ತಂಬೂರಿಯ ನಾದಲೀಲೆ

Team Udayavani, Nov 16, 2019, 4:14 AM IST

ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ತಂಬೂರಿಯನ್ನು ತೊಂಬತ್ತು ವರುಷಗಳಿಂದ, ನಿರಂತರವಾಗಿ- ಸುಶ್ರಾವ್ಯವಾಗಿ ನುಡಿಸುತ್ತಲೇ ಇದ್ದಾರೆ. ಒಂದು ದಿನವೂ ಆ ತಂಬೂರಿಯನ್ನು ನೆಲಕ್ಕೆ ಇಡದಂತೆ, ಸ್ವರತಪಸ್ಸನ್ನು ಆಚರಿಸಿಕೊಂಡು ಬರಲಾಗುತ್ತಿದೆ…

ಅಲ್ಲಿ ಸ್ವರಗಳಿಗೆ ವಿರಾಮವೇ ಇಲ್ಲ. ರಾತ್ರಿ ಕಪ್ಪಾದರೂ, ಆ ತಂಬೂರಿ ನಿದ್ರಿಸುವುದೂ ಇಲ್ಲ. ತೊಂಬತ್ತು ವರುಷಗಳಿಂದ ತಂಬೂರಿ, ಹೀಗೆ ನಿರಂತರವಾಗಿ- ಸುಶ್ರಾವ್ಯವಾಗಿ ನುಡಿಯುತ್ತಿರುವುದು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಮಠದಲ್ಲಿ. ಒಂದು ದಿನವೂ ಆ ತಂಬೂರಿಯನ್ನು ನೆಲಕ್ಕೆ ಇಡದಂತೆ, ಸ್ವರತಪಸ್ಸನ್ನು ಆಚರಿಸಿಕೊಂಡು ಬಂದಿರುವುದು ಮಠದ ಹೆಗ್ಗಳಿಕೆ. ಶ್ರೀಮಠಕ್ಕೆ ಬಂದ ಯಾರಿಗೇ ಆದರೂ, ಸ್ವಾಗತಿಸುವುದು ಈ ತಂಬೂರಿಯ ಸ್ವರಗಳು.

ಹಿಂದೂಸ್ತಾನಿ- ಕರ್ನಾಟಕ ಸಂಗೀತ ಗಾಯಕರು ತಂಬೂರಿಯನ್ನು ಲಯವಾಗಿ ನುಡಿಸುವುದನ್ನು ಇಲ್ಲಿ ನೋಡುವುದೇ ಒಂದು ಸೊಬಗು. ತಂಬುರಾ, ತಾನ್ಪುರಾ, ತಾನಪುರಿ- ಮುಂತಾದ ನಾಮಾಂಕಿತ ಈ ತಂಬೂರಿಯನ್ನು ಶ್ರೀ ಸಿದ್ಧಾರೂಢರು, ಮಹಾರಾಷ್ಟ್ರದ ಪಂಢರಪುರಕ್ಕೆ ಹೋದಾಗ ತಂದಿದ್ದರಂತೆ. 1929 ಆಗಸ್ಟ್‌ 21ರಂದು ಸಿದ್ಧಾರೂಢರು ಬ್ರಹ್ಮೈಕ್ಯರಾದರು.

ಅದಾದ ಮೂರು ದಿನಗಳ ನಂತರ ಅವರ ಸೇವಕರಾದ ಗೋವಿಂದ ಸ್ವಾಮಿಗಳು, ಸಿದ್ಧಾರೂಢರ ಗದ್ದುಗೆಯ ಮುಂದೆ ತಂಬೂರಿ ಬಾರಿಸುವ ಸೇವೆ ಮಾಡುತ್ತ ಬಂದಿದ್ದರು. ಬಳಿಕ ಸಿದ್ಧಾರೂಢರ ಸೇವಕರಾದ ಗುರುನಾಥಾರೂಢರು, ಶಿವಪುತ್ರ ಸ್ವಾಮಿಗಳು ತಂಬೂರಾವನ್ನು ತಪಸ್ಸಿನಂತೆ ನುಡಿಸಿದರು. ಆ ದೃಶ್ಯವನ್ನು ಈಗಲೂ ಇಲ್ಲಿನ ಮಠದ ಅಂಗಳದಲ್ಲಿ ಕಾಣಬಹುದು. ಆರೂಢರ ಗದ್ದುಗೆಯ ಮುಂದೆ, ತಂಬೂರಿಯನ್ನು ನೆಲಕ್ಕೆ ಮುಟ್ಟಿಸದಂತೆ, ಸ್ವರಸೇವೆ ಆಚರಿಸಲಾಗುತ್ತಿದೆ.

24 ಸಾಧುಗಳ ಸ್ವರ ತಪಸ್ಸು: ಈ ತಂಬೂರಿ ಸೇವೆಗೆಂದೇ ಶ್ರೀ ಸಿದ್ಧಾರೂಢರ ಮಠದವರು 24 ಮಂದಿ ಸಾಧುಗಳನ್ನು ನಿಯೋಜಿಸಿ¨ªಾರೆ. ಎರಡು ತಾಸಿಗೆ ಇಬ್ಬರಂತೆ ಒಬ್ಬರಿಗೆ ದಿನಕ್ಕೆ ಎರಡು ಸೇವೆ (ಪಾಳೆ) ಬರುವಂತೆ ನೋಡಿಕೊಳ್ಳಲಾಗಿದೆ. ಹೀಗಾಗಿ, ದಿನದ 24 ತಾಸುಗಳ ಕಾಲ ಬಿಟ್ಟೂ ಬಿಡದೇ ತಂಬೂರಿ ಸೇವೆಗೆ ಇಲ್ಲಿ ಯಾವುದೇ ಅಡತಡೆ ಆಗುವುದಿಲ್ಲ. ಈ ತಂಬೂರಿ ತಪಸ್ವಿಗಳ ಸರ್ವ ಹೊಣೆಯನ್ನೂ ಮಠವೇ ನೋಡಿಕೊಳ್ಳುತ್ತದೆ. ದಿನವೊಂದಕ್ಕೆ ಗೌರವಧನವಾಗಿ 100 ರೂ. ನೀಡಲಾಗುತ್ತದೆ.

ತಂಬೂರಿಗೂ ಆರತಿ: ಇಲ್ಲಿ ಸೇವೆಗೊಳ್ಳುವ ತಂಬುರಾಗೆ ದಿನದ ಮೂರೂ ಹೊತ್ತು ಪೂಜೆ ಹಾಗೂ ಆರತಿ ಮಾಡಲಾಗುತ್ತದೆ. ಬೆಳಗ್ಗೆ 6, ಸಂಜೆ 6 ಹಾಗೂ ರಾತ್ರಿ 8 ಗಂಟೆ ವೇಳೆ ನಡೆಯುವ ಪೂಜೆ ವೇಳೆ ಇದಕ್ಕೂ ಪೂಜೆ, ಆರತಿ ಮಾಡಲಾಗುತ್ತದೆ. ಒಟ್ಟಿನಲ್ಲಿ ಈ ಮಠಕ್ಕೆ ಬಂದ ಭಕ್ತಾದಿಗಳಿಗೆ “ಸ್ವರಪ್ರಸಾದ’ ಈ ತಂಬೂರಿ ಮೂಲಕವೇ ಸಿಗುತ್ತಿದೆ ಎನ್ನಬಹುದು.

ತಂಬೂರಿ! ಉತ್ತರದಿಂದ, ದಕ್ಷಿಣಕೂ…: ತಂಬೂರಿಗೆ ಭಾರತೀಯ ಸಂಗೀತ ಪರಂಪರೆಯಲ್ಲಿ ವಿಶಿಷ್ಟವಾದ ಸ್ಥಾನವಿದೆ. ಹಿಂದೂಸ್ಥಾನಿ ಸಂಗೀತಗಾರರು “ತಾನ್ಪುರ’ ಎಂಬ ಪದ ಬಳಸಿದರೆ, ಕರ್ನಾಟಕ ಸಂಗೀತಗಾರರು “ತಂಬುರಾ’ ಎನ್ನುತ್ತಾರೆ. “16ನೇ ಶತಮಾನದ ಅಂತ್ಯದ ವೇಳೆ ತಾನ್ಪುರಾ ಆಧುನಿಕ ರೂಪದಲ್ಲಿ ಅಭಿವೃದ್ಧಿಗೊಂಡಿತು’ ಎಂದು ಸಿತಾರ್‌ ತಜ್ಞ ಸ್ಟಿಫ‌ನ್‌ ಸ್ಲಾವೆಕ್‌, ಅದರ ವೃತ್ತಾಂತ ಹೇಳುತ್ತಾರೆ.

ಮಿರಾಜ್‌ನ ಮಿರಾಜ್ಕರ್‌ ಕುಟುಂಬದವರು ವಿಶ್ವದ ತಾನ್ಪುರಾಗಳ ಅತ್ಯುತ್ತಮ ಉತ್ಪಾದಕರು. ಈ ಕಕ್ಷಿುಟುಂಬ, 7 ತಲೆಮಾರುಗಳಿಂದ ತಾನ್ಪುರಾಗಳನ್ನು ತಯಾರಿಸುತ್ತಿದೆ. ದೊಡ್ಡ ತಾನ್ಪುರಾಗಳನ್ನು ಗಂಡಸರು, ಸಣ್ಣ ತಾನ್ಪುರಾಗಳನ್ನು ಮಹಿಳೆಯರೂ ಬಳಸುವುದು ವಾಡಿಕೆ. ಉತ್ತರ ಭಾರತೀಯರು “ಮಿರಾಜ್‌ ಶೈಲಿ’ಯನ್ನೂ, ದಕ್ಷಿಣದವರು “ತಾಂಜೋರ್‌’ ಶೈಲಿಯನ್ನೂ ನುಡಿಸುತ್ತಾರೆ.

* ರಂಗನಾಥ ಕಮತರ


ಈ ವಿಭಾಗದಿಂದ ಇನ್ನಷ್ಟು

  • ಆ ಸೂರ್ಯ ಹುಟ್ಟೋದು ಕೋಳಿ ಕೂಗಿನಿಂದ ಹೌದೋ ಅಲ್ಲವೋ ಗೊತ್ತಿಲ್ಲ. ಆದರೆ, ಎಪ್ಪತ್ತರ ದಶಕದ ಮಧ್ಯಭಾಗದಿಂದ ಕೆಲವು ವರ್ಷಗಳ ಹಿಂದಿನವರೆಗೂ ಭಾರತೀಯರ ಬೆಳಗು ಮಾತ್ರ...

  • ಇತ್ತೀಚೆಗೆ ನಮ್ಮನ್ನು ಅಗಲಿದ ವಿದ್ವಾಂಸ, ಇತಿಹಾಸಕಾರ ನವರತ್ನ ಎಸ್‌. ರಾಜಾರಾಮ್‌, ಕನ್ನಡಿಗರಿಗೆ ಸಂಸ್ಕೃತಿ ಚಿಂತನೆಗಳಿಂದಲೇ ಸುಪರಿಚಿತರು. ಭಾರತದ ಪ್ರಾಚೀನ...

  • ಹಿಂದೆ ರಾಜರ ಕಾಲದಲ್ಲಿ ಶತ್ರುಗಳನ್ನು ಕೊಲ್ಲಲು, ಗೋಸುಂಬೆಯ ಜೊಲ್ಲನ್ನು ಬಳಸುತ್ತಿದ್ದರಂತೆ. ಅದನ್ನು ನೋಡಿದರೆ, ಕೆಡುಕು ಅನ್ನೋದು ರೈತನ ಮನಸೊಳಗೆ ತುಂಬಿಹೋಗಿತ್ತು....

  • ಅಲ್ಲಿಯ ತನಕ ಪ್ರಶಾಂತವಾಗಿದ್ದ ರಾಮನ ಬದುಕಿನಲ್ಲಿ ಕಾಣದ ಕಲ್ಲೊಂದು ಬೀಳುವುದು, ಇದೇ ಪಂಚವಟಿಯಲ್ಲಿಯೇ. ಸುಖೀಯಾಗಿದ್ದ ರಾಮನ ದಾಂಪತ್ಯದ ಮೇಲೆ ರಾವಣನ ದೃಷ್ಟಿ...

  • ವಿದ್ಯೆ ಬಲ್ಲ ಮನುಷ್ಯ ಏನನ್ನೂ ಬರೆಯಬಲ್ಲ; ಹಣೆಬರಹವೊಂದನ್ನು ಬಿಟ್ಟು! ವಿಧಿಲಿಖೀತ ಬ್ರಹ್ಮನಿಂದ ಮಾತ್ರವೇ ಸಾಧ್ಯ ಎನ್ನುವುದು ಅನೇಕರ ನಂಬಿಕೆ ಇದ್ದಿರಬಹುದು....

ಹೊಸ ಸೇರ್ಪಡೆ