ಶ್ರೀ ಕೃಷ್ಣ ಹೇಳಿದ 28 ತಣ್ತೀಗಳು ಯಾವುವು?

Team Udayavani, Dec 15, 2018, 8:15 AM IST

ಜೀವನವು ಒಂದು ತಣ್ತೀವನ್ನು ಅನುಸರಿಸಿಕೊಂಡು ಹೋಗಬೇಕು. ತಣ್ತೀ ಎಂದರೆ ಸಿದ್ಧಾಂತ ಎಂದರ್ಥ. ಜೀವನದಲ್ಲಿ ಒಂದು ನಿರ್ಧಿಷ್ಟವಾದ ತಣ್ತೀ ಅಥವಾ ಸಿದ್ಧಾಂತವನ್ನು ಅಳವಡಿಸಿಕೊಂಡು ಅದನ್ನು ತಪ್ಪದೆ ಪಾಲಿಸಿಕೊಂಡು ಹೋಗಬೇಕು. ಆ ತಣ್ತೀವಾದರೂ ನಮ್ಮ ಹಾಗೂ ಪರರ ಜೀವನಕ್ಕೆ ಪೂರಕವಾಗಿ ಅನ್ಯರಿಗೆ ಅನ್ಯಾಯವಾಗದ ರೀತಿಯಲ್ಲಿ ನಮ್ಮ ಗುರಿಯನ್ನು ತಲುಪಿಸುವಂತಿರಬೇಕು. ಧರ್ಮಗಳೂ ಕೂಡ ಜೀವನ ವಿಧಾನವನ್ನು ಹೇಳುವ ಸರಳ ತಣ್ತೀಗಳಿಂದ ಕೂಡಿವೆ. ಈ ಜಗತ್ತು ಎಂಬುದೇ ಒಂದು ತಣ್ತೀ. ಜಗದ ಅಥವಾ ಯುಗದ ಹುಟ್ಟು, ಬೆಳವಣಿಗೆ ಮತ್ತು ವಿನಾಶವಾಗುವುದೂ ಈ ತಣ್ತೀಗಳಿಂದಲೇ.

ಶ್ರೀ ಕೃಷ್ಣನು ಸೃಷ್ಟಿಯು ಒಳಗೊಂಡಿರುವ ಮತ್ತು ಅವುಗಳಿಂದಲೇ ಆತ್ಮಕಲ್ಯಾಣವಾಗುವ ಇಪ್ಪತ್ತೆಂಟು ತಣ್ತೀಗಳನ್ನು ಹೇಳಿ¨ªಾನೆ. ಮೋಕ್ಷ$ಧರ್ಮವನ್ನು ಹೊಂದಬೇಕಾದರೆ ಜ್ಞಾನ ಮತ್ತು ವಿಜ್ಞಾನ ಭಾವಗಳಿಂದ ಪರಿಪೂರ್ಣನಾಗಬೇಕು. ಯಾಕೆಂದರೆ ಜ್ಞಾನ, ವಿಜ್ಞಾನ, ವೈರಾಗ್ಯ, ಶ್ರದ್ಧೆ, ಭಕ್ತಿ ಇವುಗಳಿಂದಲೇ ಮೋಕ್ಷ$ಧರ್ಮವು ಪರಿಪೂರ್ಣವಾದುದಾಗಿದೆ. ಹಾಗಾಗಿ ಇಪ್ಪತ್ತೆಂಟು ತಣ್ತೀಗಳಿಂದಲೇ ಈ ಮೋಕ್ಷ$ಧರ್ಮವನ್ನು ಪಡೆಯಲು ಸಾಧ್ಯ. ಆ ಇಪ್ಪತ್ತೆಂಟು ತಣ್ತೀಗಳೆಂದರೆ ಪ್ರಕೃತಿ, ಪುರುಷ, ಮಹತಣ್ತೀ,ಅಹಂಕಾರ, ಪಂಚತನ್ಮಾತ್ರೆಗಳು (ಒಟ್ಟು ಒಂಭತ್ತು), ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು, ಒಂದು ಮನಸ್ಸು (ಒಟ್ಟು ಹನ್ನೊಂದು), ಪಂಚಮಹಾಭೂತಗಳು, ತ್ರಿಗುಣಗಳು (ಒಟ್ಟು ಎಂಟು). ಎಲ್ಲವೂ ಸೇರಿ ಒಟ್ಟಿಗೆ ಇಪ್ಪತ್ತೆಂಟು. ಆದರೆ ಎÇÉಾ ತಣ್ತೀಗಳು ಎಲ್ಲವುದರಲ್ಲೂ ಅಂತಭೂìತವಾಗಿರುವುದರಿಂದ ತಣ್ತೀಗಳನ್ನು ಕ್ರೋಢೀಕರಿಸಿ ಬೇರೆಬೇರೆ ಸಂಖ್ಯೆಯಲ್ಲಿ ಹೇಳಲಾಗಿದೆ. ಋಷಿಮುನಿಗಳು ಇಪ್ಪತ್ತಾರು ಎಂದೂ,  ಕೆಲವರು ಏಳು ಎಂತಲೂ, ಒಂಭತ್ತು ಎಂತಲೂ ನಾಲ್ಕು, ಆರು ಎಂದೂ ಸಂಖ್ಯೆಯನ್ನು ಹೇಳಿರುತ್ತಾರೆ.

ಬ್ರಹ್ಮನಿಂದ ಹಿಡಿದು ತೃಣದವರೆಗಿನ ಎಲ್ಲ ಕಾರ್ಯಗಳಲ್ಲಿಯೂ ಈ ಇಪ್ಪತ್ತೆಂಟು ತಣ್ತೀಗಳನ್ನು ಪರಾಂಬರಿಸುವುದೇ ಜ್ಞಾನವಾಗಿದೆ. ಈ ಎÇÉಾ ತಣ್ತೀಗಳಲ್ಲಿ ಅನುಗತವಾದ ಪರಮಾತ್ಮ ತಣ್ತೀವನ್ನು ನೋಡುವುದೇ ಅಥವಾ ಅರಿಯುವುದೇ ವಿಜ್ಞಾನವೆಂದು ಶ್ರೀಕೃಷ್ಣ ವಿವರಿಸುತ್ತಾನೆ. ಸರಳವಾಗಿ ಅಣುವಿನಿಂದ ಹಿಡಿದು ಬುದ್ಧಿವಂತ ಪ್ರಾಣಿ ಮನುಷ್ಯನ ತನಕವೂ, ಪ್ರಕೃತಿಯಲ್ಲಿನ ಚರಾಚರಗಳಲ್ಲಿನ ಆಗುಹೋಗುಗಳಲ್ಲಿಯೂ ಅಡಕವಾಗಿರುವ ಸೂಕ್ಷ್ಮ ಮತ್ತು ಕಾರ್ಯಕಾರಣ ಸಿದ್ಧಾಂತಗಳೇ ಈ ಇಪ್ಪತ್ತೆಂಟು ತಣ್ತೀಗಳು. ಕತ್ತಲೆಯಿಂದಾಗಿಯೇ ದೀಪಗಳು ಹುಟ್ಟಿಕೊಂಡವು. ಆದರೆ ಆ ದೀಪಗಳು ಉರಿಯುವ ಕಾಯಕಕ್ಕೆ ಪೂರಕವಾದ ಅಂಶಗಳು ಇರಲು ಕಾರಣ ಈ ತಣ್ತೀಗಳು. ಮತ್ತು ಇದುವೇ ಪರಮಾತ್ಮ.

ವಿಜ್ಞಾನ ಎನ್ನುವುದು ವಿಶೇಷವಾದ ಜ್ಞಾನ ಎಂಬುದರ ಸಂಕೀರ್ಣ ಪದ. ಈ ವಿಜ್ಞಾನ, ಕಾರಣ ಮತ್ತು ನಿರ್ಧಿಷ್ಟತೆ ಇ¨ªಾಗ ಮಾತ್ರ ಒಪ್ಪುತ್ತದೆ. ಇಪ್ಪತ್ತೆಂಟು ತಣ್ತೀಗಳೂ ಉತ್ಪತ್ತಿ, ಸ್ಥಿತಿ ಮತ್ತು ನಾಶವುಳ್ಳವುಗಳಾಗಿವೆ. ಸೃಷ್ಟಿ, ಸ್ಥಿತಿ ಮತ್ತು ಸಂಹಾರವು ಭಗವಂತನಿಂದಾಗುವಂತದ್ದು. ಅಂದರೆ ಪರಮಾತ್ಮ ತಣ್ತೀ ಇವುಗಳಿಗೆ ಕಾರಣ ಮತ್ತು ಇದೊಂದೇ ಶಾಶ್ವತ. ಶಾಶ್ವತವಾಗಿ ಅನುಗತವಾದುದೇ ವಿಜ್ಞಾನ ಎಂಬುದನ್ನು ಭಗವಂತನು ಹೇಳುತ್ತಾನೆ. ಜಗತ್ತಿನ ಉದಯ, ಉಳಿವು ಮತ್ತು ಅಳಿವಿಗೆ ಕಾರಣವಾಗಿ ಜಗತ್ತನ್ನು ತನ್ನಲ್ಲಿ ಲೀನವಾಗಿಸಿಕೊಂಡು ಉಳಿಯುವುದೇ ಸತ್‌ ತಣ್ತೀ ಅಂದರೆ ಪರಮಾತ್ಮ ತಣ್ತೀ.

ಇಪ್ಪತ್ತೆಂಟು ತಣ್ತೀಗಳೂ ನಮ್ಮ ಜೀವನದ ಗುಟ್ಟನ್ನು ಹೇಳುತ್ತವೆ. ವೈಶಾಖದ ಸುಡುಬಿಸಿಲಿಗೆ ಬರಡಾದ ಭೂಮಿಯಲ್ಲಿ ಹನಿಮಳೆಯೊಂದು ಬಿ¨ªಾಕ್ಷಣ ಚಿಗುರಿ ನಿಲ್ಲುವ ಹಸಿರಿಗೂ ಈ ತಣ್ತೀಗಳೇ ಕಾರಣ. ಜೀವನದ ನಡೆನುಡಿಗಳೂ ತತ್ತಾ$Ìನುಸಾರ ಇ¨ªಾಗ, ಆ ತಣ್ತೀಗಳು ಪರಮಾತ್ಮ ಅಂದರೆ ಸಣ್ತೀಗುಣಸಹಿತವಿ¨ªಾಗ ಮೋಕ್ಷಕ್ಕಿಂತಲೂ ಮಿಗಿಲಾದ ಪರಂಧಾಮ ಸಾಧ್ಯ.

ಬಿದ್ದ ಮಳೆಗೆ ನೆಲದ ತುಂಬೆಲ್ಲ ಹಸಿರು ಚಿಗುರಿದೆ
ಬೀಜ ಉತ್ತವರಾರೋ ಗೊತ್ತಿಲ್ಲ!
ಸಕಲಕೂ ಕಾರಣ ಪರಮಾತ್ಮ ತಣ್ತೀ!

ವಿಷ್ಣು ಭಟ್‌ ಹೊಸ್ಮನೆ 


ಈ ವಿಭಾಗದಿಂದ ಇನ್ನಷ್ಟು

 • ಅರಿ ಎಂದರೆ ಶತ್ರು ಎಂದರ್ಥ.ಈ ಆರು ವಿಧದ ಮನಸ್ಸಿನ ಭಾವಗಳು ನಮ್ಮ ಬದುಕಿಗೆ ಶತ್ರುವಾಗಿರುವುದರಿಂದ ಇವನ್ನು ಅರಿಷಡ್‌ ವರ್ಗ ಅಂದರೆ ಆರು ವೈರಿಗಳು ಎಂದು ಪರಿಗಣಿಸಲಾಗಿದೆ....

 • 1. ದೇವಸ್ಥಾನಕ್ಕೆ ಹೋಗುವುದರಿಂದ ನಮಗೆ ಅಲ್ಲಿನ ಸಾತ್ತ್ವಿಕತೆಯನ್ನು ಗ್ರಹಿಸಲು ಸಾಧ್ಯವಾಗುತ್ತದೆ ಮತ್ತು ದೇವಸ್ಥಾನದಲ್ಲಿರುವ ಸಾತ್ತ್ವಿಕ ವಾತಾವರಣದಿಂದಾಗಿ...

 • ನಮ್ಮೊಳಗಿಂದ ಭಾವವೊಂದು ಹುಟ್ಟಬೇಕಾದರೆ ಅದಕ್ಕೆ ಸೂಕ್ತವಾದ ಅವಕಾಶಬೇಕು; ಸಂದರ್ಭವೂ ಬೇಕು. ಅಳು ಬರುವ ಸಮಯದಲ್ಲಿ ನಗಲಾಗದು. ನಕ್ಕರೂ ಅದು ಕೃತಕ, ಸುಳ್ಳು ನಗು....

 • ಅಣಿಮಾ ಎಂದರೆ ದೇಹವು ಸೂಕ್ಷ್ಮರೂಪವನ್ನು ಹೊಂದುವ ಶಕ್ತಿ. ಮಹಿಮಾ ಎಂದರೆ ಅತಿ ದೊಡ್ಡರೂಪವನ್ನು ಹೊಂದುವ ಶಕ್ತಿ ಮತ್ತು ಲ ಮಾ ಎಂದರೆ ದೇಹವು ಗಾಳಿಯಲ್ಲಿ ತೇಲುವಷ್ಟು...

 • ನೆಲವನ್ನು ಪೊರಕೆಯಿಂದ ಗುಡಿಸುವಾಗ ನೆಲದ ಮೇಲೆ ಸೂಕ್ಷ್ಮ ರೇಖೆಗಳು ನಿರ್ಮಾಣವಾಗಿ ಅವುಗಳಲ್ಲಿ ಒಂದು ರೀತಿಯ ಸ್ಪಂದನಗಳು ನಿರ್ಮಾಣವಾಗುತ್ತವೆ. ಈ ರೇಖೆಗಳು ಅನಿಯುತವಾಗಿರುವುದರಿಂದ...

ಹೊಸ ಸೇರ್ಪಡೆ

 • ಹೊಸದಿಲ್ಲಿ : ಭಾರತದ ವರಿಷ್ಠ ನ್ಯಾಯಮೂರ್ತಿ (ಸಿಜೆಐ) ರಂಜನ್‌ ಗೊಗೊಯ್‌ ಅವರಿಂದು ಶನಿವಾರ ಸುಪ್ರೀಂ ಕೋರ್ಟಿನ ವಿಶೇಷ ಪೀಠದಲ್ಲಿದ್ದುಕೊಂಡು ತನ್ನ ವಿರುದ್ಧ...

 • ಇಂದು ನಿತ್ಯ ಹರಿದ್ವರ್ಣ ಕಾಡುಗಳಲ್ಲಷ್ಟೇ ಬೃಹತ್‌ ಗಾತ್ರದ ದೇವದಾರು, ತೇಗ, ಬೀಟೆ ಮೊದಲಾದ ಮರಗಳನ್ನು ಕಾಣಬಹುದು. ಆದರೆ ಸವಣೂರಿನ ಕಲ್ಮಠದಲ್ಲಿ ಸಾವಿರಾರು ವರ್ಷಗಳ...

 • Gadwall (Anas strepera) M -Duck + ಗದ್ವಾಲ್‌ ಬಾತನ್ನು ಚರ್ಲೆ ಅಥವಾ ಸರಳೆ ಬಾತು ಎಂದು ಕರೆಯಲಾಗುತ್ತದೆ. ಈ ಹಕ್ಕಿ, ನೀರಿನಲ್ಲಿ ಮುಳುಗಿ ಅಲ್ಲಿರುವ ಕ್ರಿಮಿ ಕೀಟಗಳನ್ನು ಬೇಟೆಯಾಡುತ್ತದೆ....

 • ವೃತ್ತಿಯಲ್ಲಿ ಶಿಕ್ಷಕರಾದ ಕಲ್ಯಾಣ್‌ ಕುಮಾರ್‌ ಅವರಿಗೆ ಪತ್ರಿಕೆ ಸಂಗ್ರಹಿಸುವ ಹವ್ಯಾಸ. ಇದು ಹುಟ್ಟಿದ್ದು ಪರ ಊರಿಗೆ ಪ್ರಯಾಣಿಸುವಾಗ . ಬೇಜಾರು ಕಳೆಯಲಿಕ್ಕೆ...

 • ಉದ್ದಾನ ವೀರಭದ್ರಸ್ವಾಮಿಗಳು ಈ ಆಂಜನೇಯನಿಗೆ ಲಿಂಗಧಾರಣೆ ಮಾಡಿದ್ದು, ಕೊರಳಿನಲ್ಲಿ ರುದ್ರಾಕ್ಷಿ ಮಾಲೆ ಇರುವುದು ಒಂದು ವಿಶೇಷ. ಸೊಂಟದಲ್ಲಿ ಕತ್ತಿ ಇರುವುದು...

 • ಅರಳಿಮರದ ಬುಡದಲ್ಲಿ ಕುಳಿತು ಸರ್ವಾಂತರ್ಯಾಮಿಯಾದ ಭಗವಂತನ ಸ್ವರೂಪವನ್ನು ಯೋಗಿಗಳಿಂದ ಕೇಳಿ ತಿಳಿದ ರೀತಿಯಲ್ಲೇ ಧ್ಯಾನ ಮಾಡತೊಡಗಿದ್ದರು. ಏಕಾಗ್ರಚಿತ್ತದಿಂದ...