತೆ ಬಾಯಿಯಿಂದ ತಪ್ಪಿಸಿಕೊಂಡ ಶ್ವಾನದ ಕಥೆ

ಹೊಸ ಸೇರ್ಪಡೆ

ಪೊಲೀಸರ ತ್ಯಾಗ, ಬಲಿದಾನ ಸದಾ ಅವಿಸ್ಮರಣೀಯ :  ಜಿಲ್ಲಾಧಿಕಾರಿ ಕೂರ್ಮಾರಾವ್‌

ಪೊಲೀಸರ ತ್ಯಾಗ, ಬಲಿದಾನ ಸದಾ ಅವಿಸ್ಮರಣೀಯ :  ಜಿಲ್ಲಾಧಿಕಾರಿ ಕೂರ್ಮಾರಾವ್‌

sirsi news

ಅಕ್ರಮ ಗೋ ಹತ್ಯೆ ಆರೋಪ : ಬಂಧನ

1-www

ಲ್ಯಾಪ್‌ಟಾಪ್‌ಗಳಲ್ಲಿ ಅಡಗಿಸಿಟ್ಟಿದ್ದ 2.19 ಕೋಟಿ ಮೌಲ್ಯದ ಚಿನ್ನ ವಶ !

ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ನ.8ರಂದು ರಾಷ್ಟಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ

ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ನ.8ರಂದು ರಾಷ್ಟಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ

ಕೋವಿಡ್ : ರಾಜ್ಯದಲ್ಲಿಂದು 365 ಹೊಸ ಪ್ರಕರಣಗಳು ಪತ್ತೆ | 443 ಸೋಂಕಿತರು ಗುಣಮುಖ

ಕೋವಿಡ್ : ರಾಜ್ಯದಲ್ಲಿಂದು 365 ಹೊಸ ಪ್ರಕರಣಗಳು ಪತ್ತೆ | 443 ಸೋಂಕಿತರು ಗುಣಮುಖ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.