ಪವಿತ್ರಕ್ಷೇತ್ರ ತೀರ್ಥ ರಾಮೇಶ್ವರ


Team Udayavani, Sep 22, 2018, 3:39 PM IST

3-aa.jpg

ದಾವಣಗೆರೆಯ ಜಿಲ್ಲೆ, ಹೊನ್ನಾಳಿ ತಾಲೂಕಿನಲ್ಲಿರುವ ತೀರ್ಥ ರಾಮೇಶ್ವರ, ನೋಡಲೇಬೇಕಾದ ಪ್ರೇಕ್ಷಣೀಯ ಸ್ಥಳ. ಶ್ರೀರಾಮನಿಂದ ತೀರ್ಥ ಮತ್ತು ಈಶ್ವರನ ಮೂರ್ತಿ ಉದ್ಭವವಾಗಿದ್ದರಿಂದ ಈ ಕ್ಷೇತ್ರಕ್ಕೆ ತೀರ್ಥರಾಮೇಶ್ವರ ಎಂದು ಹೆಸರು ಬಂದಿದೆಯಂತೆ…

  ಹಚ್ಚ ಹಸಿರ ಚಾದರವನ್ನು ಹೊದ್ದ ಬೆಟ್ಟ-ಗುಡ್ಡಗಳು, ದಾರಿಯುದ್ದಕ್ಕೂ ಹಸಿರ ಝರಿಯಂತೆ ಕಾಣುವ ಗದ್ದೆಗಳು, ಕಾಯಕದಲ್ಲಿಯೇ ತಲ್ಲೀನರಾಗಿ ಉಳುಮೆ ಮಾಡುತ್ತಿರುವ ರೈತಾಪಿ ಜನರು. ತಣ್ಣಗೆ ಬೀಸುವ ಕುಳಿರ್ಗಾಳಿ… ಇವೆಲ್ಲ ಕಾಣಸಿಗುವುದು ತೀರ್ಥ ರಾಮೇಶ್ವರಕ್ಕೆ ತೆರಳಬೇಕಾದ ದಾರಿಯಲ್ಲಿ.  ಹೊನ್ನಾಳಿ ತಾಲ್ಲೂಕಿನ ಬೆಳಗುತ್ತಿ ಗ್ರಾಮವನ್ನು ಹಾಯ್ದು ಅದರ ಅಂಚಿಗೆ ಬಂದು ನಿಂತಾಗ ಕಣ್ಣೆದುರು ದೈತ್ಯಾಕಾರದ ಹಸಿರು ಬೆಟ್ಟ, ಅದರುದ್ದಕ್ಕೂ ದಟ್ಟವಾದ ಕಾಡು  ತಡೆದು ನಿಲ್ಲಿಸುತ್ತದೆ. ಅನತಿ ದೂರ ಕೃತಕ ಮೆಟ್ಟಿಲುಗಳನ್ನು ಏರುತ್ತ ಹೋಗುತ್ತಿದ್ದಂತೆ ಏದುಸಿರು ಆರಂಭವಾಗುತ್ತದೆ. ಗಮ್ಯವನ್ನು ತಲುಪಿದೊಡನೆ ತೀರ್ಥ ರಾಮೇಶ್ವರ ದೇವಸ್ಥಾನ ಹಾಗೂ ಸುತ್ತ ಮುತ್ತಲಿನ ಶಾಂತ, ಸುಂದರ ನಿಸರ್ಗ ದಣಿವನ್ನೆಲ್ಲಾ ಮರೆಸಿಬಿಡುತ್ತದೆ.

ದೇವಸ್ಥಾನದ ಆವರಣದಲ್ಲಿ ಸಿಗುವ ಪುಟ್ಟ ನೀರಿನ ಹೊಂಡ ಇಲ್ಲಿನ ವಿಶೇಷ. ಈ ಹೊಂಡಕ್ಕೆ ನೀರು ಗುಪ್ತವಾಗಿ ಕಾಶಿಯಿಂದ ಹರಿದು ಬರುತ್ತದೆ ಎಂಬ ನಂಬಿಕೆ ಇದೆ. ಈ ನೀರು ಚಲನಶೀಲವಲ್ಲದಿದ್ದರೂ ಎಷ್ಟೇ ದಿನಗಳಾದರೂ ಮಲಿನವಾಗುವುದಿಲ್ಲ. ಇಲ್ಲಿನ ನೀರಿಗೆ ವಿಶಿಷ್ಟವಾದ ರುಚಿ ಇದ್ದು, ಹಲವಾರು ರೋಗಗಳನ್ನು ಗುಣಪಡಿಸುವ  ಶಕ್ತಿಯನ್ನು ಅದು ಹೊಂದಿದೆಯಂತೆ.  ಈ ಪುಟ್ಟ ಹೊಂಡ ಯಾವತ್ತೂ ತುಂಬಿ ನೀರು ಹೊರ ಚೆಲ್ಲುವುದಿಲ್ಲ. ಇದರಲ್ಲಿನ ನೀರನ್ನು ಯಾವುದೇ ಪ್ರಮಾಣದಲ್ಲಿ ಮೇಲೆತ್ತಿಕೊಂಡಾಗಲೂ ನೀರಿನ ಮಟ್ಟದಲ್ಲಿ ವ್ಯತ್ಯಾಸವಾಗುವುದಿಲ್ಲವೆಂದು ಈ ದೇವಸ್ಥಾನದ ಅರ್ಚಕರಾದ ಶಿವಕುಮಾರ್‌ ಹೇಳುತ್ತಾರೆ. 

  ಮುಖ್ಯ ದೇಗುಲದಲ್ಲಿ ಕಂಡು ಬರುವ ಲಿಂಗವು ಉದ್ಭವ ಮೂರ್ತಿಯಾಗಿದೆ. ರಾಮ ಸೀತೆಯರು ವನವಾಸದಲ್ಲಿದ್ದಾಗ ಈ ಸ್ಥಳಕ್ಕೆ ಬಂದಿದ್ದರು.  ಸೀತೆಗೆ ಬಾಯಾರಿಕೆಯಾಗಿ ನೀರಿಗಾಗಿ ರಾಮನನ್ನು ಯಾಚಿಸುತ್ತಾಳೆ. ಆಗ ರಾಮನು ಯಾವ ಸ್ಥಳದ ನೀರು ಬೇಕೆಂದಾಗ ಕಾಶಿಯ ನೀರನ್ನು ಕೇಳುತ್ತಾಳೆ. ಆಗ ರಾಮನು ಈಗಿರುವ ಹೊಂಡವನ್ನು ಕಟ್ಟಿ ಅಲ್ಲಿಗೆ ಕಾಶಿಯಿಂದ ನೀರು ಹರಿದು ಬರುವಂತೆ ಮಾಡುತ್ತಾನೆ. ನಂತರ ಸೀತೆ ಪೂಜಿಸಲು ಮೂರ್ತಿಯನ್ನು ಬೇಡಿದಾಗ ಲಿಂಗೋದ್ಭವವನ್ನು ಮಾಡಿದನೆಂದು ಪೂರ್ವಜರು ಹೇಳುತ್ತಾರೆ.

 ನಮ್ಮಲ್ಲಿ ಬ್ರಹ್ಮನ ದೇವಾಲಯಗಳು ಅತೀ ವಿರಳವಾಗಿ ಕಂಡು ಬರುತ್ತವೆ. ದೇವಸ್ಥಾನದ ಎಡ ಪಾರ್ಶ್ವದಲ್ಲಿ ಚತುರ್ಮುಖ ಬ್ರಹ್ಮನ ಪುಟ್ಟ ದೇವಾಲಯವೊಂದಿದ್ದು, ಮೂರು ಮುಖಗಳನ್ನು ಎದುರಿನಿಂದ ನೋಡಬಹುದು. ನಾಲ್ಕನೇ ಮುಖವು ಹಿಂದೆ ಇರುವ ದರ್ಪಣದಲ್ಲಿ ಗೋಚರಿಸುತ್ತದೆ. 

ವಿಜಯನಗರದ ಅರಸರು 1339ರಲ್ಲಿ ಈ ದೇವಸ್ಥಾನವನ್ನು ನಿರ್ಮಿಸಿದರು. ನಂತರ ಬಹಮನಿ ಸುಲ್ತಾನರ ಆಡಳಿತದಲ್ಲಿ ಈ ದೇಗುಲವು ದಾಳಿಗೆ ಒಳಗಾಯಿತು. ಪುನಃ ಮೈಸೂರು ಅರಸರ ಆಡಳಿತಾವಧಿಯಲ್ಲಿ ಪುನರುಜ್ಜೀವನಗೊಂಡಿತು ಈ ತೀರ್ಥ ರಾಮೇಶ್ವರ ಎನ್ನುತ್ತದೆ ಇತಿಹಾಸ.  ರಾಮನಿಂದ ತೀರ್ಥ ಮತ್ತು ಈಶ್ವರ ಉದ್ಭವಗೊಂಡ ಕಾರಣಕ್ಕೆ ಈ ಕ್ಷೇತ್ರಕ್ಕೆ ತೀರ್ಥ ರಾಮೇಶ್ವರ ಎಂಬ ಹೆಸರು ಬಂದಿದೆ ಎಂದು ಹೇಳುತ್ತಾರೆ.  ದೀಪಾವಳಿ, ದಸರಾ, ಸಂಕ್ರಾತಿಯಂಥ ವಿಶೇಷ ದಿನಗಳಲ್ಲಿ ಅದ್ದೂರಿ ಪೂಜೆ ನಡೆಯುತ್ತದೆ.

 ತೀರ್ಥ ರಾಮೇಶ್ವರ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದು, ಆಡಳಿತವನ್ನು ಸ್ಥಳೀಯ ಟ್ರಸ್ಟ್‌ ನೋಡಿಕೊಳ್ಳುತ್ತದೆ. ಎಂಥವರನ್ನೂ ಮಂತ್ರ ಮುಗ್ಧಗೊಳಿಸುವ ದೈವಿಕ ತಾಣವಾದ ಈ ಕ್ಷೇತ್ರ, ಸೂಕ್ತ ನಿರ್ವಹಣೆ ಇಲ್ಲದೆ ಕಡೆಗಣಿಸಲ್ಪಟ್ಟಿದೆ.  ಶೌಚಾಲಯ ಹಾಗೂ ಶುಚಿತ್ವದ ಅವ್ಯವಸ್ಥೆಯ ಕಾರಣದಿಂದ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ವಿರಳ. ಇಲ್ಲಿರುವ ಒಂದು ಟೀ ಅಂಗಡಿಯನ್ನೂ ಮುಚ್ಚಿರುವುದರಿಂದ ನೀರು-ಆಹಾರದಂಥ ಅಗತ್ಯಗಳನ್ನು ಪ್ರವಾಸಿಗರೇ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ.

 ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಬೆಳಗುತ್ತಿ ಗ್ರಾಮದಲ್ಲಿ ಈ ದೇವಸ್ಥಾನವಿದೆ. ಶಿವಮೊಗ್ಗದಿಂದ 39 ಕಿ.ಮೀ. ಶಿಕಾರಿಪುರ ಮಾರ್ಗವಾಗಿ ಹೋಗಬಹುದು. ಬೆಂಗಳೂರಿನಿಂದ ಸುಮಾರು 340 ಕಿ.ಮೀ ಆಗುತ್ತದೆ. 

ಗೌರಿ ಚಂದ್ರಕೇಸರಿ   

ಟಾಪ್ ನ್ಯೂಸ್

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.