ಬ್ಯಾಂಕ್‌ ಪರೀಕ್ಷೆ ಫೇಲ್‌ ಆರ್‌ಸಿಬಿ ಪರೀಕ್ಷೆ ಪಾಸ್‌!

Team Udayavani, Mar 24, 2018, 11:01 AM IST

ಪವನ್‌ ದೇಶಪಾಂಡೆ ಎಂಬ ಹೆಸರು ಎಷ್ಟೋ ಜನರಿಗೆ ಗೊತ್ತೇ ಇಲ್ಲ. ಆದರೆ ಕಡಿಮೆ ಪಂದ್ಯದಲ್ಲಿ ಆತ ಪ್ರದರ್ಶಿಸಿದ ಆಲ್‌ರೌಂಡರ್‌ ಆಟಕ್ಕೆ ಸರಿಸಾಟಿಯಾದವರು ಯಾರೂ ಇಲ್ಲ. ಹೌದು, ಪವನ್‌ ಸದ್ಯ ವೇಗವಾಗಿ ಬೆಳೆಯುತ್ತಿರುವ ಕರ್ನಾಟಕದ ಕ್ರಿಕೆಟ್‌ ಪ್ರತಿಭೆ. ಭವಿಷ್ಯದಲ್ಲಿ ಈತ ಭಾರತ ತಂಡದಲ್ಲಿ ಸ್ಥಾನ ಪಡೆದರೂ ಅಚ್ಚರಿಯೇನಿಲ್ಲ. 28 ವರ್ಷದ ಪವನ್‌ ದೇಶಕ್ಕಾಗಿ ಆಡುವ ಕನಸು ಹೊತ್ತಿದ್ದಾರೆ. ಅದಕ್ಕೂ ಮೊದಲೇ ಐಪಿಎಲ್‌ನಲ್ಲಿ ಆಡುವ ಸುವರ್ಣಾವಕಾಶವೂ ಅವರಿಗೆ ಸಿಕ್ಕಿದೆ. ಪವನ್‌ ಐಪಿಎಲ್‌ 11ನೇ ಆವೃತ್ತಿಯಲ್ಲಿ ಆರ್‌ಸಿಬಿ ಪರ ಆಡಲಿದ್ದಾರೆ. ಈತ ಬ್ಯಾಟಿಂಗ್‌ ಅಷ್ಟೇ ಅಲ್ಲ, ಸಮಯ ಬಂದಾಗ ಸ್ಪಿನ್‌ ಬೌಲಿಂಗ್‌ ಕೂಡ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಸದ್ಯ ಆರ್‌ಸಿಬಿ ಕ್ಯಾಂಪ್‌ ಬೆಂಗಳೂರಿನಲ್ಲಿ ಆರಂಭವಾಗಿದೆ. ಈತ ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಈ ವೇಳೆ ಉದಯವಾಣಿ ಜತೆಗೆ ಮಾತಿಗೆ ಸಿಕ್ಕಿದ ಅವರು ತಂಡದ ಬಗ್ಗೆ, ತಮ್ಮ ಸಿದ್ಧತೆ, ಕೊಹ್ಲಿ ನಾಯಕತ್ವ ಸೇರಿದಂತೆ ಹಲವು ವಿಷಯದ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದ ಪೂರ್ಣ ಪಾಠ ಇಲ್ಲಿದೆ. 

ಒಂದು ತಂಡವಾಗಿ ಆರ್‌ಸಿಬಿ ಹೇಗಿದೆ?
ಬ್ಯಾಟಿಂಗ್‌-ಬೌಲಿಂಗ್‌ ಎರಡರಲ್ಲೂ ಬ್ಯಾಲೆನ್ಸ್‌ ಆಗಿದ್ದೇವೆ. ಈ ಸಲ ನಮ್ಮ ಮುಂದೆ ಟ್ರೋಫಿ ಗೆಲ್ಲುವ ಸವಾಲಿದೆ. ಗೆದ್ದೇ ಗೆಲ್ಲುವೆವು ಎಂಬ ನಂಬಿಕೆಯೂ ಇದೆ. ಬೌಲಿಂಗ್‌ಗಿಂತ ಬ್ಯಾಟಿಂಗ್‌ನಲ್ಲಿ ನಮ್ಮನ್ನು ನಿಯಂತ್ರಿಸುವುದು ಎದುರಾಳಿ ತಂಡಗಳಿಗೆ ಕಷ್ಟವಾಗಬಹುದು. 

ಕೊಹ್ಲಿ ನಾಯಕತ್ವದಲ್ಲಿ ಆಡುತ್ತೇನೆ ಎಂದು ಯಾವತ್ತಾದರೂ ಅಂದುಕೊಂಡಿದ್ರಾ?
ಕೊಹ್ಲಿ ನಾಯಕತ್ವದಲ್ಲಿ ಆಡುವುದು ನನ್ನ ಕನಸಾಗಿತ್ತು. ಕನಸು ನನಸಾದಾಗ ಆಗುವ ಖುಷಿಯನ್ನು ಪದಗಳಲ್ಲಿ ವರ್ಣಿಸಲಾಗದು. ವಿಶ್ವ ಕ್ರಿಕೆಟ್‌ ದಿಗ್ಗಜ ಕೊಹ್ಲಿ  ಆಟವನ್ನು ಟೀವಿಯಲ್ಲಷ್ಟೇ ನೋಡಿದ್ದೆ. ನಾನು ಅವರಿಂದ ಸಾಕಷ್ಟು ಪ್ರಭಾವಕ್ಕೂ ಒಳಗಾಗಿದ್ದೇನೆ. ಭವಿಷ್ಯದಲ್ಲಿ ಆತನ ನಾಯಕತ್ವದಡಿಯಲ್ಲಿ ಒಂದು ಸಲ ಆಡಬೇಕು ಎನ್ನುವ ಕನಸು ಕಂಡಿದ್ದೆ. ಅದೀಗ ನೆರವೇರಿದೆ ಎಂಬ ಖುಷಿ ಇದೆ. 

ನೀವು ಆರ್‌ಸಿಬಿ ತಂಡಕ್ಕೆ ಆಯ್ಕೆಯಾಗಿದ್ದು ಹೇಗೆ?
ಕ್ರಿಕೆಟಿಗ ಅನಿರುದ್ಧ್ ಜೋಶಿ ಹಾಗೂ ನಾನು ಸ್ಟೇಟ್‌ ಬ್ಯಾಂಕ್‌ ಉದ್ಯೋಗಿಗಳಾಗಿದ್ದೇವೆ. ನಮ್ಮ ಸಂಸ್ಥೆ ವತಿಯಿಂದ ಬಡ್ತಿಗಾಗಿ ಪರೀಕ್ಷೆ ಆಯೋಜಿಸಲಾಗಿತ್ತು. ಇದರಲ್ಲಿ ಪಾಲ್ಗೊಳ್ಳುವುದಕ್ಕಾಗಿ ತೆರಳಿದ್ದೆವು. ಈ ವೇಳೆ ಆರ್‌ಸಿಬಿ ತಂಡಕ್ಕೆ ಆಯ್ಕೆಯಾಗಿರುವ ವಿಷಯ ತಿಳಿಯಿತು. ಆಗ ನಾವಿಬ್ಬರೂ ತುಂಬಾ ಸಂತೋಷ ಪಟ್ಟೆವು. ಬ್ಯಾಂಕ್‌ ಪರೀಕ್ಷೆಯಲ್ಲಿ ಪಾಸಾಗುವುದಕ್ಕೆ ತುಂಬಾ ಓದಬೇಕಿತ್ತು. ನಮಗೆ ಪರೀಕ್ಷೆ ಸಮಯದಲ್ಲಿ ಸೈಯದ್‌ ಮುಷ್ತಾಕ್‌ ಅಲಿ ಟಿ20, ಶಫಿ ದರಾಶಾ ಕ್ರಿಕೆಟ್‌ ಹೀಗೆ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಪರೀಕ್ಷೆಗೆ ಸಿದ್ಧವಾಗಲು ಸಾಧ್ಯವಾಗಿರಲಿಲ್ಲ. ಈ ಪರೀಕ್ಷೆ ಪಾಸಾಗದಿದ್ದರೆ ಏನಂತೆ ? ಆರ್‌ಸಿಬಿ ಸೇರಿ ದೊಡ್ಡ ಪರೀಕ್ಷೆ ಪಾಸಾದೆವಲ್ಲ ಎಂದು ಸಮಾಧಾನಪಟ್ಟುಕೊಂಡೆವು. 

ಈ ಸಲದ ಐಪಿಎಲ್‌ನಲ್ಲಿ ನಿಮ್ಮ ಗುರಿ ಏನು?
ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಬೇಕೆಂದಿದ್ದೇನೆ. ಕೆಲವು ವರ್ಷಗಳಿಂದ ಮಹಾ ಕೂಟದಲ್ಲಿ ಪಾಲ್ಗೊಳ್ಳಬೇಕು, ದೇಶಕ್ಕಾಗಿ ನಾನೂ ಆಡಬೇಕು ಎನ್ನುವ ಉತ್ಕಟ ಬಯಕೆ ಇತ್ತು. ದೇಶಕ್ಕಾಗಿ ಆಡುವ ಮೊದಲೇ ಆರ್‌ಸಿಬಿಗಾಗಿ ಆಡುವ ಅವಕಾಶ ಸಿಕ್ಕಿದೆ. ಈ ಅವಕಾಶವನ್ನು ಗರಿಷ್ಠ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತೇನೆ. ಅದರಲ್ಲಿ ಯಶಸ್ವಿಯಾಗುವ ವಿಶ್ವಾಸವಿದೆ. 

ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದಿಂದ ನಿಮಗೆ ಯಾವ ರೀತಿಯ ಪ್ರೋತ್ಸಾಹ ಸಿಗುತ್ತಿದೆ?
ಕ್ರಿಕೆಟ್‌ ಆಡುವುದಕ್ಕೆ ಯಾವಾಗಲೂ ನನ್ನ ಮೊದಲ ಆದ್ಯತೆ. ಇಂದು ಇಷ್ಟರವರೆಗೆ ಬರಲು ಸ್ಟೇಟ್‌ ಬ್ಯಾಂಕ್‌ ನೀಡಿದ ಪ್ರೋತ್ಸಾಹವೇ ಕಾರಣ. ಹೀಗಾಗಿ ಬ್ಯಾಂಕ್‌ನ ಎಲ್ಲ ಅಧಿಕಾರಿಗಳು, ಸಿಬ್ಬಂದಿ ವರ್ಗಕ್ಕೆ ಧನ್ಯವಾದಗಳನ್ನು ಹೇಳಲು ಇಷ್ಟಪಡುತ್ತೇನೆ. 

ಹೇಮಂತ್‌ ಸಂಪಾಜೆ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • "ಮನುಷ್ಯ ಚಿಂತೆ ಬಿಟ್ಟು, ನೆಮ್ಮದಿ ಕಾಣಲು ತಿಂಥಣಿಗೆ ಬರಬೇಕು' ಎಂಬ ಮಾತಿದೆ. ತಿಂಥಣಿ ಮೌನೇಶ್ವರನಿಗೆ ಜಾತಿ, ಧರ್ಮ ಮೀರಿದ ಭಕ್ತರಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ...

  • ಕರ್ನಾಟಕದ ವಾಸ್ತುಶಿಲ್ಪದ ಕೊಡುಗೆಯಲ್ಲಿ ಶೈವ ದೇಗುಲಗಳ ಪಾತ್ರ ಗಣನೀಯ. ಕದಂಬರ ಕಾಲದಿಂದಲೂ ಹಲವು ಶೈವ ಗುಡಿಗಳು ನಮ್ಮ ನಾಡಿನಲ್ಲಿ ನಿರ್ಮಾಣಗೊಂಡಿದ್ದು, ಅವುಗಳಲ್ಲಿ...

  • ಕುಪ್ಪಳಿಯಲ್ಲಿನ ಕುವೆಂಪು ಮನೆಯ ಒಳಕೋಣೆಯಲ್ಲಿ ಅಡಿಯಿಟ್ಟಾಗ ಸೆಳೆದದ್ದು "ಬಾಣಂತಿ ಕೋಣೆ' ಎಂಬ ಹಣೆಪಟ್ಟಿ ಹೊತ್ತ ಕೋಣೆ. ಕಬ್ಬಿಣದ ತೊಟ್ಟಿಲು, ಮರದ ತೊಟ್ಟಿಲು,...

  • ಬಹುತೇಕ ಭಾರತೀಯ ಸಂಸ್ಕೃತಿಗೆ ಹತ್ತಿರವಿರುವ ದೇಶ ಶ್ರೀಲಂಕಾ. ಈ ಸಾಂಸ್ಕೃತಿಕ ಬೆಸುಗೆಗೆ ಕಾರಣ, ರಾಮಾಯಣದ ಖಳನಾಯಕ ರಾವಣ. ರಾವಣನ ಆ ಸಾಮ್ರಾಜ್ಯ ಈಗ ಹೇಗಿದೆ ಎಂಬುದರ...

  • ಸಂಗಮೇಶ ಅವರು ಕಳೆದ 7 ವರ್ಷಗಳಿಂದ ಸ್ವರಕ್ತದಿಂದ ಚಿತ್ರ ಬಿಡಿಸುತ್ತಿದ್ದಾರೆ. ಇದುವರೆಗೆ 300 ಸಾಧಕರ ಚಿತ್ರವನ್ನು ನೆತ್ತರಿನ ಮೂಲಕವೇ ಚಿತ್ರಿಸಿರುವುದು ವಿಶೇಷ... ಕಲೆ-...

ಹೊಸ ಸೇರ್ಪಡೆ