ಅವಮಾನ, ಟೀಕೆಗೆ ಸ್ಮಿತ್‌ ಬ್ಯಾಟಿಂಗ್‌ ಉತ್ತರ

Team Udayavani, Jan 25, 2020, 6:00 AM IST

ಚೆಂಡು ವಿರೂಪದಂತಹ ಪ್ರಕರಣದ ಬಳಿಕ ಅಪಮಾನ, ಅ ಪನಿಂದನೆಗಳಿಗೆ ಒಳಗಾಗಿದ್ದ ಸ್ಟೀವ್‌ ಸ್ಮಿತ್‌ ಎಲ್ಲವನ್ನೂ ಮರೆತು ಈಗ ಸಹಜ ಸ್ಥಿತಿಗೆ ಮರಳಿದ್ದಾರೆ, ಭಾರತದ ವಿರುದ್ಧ ಪ್ರವಾಸಿ ಆಸ್ಟ್ರೇಲಿಯ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1ರಿಂದ ಸೋತಿರಬಹುದು, ಆದರೆ ಬ್ಯಾಟಿಂಗ್‌ನಲ್ಲಿ ಸ್ಟೀವ್‌ ಸ್ಮಿತ್‌ ಮೆರೆದಿರುವ ಪರಾಕ್ರಮ ನಿಜಕ್ಕೂ ಶ್ಲಾಘನೀಯ.

ಎರಡನೇ ಏಕದಿನ ಪಂದ್ಯದಲ್ಲಿ ಸ್ಟೀವ್‌ ಸ್ಮಿತ್‌ 98 ರನ್‌ ಸಿಡಿಸಿದ್ದರು. 102 ಎಸೆತದಲ್ಲಿ 9 ಬೌಂಡರಿ, 1 ಸಿಕ್ಸರ್‌ ಚಚ್ಚಿ ಗಮನ ಸೆಳೆದಿದ್ದರು. ಕೇವಲ 2 ರನ್‌ನಿಂದ ಶತಕ ವಂಚಿತರಾಗಿದ್ದರು. ಮೂರನೇ ಪಂದ್ಯದಲ್ಲೂ ಸ್ಟೀವ್‌ ಸ್ಮಿತ್‌ ಅಬ್ಬರದ ಬ್ಯಾಟಿಂಗ್‌ ನಡೆಸಿದ್ದರು. 132 ಎಸೆತ ಎದುರಿಸಿದ್ದ ಸ್ಮಿತ್‌ 14 ಬೌಂಡರಿ, 1 ಸಿಕ್ಸರ್‌ನಿಂದ 131 ರನ್‌ ಬಾರಿಸಿ ಆಸೀಸ್‌ ಮೊತ್ತವನ್ನು 280 ರನ್‌ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.

ಏಕದಿನ ಕ್ರಿಕೆಟ್‌ನಲ್ಲಿ ಸ್ಮಿತ್‌ ಒಟ್ಟಾರೆ 121 ಪಂದ್ಯವನ್ನಾಡಿದ್ದಾರೆ. ಒಟ್ಟು 4039 ರನ್‌ಗಳಿಸಿದ್ದಾರೆ. 9 ಶತಕ, 24 ಅರ್ಧಶತಕ ಒಳಗೊಂಡಿದೆ. 164 ರನ್‌ ವೈಯಕ್ತಿಕ ಶ್ರೇಷ್ಠ ರನ್‌ ಆಗಿದೆ. 73 ಟೆಸ್ಟ್‌ ಪಂದ್ಯ ಆಡಿದ್ದು ಒಟ್ಟು 7227 ರನ್‌ ಬಾರಿಸಿದ್ದಾರೆ. 26 ಶತಕ, 29 ಅರ್ಧಶತಕ ಒಳಗೊಂಡಿದೆ. 36 ಟಿ20 ಪಂದ್ಯದಲ್ಲೂ ದೇಶ ಪ್ರತಿನಿಧಿಸಿದ್ದಾರೆ. ಒಟ್ಟು 577 ರನ್‌ಗಳಿಸಿದ್ದಾರೆ. 4 ಅರ್ಧಶತಕ ಬಾರಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಕರಾವಳಿಯ ಕಂಬಳದ ಕಹಳೆ ಜಗದಗಲ ಮೊಳಗಿದೆ. ಕಂಬಳ ಓಟಗಾರನಿಗೆ ಬಹುಪರಾಕ್‌ ಸಿಗುತ್ತಲೇ ಇದೆ. ರಾಜ್ಯಕ್ರೀಡಾಕೂಟದಲ್ಲೂ ಕಂಬಳ ಪ್ರವೇಶಿಸುವ ಮಾತುಗಳು ಕೇಳಿಬರುತ್ತಿವೆ....

  • ಇದು ಬಳ್ಳಾರಿಯ ಬಾಂಬಿ ಕಾಲೋನಿ ಎಂಬ ನತದೃಷ್ಟ ಗ್ರಾಮದ ಕತೆ. 10 ವರ್ಷಗಳ ಹಿಂದೆ ಈ ಊರು ಜನರಿಂದ ತುಂಬಿಕೊಂಡಿತ್ತು. ಶಾಲೆಯಲ್ಲಿ ಮಕ್ಕಳಿದ್ದರು. ಮನೆ ಮುಂದೆ ನಿತ್ಯವೂ...

  • ಕಾಡಿನಲ್ಲಿ ಪ್ರಾಣಿಗಳ ಮಾಯಕ ಚಿತ್ರಲೋಕ ಸೃಷ್ಟಿಸಿ, ಪ್ರಾಣಿಗಳು ಮಾತ್ರವೇ ಅಲ್ಲ, ಮನುಷ್ಯರ ಕಣ್ಣುಗಳಿಗೂ ಮೋಸ ಮಾಡುವ ಕಲಾ ನಿಪುಣ ನಾಗರಾಜ್‌. ಇವರು ಬಿಡಿಸಿದ ಚಿತ್ರಗಳಿಗೆ,...

  • ರಾವಣ, ಸೀತೆಯನ್ನು ಅಪಹರಿಸಿ, ಲಂಕೆಗೆ ಕರೆತಂದಿದ್ದಾನೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ರಾಮ ಬಳಗದಲ್ಲಿ ಮುಂದಿನ ಪ್ರಶ್ನೆ ಎದ್ದು ಕುಳಿತಿತ್ತು: ಲಂಕೆಗೆ ಹೋಗುವುದು...

  • ಈಶ್ವರನು ಶನಿಕಾಟದಿಂದ ಮುಕ್ತನಾದ ಸ್ಥಳ ಮತ್ತು ಶ್ರೀರಾಮನು ಮಾರೀಚ ಮೃಗವಧೆ ಮಾಡಿದ ಸ್ಥಳ ಎಂಬುದಾಗಿ ಸ್ಥಳಪುರಾಣವನ್ನು ಹೊಂದಿ, ನಾಡಿನ ಮೂಲೆಮೂಲೆಯಿಂದ ಭಕ್ತರನ್ನು...

ಹೊಸ ಸೇರ್ಪಡೆ