ದುಃಖದ ಮೂಲ ಯಾವುದು?

Team Udayavani, Jan 12, 2019, 12:15 AM IST

ಮಾನವನಿಗೆ ಬದುಕಿಗೆ ಮೂಲ ಅಗತ್ಯಗಳೆಂದರೆ ಹೊಟ್ಟೆ, ಬಟ್ಟೆ ಮತ್ತು ಕಟ್ಟೆ. ಅಂದರೆ ಆಹಾರ, ಮಾನ ಕಾಪಾಡಿಕೊಳ್ಳಲು ಬಟ್ಟೆ ಹಾಗೂ ವಾಸಕ್ಕೆ ಅಗತ್ಯವಿರುವ ಸಣ್ಣದೊಂದು ಸೂರು. ಈ ಮೂರಿದ್ದರೆ ಸಾಕು, ಮನುಷ್ಯನು ಬದುಕಬಹುದು. ಆದರೆ, ಇವನ್ನು ಬಿಟ್ಟು ಇನ್ನೂ ಒಂದು ಅಗತ್ಯವಾದ ಸಂಗತಿಯಿದೆ. ಅದುವೇ ಸಂತೋಷ ಅಥವಾ ನೆಮ್ಮದಿ. ಹೊಟ್ಟೆಗೆ, ಬಟ್ಟೆಗೆ ಮತ್ತು ಕಟ್ಟೆಗೆ ಎಷ್ಟೇ ಇದ್ದರೂ ಮನಸ್ಸು ಸಂತೋಷವನ್ನು ಹೊಂದದೇ ಇದ್ದಲ್ಲಿ ಅಥವಾ ಚಿಂತೆ- ದುಃಖಗಳಿಂದ ಕೂಡಿದ್ದಲ್ಲಿ, ಬದುಕಿನಲ್ಲಿ ಎಲ್ಲವೂ ಇದ್ದೂ ಏನೂ ಇಲ್ಲದಂತೆ.

ಹಾಗಾಗಿ, ಮನುಷ್ಯನು ದುಃಖ-ಸಂಕಟಗಳಿಂದ ದೂರವಿರಲು ಬಯಸುತ್ತಾನೆ. ಆದರೂ ಆತ ವಿಷಯ ಭೋಗಗಳೆಡೆಗೆ ಆಕರ್ಷಿತನಾಗುವುದೇ ಹೆಚ್ಚು. ಇದರಿಂದ ಆ ಕ್ಷಣ ಮನಸ್ಸಿಗೆ ಸಂತಸವಾಗಿರಬಹುದು ಅಥವಾ ಆಗದೇ ಇರಲೂಬಹುದು. ಇದರ ಫ‌ಲವು ಹೆಚ್ಚಿನ ಬಾರಿ ದುಃಖವೇ ಆಗಿರುತ್ತದೆ. ಇವತ್ತಿಗೂ ಮನುಷ್ಯ ನೆಮ್ಮದಿಯನ್ನು ಹುಡುಕುತ್ತಲೇ ಇ¨ªಾನೆ. ಇನ್ನಾವುದೋ ದುಃಖದ ಸಂಗತಿಯನ್ನು ಮರೆಯುವುದಕ್ಕೆ, ಮತ್ತಾವುದೋ ಸಂತೋಷವನ್ನು ಹುಡುಕಿಕೊಂಡು ಹೋಗುತ್ತಿರುತ್ತಾನೆ. ಅದು ಮತ್ತೆ ಜೀವನವನ್ನು ವಿಷಯಭೋಗದತ್ತ ತಂದು ನಿಲ್ಲಿಸುತ್ತದೆ. ಹಾಗಾದರೆ ಈ ದುಃಖದ ಮೂಲವೆಲ್ಲಿದೆ?
ಅಹಮಿತ್ಯನ್ಯಥಾಬುದ್ಧಿಃ ಪ್ರಮತ್ತಸ್ಯ ಯಥಾ ಹೃದಿ |
ಉತ್ಸರ್ಪತಿ ರಜೋ ಘೋರಂ ತತೋ ವೈಕಾರಿಕಂ ಮನಃ ||

ದುಃಖದ ಮೂಲವಿರುವುದೇ ನಮ್ಮಲ್ಲಿ. ನಮ್ಮ ಅಜ್ಞಾನದಲ್ಲಿ. ಈ ಅಜ್ಞಾನದಿಂದಾಗಿ ನಮ್ಮ ಹೃದಯದಲ್ಲಿ ನಾನು-ನನ್ನದು ಎಂಬ ಸುಳ್ಳು ಅಭಿಮಾನ ಹುಟ್ಟಿಕೊಳ್ಳುತ್ತದೆ. ಈ ನಾನು ನನ್ನದು ಎಂಬ ಸುಳ್ಳು ಮಮಕಾರವೇ ದುಃಖದ ನಿಜವಾದ ಮೂಲ. ನಮ್ಮ ಮನಸ್ಸು ಸ್ವರೂಪದಲ್ಲಿ ಸಣ್ತೀಗುಣದಿಂದಲೇ ಕೂಡಿರುವಂಥ¨ªಾಗಿದೆ. ಆದರೆ, ಸಣ್ತೀರೂಪದ ಮನಸ್ಸು ಈ ನಾನುನನ್ನದು ಎಂಬ ಅಹಂಕಾರ, ಮಮತೆಯ ಕಾರಣದಿಂದ ಸಣ್ತೀಗುಣವನ್ನು ಕಳೆದುಕೊಂಡು ನಿಧಾನವಾಗಿ ಘೋರ ರಜೋಗುಣವು ಮನಸ್ಸನ್ನು ಆವರಿಸಿಕೊಳ್ಳುತ್ತದೆ. ಆಗ ಮನಸ್ಸು ಸದಾಚಾರಗಳಿಂದ ದೂರವಾಗುತ್ತ ಹೋಗುತ್ತದೆ. ಇದರಿಂದ ಸಹಜವಾಗಿಯೇ ದುಃಖವು ಬದುಕನ್ನು ಆವರಿಸುತ್ತ ಹೋಗುತ್ತದೆ.

ಮನಸ್ಸು ಒಮ್ಮೆ ರಜೋಗುಣದಿಂದ ಆವರಿಸಲ್ಪಟ್ಟರೆ ಸತ್ವಗುಣಕ್ಕೆ ಪೊರೆಗಟ್ಟಿದಂತಾಗಿ ಮನಸ್ಸು ರಜೋಗುಣಕ್ಕನುಸಾರ ನಡೆದುಕೊಳ್ಳುತ್ತದೆ. ಅನೇಕ ಬಗೆಯ ರಜೋಗುಣವುಳ್ಳ ಸಂಕಲ್ಪವಿಕಲ್ಪದಲ್ಲಿಯೇ ಮನಸ್ಸು ತೊಡಗಿಕೊಳ್ಳುವುದರಿಂದ ಒಳ್ಳೆಯ ಯೋಚನೆಗಳು ಬರುವುದಿಲ್ಲ. ಬುದ್ಧಿಯೇ ದೋಷಪೂರಿತವಾಗುತ್ತದೆ. ಈ ರೀತಿಯ ದೋಷಪೂರಿತವಾದ ಬುದ್ಧಿಯಿಂದ ಇಂದ್ರಿಯಗಳ ಮೇಲಿನ ಹತೋಟಿ ತಪ್ಪುತ್ತದೆ. ಇಂದ್ರಿಯಲಾಲಸೆಗಳಿಗೆ ಮನಸ್ಸು ಬಲಿಯಾಗುತ್ತಲೇ ಹೋಗುತ್ತದೆ. ಕಾಮನೆಗಳಿಗೆ ವಶೀಭೂತನಾಗಿ, ರಜೋಗುಣದ ಫ‌ಲದಿಂದಾಗಿ ದುಃಖದಲ್ಲಿಯೂ ದುಃಖವಿರುವ ಕರ್ಮಗಳಲ್ಲಿಯೂ ಮಾನವ ಸಿಕ್ಕಿಹಾಕಿಕೊಳ್ಳುತ್ತಾನೆ. ಹಾಗಾಗಿ, ರಜೋಗುಣ ಮತ್ತು ತಮೋಗುಣಗಳು ಆವರಿಸದಂತೆ ನೋಡಿಕೊಳ್ಳಬೇಕು.

ಬಹಳ ಜಾಗರೂಕತೆಯಿಂದ ಮನಸ್ಸನ್ನು ಭಗವಂತನಲ್ಲಿ ನೆಟ್ಟು, ರಜೋ ತಮೋಗುಣದಿಂದ ಕೂಡಿದ ಕಾರ್ಯಗಳನ್ನು ದೋಷರೂಪದಲ್ಲಿ ನೋಡುವುದರಿಂದ ಅಂಥ ದುರ್ನಡತೆಗಳಲ್ಲಿ ಆಸಕ್ತನಾಗುವುದಿಲ್ಲ. ಇಂಥ ಲಾಲಸೆಗಳಿಗೆ ಮನವನ್ನು ಕೊಡದೆ ಸದಾ ಎಚ್ಚರವಾಗಿರಬೇಕು. ಮನಸ್ಸು ಏನನ್ನು ಕೇಳುತ್ತಿದೆ? ಯಾಕಾಗಿ? ಮತ್ತು ಅದರ ಫ‌ಲವೇನು ಎಂಬುದನ್ನು ಚಿಂತಿಸಿ ಅದು ಸಾತ್ತಿ$Ìಕವೋ ಅಲ್ಲವೋ ಎಂಬುದನ್ನು ಪರಾಂಬರಿಸಿ ಮುಂದಿನ ಹೆಜ್ಜೆ ಇಡಬೇಕು. ಕ್ರಮಾನುಸಾರ ಅಭ್ಯಾಸದ ಮೂಲಕ ಮನಸ್ಸನ್ನು ನಿಯಂತ್ರಿಸಬೇಕು. ಪ್ರಾಣ ಮತ್ತು ಆಸನಗಳ ಮೇಲೆ ಹತೋಟಿ ಇಟ್ಟುಕೊಂಡು ವಿಷಯಾಸಕ್ತಿಯಿಂದ ಮನಸ್ಸನ್ನು ಎಳೆದುಕೊಂಡು ಆ ಮನಸ್ಸನ್ನೂ ನಿರ್ವಿಷಯವನ್ನಾಗಿಸಿ, ಆ ಮೂಲಕ ಮನಸ್ಸು ದೇವನಲ್ಲಿ ದೃಢವಾಗಿ ಸ್ಥಿರವಾದಾಗ ದುಃಖವೇ ಇಲ್ಲದ ಬದುಕು ನಮ್ಮದಾಗುತ್ತದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • -ಇಂಗ್ಲೆಂಡ್‌-ಆಸ್ಟ್ರೇಲಿಯ ತಂಡದ ನಡುವಿನ ಆ್ಯಷಸ್‌ ಟೆಸ್ಟ್‌ ಸರಣಿಯ ರೋಚಕ ಚರಿತ್ರೆ ಕ್ರಿಕೆಟ್‌ ಸಂಸ್ಥೆ ಈ ವರ್ಷದಿಂದ ಟೆಸ್ಟ್‌ ವಿಶ್ವಚಾಂಪಿಯನ್‌ಶಿಪ್‌ ಶುರು...

  • ಡಿವಿಜಿ ವಿರಚಿತ ಮಂಕುತಿಮ್ಮನ ಕಗ್ಗವು ಕನ್ನಡಿಗರ ಪಾಲಿಗೆ ಭಗವದ್ಗೀತೆ ಎಂದೇ ಜನಜನಿತ. ಕಗ್ಗಗಳು ಜನ್ಮ ತಳೆದು, ಇತ್ತೀಚೆಗೆ ತಾನೆ 75 ವರ್ಷಗಳು ತುಂಬಿದವು. ಒಂದೊಂದು...

  • -ಬೆಂಗಳೂರಲ್ಲೂ ರಂಜಿಸಿದ ಮಕ್ಕಳ ಲೀಗ್‌ -ಶಾಲಾ ಮಕ್ಕಳಿಗೊಂದು ಭವಿಷ್ಯದ ಭರವಸೆ ಎಲ್ಲೋ ಇದ್ದ ಕಬಡ್ಡಿ ಪಟುಗಳಿಗೆ ಜೀವನ ನೀಡಿದ್ದು ಪ್ರೊ ಕಬಡ್ಡಿ. ಆರ್ಥಿಕ, ಸಾಮಾಜಿಕವಾಗಿ...

  • ಚಾಲುಕ್ಯರ ರಾಜಧಾನಿ ಅಚ್ಚರಿಯ ರೂಪದಿಂದ ಸೆಳೆಯುತ್ತಿದೆ. ಪುರಾತತ್ವ ಇಲಾಖೆಯ ಕಾಯಕಲ್ಪದ ಸ್ಪರ್ಶದಿಂದ, ಕಮರಿದ್ದ ಕಲೆಯ ಬಲೆಯಲ್ಲೀಗ ನವಚೇತನ ತುಂಬಿಕೊಂಡಿದೆ....

  • ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸಮೀಪವಿರುವ ಪ್ರಸಿದ್ಧ ಪುಣ್ಯಕ್ಷೇತ್ರ. ಒಮ್ಮೆ ದನ ಕಾಯುವ ಹುಡುಗರಿಗೆ, ಸಹಸ್ರಾರು ವರ್ಷಗಳ...

ಹೊಸ ಸೇರ್ಪಡೆ