Udayavni Special

ಸನ್ಮಾರ್ಗ ತೋರುವ ಶಕ್ತಿಯೇ ಗುರು?


Team Udayavani, Aug 18, 2018, 12:13 PM IST

233.jpg

ಗುರುವಿಗೆ ತನ್ನ ಶಿಷ್ಯನ ಮೇಲೆ ಪ್ರೀತಿ ತೋರುವಾಗ ಯಾವುದೇ ಸ್ವಾರ್ಥವಿರದೆ ಆ ಮಗುವಿನ ಶ್ರೇಯಸ್ಸಿಗೋಸ್ಕರ ಪ್ರೀತಿಂದಲೇ ಜ್ಞಾನವನ್ನು ಧಾರೆಯೆರೆಯುತ್ತಾನೆ. ಆದುದರಿಂದಲೇ ಕಣ್ಣಿಗೆ ಕಾಣುವ ದೇವರೆಂದರೆ ಗುರು.

ಈ ಕಲಿಯುಗದಲ್ಲಿ ದೇವರನ್ನು ಕಂಡವರಿಲ್ಲ. ದೇವರಿದ್ದಾನೆಂಬ ಅರಿವು ಬದುಕಿನ ದಾರಿಯನ್ನು ನಿರ್ಮಿಸಿದೆ ಮತ್ತು ಆ ಅರಿವಿನ ಮೂಲ ಶಕ್ತಿಯೂ ದೇವರೇ ಆಗಿರುವುದರಿಂದ ದೇವರನ್ನು ಎಲ್ಲರೂ ಕಂಡಿದ್ದಾರೆ. ಇಲ್ಲ, ನಾನು ದೇವರನ್ನು ನೋಡಲೇ ಇಲ್ಲ ಎನ್ನುವುದು ನಮ್ಮ ಆಲೋಚನೆಯ ಸಂಕೀರ್ಣ ಸ್ವರೂಪ. ಕಣ್ಣಿಗೆ ಕಾಣುವ ದೇವರು ನಮ್ಮೆದುರಿಗೆ ಓಡಾಡುತ್ತಿದ್ದಾನೆಂದರೆ ಆಶ್ಚರ್ಯವೂ ಅಲ್ಲ; ಉತ್ಪ್ರೇಕ್ಷೆಯೂ ಅಲ್ಲ. ಹಾಗಾದರೆ ಆ ದೇವರು, ಅಂದರೆ-ಕಣ್ಣಿಗೆ ಕಾಣುವ ದೇವರು ಯಾರು?

ದೇವರು ಎಂದರೆ ಅದೊಂದು ಅತಿಮಾನುಷ ಶಕ್ತಿ. ಮನುಷ್ಯನನ್ನು ಮೀರಿದ್ದು. ಕಣ್ಣಿಗೆ ಕಾಣದ್ದು ಎಲ್ಲ ಕ್ರಿಯೆಗಳಿಗೆ ಮೂಲ ಕಾರಣವಾದದ್ದನ್ನು ನಾನು ದೇವರು ಎಂದು ಕೊಳ್ಳುತ್ತೇನೆ. ನನ್ನ ಪ್ರಕಾರ ವಿಜ್ಞಾನ ಎಷ್ಟೇ ಮುಂದುವರಿದು ಜಗತ್ತಿನ ಆಗುಹೋಗುಗಳಿಗೆ ವೈಜ್ಞಾನಿಕ ಕ್ರಿಯೆ, ಕಾರಣಗಳನ್ನು ನೀಡಿದರೂ ಆ ಕಾರಣವನ್ನು ಹುಡುಕುವ ಶಕ್ತಿ ಅಥವಾ ಬುದ್ಧಿಯನ್ನು ಕೊಟ್ಟಿದ್ದಾದರೂ ಯಾರೆಂದರೆ ಅದು ದೇವರೇ ಎಂಬುದು ನನ್ನ ಬಲವಾದ ನಂಬಿಕೆ. ಆದರೆ ಅದು ನಮ್ಮ ಕಣ್ಣಿಗೆ ಕಾಣುತ್ತಿಲ್ಲ. ಜಗತ್ತಿನಲ್ಲಿರುವ ಎಲ್ಲ ಶಕ್ತಿಗಳೂ ಕಾಣಲೇ ಬೇಕೆಂದೇನಿಲ್ಲವಲ್ಲ. ಇದು ಕಾಣದ ದೇವರು ಮತ್ತು ಕೈ ಬಿಡದ ದೇವರ ಬಗೆಗಿನ ಮಾತು. ಈ ಕಲಿಯುಗದಲ್ಲಿ ಕಣ್ಣಿಗೆ ಕಾಣುವ ದೇವರು ಇದ್ದಾನೆ ಅದರಿಂದಾಗಿಯೇ ಇವತ್ತಿಗೂ ಜಗತ್ತಿನಲ್ಲಿ ಕೆಲವಷ್ಟು ನೀತಿನಿಯಮಗಳು ಪಾಲಿಸಲ್ಪಡುತ್ತಿವೆ.

ಕಣ್ಣಿಗೆ ಕಾಣುವ ದೇವರೆಂದರೆ ಗುರು. ಅರಿವಿನ ಅಕ್ಷರವನ್ನು ಮನಸ್ಸಿನೊಳಗೆ ತುಂಬುವ ಗುರುವೇ ದೇವರು. ದೇವರನ್ನು ಕಾಣಲು ಬೇಕಾಗುವ ಪರಿಕರವನ್ನು ಒದಗಿಸಿಕೊಡುವ ಅಥವಾ ಸನ್ಮಾರ್ಗವನ್ನು ತೋರಿಕೊಡುವ ಮಹಾನ್‌ ಕಾರ್ಯ ಮಾಡುವ ಜೀವಂತ ವಿಶೇಷ ಶಕ್ತಿಯೆಂದರೆ ಗುರು. ಇದರಿಂದಾಗಿಯೇ 

ಗುರುಬ್ರಹ್ಮ ಗುರುರ್ವಿಷ್ಣು ಗುರುದೇವೋ ಮಹೇಶ್ವರಃ | ಗುರು ಸಾಕ್ಷಾತ್‌  ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ || ಎಂದು ನಮಸ್ಕರಿಸುತ್ತೇವೆ. ಇದು ಗುರುವೇ ಸರ್ವಸ್ವ ಎಂದು ಸಾರುವ ಸಂಸ್ಕೃತದ ಶ್ಲೋಕ.

ನಾವು ದೇವರನ್ನು ಸೇರಲು ಬಯಸುತ್ತೇವೆ.  ದೇವರು ಇರುವಂಥ ದಾರಿಯನ್ನು ತೋರಿಸಿ ಕೈಹಿಡಿದು ನಡೆಸುವವನು ಗುರು. ಹೊರ ಜಗತ್ತಿನ ಮುಖವನ್ನು ಪರಿಚಯಿಸುತ್ತ ಜೊತೆಗೆ ಲೋಕಕ್ಕೆ ನಮ್ಮನ್ನು ಅನಾವರಣ ಮಾಡುವವನೇ ಗುರು. ಶಿಶುತನ ಎಂಬುದು ಒಂದು ಆಕೃತಿ ರಚನೆಗೆ ತಯಾರಿಸಿಟ್ಟ ಜೇಡಿಮಣ್ಣಿನಂತೆ. ಅದಕ್ಕೆ ಸ್ಪಷ್ಟ ಆಕಾರ ಕೊಡಲು ಅಪ್ಪ-ಅಮ್ಮನ ಪರಿಶ್ರಮವಿದ್ದರೂ ಅದರ ಪರಿಪೂರ್ಣತೆಗೆ ಗುರುವಿನ ಮೊರೆ ಹೋಗಲೇ ಬೇಕು.

ಏಕೆಂದರೆ, ಮಮತೆಯ ಕಣ್ಣುಗಳು ಕೆಲವೊಮ್ಮೆ ತಂದೆತಾಯಿಯರನ್ನು ಬಂಧಿಸಿಬಿಡುವ ಅವಕಾಶ ಹೆಚ್ಚಿರುವುದರಿಂದ ಮಗು ತಪ್ಪುದಾರಿ ಹಿಡಿಯಲು ಕಾರಣವಾಗಬಹುದು. ಆದರೆ ಗುರುವಿಗೆ ಮಗುವಿನ ಮೇಲೆ ಪ್ರೀತಿಯಿದ್ದರೂ ಆತ ಶಿಕ್ಷಿಸಿಯಾದರೂ ತಪ್ಪನ್ನು ತಿದ್ದಿ ಸರಿದಾರಿಗೆ ತರಬಲ್ಲ. ಇಂದು ಜಗತ್ತಿನಲ್ಲಿ ಮಹತ್ತರ ಸಾಧನೆಯನ್ನು ಮಾಡಿದವರ ಹಿಂದೆ ಗುರಗಳ ಮಾರ್ಗದರ್ಶನ ಮತ್ತು ಶಕ್ತಿ ಎಂಬುದು ಸರ್ವಸಮ್ಮತವಾದುದು.

ಇನ್ನು ನಿಸ್ವಾರ್ಥ ಪ್ರೀತಿಯನ್ನು ಯಾರು ಕೊಡುತ್ತಾರೆಂದು ಕೇಳಿದರೆ ಅದಕ್ಕೂ ಉತ್ತರ ಗುರು. ಮಿತ್ರರು, ಬಂಧುಗಳು ಕೊಡುವ ಪ್ರೀತಿಯಲ್ಲಿ ಮುಂದೆಲ್ಲೋ  ನಮಗೆ ಸಹಾಯಕ್ಕಾಗಬಹುದೆಂಬ ಸ್ವಾರ್ಥವಿರುತ್ತದೆ. ತಂದೆ ತಾಯಿಯರಲ್ಲೂ, ತಮ್ಮ ಮುದಿತನದಲ್ಲಿ ನಮ್ಮನ್ನು ಮಕ್ಕಳು ನೋಡುತ್ತಾರೆಂಬ ಅರಿವಿಲ್ಲದ ಸ್ವಾರ್ಥ ಇದ್ದೇ ಇರುತ್ತದಂತೆ. ಆದರೆ, ಗುರುವಿಗೆ ತನ್ನ ಶಿಷ್ಯನ ಮೇಲೆ ಪ್ರೀತಿ ತೋರುವಾಗ ಯಾವುದೇ ಸ್ವಾರ್ಥವಿರದೆ ಆ ಮಗುವಿನ ಶ್ರೇಯಸ್ಸಿಗೋಸ್ಕರ ಪ್ರೀತಿಂದಲೇ ಜ್ಞಾನವನ್ನು ಧಾರೆಯೆರೆಯುತ್ತಾನೆ. ಆದುದರಿಂದಲೇ ಕಣ್ಣಿಗೆ ಕಾಣುವ ದೇವರೆಂದರೆ ಗುರು.

ಗುರು ಶಕ್ತಿ: ಅಜ್ಞಾನದ ಅಂಧಕಾರದಿಂದ ಸುಜ್ಞಾನದ ಬೆಳಕಿನೆಡೆಗೆ ಒಯ್ಯುವ ನಿಸ್ವಾರ್ಥ ಪ್ರೀತಿಯ ಪೂಜ್ಯನೀಯ ಶಕ್ತಿ. ಅಂತಹ ಗುರುವಿಗೆ ಸಾಷ್ಟಾಂಗ ವಂದನೆ.

ವಿಷ್ಣು ಭಟ್ಟ ಹೊಸ್ಮನೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಏಡ್ಸ್‌ ವಿರುದ್ಧ ಸೋತಿದ್ದ ದೇಶ ಕೋವಿಡ್‌ ಗೆದ್ದಿತು

ಏಡ್ಸ್‌ ವಿರುದ್ಧ ಸೋತಿದ್ದ ದೇಶ ಕೋವಿಡ್‌ ಗೆದ್ದಿತು

ಉದ್ಯಾವರ ಸೇತುವೆಗೆ ಢಿಕ್ಕಿ ಹೊಡೆದ ಕೆಎಸ್ ಆರ್ ಟಿಸಿ ಬಸ್ಸು: ಹಲವರಿಗೆ ಗಾಯ

ಉದ್ಯಾವರ ಸೇತುವೆಗೆ ಢಿಕ್ಕಿ ಹೊಡೆದ ಕೆಎಸ್ ಆರ್ ಟಿಸಿ ಬಸ್ಸು: ಹಲವರಿಗೆ ಗಾಯ

ಬಿಜೆಪಿಯ ಯಾವುದೇ ಶಾಸಕರು ಮಾರಾಟಕ್ಕೆ ಇರುವ ವ್ಯಕ್ತಿಗಳಲ್ಲ: ಡಿಸಿಎಂ ಸವದಿ

ಬಿಜೆಪಿಯ ಯಾವುದೇ ಶಾಸಕರು ಮಾರಾಟಕ್ಕೆ ಇರುವ ವ್ಯಕ್ತಿಗಳಲ್ಲ: ಡಿಸಿಎಂ ಸವದಿ

ಯಾದಗಿರಿಯಲ್ಲಿ ಕೋವಿಡ್ ಮಹಾಸ್ಪೋಟ ! ಬರೋಬ್ಬರಿ 60 ಜನರಿಗೆ ಸೋಂಕು ದೃಢ

ಯಾದಗಿರಿಯಲ್ಲಿ ಕೋವಿಡ್ ಮಹಾಸ್ಪೋಟ ! ಬರೋಬ್ಬರಿ 60 ಜನರಿಗೆ ಸೋಂಕು ದೃಢ

ಮಹಾಮಾರಿ ಕೋವಿಡ್ ತಡೆಯಲು 52 ವರ್ಷದ ವ್ಯಕ್ತಿಯ ನರಬಲಿ ಕೊಟ್ಟ ಅರ್ಚಕ

ಮಹಾಮಾರಿ ಕೋವಿಡ್ ತಡೆಯಲು 52 ವರ್ಷದ ವ್ಯಕ್ತಿಯ ನರಬಲಿ ಕೊಟ್ಟ ಅರ್ಚಕ!

ವೈದ್ಯಕೀಯ ಮಾನ್ಯತೆಯ ಮಾಸ್ಕ್ ಧರಿಸಿ ; ನಿಮಗೊಪ್ಪುವ ಮಾಸ್ಕ್ ಯಾವುದು?

ವೈದ್ಯಕೀಯ ಮಾನ್ಯತೆಯ ಮಾಸ್ಕ್ ಧರಿಸಿ ; ನಿಮಗೊಪ್ಪುವ ಮಾಸ್ಕ್ ಯಾವುದು?

ಯಾದಗಿರಿ, ರಾಯಚೂರಿನಲ್ಲಿ ಸೋಂಕು ಸ್ಪೋಟ: ರಾಜ್ಯದಲ್ಲಿ 178 ಹೊಸ ಪ್ರಕರಣಗಳು

ಯಾದಗಿರಿ, ರಾಯಚೂರಿನಲ್ಲಿ ಸೋಂಕು ಸ್ಪೋಟ: ರಾಜ್ಯದಲ್ಲಿ 178 ಹೊಸ ಪ್ರಕರಣಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಈ ವಾರ ಈ ಎರಡು ರಾಶಿಯ ಅವಿವಾಹಿತರಿಗೆ ಸಂಗಾತಿಯ ಆಯ್ಕೆಗೆ ಹಲವು ರೀತಿಯಲ್ಲಿ ಅವಕಾಶಗಳು ಒದಗಿಬರಲಿದೆ

ಈ ಎರಡು ರಾಶಿಯ ಅವಿವಾಹಿತರಿಗೆ ಸಂಗಾತಿಯ ಆಯ್ಕೆಗೆ ಹಲವು ರೀತಿಯಲ್ಲಿ ಅವಕಾಶಗಳು ಒದಗಿಬರಲಿದೆ

h

ವಾರ ಭವಿಷ್ಯ: ಈ ರಾಶಿಯ ಕಿಟಕಿ ಪ್ರೇಮಿಗಳಿಗೆ ಮದುವೆ ಅನಿವಾರ್ಯವಾಗಲಿದೆ

h

ವಾರ ಭವಿಷ್ಯ: ಈ ವಾರ ಈ ಎರಡು ರಾಶಿಯವರಿಗಿದೆ ಆರ್ಥಿಕ ಅದೃಷ್ಟ

h

ವಾರ ಭವಿಷ್ಯ: ಯಾರಿಗಿದೆ ಈ ವಾರ ಅದೃಷ್ಟ ಬಲ

horoscope

ವಾರ ಭವಿಷ್ಯ: ಈ ರಾಶಿಯವರಿಗೆ ಈ ವಾರ ಹಿತಶತ್ರುಗಳ ಭಾಧೆ ತಪ್ಪದು

MUST WATCH

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

ಹೊಸ ಸೇರ್ಪಡೆ

Russia

ರಷ್ಯಾದಲ್ಲಿ ವೈದ್ಯರು, ವೈದ್ಯಕೀಯ ಸಿಬಂದಿ ಪಾಡು ದಯನೀಯ

ಏಡ್ಸ್‌ ವಿರುದ್ಧ ಸೋತಿದ್ದ ದೇಶ ಕೋವಿಡ್‌ ಗೆದ್ದಿತು

ಏಡ್ಸ್‌ ವಿರುದ್ಧ ಸೋತಿದ್ದ ದೇಶ ಕೋವಿಡ್‌ ಗೆದ್ದಿತು

ಕೊಪ್ಪಳ: ಕೋವಿಡ್ ಸೋಂಕಿನಿಂದ ಗುಣಮುಖರಾದ ಇಬ್ಬರು ಆಸ್ಪತ್ರೆಯಿಂದ ಬಿಡುಗಡೆ

ಕೊಪ್ಪಳ: ಕೋವಿಡ್ ಸೋಂಕಿನಿಂದ ಗುಣಮುಖರಾದ ಇಬ್ಬರು ಆಸ್ಪತ್ರೆಯಿಂದ ಬಿಡುಗಡೆ

ವಿದ್ಯುತ್‌ ಬಿಲ್‌ ಹೆಚ್ಚುವರಿ ಹಣ ಕಡಿತಕ್ಕೆ ಒತ್ತಾಯ

ವಿದ್ಯುತ್‌ ಬಿಲ್‌ ಹೆಚ್ಚುವರಿ ಹಣ ಕಡಿತಕ್ಕೆ ಒತ್ತಾಯ

ಮತ್ತೆ ಎರಡು ದೇಶಗಳಲ್ಲಿ ಎಚ್‌ಸಿಕ್ಯು ಬಳಕೆಗೆ ತಡೆ

ಮತ್ತೆ ಎರಡು ದೇಶಗಳಲ್ಲಿ ಎಚ್‌ಸಿಕ್ಯು ಬಳಕೆಗೆ ತಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.