ಭಗವಚ್ಚಿಂತನೆಗೆ ನಾಲ್ಕು ಉಪಾಯಗಳು

Team Udayavani, Aug 31, 2019, 5:00 AM IST

ಪ್ರತಿ ದಿವಸವೂ ಬೆಳಗ್ಗೆ ಧ್ಯಾನ, ಜಪ, ಸ್ತೋತ್ರ, ಪೂಜೆ ಈ ನಾಲ್ಕರ ಪೈಕಿ ಒಂದನ್ನಾದರೂ ಮಾಡಬೇಕು. ಧ್ಯಾನವೆಂದರೆ, ಏಕಾಗ್ರತೆಯಿಂದ ದೇವರನ್ನು ಗಮನಿಸುವುದು. ನಮ್ಮ ಶರೀರದ ಒಳಗೇ ಇರುವ ದೇವರನ್ನು ಗಮನಿಸುವುದು. ಜಪವು, ಮಂತ್ರದ ಮೂಲಕ ದೇವರನ್ನು ಗಮನಿಸುವ ಕೆಲಸವನ್ನು ಮಾಡುತ್ತದೆ.

ಮಂತ್ರ ಎಂದರೆ, ಭಗವಂತನನ್ನು ನೆನಪಿಸುವ ಶಬ್ದ. ಶಬ್ದದ ಸ್ವಭಾವವೇನೆಂದರೆ, ಅದರ ಅರ್ಥದ ಕಡೆ ನಮ್ಮ ಗಮನವನ್ನು ಸೆಳೆದೊಯ್ಯುತ್ತದೆ. ಹಾಗೆ ದೇವರ ಶಬ್ದವನ್ನು, ದೇವರ ನಾಮವನ್ನು ಮತ್ತೆ ಮತ್ತೆ ಹೇಳಿಕೊಳ್ಳುವುದರ ಮೂಲಕ ಮನಸ್ಸನ್ನು ದೇವರತ್ತ ಕಳುಹಿಸಬೇಕು. ಸ್ತೋತ್ರ ಎಂದರೆ ಭಕ್ತಿಸಾಹಿತ್ಯದ ಮೂಲಕ ದೇವರ ಚಿಂತನೆ. ಆರಂಭದ ಸಾಧಕನಿಗೆ ಮನಸ್ಸು ತುಂಬಾ ಚಂಚಲವಾಗಿರುವುದರಿಂದ ಧ್ಯಾನವು ಸಾಧ್ಯವೇ ಇಲ್ಲ.

ಎಷ್ಟೋ ಸಲ, ಜಪವೂ ಆರಂಭದ ಸಾಧಕನಿಗೆ ಸಾಧ್ಯವಾಗುವುದಿಲ್ಲ. ಏಕೆಂದರೆ, ಅವರಿಗೆ ದೀರ್ಘ‌ಕಾಲ ಕುಳಿತುಕೊಳ್ಳಲೂ ಸಾಧ್ಯವಾಗುವುದಿಲ್ಲ. ಸೊಂಟನೋವು, ಮಂಡಿನೋವು, ನಿದ್ರೆ ಮೊದಲಾದ ವಿಘ್ನಗಳು ಬರುತ್ತವೆ. ಆರಂಭದ ಸಾಧಕನಿಗೆ ಸುಲಭವಾದ ಸಾಧನವೆಂದರೆ ಸ್ತೋತ್ರ, ಭಜನೆ. ಭಕ್ತಿಯನ್ನು ಉದ್ದೀಪನಗೊಳಿಸುವ ರಾಗಸಂಯೋಜನೆ ಮಾಡಿ ಹಾಡಿದರೆ ಬಹಳ ಉತ್ತಮವಾಗಿ, ಮನಸ್ಸು ಬೇಗ ದೇವರಲ್ಲಿ ಏಕಾಗ್ರಗೊಳ್ಳುತ್ತದೆ.

ಅಂತೆಯೇ ದೇವರಲ್ಲಿ ಮನಸ್ಸನ್ನು ಇಡಲು ಪೂಜೆಯು ಎಲ್ಲಕ್ಕಿಂತಲೂ ಸುಲಭವಾದ ಸಾಧನ. ಏಕೆಂದರೆ, ಪೂಜೆಯಲ್ಲಿ ಅನೇಕ ಅನುಕೂಲಗಳಿವೆ. ಪೂಜೆಯ ವೇಳೆ ಒಂದು ಪ್ರತ್ಯೇಕವಾದ ಸ್ಥಳದಲ್ಲಿ ಕುಳಿತುಕೊಳ್ಳುತ್ತೇವೆ. ಎದುರಿಗೆ ದೇವರ ಚಿತ್ರ ಅಥವಾ ಮೂರ್ತಿ ಇರುತ್ತದೆ. ಕಣ್ಣುಗಳು ಆ ಮೂರ್ತಿಯನ್ನು ಅಥವಾ ಚಿತ್ರವನ್ನು ನೋಡುತ್ತಿರುತ್ತವೆ. ಕೈಗಳು ಪೂಜೆ ಮಾಡುತ್ತಿರುತ್ತವೆ. ಅಂದರೆ, ಹೂವು ಮೊದಲಾದವುಗಳನ್ನು ಸಮರ್ಪಣೆ ಮಾಡುತ್ತಿರುತ್ತವೆ.

ಹೀಗೆ ಕುಳಿತಿರುವ ಸ್ಥಳ, ನೋಡುತ್ತಿರುವ ಮೂರ್ತಿ, ಕೈಗಳಿಂದ ಪೂಜೆ, ಬಾಯಿಂದ ಮಂತ್ರ ಅಥವಾ ಸ್ತೋತ್ರ ಪಠನ- ಇವೆಲ್ಲವೂ ಮನಸ್ಸಿಗೆ ಸುಲಭವಾಗಿ ದೇವರ ಕಡೆ ಹೋಗಲು ಅನುಕೂಲಮಾಡಿಕೊಡುತ್ತವೆ. ಪೂಜೆಯ ಮೂಲಕ ಬೇಗ ಮನಸ್ಸಿಗೆ ಏಕಾಗ್ರತೆ ಬರಲು ಸಾಧ್ಯವಾಗುತ್ತದೆ.

ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ,
ಶ್ರೀ ಸ್ವರ್ಣವಲ್ಲೀ ಮಹಾ ಸಂಸ್ಥಾನ, ಸೋಂದಾ, ಶಿರಸಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ದ.ಆಫ್ರಿಕಾ ಕ್ರಿಕೆಟ್‌ ತಂಡಕ್ಕೆ ಈಗ ಮೊದಲಿನ ತಾಕತ್ತಿಲ್ಲ ಎನ್ನುವುದು ಸತ್ಯವೇ. ಆದರೆ ಅದು ಈ ತಾತ್ಕಾಲಿಕ ದುಸ್ಥಿತಿಯಿಂದ ಹೊರಬಂದು ಮತ್ತೆ ವಿಶ್ವದ ಪ್ರಬಲ ತಂಡಗಳಲ್ಲಿ...

  • ಇಂದು ಭಾರತದ ಬ್ಯಾಡ್ಮಿಂಟನ್‌ ಎಂದಿನಂತಿಲ್ಲ. ವಿಶ್ವದಲ್ಲೇ ಅತಿಹೆಚ್ಚು ಪ್ರತಿಭೆಗಳ ಗಣಿ ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು. ಇದೆಲ್ಲ ಸಾಧ್ಯವಾಗಿದ್ದು ಪಿ.ಗೋಪಿಚಂದ್‌...

  • ಕೆಲವು ದೈವಿಕ ಕ್ಷೇತ್ರಗಳ ದರುಶನದಿಂದ ಎರಡು ರೀತಿಯ ನೆಮ್ಮದಿ ಸಿಗುತ್ತದೆ. ಒಂದು, ದೇವರ ಉಪಾಸನೆಯಿಂದ ಸಿಕ್ಕ ಸಂತೃಪ್ತಿ; ಮತ್ತೂಂದು, ಅಲ್ಲಿನ ರಮ್ಯ ಪರಿಸರದಲ್ಲಿ...

  • ತ್ರಿವಿಧ ದಾಸೋಹ ನಡೆಸುತ್ತಿರುವ ನಾಡಿನ ಪ್ರಸಿದ್ಧ ಮಠಗಳಲ್ಲಿ ಆದಿಚುಂಚನಗಿರಿ ಕ್ಷೇತ್ರವೂ ಒಂದು. ಇಲ್ಲಿ ನೆಲೆಸಿರುವ ಶ್ರೀ ಕಾಲಭೈರವೇಶ್ವರ "ಅನ್ನದಾನಿ ಭೈರವ'...

  • - ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು, ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನ, ಶಿರಸಿ ಮನಸ್ಸಿನ ಅಂತಃಸಾಕ್ಷಿಗೆ ಅನುಸಾರವಾಗಿ ನಡೆಯುವವನು ಎಂದೂ ಪಾಪಿಯಾಗಲಾರ....

ಹೊಸ ಸೇರ್ಪಡೆ