ವಿಶ್ವಕಪ್‌ ಸಮರದ ಬಲಿಷ್ಠ ತಂಡ ಇಂಗ್ಲೆಂಡ್‌

ಬ್ಯಾಟಿಂಗ್‌, ಬೌಲಿಂಗ್‌ನಲ್ಲಿ ಆಂಗ್ಲರಿಗೆ ಇಲ್ಲ ಸರಿಸಾಟಿ , ವಿಶ್ವ ತಂಡಗಳಿಗೆ ಆತಿಥೇಯರು ಹೆಚ್ಚು ಅಪಾಯಕಾರಿ

Team Udayavani, Jun 1, 2019, 9:29 AM IST

2019 ಏಕದಿನ ವಿಶ್ವಕಪ್‌ ಕೂಟಕ್ಕೆ ವರ್ಣರಂಜಿತ ಚಾಲನೆ ಸಿಕ್ಕಿದೆ. ಒಟ್ಟು 10 ತಂಡಗಳ ಕದನ, 6 ವಾರಗಳ ಸೆಣಸಾಟ, ವಿಶ್ವ ಕ್ರಿಕೆಟ್‌ ಅಭಿಮಾನಿಗಳ ಮನ ತಣಿಸಲಿದೆ. ರೌಂಡ್‌ರಾಬಿನ್‌ ಮಾದರಿಯಲ್ಲಿ ಕೂಟ ನಡೆಯಲಿದ್ದು ಎಲ್ಲರ ಗಮನ ಇದೀಗ ಆಂಗ್ಲರ ನಾಡಿನ ಮಹಾಕದನದತ್ತ ನೆಟ್ಟಿದೆ.

ಇದುವರೆಗೆ ಒಟ್ಟು 11 ವಿಶ್ವಕಪ್‌ ನಡೆದಿದೆ. ಇದರಲ್ಲಿ 4 ಬಾರಿ ಇಂಗ್ಲೆಂಡ್‌ ಆತಿಥ್ಯವಹಿಸಿದೆ. ಇದೀಗ 5ನೇ ಸಲ ಇಂಗ್ಲೆಂಡ್‌ ಆತಿಥ್ಯ ವಹಿಸಿಕೊಂಡಿದೆ. ಆಂಗ್ಲರು ವಿಶ್ವ ಕೂಟಕ್ಕೆ ಹೆಚ್ಚು ಸಲ ಆತಿಥ್ಯ ವಹಿಸಿರುವುದೇನೋ ವಿಶೇಷ. ಆದರೆ ಅವರಿಗೆ ಒಂದು ಬಾರಿಯೂ ಏಕದಿನ ವಿಶ್ವ ಚಾಂಪಿಯನ್‌ ಪಟ್ಟಕ್ಕೇರಲು ಸಾಧ್ಯವಾಗಿಲ್ಲ. 3 ಬಾರಿ ಫೈನಲ್‌ಗೇರಿದ್ದರೂ ಪ್ರಶಸ್ತಿ ಹೊಸ್ತಿಲಲ್ಲೇ ಇಂಗ್ಲೆಂಡ್‌ ತಂಡ ಜಾರಿ ಬಿದ್ದಿದೆ. ಆದರೆ ಈ ಬಾರಿ ಇಂಗ್ಲೆಂಡ್‌ ಎಂದಿಗಿಂತಲೂ ಹೆಚ್ಚು ಬಲಶಾಲಿಯಾಗಿದೆ. ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ವಿಶ್ವದ ದಿಗ್ಗಜ ತಂಡಗಳಿಗೆ ಶಾಕ್‌ ನೀಡಲು ತುದಿಗಾಲಲ್ಲಿ ನಿಂತಿದೆ. ಪ್ರಸಕ್ತ ಇಂಗ್ಲೆಂಡ್‌ ತಂಡದ ವಿವಿಧ ಕೂಟಗಳಲ್ಲಿ ನೀಡಿರುವ ಫಾರ್ಮ್ ಅದಕ್ಕೆ ಸಾಕ್ಷಿ. ಈ ನಿಟ್ಟಿನಲ್ಲಿ ಇಂಗ್ಲೆಂಡ್‌ ತಂಡದ ಆಟಗಾರರು, ಬಲ-ದೌರ್ಬಲ್ಯ. ತವರಿನಲ್ಲಿ ಆ ತಂಡವೆಷ್ಟು ಅಪಾಯಕಾರಿ ಎನ್ನುವ ಬಗೆಗಿನ ಲೇಖನ ಇಲ್ಲಿದೆ ನೋಡಿ.

ವಿಶ್ವದ ನಂ.1 ಏಕದಿನ ತಂಡ ಇಂಗ್ಲೆಂಡ್‌ ವಿಶ್ವಕಪ್‌ ಗೆದ್ದು, ಇತಿಹಾಸ ಬರೆಯುವ ಅತ್ಯುತ್ಸಾಹದಲ್ಲಿದೆ. ವಿಶ್ವಕಪ್‌ 12ನೇ ಆವೃತ್ತಿ ತವರಿನಲ್ಲಿಯೇ ನಡೆಯುತ್ತಿರುವುದು ಇಂಗ್ಲೆಂಡ್‌ಗೆ ವರವಾಗಿ ಪರಿಣಮಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ತವರಿನ ಪಿಚ್‌ ಲಾಭ ಮತ್ತು ಅಭಿಮಾನಿಗಳ ಬೆಂಬಲದಿಂದ ಇಂಗ್ಲೆಂಡ್‌, ಈ ಬಾರಿ ಏಕದಿನ ವಿಶ್ವ ಚಾಂಪಿಯನ್‌ ಪಟ್ಟಕ್ಕೇರುವ ಮೂಲಕ ತವರಿನ ಪ್ರಶಸ್ತಿಯ ಬರ ನೀಗಿಸಲು ಪ್ರಯತ್ನಿಸುವುದರಲ್ಲಿ ಅನುಮಾನವೇ ಇಲ್ಲ.

ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಇಂಗ್ಲೆಂಡ್‌ ಒಂದಾಗಿದೆ. ಕೊನೆಯ ಬಾರಿಗೆ 1979, 1987 ಮತ್ತು 1992ರಲ್ಲಿ ಫೈನಲ್‌ಗೇರಿತ್ತು. ಸುಮಾರು 27 ವರ್ಷಗಳ ಬಳಿಕ ಇಂಗ್ಲೆಂಡ್‌ ಮತ್ತೂಂದು ಫೈನಲ್‌ಗೇರುವ ಕನಸು ಕಾಣುತ್ತಿದೆ. ಅಮೋಘ ಫಾರ್ಮ್ನಲ್ಲಿರುವ ಇಂಗ್ಲೆಂಡ್‌ ತಂಡ, ಜೋಫ್ರಾ ಆರ್ಚರ್‌ ಸೇರಿದಂತೆ ಹಲವು ಹೊಸ ಮುಖಗಳೊಂದಿಗೆ ಮತ್ತಷ್ಟು ಬಲಿಷ್ಠವಾಗಿದ್ದು, ಇತಿಹಾಸ ಸೃಷ್ಠಿಸಲು ಇಯಾನ್‌ ಮಾರ್ಗನ್‌ ಪಡೆ ಸಜ್ಜಾಗಿದೆ. ಯುವ ಆಟಗಾರರೇ ಹೆಚ್ಚಾಗಿರುವ ಇಂಗ್ಲೆಂಡ್‌ನ‌ ಬ್ಯಾಟಿಂಗ್‌, ಬೌಲಿಂಗ್‌ ಮತ್ತು ಫೀಲ್ಡಿಂಗ್‌ ಅಚ್ಚುಕಟ್ಟಾಗಿರುವುದೇ ತಂಡ ಫೇವರಿಟ್‌ ಆಗಲು ಕಾರಣವಾಗಿದೆ.

ಇಂಗ್ಲೆಂಡ್‌ ಏಕೆ ಅಪಾಯಕಾರಿ?
ಏಕದಿನ ವಿಶ್ವಕಪ್‌ಗೆ ಇಂಗ್ಲೆಂಡ್‌ ಭಾರೀ ಸಿದ್ಧತೆ ನಡೆಸಿದೆ. ಇದಕ್ಕೆ ಪ್ರತ್ಯಕ್ಷ ಉದಾಹರಣೆ ಇತ್ತೀಚೆಗೆ ಆಂಗ್ಲರು ಪಾಕ್‌ ವಿರುದ್ಧದ 6 ಪಂದ್ಯಗಳ ಏಕದಿನ ಸರಣಿಯನ್ನು 4-0 ಅಂತರದಿಂದ ತವರಿನಲ್ಲೇ ಮಣಿಸಿದ್ದು. ಅಲ್ಲದೆ ಪ್ರತಿ ಪಂದ್ಯದಲ್ಲೂ ಆತಿಥೇಯ ಇಂಗ್ಲೆಂಡ್‌ 340ಕ್ಕೂ ಹೆಚ್ಚು ರನ್‌ ಪೇರಿಸಿ ಪಾಕ್‌ ಬೌಲರ್‌ಗಳ ಮೇಲೆ ಸವಾರಿ ಮಾಡಿತ್ತು. ವಿಶ್ವದ ಬಲಿಷ್ಠ ತಂಡಗಳಾದ ಭಾರತ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಸೇರಿ ಇನ್ನಿತರ ತಂಡಗಳಿಗೆ ಅಪಾಯಕಾರಿಯಾಗುವ ಸಾಧ್ಯತೆಗಳು ಗೊಚರಿಸಿವೆ. ಇಯಾನ್‌ ಮಾರ್ಗನ್‌ರ ವಿಭಿನ್ನ ತಂತ್ರ, ಸಮಯೋಚಿತ ನಡೆ- ನಿರ್ಧಾರಗಳು, ವಿಶ್ವದ ಯಾವುದೇ ತಂಡವನ್ನು ಸೋಲಿಸಬಲ್ಲವು ಎನ್ನುವುದನ್ನು ತೋರಿಸಿಕೊಟ್ಟಿವೆ.

ಮಾರ್ಗನ್‌ ಸೃಷ್ಟಿಸುವರೇ ಇತಿಹಾಸ?
ಇಂಗ್ಲೆಂಡ್‌ ಕ್ರಿಕೆಟ್‌ ಇತಿಹಾಸದಲ್ಲಿ ಇದುವರೆಗೆ ಯಾವೊಬ್ಬ ನಾಯಕನೂ ವಿಶ್ವಕಪ್‌ ಗೆದ್ದಿಲ್ಲ. ಆದರೆ ವೈಟ್‌ ಬಾಲ್‌ ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ ನಾಯಕ ಇಯಾನ್‌ ಮಾರ್ಗನ್‌, ಇತಿಹಾಸ ಸೃಷ್ಟಿಸುವ ಮೂಲಕ ಇಂಗ್ಲೆಂಡ್‌ ಕ್ರಿಕೆಟ್‌ಗೆ ಹೊಸ ಅಧ್ಯಾಯ ಬರೆಯುವ ಸುವರ್ಣಾವಕಾಶ ಇದೆ. ಮಾರ್ಗನ್‌, ಪಾಕ್‌ ವಿರುದ್ಧದ ಸರಣಿಯಲ್ಲಿ ನಾಯಕತ್ವದ ಒತ್ತಡ ನಿಭಾಯಿಸುವ ಜತೆಗೆ ಅಮೋಘ ಬ್ಯಾಟಿಂಗ್‌ ಪ್ರದರ್ಶನದೊಂದಿಗೆ 3 ಅರ್ಧ ಶತಕ(57, 71, 76)ಗಳನ್ನು ಸಿಡಿಸಿದ್ದಾರೆ. ಜತೆಗೆ 2015 ವಿಶ್ವಕಪ್‌ನಲ್ಲಿ ಆಡಿರುವ ಅನುಭವವನ್ನು ಹೊಂದಿರುವುದು ಪ್ಲಸ್‌ ಪಾಯಿಂಟ್‌.

ಸಾಟಿಯಿಲ್ಲದ ಬ್ಯಾಟಿಂಗ್‌ ವಿಭಾಗ 
ಇಂಗ್ಲೆಂಡ್‌ ಬ್ಯಾಟಿಂಗ್‌ ಅತ್ಯಂತ ಬಲಿಷ್ಠ. ಆರಂಭಿಕಾರದ ಜೇಸನ್‌ ರಾಯ್‌ ಮತ್ತು ಜಾನಿ ಬೇರ್‌ಸ್ಟೋ ಅಮೋಘ ಫಾರ್ಮ್ನಲ್ಲಿದ್ದಾರೆ. ಈ ಇಬ್ಬರೂ ವಿಶ್ವದ ಶ್ರೇಷ್ಠ ಬೌಲರ್‌ಗಳ ಎದೆಯಲ್ಲೂ ನಡುಕ ಹುಟ್ಟಿಸಿದ್ದಾರೆ. ಇದೇ ಇಂಗ್ಲೆಂಡ್‌ ತಂಡದ ಬಲ. ಬೇರ್‌ಸ್ಟೋ, ಅದ್ಭುತ ಫಾರ್ಮ್ನಲ್ಲಿದ್ದಾರೆ. ಚುಟುಕು ಕ್ರಿಕೆಟ್‌ ಐಪಿಎಲ್‌ನಲ್ಲಿ ಮಿಂಚು ಹರಿಸಿದ್ದಾರೆ. ನಂತರದಲ್ಲಿ ಜೋಸ್‌ ಬಟ್ಲರ್‌ ಇಂಗ್ಲೆಂಡ್‌ ತಂಡದ ಟ್ರಂಪ್‌ ಕಾರ್ಡ್‌ ಆಗಿದ್ದು, ತಂಡದ ರನ್‌ ಗಳಿಕೆಯಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ. ಬೇರ್‌ಸ್ಟೋ ಮತ್ತು ರಾಯ್‌ ಇಬ್ಬರೂ ಪಾಕ್‌ ವಿರುದ್ಧದ ಸರಣಿಯಲ್ಲಿ ಶತಕ ಬಾರಿಸುವ ಮೂಲಕ ತಂಡದ ವಿಶ್ವಾಸ ಹೆಚ್ಚಿಸಿದ್ದಾರೆ.

ವಿಶ್ವ ದರ್ಜೆಯ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಜೋ ರೂಟ್‌ ಮತ್ತು ನಾಯಕ ಮಾರ್ಗನ್‌ ತಂಡವನ್ನು ಅತ್ಯಂತ ಸುರಕ್ಷಿತವಾಗಿ ಮುನ್ನಡೆಸಬಲ್ಲವರಾಗಿದ್ದಾರೆ. ರೂಟ್‌ ತಾಳ್ಮೆಯ ಬ್ಯಾಟಿಂಗ್‌, ತಂಡದ ರನ್‌ ಹರಿವನ್ನು ಹೆಚ್ಚಿಸಿ ಆಸರೆಯಾಗುವಂತಹ ಆಟಗಾರನಾಗಿದ್ದಾರೆ. ರೂಟ್‌ 2015ರಿಂದ ಇಲ್ಲಿವರೆಗೂ ಒಟ್ಟು 11 ಶತಕ ಬಾರಿಸಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ಆಲ್ರೌಂಡರ್‌ಗಳಾದ ಬೆನ್‌ಸ್ಟೋಕ್ಸ್‌, ಮೋಯಿನ್‌ ಅಲಿ ತಂಡ ಶಕ್ತಿಯಾಗಿದ್ದಾರೆ. ಸ್ಟೋಕ್ಸ್‌, ಪಾಕಿಸ್ತಾನ ವಿರುದ್ಧದ 4ನೇ ಪಂದ್ಯದಲ್ಲಿ ಅರ್ಧ ಶತಕ(71 ರನ್‌) ಬಾರಿಸಿ ನಿರ್ಣಾಯಕ ಪಾತ್ರ ವಹಿಸಿದ್ದರು. ಸ್ಟೋಕ್ಸ್‌ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲೂ ಫಾರ್ಮ್ನಲ್ಲಿರುವುದು ತಂಡದ ಶಕ್ತಿಯಾಗಿದ್ದಾರೆ. ಹೆಚ್ಚುವರಿ ಆಲೌಡರ್‌ ಆಗಿ ಲಿಯಾಮ್‌ ಡಾವ್ಸನ್‌ ಇದ್ದಾರೆ. ಬ್ಯಾಟ್ಸ್‌ಮನ್‌ ಜೇಮ್ಸ್‌ ವಿನ್ಸ್‌ ಕೂಡ ಉತ್ತಮ ಲಯದಲ್ಲಿದ್ದು, ಕೆಳಕ್ರಮಾಂಕದಲ್ಲಿ ತಂಡಕ್ಕೆ ಬೆಂಬಲವಾಗಿ ನಿಲ್ಲುವ ವಿಶ್ವಾಸವಿದೆ.

ನಿರ್ಣಾಯಕ ಬೌಲಿಂಗ್‌ 
ಇಂಗ್ಲೆಂಡ್‌ನ‌ಲ್ಲಿ ವಿಶ್ವಕಪ್‌ ಟೂರ್ನಿ ನಡೆಯುತ್ತಿರವುದರಿಂದ ಬೌಲಿಂಗ್‌ ನಿರ್ಣಾಯಕ ಪಾತ್ರ ವಹಿಸಲಿದೆ. ಅಂತಹ ಬೌಲಿಂಗ್‌ ಪಡೆ ಇಂಗ್ಲೆಂಡ್‌ ತಂಡದ್ದಾಗಿದೆ. ವಿಶ್ವ ಶ್ರೇಷ್ಠ ಬೌಲರ್‌ಗಳಾದ ಮಾರ್ಕ್‌ ವುಡ್‌, ಟಾಮ್‌ ಕರನ್‌, ಕ್ರಿಸ್‌ ವೋಕ್ಸ್‌ ಭಾರೀ ಲಯದಲ್ಲಿದ್ದಾರೆ. ಮಾರ್ಕ್‌ವುಡ್‌ ಬೌಲಿಂಗ್‌ ತಂಡವನ್ನು ಮುನ್ನಡೆಸಲಿದ್ದಾರೆ. ಮಾರ್ಕ್‌ ವುಡ್‌, ಒತ್ತಡ ನಿಭಾಯಿಸುವ ಕಲೆಯನ್ನು ಚೆನ್ನಾಗಿ ತಿಳಿದಿದ್ದು, ಡೆತ್‌ ಓವರ್‌ಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.

ಇನ್ನೂ ಕ್ರಿಸ್‌ ವೋಕ್ಸ್‌ ಪಂದ್ಯದಲ್ಲಿ ಫ‌ಲಿತಾಂಶವನ್ನು ಹೇಗೆ ಬೇಕಾದರೂ ಬದಲಾಯಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಪಾಕ್‌ ವಿರುದ್ಧದ ಸರಣಿಯಲ್ಲಿ ವೋಕ್ಸ್‌, ಕೊನೆಯ 2ಪಂದ್ಯಗಳಲ್ಲಿ 9 ವಿಕೆಟ್‌ ಕಿತ್ತು, ಪಂದ್ಯದ ಗೆಲುವನ್ನು ತಮ್ಮ ಕಡೆ ವಾಲಿಸಿಕೊಂಡಿರುವುದೇ ಸಾಕ್ಷಿಯಾಗಿದೆ. ಜತೆಗೆ ಬ್ಯಾಟಿಂಗ್‌ ಕೌಶಲ ಹೊಂದಿದ್ದು, ಸಂದರ್ಭ ಒದಗಿದರೆ ರನ್‌ ಹರಿಸುವ ಸಾಮರ್ಥ್ಯ ಹೊಂದಿದ್ದಾರೆ.

ಏಕದಿನ ಕ್ರಿಕೆಟ್‌ಗೆ ಹೇಳಿ ರೂಪಿಸಿದಂತಹ ಬೌಲರ್‌ ಟಾಮ್‌ ಕರನ್‌. ತಮ್ಮ ಬೌಲಿಂಗ್‌ನಲ್ಲಿ ಹೆಚ್ಚು ಏರಿಳಿತಗಳನ್ನು ಮತ್ತು ಸಂದರ್ಭಕ್ಕೆ ತಕ್ಕಂತೆ ಬೌಲಿಂಗ್‌ ಬದಲಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಅಲ್ಲದೆ ತಂಡದಲ್ಲಿ ಆಶ್ಚರ್ಯಕರ ರೀತಿಯಲ್ಲಿ ತಂಡದ ಸ್ಥಾನಪಡೆದಿರುವ ಜೋಫ್ರಾ ಆರ್ಚರ್‌, ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಬಲ್ಲರು. ಪಾಕ್‌ ಸರಣಿಯ 3 ಪಂದ್ಯಗಳಲ್ಲಿ 4 ವಿಕೆಟ್‌ ಕಿತ್ತಿದ್ದಾರೆ. ಇನ್ನು ಲೆಗ್‌ ಸ್ಪಿನ್ನರ್‌ ಆದಿಲ್‌ ರಶೀದ್‌ಗೆ ಇಂಗ್ಲೆಂಡ್‌ ಏಕದಿನ ತಂಡದಲ್ಲಿ ಸ್ಥಾನ ದೊರೆತಿದ್ದು 2015 ವಿಶ್ವಕಪ್‌ ಬಳಿಕ. ಅಲ್ಲಿಂದ ಇಲ್ಲಿವರೆಗೂ ಶ್ರೇಷ್ಠ ಬೌಲಿಂಗ್‌ ಪ್ರದರ್ಶಿಸಿ ಒಟ್ಟಾರೆ 126 ವಿಕೆಟ್‌ ಕಿತ್ತಿದ್ದಾರೆ. ರಶೀದ್‌, ಮಧ್ಯಮ ಓವರ್‌ಗಳಲ್ಲಿ ನಿರ್ಣಾಯಕ ಪಾತ್ರ ವಹಿಸಬಲ್ಲರು.

ಇಂಗ್ಲೆಂಡ್‌ ವಿಶ್ವಕಪ್‌ ತಂಡ
ಜೇಸನ್‌ ರಾಯ್‌, ಜಾನಿ ಬೇರ್‌ಸ್ಟೋ, ಜೋ ರೂಟ್‌, ಇಯಾನ್‌ ಮಾರ್ಗನ್‌(ನಾಯಕ), ಬೆನ್‌ಸ್ಟೋಕ್ಸ್‌, ಜೋಸ್‌ ಬಟ್ಲರ್‌, ಮೊಯಿನ್‌ ಅಲಿ, ಜೇಮ್ಸ್‌ ವಿನ್ಸ್‌, ಕ್ರಿಸ್‌ ವೋಕ್ಸ್‌, ಟಾಮ್‌ ಕರನ್‌, ಜೋಫ್ರಾ ಆರ್ಚರ್‌, ಆದಿಲ್‌ ರಶೀದ್‌, ಮಾರ್ಕ್‌ ವುಡ್‌.

ಮಲ್ಲಪ್ಪ ಪಾರೆಗಾಂವ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • "ಮನುಷ್ಯ ಚಿಂತೆ ಬಿಟ್ಟು, ನೆಮ್ಮದಿ ಕಾಣಲು ತಿಂಥಣಿಗೆ ಬರಬೇಕು' ಎಂಬ ಮಾತಿದೆ. ತಿಂಥಣಿ ಮೌನೇಶ್ವರನಿಗೆ ಜಾತಿ, ಧರ್ಮ ಮೀರಿದ ಭಕ್ತರಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ...

  • ಕರ್ನಾಟಕದ ವಾಸ್ತುಶಿಲ್ಪದ ಕೊಡುಗೆಯಲ್ಲಿ ಶೈವ ದೇಗುಲಗಳ ಪಾತ್ರ ಗಣನೀಯ. ಕದಂಬರ ಕಾಲದಿಂದಲೂ ಹಲವು ಶೈವ ಗುಡಿಗಳು ನಮ್ಮ ನಾಡಿನಲ್ಲಿ ನಿರ್ಮಾಣಗೊಂಡಿದ್ದು, ಅವುಗಳಲ್ಲಿ...

  • ಕುಪ್ಪಳಿಯಲ್ಲಿನ ಕುವೆಂಪು ಮನೆಯ ಒಳಕೋಣೆಯಲ್ಲಿ ಅಡಿಯಿಟ್ಟಾಗ ಸೆಳೆದದ್ದು "ಬಾಣಂತಿ ಕೋಣೆ' ಎಂಬ ಹಣೆಪಟ್ಟಿ ಹೊತ್ತ ಕೋಣೆ. ಕಬ್ಬಿಣದ ತೊಟ್ಟಿಲು, ಮರದ ತೊಟ್ಟಿಲು,...

  • ಬಹುತೇಕ ಭಾರತೀಯ ಸಂಸ್ಕೃತಿಗೆ ಹತ್ತಿರವಿರುವ ದೇಶ ಶ್ರೀಲಂಕಾ. ಈ ಸಾಂಸ್ಕೃತಿಕ ಬೆಸುಗೆಗೆ ಕಾರಣ, ರಾಮಾಯಣದ ಖಳನಾಯಕ ರಾವಣ. ರಾವಣನ ಆ ಸಾಮ್ರಾಜ್ಯ ಈಗ ಹೇಗಿದೆ ಎಂಬುದರ...

  • ಸಂಗಮೇಶ ಅವರು ಕಳೆದ 7 ವರ್ಷಗಳಿಂದ ಸ್ವರಕ್ತದಿಂದ ಚಿತ್ರ ಬಿಡಿಸುತ್ತಿದ್ದಾರೆ. ಇದುವರೆಗೆ 300 ಸಾಧಕರ ಚಿತ್ರವನ್ನು ನೆತ್ತರಿನ ಮೂಲಕವೇ ಚಿತ್ರಿಸಿರುವುದು ವಿಶೇಷ... ಕಲೆ-...

ಹೊಸ ಸೇರ್ಪಡೆ