ಶಿಲ್ಪಗಳ ರಮ್ಯಲೋಕ


Team Udayavani, Feb 9, 2019, 1:00 AM IST

6.jpg

ನೀರಾವರಿ ನಿಗಮದ ಅನುದಾನದಿಂದ ನಿರ್ಮಾಣಗೊಂಡಿರುವ ಈ ಉದ್ಯಾನವನದಲ್ಲಿ ಹಳ್ಳಿಯ ವೈಭವದ ಶಿಲ್ಪಗಳಾಗಿ ಅರಳಿದೆ. ಕುರಿಮಂದಿಯೊಂದಿಗಿರುವ ಕುರಿಗಾಹಿ, ಉಳುಮೆಗೆ ಸಜ್ಜಾಗಿ ನಿಂತ ರೈತ, ಕೋಲಾಟದ ಪದಕ್ಕೆ ಹೆಜ್ಜೆ ಹಾಕಲು ಸಿದ್ಧವಾಗಿ ನಿಂತ ಕಲಾವಿದ, ಚಳವಳಿಗೆಂದು ಹಿಂಡಾಗಿ ಹೊರಟ ನಿಂತಿರುವ ಸಮೂಹ… ಇಂಥವೇ ಆಪ್ತ ಭಾವಗಳ ಶಿಲ್ಪಕಲಾಕೃತಿಗಳು ಎಲ್ಲರನ್ನೂ ಕೈ ಬೀಸಿ ಕರೆಯುತ್ತವೆ….
     
ಇಲ್ಲಿ ಯಾರನ್ನು ಗಲ್ಲಿಗೇರಿಸುತ್ತಿದ್ದಾರೆ ಅಂತ ನೋಡಿದರೆ ಯಾರನ್ನೂ ಗಲ್ಲಿಗೇರಿಸುತ್ತಿಲ್ಲ? ಇಲ್ಲಿ ಹಲಗೆ ಬಾರಿಸುತ್ತಿದ್ದಾರಾ ಅಂತ ಗಮನಿಸಿದರೆ ಯಾವ ಶಬ್ದವು ಕೇಳುತ್ತಿಲ್ಲ, ಕುರಿಗಾಹಿಯೊಬ್ಬ ಕಾಯುತ್ತಿದ್ದಾನೆ. ಆದರೆ ಕುರಿಗಳು ಮುಂದೆ ಹೋಗುತ್ತಿಲ್ಲ, ಹೊಲವನ್ನು ಉಳುತ್ತಿದ್ದಾನೆ, ಆದರೆ ಎತ್ತುಗಳು ಮುಂದೆ ಹೋಗುತ್ತಿಲ್ಲ, ಯಾರೋ ಸ್ವಾತಂತ್ರ್ಯಕ್ಕಾಗಿ ಚಳವಳಿ ನಡೆಸಿದವರ ಪೋಷಾಕು ಧರಿಸಿ ನಿಂತಿದ್ದಾರೆ. ಆದರೆ, ಅವರಾರೂ ಮುಂದೆ ಸಾಗುತ್ತಿಲ್ಲ…

  ಏನಿದು ಅಂತೀರಾ! 
    ಹೌದು …. ಇದೊಂದು ಸುಂದರವಾದ ಮಾಯಾಬಜಾರ್‌ನ ಚಿತ್ರಣ. 
ಇಲ್ಲಿ ಎಲ್ಲವೂ ಮನಮೋಹಕ. ಕಣ್ಣು ಹಾಯಿಸಿದಷ್ಟು ಉದ್ದಕ್ಕೂ ಜಗ್ಗಲಿ ಕುಣಿತ, ಕೋಲಾಟ, ಡೊಳ್ಳು ಕುಣಿತ, ಭತ್ತದ ನಾಟಿ, ಬೇಸಾಯ ಮಾಡುವುದು, ಹಿರಿಯರು ದನ ಮೇಯಿಸುವುದು, ಮಂಗಳ ವಾದ್ಯ, ಭಜನೆಯಂಥ ದೇಶಿಯ ಕಲೆಗಳ ದೃಶ್ಯವನ್ನು  ಶಿಲ್ಪಕಲೆಗಳಲ್ಲಿ ಆರಳಿಸಲಾಗಿದೆ. ಹಾಗೆಯೇ, ಇವರ‌ ಜೀವನದ ಅವಿಭಾಜ್ಯ ಅಂಗವಾದ ಕೃಷಿ ಮತ್ತು ದನ, ಎಮ್ಮೆ, ಹೈನುಗಾರಿಕೆ  ಮುಂತಾದುವುಗಳ ಚಿತ್ರಣಗಳನ್ನು ಶಿಲ್ಪಗಳ ರೂಪದಲ್ಲಿ ಆರಳಿಸಲಾಗಿದೆ. 

  ಇಂಥಹದೊಂದು ರಮ್ಯಲೋಕ ಸೃಷ್ಟಿಯಾಗಿರುವುದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಂಜನಾಪುರ ಜಲಾಶಯದ ಪಕ್ಕದಲ್ಲಿ. 

ಸುಮಾರು 6 ಎಕರೆ ಪ್ರದೇಶದಲ್ಲಿ  ನೀರಾವರಿ ನಿಗಮದ ಅನುದಾನದಲ್ಲಿ ಈ ಉದ್ಯಾನವನ ನಿರ್ಮಾಣವಾಗಿದೆ. ಉದ್ಯಾನವನದ ಒಳ ಹೊಕ್ಕರೆ,  ಯಾವುದೋ ಒಂದು ಹಳ್ಳಿಯಲ್ಲಿ ಇದ್ದೇವೆ ಅನ್ನುವ ಭಾವ ಮೂಡುತ್ತದೆ. ಅದರಲ್ಲೂ ಸ್ವಾತಂತ್ರ್ಯ ಹೋರಾಟದ ನೆನಪು ಮಾಡುವ ದೃಶ್ಯಾವಳಿಯು, ಸ್ವಾತಂತ್ರ ಸಂಗ್ರಾಮದ ದಿನಗಳಲ್ಲಿ ತನ್ನದೇ ಕೊಡುಗೆ ನೀಡಿದ ಇದೇ ಜಿಲ್ಲೆಯ ಈಸೂರು ಗ್ರಾಮದ ಹೋರಾಟವನ್ನು ನೆನಪಿಸುತ್ತದೆ. 1942ರ ಮಹಾತ್ಮ ಗಾಂಧೀಜಿ ನೇತೃತ್ವದ ಕ್ವಿಟ್‌ ಇಂಡಿಯಾ( ಭಾರತ ಬಿಟ್ಟು ತೊಲಗಿ)  ಚಳವಳಿಯಲ್ಲಿ ಇಡೀ ಗ್ರಾಮವೇ ಭಾಗವಹಿಸಿತ್ತು. ಆ ವೇಳೆ ಹೋರಾಟಗಾರರನ್ನು ಗಲ್ಲಿಗೇರಿಸುವಂಥ ಘಟನೆಗಳು ಕಲಾಕೃತಿಗಳ ಮೂಲಕ ಕಣ್ಮನ ಸೆಳೆಯುತ್ತವೆ. 

   ಅಮರ ಶಿಲ್ಪಿ ಜಕ್ಕಣಾಚಾರ್ಯ ಶಿಲೆಯಲ್ಲಿ ಕಲೆಯನ್ನು ಅರಳಿಸಿದ ಎನ್ನುತ್ತದೆ ಇತಿಹಾಸ. ಇತಿಹಾಸ ಪುರುಷ. ಆದರೆ ಇಲ್ಲಿನ ಜಕ್ಕಣರು ಸಿಮೆಂಟಿನಲ್ಲಿಯೇ ಶಿಲ್ಪಗಳಿಗೆ ಜೀವ ತುಂಬುವ ಕಲೆಯನ್ನು ಸಿದ್ಧಿಸಿಕೊಂಡಿದ್ದಾರೆ. ಆ ಕಲೆಯ ಮೂಲಕವೇ ಒಂದು ಸುಂದರ ಹಳ್ಳಿಯನ್ನು ಸೃಷ್ಟಿ ಮಾಡಿದಂತಿದೆ. ನಮ್ಮ ಸಂಸ್ಕೃತಿಯ ಹಳೆ ಬೇರಿನಲ್ಲಿರುವ ಎಲ್ಲ ಜಾnನವನ್ನು ಹೊಸ ಚಿಗುರಿನಂತಿರುವ ಯುವ ಪೀಳಿಗೆಗೆ ಉಣಬಡಿಸುತ್ತಿದೆ ಈ ಉದ್ಯಾನವನ. 

  ಶಿಲ್ಪಗಳ ಜೊತೆಗೆ ಉದ್ಯಾನದ ನಡುವೆ ಸಂಗೀತ ಕಾರಂಜಿಗಳಿವೆ. ಮಕ್ಕಳಿಗೆ ಆಟವಾಡಲು ಬೇಕಾದ ಪರಿಕರಗಳಿವೆ. ಉದ್ಯಾನವನವನ್ನು ಸುತ್ತಾಡಿ ಸುಸ್ತಾದರೆ ದಣಿವಾರಿಸಿಕೊಳ್ಳಲು ಆಸನಗಳಿವೆ.  ಉದ್ಯಾನವನದ ಎದುರಿಗೆ ಟೀ, ಕಾಫಿಗಾಗಿ ಇರುವ ಪುಟ್ಟ ಹೋಟೆಲ್‌ಗ‌ಳಿವೆ. ಯಾವುದೇ ಈ ಉದ್ಯಾನವನವನ್ನು ನೋಡಲು ಶುಲ್ಕವಿಲ್ಲ.  ಆದರೆ ವಾರದಲ್ಲಿ ಶನಿವಾರ, ಭಾನುವಾರ, ಮತ್ತು ಸೋಮವಾರ ಮಾತ್ರ ಬೆಳಗ್ಗೆ 10ರಿಂದ ಸಂಜೆ 5 ವರೆಗೆ ಮಾತ್ರ ಪ್ರವೇಶ ಇರುತ್ತದೆ. 

ಟಿ.ಶಿವಕುಮಾರ್‌

ಟಾಪ್ ನ್ಯೂಸ್

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.