ಸಾಧನೆಯ ಮಹತ್ವ

Team Udayavani, Dec 1, 2018, 9:45 AM IST

ಸರ್ವಸಾಧಾರಣ ಜನರ ಜೀವನದಲ್ಲಿ ಸುಖವು ಸರಾಸರಿ ಶೇ.25 ರಷ್ಟು ಮತ್ತು ದುಃಖವು ಶೇ.75 ರಷ್ಟು ಇರುತ್ತದೆ. ದೇಹದಲ್ಲಿ ಪ್ರಾಣ ಇರುವವರೆಗೆ ಪ್ರತಿಯೊಂದು ಜೀವವೂ ಹೆಚ್ಚೆಚ್ಚು ಸುಖವನ್ನು ಪ್ರಾಪ್ತಿ ಮಾಡಿಕೊಳ್ಳಲು ಪ್ರಯತ್ನಿಸುತ್ತದೆ. ಸರ್ವೋಚ್ಚ ಮತ್ತು ಚಿರಕಾಲ ಉಳಿಯುವ ಸುಖಕ್ಕೆ ಆನಂದ ಎನ್ನುತ್ತಾರೆ. ಸುಖ ಸಿಗಬೇಕೆಂದು ಕೆಲವರು ವ್ಯವಹಾರ ಮಾಡುತ್ತಾರೆ, ಕೆಲವರು ಮದುವೆ ಮಾಡಿಕೊಳ್ಳುತ್ತಾರೆ, ಇನ್ನು ಕೆಲವರು ಮನೆಗಳನ್ನು ಕಟ್ಟುತ್ತಾರೆ ಇತ್ಯಾದಿ; ಆದರೆ ಇವೆಲ್ಲವುಗಳ ಪ್ರಾಪ್ತಿಯಾದರೂ ಅವರು ನಿಜವಾದ ಅರ್ಥದಲ್ಲಿ ಸುಖೀಗಳಾಗುವುದಿಲ್ಲ. ಏಕೆಂದರೆ, ಇವುಗಳಲ್ಲಿನ ಯಾವುದೇ ವಸ್ತುವಿನ ಗುಣಧರ್ಮವು “ಆನಂದ’ವಾಗಿಲ್ಲ; ಆದುದರಿಂದ, ಇವುಗಳಿಂದ ಆನಂದ ಪ್ರಾಪ್ತಿಯಾಗಲು ಸಾಧ್ಯವೇ ಇಲ್ಲ. ಈ ಜಗತ್ತಿನಲ್ಲಿ ಕೇವಲ ಈಶ್ವರನೇ ಆನಂದಮಯವಾಗಿದ್ದಾನೆ; ಆದುದರಿಂದ ಈಶ್ವರಪ್ರಾಪ್ತಿಗಾಗಿ ಸತತ ಪ್ರಯತ್ನ ಮಾಡುವುದೇ ಆನಂದಪ್ರಾಪ್ತಿಯ ಮಾರ್ಗವಾಗಿದೆ.

 ಅರುಣ್‌ ಹೆಚ್‌.ವಿ
(ಆಧಾರ : ಸನಾತನ ಸಂಸ್ಥೆಯ ಗ್ರಂಥ “ಅಧ್ಯಾತ್ಮದ ಪ್ರಾಸ್ತಾವಿಕ ವಿವೇಚನೆ’)


ಈ ವಿಭಾಗದಿಂದ ಇನ್ನಷ್ಟು

  • ಶ್ರೀ ಮಹಾವಿಷ್ಣುವಿನ ದಶಾವತಾರಗಳಲ್ಲಿ ಕೃಷ್ಣಾವತಾರಕ್ಕೆ ವಿಶಿಷ್ಟ ಮಹಣ್ತೀವಿದೆ. ಕೃಷ್ಣಾವತಾರಕ್ಕೆ ಹೋಲಿಸಿದರೆ ಇನ್ನಿತರ ಅವತಾರಗಳಲ್ಲಿ ದೇವರು ಸಾಮಾನ್ಯ...

  • ಎದೆ, ಹಣೆ, ಕಣ್ಣು, ಮನಸ್ಸು, ಮಾತು, ಕೈಗಳು ಪದಗಳು ಮತ್ತು ಮೊಣಕಾಲುಗಳನ್ನು ನೆಲಕ್ಕೆ ತಾಗಿಸಿ ನೆಲದಲ್ಲಿ ಉದ್ದಂಡ ನಮಸ್ಕಾರ ಮಾಡುವುದಕ್ಕೆ ಸಾಷ್ಟಾಂಗ ನಮಸ್ಕಾರ ಎನ್ನುತ್ತಾರೆ....

  • ಆಡಂಬರವಿಲ್ಲದ, ಶುದ್ದವಾದ ಭಕ್ತಿ ನಮ್ಮೊಳಗೆ ಹುಟ್ಟಬೇಕು. ಯಜ್ಞಮಾಡಿಯೇ ದೇವರನ್ನು ಸಂಪ್ರೀತಿಗೊಳಿಸುತ್ತೇನೆ ಎಂಬುದು ನಮ್ಮೊಳಗಿನ ಅಹಂ ಅಷ್ಟೆ. ಯಜ್ಞದಲ್ಲಿ...

  • ರಾಮಾಯಣದಲ್ಲಿ ಶ್ರೀರಾಮಚಂದ್ರ ಭರತನಿಗೆ ರಾಜ್ಯಭಾರವನ್ನು ಒಪ್ಪಿಸಿ ಹದಿನಾಲ್ಕು ಕಿವಿಮಾತನ್ನು ಹೇಳುತ್ತಾನೆ. ಆ ಹದಿನಾಲ್ಕು ಕಿವಿಮಾತುಗಳು ಇವತ್ತಿಗೂ ಪ್ರಸ್ತುತ....

  • ಅರಿ ಎಂದರೆ ಶತ್ರು ಎಂದರ್ಥ.ಈ ಆರು ವಿಧದ ಮನಸ್ಸಿನ ಭಾವಗಳು ನಮ್ಮ ಬದುಕಿಗೆ ಶತ್ರುವಾಗಿರುವುದರಿಂದ ಇವನ್ನು ಅರಿಷಡ್‌ ವರ್ಗ ಅಂದರೆ ಆರು ವೈರಿಗಳು ಎಂದು ಪರಿಗಣಿಸಲಾಗಿದೆ....

ಹೊಸ ಸೇರ್ಪಡೆ