ರಾಮದುರ್ಗದ ಶ್ರೀ ವೆಂಕಟೇಶ್ವರ ದೇವಸ್ಥಾನ

Team Udayavani, Apr 13, 2019, 6:00 AM IST

ಬೆಳಗಾವಿ ಜಿಲ್ಲೆಯಲ್ಲಿ ಹಲವಾರು ಪುಣ್ಯ ಕ್ಷೇತ್ರಗಳಿವೆ. ಪ್ರತಿಯೊಂದು ಕ್ಷೇತ್ರವು ತನ್ನದೇ ಆದ ಹಿರಿಮೆಯನ್ನು ಹೊಂದಿದೆ. ತಾಲೂಕಾ ಕೇಂದ್ರವಾದ ರಾಮದುರ್ಗದಲ್ಲೂ ಅಂಥದೊಂದು ಸ್ಥಳವಿದೆ. ಅದೇ ಮಲಪ್ರಭಾ ನದಿಯ ದಡದಲ್ಲಿರುವ ಪುರಾತನ ವೆಂಕಟೇಶ್ವರ ದೇವಾಲಯ. ಈ ಐತಿಹಾಸಿಕ ದೇವಸ್ಥಾನ ರಾಮದುರ್ಗಕ್ಕೆ ಕಳಸಪ್ರಾಯವಾಗಿದೆ.

ನರಗುಂದ ಮತ್ತು ರಾಮದುರ್ಗ ಸಂಸ್ಥಾನಗಳ ಆಡಳಿತ 1742ರಲ್ಲಿ ವಿಭಜನೆಯಾಯಿತು. ಆನಂತರ ಕೊನೆಯ ಅರಸರಾದ ರಾಜಾ ರಾಮರಾವ ವೆಂಕಟರಾವ ಭಾವೆಯವರು ಈ ದೇವಾಲಯ ನಿರ್ಮಿಸಿದರು.

ಕೊಂಕಣಸ್ಥ ಬ್ರಾಹ್ಮಣರಾದ ಭಾವೆ ರಾಜ ಮನೆತನದ ಕುಲದೇವತೆ ಮತ್ತು ರಾಜಲಾಂಛನವು ವೆಂಕಟೇಶ್ವರ ಆಗಿತ್ತು. ರಾಜಾ ರಾಮರಾವ್‌ ಅವರು ವೆಂಕಟೇಶ್ವರ ದೇವರ ಭಕ್ತರಾಗಿದ್ದರಿಂದ ರಾಮನವಮಿಯಂದು ಉಪವಾಸವಿದ್ದು, ಮರುದಿನ ರಾಮನ ಮೂರ್ತಿಗೆ ವೆಂಕಟೇಶ್ವರ ವೇಷಭೂಷಣದಿಂದ ಅಲಂಕರಿಸಿ ವಿಜೃಂಭಣೆಯಿಂದ ರಥೋತ್ಸವವನ್ನು ಪ್ರಾರಂಭಿಸಿ, ತರುವಾಯವೇ ಪ್ರಸಾದ ಸೇವಿಸುತ್ತಿದ್ದರು ಎಂಬುದು ಪ್ರತೀತಿ.

ದೇವಸ್ಥಾನದ ಒಳಭಾಗವು 28 ಕಂಬಗಳನ್ನು ಹೊಂದಿದ ಬೃಹತ್‌ ಪ್ರಾಂಗಣವಾಗಿದೆ. ಇದರ ಸುತ್ತಲೂ ಇರುವ ಕಂಬಗಳು ಆಕರ್ಷಣಿಯವಾಗಿವೆ. ಗರ್ಭಗುಡಿಯ ಹೊರಗಡೆಯಲ್ಲಿರುವ ನವರಂಗವು 12 ಕಂಬಗಳ ಪ್ರಾಂಗಣವನ್ನು ಹೊಂದಿದೆ. ಇದರ ಜೊತೆಗೆ ದತ್ತಾತ್ರೇಯ, ಹನುಮಂತ ಹಾಗೂ ಪಾಂಡುರಂಗ ವಿಠ್ಠಲ ದೇವರ ಮೂರ್ತಿಗಳನ್ನೂ ಕಾಣಬಹುದು. ಈ ಪ್ರಾಂಗಣದಲ್ಲಿ ದಕ್ಷಿಣ, ಉತ್ತರ ಹಾಗೂ ಪಶ್ಚಿಮ ದಿಕ್ಕಿಗೆ ಚಿಕ್ಕ ಬಾಗಿಲುಗಳಿವೆ. ಗರ್ಭಗುಡಿಯಲ್ಲಿರುವ ರಾಮನ ಆಕರ್ಷಕ ವಿಗ್ರಹವು ನಾಲ್ಕು ಕೈಗಳಿಂದ ಕೂಡಿದ್ದು ಶಂಖ, ಚಕ್ರ, ಬಿಲ್ಲು ಬಾಣಗಳನ್ನು ಹೊಂದಿವೆ. ಬಲಗಡೆಗೆ ಕಾಶಿಯಿಂದ ತಂದ ಸಾಲಿಗ್ರಾಮಗಳ ಹಾಗೂ ಮುಂದುಗಡೆಗೆ ಕೃಷ್ಣನ ಮೂರು ವಿಗ್ರಹಗಳು, ಲಕ್ಷ್ಮೀ ವೆಂಕಟೇಶ್ವರ, ವಿಷ್ಣು ಮತ್ತು ಸತ್ಯನಾರಾಯಣ ದೇವರ ಚಿಕ್ಕ ವಿಗ್ರಹಗಳನ್ನು ಕಾಣಬಹುದು. ಗರ್ಭಗುಡಿಯು ಬೃಹತ್‌ ಗೋಪುರವನ್ನು ಹೊಂದಿದೆ. ವೈಕುಂಠ ಏಕಾದಶಿಯಂದು ಇಲ್ಲಿ ವಿಜೃಂಭಣೆಯಿಂದ ಪೂಜೆ ನೆರವೇರುತ್ತದೆ. ಸುತ್ತಮುತ್ತಲ ಗ್ರಾಮಗಳಿಂದ ಬಾಲಾಜಿಯ ದರ್ಶನ ಪಡೆಯಲು ಭಕ್ತರು ಆಗಮಿಸುತ್ತಾರೆ.

ದೇವಾಲಯದ ಇನ್ನೊಂದು ವೈಶಿಷ್ಟ್ಯವೆಂದರೆ, ರಾಜರ ಕಾಲದಿಂದಲೂ ಇಂದಿನವರೆಗೂ ವೆಂಕಟೇಶ್ವರ ಪೂಜೆಯನ್ನು ಮಾಡುವ (ಬಾವಾಜಿ) ಅರ್ಚಕರು ಕಾಶಿಯವರಾಗಿ¨ªಾರೆ. ಈಗಿರುವ ಅರ್ಚಕ ಶ್ರೀಲಲ್ಲೂರಾಮದಾಸ ಮಹಾರಾಜರು ಹದಿನೈದನೆಯವರಾಗಿದ್ದಾರೆ. ದೇವಸ್ಥಾನದಲ್ಲಿ ಪ್ರತಿ ಶುಕ್ರವಾರ ಸಾಯಂಕಾಲ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಪ್ರತಿ ಹುಣ್ಣಿಮೆಯಂದೂ ಸತ್ಯನಾರಾಯಣ ಪೂಜೆಯನ್ನು ಏರ್ಪಡಿಸಲಾಗುತ್ತದೆ. ವೆಂಕಟೇಶ್ವರ ದೇವಸ್ಥಾನದ ಪಕ್ಕದಲ್ಲಿಯೇ ಗೋವುಗಳಿಗಾಗಿ ಕೊಟ್ಟಿಗೆಯೂ ಇದೆ. ಮೈಸೂರಿನಲ್ಲಿ ನಡೆಯುವಂತೆ ಇಲ್ಲೂ ಕೂಡ ದಸರಾ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ ಅಲ್ಲಿ ಅಕ್ಟೋಬರ್‌ನಲ್ಲಿ ನಡೆದರೆ, ಇಲ್ಲಿ ಏಪ್ರಿಲ್‌ನಲ್ಲಿ ದಸರೆ.

ಈ ಬಾರಿ ಏಪ್ರಿಲ… 14 ರಂದು ರಥೋತ್ಸವ ನಡೆಯಲಿದೆ. ವೆಂಕಟೇಶ್ವರ ದೇವಸ್ಥಾನದಿಂದ ಎಡಕ್ಕೆ ಏರುಮುಖವಾಗಿ ಕಲ್ಲಿನ ತೇರನ್ನು ಹಣಮಂತ ದೇವಸ್ಥಾನದ ವರೆಗೆ ತಂದು ಮತ್ತೆ ಒಂದು ಗಂಟೆಗಳ ಕಾಲ ಸನ್ನೆ ಗೋಲುಗಳ ಮೂಲಕ ಇಳಿಜಾರಿನಲ್ಲಿಯೇ ಪೂರ್ಣ ಪ್ರಮಾಣದಲ್ಲಿ ತಿರುಗಿಸಿ ಯಥಾ ಸ್ಥಿತಿಯಲ್ಲಿ ತಂದು ನಿಲ್ಲಿಸುತ್ತಾರೆ. ಈ ರೀತಿ ತೇರನ್ನು ತಿರುಗಿಸುವ ಕಾರ್ಯದಲ್ಲಿ ವಡ್ಡರ ಕೋಮಿನ ಪ್ರಯತ್ನ ಹಾಗೂ ಭಕ್ತಿಯ ಸೇವೆ ಮೆಚ್ಚುವಂತಹದು. ಈ ವಿಶೇಷ ರಥೋತ್ಸವ ನೋಡಲು ದೂರದೂರಿನಿಂದ ಭಕ್ತರು ಆಗಮಿಸುತ್ತಾರೆ. ನವರಾತ್ರಿ ಉತ್ಸವದ ಪ್ರತಿದಿನ ಸಂಜೆ ಭಕ್ತಿ ಸಂಗೀತ, ಭಜನೆ, ಮುಂತಾದ ವೈವಿದ್ಯಮಯ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.

ಸುರೇಶ ಗುದಗನವರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಇಲ್ಲಿ ಇಬ್ಬರು ಅಪರೂಪದ ವ್ಯಕ್ತಿಗಳ ಪರಿಚಯವಿದೆ. ಇಬ್ಬರ ಸಾಧನೆಯೂ ಮೆಚ್ಚುಗೆಗೆ ಅರ್ಹವಾದದ್ದು. ಒಬ್ಬರು ಆರೋಗ್ಯದ ಕುರಿತು ಜಾಗೃತಿ ಮೂಡಿಸಲು ಬೆಂಗಳೂರಿನಿಂದ...

  • ಡಾ. ರಾಜ್‌ಕುಮಾರ್‌ ನಂಜನಗೂಡಿಗೆ ಹೋದಾಗೆಲ್ಲ ಉರುಳು ಸೇವೆ ಮಾಡುತ್ತಿದ್ದದ್ದು ನಿಮಗೆ ಗೊತ್ತೇ ಇದೆ. ಅದೇ ರೀತಿ ಬೆಂಗಳೂರಿನ ಹನುಮಂತ ನಗರದ ಗೋಪಾಲಕೃಷ್ಣ ಆಚಾರ್‌ಗೆ...

  • ಮೇಲುಕೋಟೆಯಲ್ಲಿ ಅಕ್ಟೋಬರ್‌ ಹದಿಮೂರರಂದು ನಡೆದ, ಕವಿ ಪುತಿನ ಅವರ "ಪುಣ್ಯಸ್ಮರಣೆ'ಯಲ್ಲಿ ಭಾಗಿಯಾಗುವ ಸದವಕಾಶವನ್ನು ಪುತಿನ ಟ್ರಸ್ಟ್ನ ಅಧ್ಯಕ್ಷರಾದ ಹಿರಿಯ ಕವಿ...

  • ಪ್ರತಿದಿನವೂ ಒಂದಿಲ್ಲೊಂದು ಹೊಸತನ್ನು ಸೃಜಿಸುವ ಪ್ರಕೃತಿ ಬಹಳ ದೊಡ್ಡ ಕಲೆಗಾರ. ಅನಂತ ಬಣ್ಣಗಳು ಇದರ ಜೋಳಿಗೆಯಲ್ಲಿ ಅಡಗಿದೆ. ಪ್ರಕೃತಿಯೆಂಬ ಈ ಕಿಲಾಡಿ, ಭೂಮಿ-...

  • ರೊಟ್ಟಿ... ಉತ್ತರ ಕರ್ನಾಟಕದ ಜನರ ಬಹುಮುಖ್ಯ ಆಹಾರ. ಊಟ ಅಂದ್ಮೇಲೆ ಜೋಳದ ರೊಟ್ಟಿ, ಶೇಂಗಾ ಹಿಂಡಿ, ಕಾಳು ಕಡಿ ಹಾಕಿ ಮಾಡಿದ ರುಚಿಕಟ್ಟಾದ ಪಲ್ಯ ಇರಲೇಬೇಕು. ಅಲ್ಲಿನವರ...

ಹೊಸ ಸೇರ್ಪಡೆ