ಧರ್ಮ ಹೇಳುವ ಶಾಂತಿಯ ಮೂಲ ಯಾವುದು?

Team Udayavani, Aug 4, 2018, 3:25 AM IST

ಜಗತ್ತು ಕಾಲಚಕ್ರದಲ್ಲಿ ಸುತ್ತುತ್ತಲೇ ಇರುತ್ತದೆ. ಅದು ನಿಲ್ಲುವುದನ್ನು ಊಹಿಸುವುದೂ ಭಯಾನಕವೇ. ಏಕೆಂದರೆ, ಹುಟ್ಟುಸಾವಿಗೆ ಕಾರಣವಾಗುವ ಮೂಲಗಳಲ್ಲೊಂದು ಈ ಜಗತ್ತಿನ ಸುತ್ತುವಿಕೆ. ಭೂಮಿ ತಿರುಗುತ್ತಿದ್ದಂತೆ ಕಾಲ ಬದಲಾಗುತ್ತ ಹೋಗುತ್ತದೆ. ಮುಂಜಾನೆ, ಮಧ್ಯಾಹ್ನ, ರಾತ್ರಿ ಮತ್ತೆ ಮುಂಜಾನೆ. ಅಲ್ಲದೆ ಪ್ರತಿ ಕ್ಷಣದಲ್ಲಿಯೂ ಹೊಸ ಅನುಭವಗಳು ಮಾನವನಿಗೆ ದೊರಕುತ್ತಲೇ ಹೋಗುತ್ತವೆ. ಅವುಗಳು ಮನಸ್ಸಿಗೆ ಆನಂದವನ್ನುಂಟು ಮಾಡಬಹುದು ಅಥವಾ ದುಃಖವನ್ನುಂಟು ಮಾಡಬಹುದು. ಆ ಕ್ಷಣ ಒಬ್ಬ ಮನುಷ್ಯನನ್ನು ತೀವ್ರವಾದ ಸಮಸ್ಯೆಯಿಂದ ಹೊರದಬ್ಬಿ ಬಿಡಬಹುದು ಅಥವಾ ನೋವಿನ ಕೂಪಕ್ಕೆ ತಳ್ಳಬಹುದು. ಹಾಗಾಗಿ, ಮನುಷ್ಯ ಇವತ್ತು ಇದ್ದಂತೆ  ನಾಳೆ ಇರುತ್ತಾನೆಂದು ಹೇಳಲಾಗದು. ಇದೇ ಬದುಕು ಎಂದುಕೊಂಡು ತಟಸ್ಥವಾಗಿದ್ದರೂ ಯಾರೂ ನೋವಿನಿಂದ ತಪ್ಪಿಸಿಕೊಂಡವರಿಲ್ಲ. ಅಶಾಂತಿಯಿಂದ ಮರುಗುವವರು, ಕೊರಗುವವರು ಜಗತ್ತಿನ ಮೂಲೆ ಮೂಲೆಯಲ್ಲಿಯೂ ಇ¨ªಾರೆ. 
ಶಾಂತಿಯಿಲ್ಲದ ಬದುಕು ಎಂಬ ಕೊರಗಿನಲ್ಲಿಯೇ ಜೀವಿಸುತ್ತಿದ್ದಾರೆ.

ಶಾಂತಿ ಎಂದರೇನು? ಶಾಂತಿ ಎಂದರೆ ಮನಸ್ಸಿನ ನೆಮ್ಮದಿಯೇ? ಸಂತೋಷವೇ? ಬದುಕಿಗೆ ಬೇಕಾಗುವ ಅಗತ್ಯಗಳ ಪೂರೈಕೆಯೇ? ಆದರೆ ಇವ್ಯಾವುವೂ ಶಾಂತಿಯ ರೂಪವಲ್ಲ. ಶಾಂತಿ ಎಂಬುದು ಮನಸ್ಸಿನ ಸಮಸ್ಥಿತಿ. 

ಯಾವುದನ್ನೂ ಬಯಸದ ಸ್ಥಿತಿ. ಇದ್ದುದರಲ್ಲಿಯೇ ಸಂತೃಪ್ತಿ ಹೊಂದುವ ಸ್ಥಿತಿ. ನಾಳೆಗಾಗಿ ಇಂದಿನ ನೆಮ್ಮದಿಯನ್ನು ಹಾಳು ಮಾಡಿಕೊಳ್ಳದ ಸ್ಥಿತಿ. ಈ ಸ್ಥಿತಿಯನ್ನು ಹೊಂದುವುದು ಸರಳವೆನಿಸಿದರೂ ಪ್ರಸ್ತುತ ಜಗತ್ತಿನಲ್ಲಿ ಅಸಾಧ್ಯದ ಮಾತೇ! ಪ್ರಸ್ತುತ ಜಗತ್ತಿನಲ್ಲಿ ಒಬ್ಬನ ಬೇಕು ಬೇಡಗಳು ಇನ್ನೊಬ್ಬನ ಬೇಕು ಬೇಡಗಳನ್ನು ಅವಲಂಬಿಸಿಕೊಂಡಿರುವುದರಿಂದ ಶಾಂತಿಯನ್ನು ಹೇಗೆ ಕಂಡುಕೊಳ್ಳಬೇಕೆಂಬುದನ್ನು ತಿಳಿಯದ ಸ್ಥಿತಿಯಲ್ಲಿ ನಾವಿದ್ದೇವೆ. ಆದರೆ ಭಗವದ್ಗೀತೆಯಲ್ಲಿ ಕೃಷ್ಣ ಶಾಂತಿಯನ್ನು ಯಾರು ಪಡೆಯಬಲ್ಲರು ಎಂಬುದನ್ನು ಸರಳವಾಗಿ ಹೇಳಿ¨ªಾನೆ. ವಿಹಾಯ ಕಾಮಾನ್‌ ಯಃ ಸರ್ವಾನ್‌ ಪುಮಾಂಶ್ಚರತಿ ನಿಃಸ್ಪೃಹಃ ಣ ನಿರ್ಮಮೋ ನಿರಹಂಕಾರಃ ಶಾಂತಿಮಧಿಗತ್ಛತಿ ಣಣ (ಭಗವದ್ಗೀತೆ ಸಾಂಖ್ಯಯೋಗ ಶ್ಲೋಕ 71)

ಇದು ಕೃಷ್ಣ ಹೇಳಿದ ಶಾಂತಿಯ ಸರಳ ಸೂತ್ರ. ಇಂದ್ರಿಯ ತೃಪ್ತಿಯ ಎಲ್ಲ ಬಯಕೆಗಳನ್ನು ತ್ಯಜಿಸಿ, ಬಯಕೆಗಳಿಂದ ಮುಕ್ತನಾದವನು, ದೊರೆತನ ಅಥವಾ ಒಡೆತನದ ಭಾವವನ್ನು ಬಿಟ್ಟಿರುವವನು ಹಾಗೂ ಅಹಂಕಾರವಿಲ್ಲದವನು ನಿಜವಾದ ಶಾಂತಿಯನ್ನು ಪಡೆಯಬಲ್ಲ. ಮನುಷ್ಯನ ದೌರ್ಬಲ್ಯ ಇರುವುದೇ ಈ ಇಂದ್ರಿಯ ತೃಪ್ತಿಯ ಆಸೆಗಳನ್ನು ಈಡೇರಿಸುವುದರಲ್ಲಿ. ಇಂತಹ ಆಸೆಗಳಿಂದ ಮುಕ್ತನಾಗದ ಹೊರತು ಆತ ನೆಮ್ಮದಿ ಅಥವಾ ಶಾಂತಿಯನ್ನು ಹೊಂದಲು ಸಾಧ್ಯವಿಲ್ಲ. ನಾಲಿಗೆಯ ಚಪಲಕ್ಕೆ, ದೇಹದ ಆರೋಗ್ಯಕ್ಕೆ, ಹಾನಿಕಾರಕವಾದ ಆಹಾರವನ್ನು ಸೇವಿಸಿ, ನಂತರ ಆ ಆಹಾರದಿಂದಲೇ ಆಸ್ಪತ್ರೆಗೆ ಅಲೆಯುವಂತಾಗಿ ತನ್ನ ಜೀವನದ ಶಾಂತಿಯನ್ನೇ ಕಳೆದುಕೊಳ್ಳಬಹುದು. ಇದಕ್ಕೆ ಕಾರಣ ಇಂದ್ರಿಯ ಆಸೆಗಳು. ಮೊದಲು ಅದನ್ನು ನಿಗ್ರಹಿಸಬೇಕು. ಮನುಷ್ಯನ ಇಂದ್ರಿಯಗಳ ಚಪಲಗಳಿಗೆ ಕೊನೆಯೆಂಬುದಿಲ್ಲ. ಹಾಗಾಗಿ, ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ಅವನ್ನು ನಿಗ್ರಹಿಸಿದಾಗಲೇ ಶಾಂತಿಯನ್ನು ಪಡೆಯಬಹುದು. ತಾನೇ ಹಿರಿಯ ಅಥವಾ ಒಡೆಯ ಎಂಬ ಭಾವವನ್ನು ಮೊದಲು ತ್ಯಜಿಸಬೇಕು. ಅಶಾಂತಿಯ ಮೂಲ ಆಗರವೇ ಈ ಮಾಲೀಕತ್ವದ ಗುಣ. ಎಲ್ಲವೂ ತನ್ನದು ಎಂದು ಎಲ್ಲರನ್ನೂ ಒಡೆತನದ ಭಾವದಿಂದ ಕಾಣುವವನಿಗೆ ಎಂದಿಗೂ ನೆಮ್ಮದಿಯಿರುವುದಿಲ್ಲ. ಈ ಜಗತ್ತಿನಲ್ಲಿ ತನ್ನದು ಎಂಬುದು ಯಾವುದೂ ಇಲ. ಯಾವುದಕ್ಕೂ ನಾನೂ ಒಡೆಯನಲ್ಲ ಎಂಬುದರ ಜೊತೆಗೆ, ತಾನು ಸೇವಕ ಎಂಬ ಭಾವವಿದ್ದಲ್ಲಿ ಶಾಂತಿಯ ಹಾದಿ ಸುಲಭ.

ಅಹಂಕಾರ ಎಂಬ ಪೊರೆ

 ಅಹಂಕಾರವನ್ನು ತೊರೆದವನು ಶಾಂತಿಯನ್ನು ಹೊಂದಬಲ್ಲ. ಅಹಂನಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂಬುದು ಸತ್ಯವಾದ ಮಾತು. ಹಮ್ಮನ್ನು ಬಿಟ್ಟರೆ ನೆಮ್ಮದಿ ಕಣ್ಣಿಗೆ ಕಾಣುತ್ತದೆ. ಅಹಂಕಾರವೆಂಬುದು ಕಣ್ಣಿಗೆ ಕಟ್ಟಿದ ಪೊರೆಯಂತೆ. ಆತನಿಗೆ ಯಾವುದೂ ಸ್ಪಷ್ಟವಾಗಿ ಗೋಚರಿಸುವುದಿಲ್ಲ, ಆದರೆ ತಾನು ನೋಡಿದ್ದೇ ಸತ್ಯ ಎಂಬ ಭ್ರಮೆಯಲ್ಲಿ ತನ್ನ ಮನಶ್ಯಾಂತಿ ಯ ಜೊತೆಗೆ ಇತರರ ಶಾಂತಿಯನ್ನೂ ಕೆಡಿಸಲು ಕಾರಣವಾಗುತ್ತಾನೆ. ಹಾಗಾಗಿ, ಎಲ್ಲಾ 
ಬಯಕೆಗಳನ್ನೂ ಒಡೆತನದ ಭಾವವನ್ನೂ ದರ್ಪವನ್ನೂ ತೊರೆದಾಗ ಮಾತ್ರ ಶಾಂತಿ ಸಿಗುತ್ತದೆಂಬುದನ್ನು ಧರ್ಮ ಹೇಳುತ್ತದೆ.

ಶಾಂತಿಯ ಮೂಲ: ಧರ್ಮವನ್ನು ಧರ್ಮದ ರೀತಿಯಲ್ಲಿಯೇ ಅನುಸರಿಸಿ ಆಚರಿಸಿದರೆ ಶಾಂತಿಯನ್ನು ಅರಸಿಕೊಂಡು ಎಲ್ಲಿಗೂ ಹೋಗಬೇಕಾಗಿಲ್ಲ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಶ್ರೀ ಮಹಾವಿಷ್ಣುವಿನ ದಶಾವತಾರಗಳಲ್ಲಿ ಕೃಷ್ಣಾವತಾರಕ್ಕೆ ವಿಶಿಷ್ಟ ಮಹಣ್ತೀವಿದೆ. ಕೃಷ್ಣಾವತಾರಕ್ಕೆ ಹೋಲಿಸಿದರೆ ಇನ್ನಿತರ ಅವತಾರಗಳಲ್ಲಿ ದೇವರು ಸಾಮಾನ್ಯ...

  • ಎದೆ, ಹಣೆ, ಕಣ್ಣು, ಮನಸ್ಸು, ಮಾತು, ಕೈಗಳು ಪದಗಳು ಮತ್ತು ಮೊಣಕಾಲುಗಳನ್ನು ನೆಲಕ್ಕೆ ತಾಗಿಸಿ ನೆಲದಲ್ಲಿ ಉದ್ದಂಡ ನಮಸ್ಕಾರ ಮಾಡುವುದಕ್ಕೆ ಸಾಷ್ಟಾಂಗ ನಮಸ್ಕಾರ ಎನ್ನುತ್ತಾರೆ....

  • ಆಡಂಬರವಿಲ್ಲದ, ಶುದ್ದವಾದ ಭಕ್ತಿ ನಮ್ಮೊಳಗೆ ಹುಟ್ಟಬೇಕು. ಯಜ್ಞಮಾಡಿಯೇ ದೇವರನ್ನು ಸಂಪ್ರೀತಿಗೊಳಿಸುತ್ತೇನೆ ಎಂಬುದು ನಮ್ಮೊಳಗಿನ ಅಹಂ ಅಷ್ಟೆ. ಯಜ್ಞದಲ್ಲಿ...

  • ರಾಮಾಯಣದಲ್ಲಿ ಶ್ರೀರಾಮಚಂದ್ರ ಭರತನಿಗೆ ರಾಜ್ಯಭಾರವನ್ನು ಒಪ್ಪಿಸಿ ಹದಿನಾಲ್ಕು ಕಿವಿಮಾತನ್ನು ಹೇಳುತ್ತಾನೆ. ಆ ಹದಿನಾಲ್ಕು ಕಿವಿಮಾತುಗಳು ಇವತ್ತಿಗೂ ಪ್ರಸ್ತುತ....

  • ಅರಿ ಎಂದರೆ ಶತ್ರು ಎಂದರ್ಥ.ಈ ಆರು ವಿಧದ ಮನಸ್ಸಿನ ಭಾವಗಳು ನಮ್ಮ ಬದುಕಿಗೆ ಶತ್ರುವಾಗಿರುವುದರಿಂದ ಇವನ್ನು ಅರಿಷಡ್‌ ವರ್ಗ ಅಂದರೆ ಆರು ವೈರಿಗಳು ಎಂದು ಪರಿಗಣಿಸಲಾಗಿದೆ....

ಹೊಸ ಸೇರ್ಪಡೆ