ಬೀಸಣಿಕೆ ಬಾಲದ ಬಿಳಿ ಕುತ್ತಿಗೆ ಹುಳ ಕುಡುಕ

Team Udayavani, Jan 27, 2018, 4:17 PM IST

258744.jpg

ಟಿಂಟಿಣಿ, ಟಿಂಟಿಣಿ, ಟಿಂಟಿಣಿ ಎಂದು ಗಜ್ಜೆ ಸಪ್ಪಳದಂತೆ ಕೂಗುತ್ತದೆ. ಹೀಗೆ ಕೂಗುವಾಗ ತನ್ನ ಬಾಲವನ್ನು ಬೀಸಣಿಕೆಯಂತೆ ಎತ್ತಿ -ಆಚೆ ಈಚೆ ಕುಣಿಸಿ -ನಂತರ ಮಡಚಿಕೊಳ್ಳುವುದು. ಕೀಟಗಳನ್ನು ಹಿಡಿದಾಗ ವಿಜಯೋತ್ಸಾಹವನ್ನು ತೋರಿಸಿಕೊಳ್ಳಲು ಸಿಳ್ಳೆ ಸಹ ಹೊಡೆಯುತ್ತದೆ. 

ಇದನ್ನು ಬೂದು ಬಣ್ಣದ ಹುಳ ಹುಡುಕ ಎಂದೂ ಕರೆಯುತ್ತಾರೆ. ಇದು 17 ಸೆಂ.ಮೀ ಗಾತ್ರ ಚಿಕ್ಕ ಹಕ್ಕಿ. ಹೊಗೆ ಕಪ್ಪು ಅಥವಾ ಬೂದು ಬಣ್ಣ ಈ ಹಕ್ಕಿಯಲ್ಲಿ ಕಾಣುವುದರಿಂದ ಇದಕ್ಕೆ ಬೂದು ಬಣ್ಣದ ಬಿಳಿಕುತ್ತಿಗೆ ಹುಳ ಹಿಡುಕ ಎಂಬ ಹೆಸರು ಸಹ ಬಂದಿದೆ.  ಅರ್ಧ ವರ್ತುಲಾಕಾರವಾಗಿ ಬಿಚ್ಚಿದಾಗ  ಬೂದು ಬಣ್ಣದ ಗರಿ ಕಾಣುತ್ತದೆ. ತುದಿಯಲ್ಲಿ ಬಿಳಿ ಬಣ್ಣದ ಮಚ್ಚೆ ಇದೆ. ಬೀಸಣಿಗೆಯಂತೆ ತನ್ನ ಬಾಲ ಎತ್ತಿ ಬಿಚ್ಚಿ, ಆಚೆ , ಈಚೆ ಅಲ್ಲಾಡಿಸುತ್ತಾ, ಇಲ್ಲವೇ, ಬಾಲ ಮುಚ್ಚಿ ಭೂಮಿಗೆ  ಸಮಾನಾಂತರವಾಗಿ ಕುಳಿತುಕೊಳ್ಳುವುದರಿಂದ ಇದರ ಹೆಸರಿನ ಜೊತೆ ಬೀಸಣಿಗೆ ಬಾಲದ ಹಕ್ಕಿ ಎಂಬ ಹೆಸರು ಬಂದಿದೆ. 

‘ರಿಪಿಡುರಿಡಿಯಾ ಎಂಬ ಪ್ರಬೇಧಕ್ಕೆ ಸೇರಿದ ಹಕ್ಕಿ ಇದು.  ಈ ಜಾತಿಯ ಹಕ್ಕಿಗಳ ಬಣ್ಣದಲ್ಲಿ ಸಣ್ಣಪುಟ್ಟ ವ್ಯತ್ಯಾಸ ಇದ್ದರೂ ಸಹ ಇವು ಗೂಡು ಕಟ್ಟುವರೀತಿ – ಬಾಲವನ್ನು ಬೀಸಣಿಗೆಯಂತೆ ಮೇಲೆ ಎತ್ತಿ ಕುಳಿತುಕೊಳ್ಳುವ ಬಗೆ ಒಂದೇರೀತಿ ಇರುತ್ತದೆ. 

ಈ ಲಕ್ಷಣ ಆಧರಿಸಿ ಇದನ್ನು ವರ್ಗೀಕರಿಸಲಾಗಿದೆ.  ಪಶ್ಚಿಮ ಬಂಗಾಳ, ನೇಪಾಳ, ಸಿಕ್ಕಿಂನಲ್ಲೂ ಈ ಪಕ್ಷಿ ಕಾಣಸಿಗುತ್ತದೆ. 2ಚಿಕ್ಕ ಕಣ್ಣು ,ಬಿಳಿ ಹುಬ್ಬು , ಕುತ್ತಿಗೆ ಅದರ ಕೆಳಗೆ ಎದೆಯ ಭಾಗದಲ್ಲಿ ಚಿಕ್ಕ ಬಿಳಿ ಚುಕ್ಕೆ ಇದೆ.  ಕೆಳಬರುತ್ತಾ ಬಿಳಿ ಬಣ್ಣದ ಹೊಟ್ಟೆ ಭಾಗದಲ್ಲಿ ಚುಕ್ಕೆ ಸೇರಿರುತ್ತದೆ.  ಈ ಜಾತಿಯ ಹಕ್ಕಿ ಸಾಮಾನ್ಯವಾಗಿ ಕರ್ನಾಟಕದ ಪಶ್ಚಿಮ ಘಟ್ಟ  ಕೇರಳ, ಮತ್ತು ಪಶ್ಚಿಮ ಘಟ್ಟದ ಪೂರ್ವಭಾಗದಲ್ಲೂ ಕಾಣಸಿಗುತ್ತದೆ. ಇದರ ಎದೆ ಭಾಗದ ಚುಕ್ಕೆ ಯಾವಾಗಲೂ ಇರುವುದೋ ಅಥವಾ ಮರಿಮಾಡುವ ಸಮಯದಲ್ಲಿ ಮಾತ್ರ ಉಂಟಾಗುವುದೋ? ಎಂಬ ವಿಷಯ ನಿಗೂಢವಾಗಿದೆ.  

ಗುಬ್ಬಚ್ಚಿಗಿಂತ ಸ್ವಲ್ಪ ದೊಡ್ಡದಾಗಿರುವ ಈ ಹಕ್ಕಿ ಸದಾ ಚಟುವಟಿಕೆಯಿಂದ, ಉತ್ಸಾಹದಿಂದ, ಟೊಂಗೆಯ ಮೇಲೆ ಹಾರಾಡುತ್ತಾ -ತನ್ನ ಬಾಲ ಬೀಸಣಿಗೆಯಂತೆ ಕುಣಿಸುತ್ತಾ ಇರುತ್ತದೆ. ಇದರ ಬಾಲದ ತುದಿ ವರ್ತುಲಾಕಾರವಾಗಿದೆ. ಪುಕ್ಕ ಬಿಚ್ಚಿ, ಕೆಲವೊಮ್ಮೆ ಮಡಚಿ, ಬಾಲವನ್ನು ಇಳಿಬಿಟ್ಟು ಕುಣಿಯುವುದು ಇದರ ಕುಣಿಯುವ ಪರಿ. ಇದು ಕೇವಲ ಮರಿಮಾಡುವ ಸಮಯದಲ್ಲಿ ಮಾತ್ರವೋ ಅಥವಾ ಸದಾ ಹೀಗೆ ಕುಣಿಸುವುದೋ ಎಂಬುದನ್ನು ಅವಲೋಕಿಸಬೇಕಿದೆ. ಇದು ಕುರುಚಲು ಕಾಡು, ಹೊಲ , ಉದ್ಯಾನ ನವನಗಳಲ್ಲಿ ಕಾಣುವುದು. ಭಾರತ, ಬಾಂಗ್ಲಾದೇಶ, ಸಿಲೋನ್‌, ಆಸ್ಟ್ರೇಲಿಯಾಗಳಲ್ಲೂ ಕಾಣಸಿಗುತ್ತವೆ. ಬೇರೆ ದೇಶದ ತಳಿಗಳಲ್ಲಿ ಇದರ ಮುಂದಲೆ ಕೇಸರಿ ಇದೆ. 

ಕೆಲವು ಜಾತಿಯ ಹಕ್ಕಿಗಳಲ್ಲಿ ಇದರ ಬಾಲ -ಇದರ ಶರೀರಕ್ಕಿಂತ ಉದ್ದವಾಗಿದೆ. ಅಲ್ಲದೇ ಇದರ ರೆಕ್ಕೆಯ ಉದ್ದಕ್ಕಿಂತ ಹೆಚ್ಚಿದೆ. ಇದರ ರೆಕ್ಕೆ ಫ್ಯಾನಿನಂತಿದೆ.  ಇದು ತುಂಬಾ ಕರಾರುವಕ್ಕಾಗಿ ಹಾರಿ -ಅನೇಕ ರೆಕ್ಕೆ ಹುಳಗಳನ್ನು ಹಾರಿಕೆಯ ಮಧ್ಯದಲ್ಲೆ ಹಿಡಿದು ತಿನ್ನುತ್ತದೆ.   ಟಿಂಟಿಣಿ, ಟಿಂಟಿಣಿ, ಟಿಂಟಿಣಿ ಎಂದು ಗಜ್ಜೆ ಸಪ್ಪಳದಂತೆ ಕೂಗುತ್ತದೆ. ಹೀಗೆ ಕೂಗುವಾಗ ತನ್ನ ಬಾಲವನ್ನು ಬೀಸಣಿಕೆಯಂತೆ ಎತ್ತಿ -ಆಚೆ ಈಚೆ ಕುಣಿಸಿ -ನಂತರ ಮಡಚಿಕೊಳ್ಳುವುದು. ನೀಲಗಿರಿ ಪರ್ವತ -ಹಿಮಾಲಯದ 2700 ಮೀಟರ್‌ ಎತ್ತರದ ಪ್ರದೇಶದಲ್ಲೂ ಇದು ಕಾಣುವುದು.  ಕೆಲವೊಮ್ಮೆ ಚುಕ್‌-ಚುಕ್‌ ಎಂದು ಹಾರುವ ಹುಳ ಇಲ್ಲವೇ ಕೀಟಗಳನ್ನು ಹಿಡಿದಾಗ ವಿಜಯೋತ್ಸಾಹವನ್ನು ತೋರಿಸಿಕೊಳ್ಳಲು ಸಿಳ್ಳೆ ಸಹ ಹೊಡೆಯುತ್ತದೆ. ಸುಮಾರು 3 ಮೀಟರ್‌ ಎತ್ತರದ ಕಣಿವೆಯಲ್ಲಿ ಇದರ ಗೂಡನ್ನು ನಿರ್ಮಿಸುತ್ತದೆ. ಅದರಲ್ಲಿ ತಿಳಿ ಗುಲಾಬಿ ಬಣ್ಣದ ಮೊಟ್ಟೆಯ -ದಪ್ಪ ಭಾಗದಲ್ಲಿ ಕಂದುಗಪ್ಪು ಬಣ್ಣದ ಗೆರೆಗಳಿರುವ 2-3 ಮೊಟ್ಟೆ ಇಡುವುದು. ಇದರ ಮರಿಗಳ ಪೋಷಣೆ, ಗುಟುಕು ನೀಡುವುದು ,ಮರಿಗಳ ರಕ್ಷಣೆ ಗಂಡು-ಹೆಣ್ಣು ಸೇರಿ ಮಾಡುತ್ತವೆ. 

 ಪಿ.ವಿ.ಭಟ್‌ ಮೂರೂರು 

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.