ನಿವೃತ್ತಿ ಯುವರಾಜ್‌ ಪಾಲಿನ ಕಹಿಸತ್ಯ


Team Udayavani, Nov 10, 2018, 3:25 AM IST

9.jpg

ಒಂದುಕಾಲದಲ್ಲಿ ಯುವರಾಜ್‌ ಸಿಂಗ್‌ ಹೆಸರು ಕೇಳುತ್ತಲೇ ಎಂಥ ಬೌಲರ್‌ಗೂ ಒಂದು ಕ್ಷಣ ನಡುಕ ಹುಟ್ಟುತ್ತಿತ್ತು. ಅಂತಹ ಸ್ಫೋಟಕ ಬ್ಯಾಟಿಂಗ್‌ನಿಂದ ಎದುರಾಳಿ ತಂಡಗಳಿಗೆ ತಲೆಬಿಸಿ ಮಾಡಿಸಿದ್ದರು. ಭಾರತ 28 ವರ್ಷಗಳ ಬಳಿಕ 2011ರಲ್ಲಿ ಏಕದಿನ ವಿಶ್ವಕಪ್‌ ಗೆದ್ದಾಗ, 2007ರಲ್ಲಿ ನಡೆದ ಪ್ರಥಮ ಟಿ20 ವಿಶ್ವಕಪ್‌ ಗೆದ್ದಾಗ ಅತಿಮುಖ್ಯ ಪಾತ್ರಧಾರಿ ಯುವರಾಜ್‌ ಆಗಿದ್ದರು. ಅವರ ನೆರವಿಲ್ಲದೇ ಈ ಎರಡು ಕೂಟಗಳನ್ನು ಗೆಲ್ಲುವುದು ಸಾಧ್ಯವೇ ಇರಲಿಲ್ಲ. ಅಂತಹ ಪ್ರಖ್ಯಾತ ಬ್ಯಾಟ್ಸ್‌ಮನ್‌ 2011ರ ವಿಶ್ವಕಪ್‌ ನಂತರ ಮಸುಕಾಗುತ್ತ ಸಾಗಿದರು. ನಿಧಾನಕ್ಕೆ ಅವರ ಓಟದಲ್ಲಿ, ಕ್ಷೇತ್ರರಕ್ಷಣೆಯಲ್ಲಿ ಸಡಿಲತೆ ಕಂಡುಬಂತು. ಮುಂದೆ ಬ್ಯಾಟಿಂಗ್‌ನಲ್ಲೂ ಕುಸಿದರು. ಪರಿಣಾಮ ಭಾರತ ತಂಡದಲ್ಲಿ ಸ್ಥಾನ ಕಡಿತ. ಇದೀಗ ಅವರು ಮರಳಿ ಬರಲು ತೀವ್ರ ಬಯಕೆ ಹೊಂದಿದ್ದರೂ ಅವರಿಗೆ ತಂಡದಲ್ಲಿ ಸ್ಥಾನ ಸಿಗುವುದು ಸಾಧ್ಯವೇ ಇಲ್ಲದ ಮಾತಾಗಿದೆ. ಹೀಗೆ ನೋಡಿದರೆ ಸದ್ಯ ಯುವರಾಜ್‌ ಮುಂದಿರುವ ಆಯ್ಕೆ ನಿವೃತ್ತಿ ಮಾತ್ರ.

ಅವರ ಸಾಮರ್ಥ್ಯ ಮಸುಕಾಗಲು ಕ್ಯಾನ್ಸರ್‌ ಕಾರಣ. 2011ರಲ್ಲಿ ಅವರು ಶ್ವಾಸಕೋಶದ ಕ್ಯಾನ್ಸರ್‌ ಚಿಕಿತ್ಸೆಗೊಳಗಾಗಿ 2012ರಲ್ಲಿ ಮತ್ತೆ ಕ್ರಿಕೆಟ್‌ ಮೈದಾನಕ್ಕೆ ಮರಳಿದರು. ಆದರೆ ಅವರು ಹಿಂದಿನ ಜಾದೂತನವನ್ನು ಕಳೆದುಕೊಂಡಿದ್ದರು.

ಯುವರಾಜ್‌ ಮೇಲೆ ಭರಸೆಯೇ ಇಲ್ಲ
 ಭಾರತ ತಂಡ ಏಕದಿನ ಮತ್ತು ಟಿ 20 ವಿಶ್ವಕಪ್‌ ಗೆಲ್ಲುವಲ್ಲಿ ಯುವರಾಜ್‌ ಸಿಂಗ್‌ ಪಾತ್ರ ಬಹು ಮಹತ್ವ¨ªಾಗಿತ್ತು. ಆದರೆ, ಬಳಿಕ ಯುವಿ ಆಟ ಮಂಕಾಯಿತು. ಫೀಲ್ಡಿಂಗ್‌ ಮತ್ತು ಬ್ಯಾಟಿಂಗ್‌ನಲ್ಲಿ ಪ್ರದರ್ಶಿಸುತ್ತಿದ್ದ ಚುರುಕುತನ ಮರೆಯಾಯಿತು. ಬೌಲಿಂಗ್‌ನಲ್ಲಿ ಕೂಡ ಯುವಿ ಸಾಮರ್ಥ್ಯ ಮೊದಲಿನಂತಿಲ್ಲ. ಯುವರಾಜ್‌ ಇದ್ದರೆ ಎಂತಹ ದೊಡ್ಡ ಮೊತ್ತವನ್ನಾದರೂ ತಲುಪಬಹುದು ಎಂಬ ಭರವಸೆ ಈಗ ಉಳಿದಿಲ್ಲ.

ತಂಡಕ್ಕೆ ಅನಿವಾರ್ಯ ಎಂಬ ಸ್ಥಿತಿಯಲ್ಲಿದ್ದ ಯುವಿ ಆಟ ಹೀಗೇಕಾಯಿತು ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಅದಕ್ಕೆ ಕಾರಣವಾಗಿದ್ದು ಫಿಟೆ°ಸ್‌. ಯುವಿ ಪದೇ ಪದೆ ಗಾಯದ ಸಮಸ್ಯೆಗೆ ಒಳಗಾದರು. ತಮ್ಮ ಹಿಂದಿನ ಫಿಟೆ°ಸ್‌, ಆರೋಗ್ಯ ಕಾಪಾಡಿಕೊಳ್ಳುವಲ್ಲಿ ವಿಫ‌ಲರಾದರು. ಇದು ಅವರ ಆಟದ ಮೇಲೆ ಪರಿಣಾಮ ಬೀರಿತು. ಮತ್ತೂಮ್ಮೆ ಅವರು ತಂಡಕ್ಕೆ ಮರಳಿದ್ದಾಗ ತಮ್ಮಲ್ಲಿ ಅದೇ ಶಕ್ತಿ ಉಳಿದಿದೆ ಎನ್ನುವುದು ಅತ್ಯದ್ಭುತ ಶತಕದ ಮೂಲಕ ತಿಳಿಸಿಕೊಟ್ಟರು. ಅದಾದ ನಂತರ ಮತ್ತೆ ಯಥಾಪ್ರಕಾರ ವೈಫ‌ಲ್ಯ ಮುಂದುವರಿಯಿತು.

ರಣಜಿ ತಂಡದಿಂದಲೂ ಹೊರಕ್ಕೆ
 ಈ ಬಾರಿ ರಣಜಿ ತಂಡಕ್ಕಾಗಿ ಪ್ರಕಟಗೊಂಡಿರುವ ಪಂಜಾಬ್‌ ತಂಡದಿಂದ ಯುವಿಯನ್ನು ಕೈಬಿಡಲಾಗಿದೆ. ಬದಲು ಯುವ ಆಟಗಾರರಿಗೆ ಮಣೆಹಾಕಲಾಗಿದೆ. ಈ ಹಿಂದೆ ಭಾರತ 2011ರ ವಿಶ್ವಕಪ್‌ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಯುವಿ, ಮುಂದಿನ ವಿಶ್ವಕಪ್‌ ಆಡುವ ಮಹಾದಾಸೆ ಹೊಂದಿದ್ದರು. ಆದರೆ ಈ ಬಾರಿಯ ವಿಜಯ್‌ ಹಜಾರೆ ಟ್ರೋಫಿಯಲ್ಲಿ ಸ್ಥಾನ ಪಡೆದಿದ್ದ ಯುವಿ ಪರವಾಗಿಲ್ಲ ಎಂಬಂತಹ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ದೇವಧರ್‌ ಟೂರ್ನಿಯಲ್ಲೂ ಸ್ಥಾನ ಪಡೆಯಲಿಲ್ಲ. ಸದ್ಯ ರಣಜಿ ತಂಡದಲ್ಲೂ ಸ್ಥಾನ ಕಳೆದುಕೊಂಡಿರುವುದು ಯುವಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಜೀವನ ಮುಕ್ತಾಯವಾಯಿತು ಎಂಬುದರ ಸ್ಪಷ್ಟ ಸೂಚನೆ. ಅಷ್ಟೇ ಅಲ್ಲದೇ ಪಂಜಾಬ್‌ನ ಮತ್ತೂಬ್ಬ ಹಿರಿಯ ಆಟಗಾರ ಹರ್ಭಜನ್‌ ಸಿಂಗ್‌ ಕೂಡ ಪಂಜಾಬ್‌ ತಂಡದಿಂದ ಹೊರಬಿದ್ದಿದ್ದು ಈ ಇಬ್ಬರೂ ನಿವೃತ್ತಿ ಅನಿವಾರ್ಯ ಎನ್ನುವ ಸ್ಥಿತಿಯಲ್ಲಿದ್ದಾರೆ. 

ತಂಡದಲ್ಲಿ  ಸ್ಥಾನ  ಬಹಳ ಕಷ್ಟ

ಗೌರವಯುತ ನಿವೃತ್ತಿ ಹೇಳಲು ಯುವರಾಜ್‌ಗೆ ಕೊನೆಯ ಅವಕಾಶ ನೀಡಬೇಕೆಂಬ ಕೂಗಿಗೆ ಮನ್ನಣೆ ನೀಡಿದರೂ, ಯಾರ ಸ್ಥಾನದಲ್ಲಿ ಅವರಿಗೆ ಅವಕಾಶ ನೀಡಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಏಕೆಂದರೆ ತಂಡದಲ್ಲಿನ ಆಟಗಾರರು ಉತ್ತಮ ಫಾರ್ಮ್ನಲ್ಲಿ¨ªಾರೆ. ಉತ್ತಮ ಫಾರ್ಮ್ನಲ್ಲಿದ್ದು ಗಾಯಗೊಂಡು ಹೊರಗೆ ಹೋದರೂ ಮತ್ತೆ ಮರಳಿ ತಂಡದಲ್ಲಿ ಸೇರಿಕೊಳ್ಳುವುದು ಕಷ್ಟ ಎಂಬಂತಹ ಪರಿಸ್ಥಿತಿ ಇದೆ. ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ಗೆ ತೀವ್ರ ಪೈಪೋಟಿ ಇದೆ. ಯುವ ಆಟಗಾರರು ಅವಕಾಶ ಸಿಕ್ಕಾಗಲೆಲ್ಲ ತಮ್ಮ ಪ್ರತಿಭೆ ಪ್ರದರ್ಶಿಸುತ್ತಿ¨ªಾರೆ. ಇದರ ನಡುವೆ ಹಿರಿಯ ಯುವರಾಜ್‌ಗೆ ಸ್ಥಾನ ಕಲ್ಪಿಸುವುದು ಸುಲಭವಲ್ಲ.

2019ರ ವಿಶ್ವಕಪ್‌ ಸ್ಥಾನ ಕನಸು
ಯುವರಾಜ್‌ ಸಿಂಗ್‌ ಮತ್ತೆ ಭಾರತ ತಂಡಕ್ಕೆ ಮರಳುವ ನಿರೀಕ್ಷೆ ಹೊಂದಿ¨ªಾರೆ. 2019ರ ವಿಶ್ವಕಪ್‌ನಲ್ಲಿ ತಂಡವನ್ನು ಪ್ರತಿನಿಧಿಸುವ ಆಸೆ ಅವರದು. ಆದರೆ ಇದು ಕನಸು ಮಾತ್ರ. ಭಾರತ ತಂಡದಲ್ಲಿ ಸ್ಥಾನಕ್ಕಾಗಿ ಇರುವ ಪೈಪೋಟಿ, ಯುವರಾಜ್‌ ಸಿಂಗ್‌ ಕಳಪೆ ಫಾರ್ಮ್ ಮತ್ತು ವಯಸ್ಸು ಅವರನ್ನು ತಂಡದಿಂದ ದೂರ ಇಟ್ಟಿದೆ.

ವಿಶ್ವಕಪ್‌ ಬಳಿಕ ನಿವೃತ್ತಿ
2019ರಲ್ಲಿ ಇಂಗ್ಲೆಂಡ್‌ ಮತ್ತು ವೇಲ್ಸ್‌ನಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್‌ ಬಳಿಕ ನಿವೃತ್ತಿ ಹೊಂದುವ ಉದ್ದೇಶ ಯುವಿಯದು. “2019’ರವರೆಗೂ ಎಲ್ಲಿ ಅವಕಾಶ ಸಿಗುತ್ತದೆಯೋ ಅÇÉೆಲ್ಲ ಆಡುತ್ತೇನೆ. ಆ ವರ್ಷ ಮುಗಿಯುತ್ತಿದ್ದಂತೆಯೇ ಕ್ರಿಕೆಟ್‌ ಪಯಣದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ. ಪ್ರತಿಯೊಬ್ಬರೂ ಒಂದಲ್ಲ ಒಂದು ದಿನ ಈ ನಿರ್ಧಾರ ತೆಗೆದುಕೊಳ್ಳಲೇಬೇಕು. 2000ನೇ ಇಸವಿಯಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡುತ್ತಿದ್ದೇನೆ. ಈಗಾಗಲೇ 17-18 ವರ್ಷವಾಗಿದೆ. ಹೀಗಾಗಿ ಮುಂದಿನ ವರ್ಷ ಅದಕ್ಕೆ ಅಂತ್ಯ ಹಾಡುತ್ತೇನೆ’ ಎಂದಿ¨ªಾರೆ.

ಗೌರವದ ಬೀಳ್ಕೊಡುಗೆ ಸಿಗುತ್ತದೆಯೇ?
ಭಾರತ ತಂಡಕ್ಕೆ ಸುದೀರ್ಘ‌ ಕಾಲ ತಮ್ಮದೆ ಕೊಡುಗೆ ನೀಡಿರುವ ಯುವರಾಜ್‌ಗೆ ಬಿಸಿಸಿಐ ಗೌರವಯುತ ಬೀಳ್ಕೊಡುಗೆ ನೀಡುತ್ತದೆಯೇ? ಅಭಿಮಾನಿಗಳಲ್ಲಿ ಈ ಕುತೂಹಲ ಮೂಡಿದೆ. ಸಚಿನ್‌ ತೆಂಡುಲ್ಕರ್‌ಗೆ ದೊರೆತ ಗೌರವದ ಬೀಳ್ಕೊಡುಗೆ ರಾಹುಲ್‌ ದ್ರಾವಿಡ್‌, ವೀರೇಂದ್ರ ಸೆಹ್ವಾಗ್‌, ವಿವಿಎಸ್‌ ಲಕ್ಷ್ಮಣ್‌ ಅವರಂತಹ ಆಟಗಾರರಿಗೆ ಸಿಕ್ಕಿರಲಿಲ್ಲ. ಈ ವಿಚಾರದಲ್ಲಿ ಕ್ರಿಕೆಟ್‌ ಪ್ರಿಯರು ಬಿಸಿಸಿಐ ಧೋರಣೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಫಾರ್ಮ್ ಕಳೆದುಕೊಂಡಿರುವ ಯುವರಾಜ್‌ಸಿಂಗ್‌ಗೆ ಬಿಸಿಸಿಐ ಕೊನೆಯ ಅವಕಾಶ ನೀಡುವ ಜತೆಯಲ್ಲಿ ಗೌರವ ನೀಡಬೇಕು ಎನ್ನುವುದು ಅಭಿಮಾನಿಗಳ ಬಯಕೆ.

ಐಪಿಎಲ್‌ 11ರಲ್ಲೂ ತೀವ್ರ ವೈಫ‌ಲ್ಯ
ಸಿಕ್ಸರ್‌ ಕಿಂಗ್‌ ಅಂತಾನೇ ಫೇಮಸ್‌ ಆಗಿರೋ ಯುವರಾಜ್‌ ಸಿಂಗ್‌, ಐಪಿಎಲ…ನಲ್ಲಿ ನಾನಾ ತಂಡಗಳಲ್ಲಿ ಆಡಿ¨ªಾರೆ. ಆದರೆ, ಅವರಿಂದ ಹೇಳಿಕೊಳ್ಳುವಂತಹ ಆಟ ಮೂಡಿಬಂದಿಲ್ಲ. 2014ರಲ್ಲಿ ಯುವಿ 14 ಕೋಟಿ ರೂಪಾಯಿಗೆ ಖರೀದಿಯಾಗಿ ಅತಿ ದುಬಾರಿ ಆಟಗಾರ ಎನಿಸಿಕೊಂಡಿದ್ದರು. ಆದರೆ, ಆಟದಲ್ಲಿ ಮಾತ್ರ ಪೂರ್ಣ ವಿಫ‌ಲರಾಗಿದ್ದರು. ಇನ್ನು 2016ರಲ್ಲಿ ಹೈದರಾಬಾದ್‌ ಸನ್‌ ರೈಸರ್ಸ್‌ ಪರ ಕಣಕ್ಕಿಳಿದಿದ್ರು. ಅಲ್ಲಿಯೂ ಸಹ ಕಳಪೆ ಪ್ರದರ್ಶನ ಅವರನ್ನು ಕಾಡಿತ್ತು.  2018 ಐಪಿಎಲ್‌ ಹರಾಜಿನಲ್ಲಿ ಹಲವು ನಿರೀಕ್ಷೆಗಳೊಂದಿಗೆ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಫ್ರಾಂಚೈಸಿ ಯುವಿಯನ್ನು ಖರೀದಿಸಿತ್ತು. ಆದರೆ ಯುವಿ, ಕಿಂಗ್ಸ್‌ ಪಂಜಾಬ್‌ನ ಎÇÉಾ ನಿರೀಕ್ಷೆಗಳನ್ನು ಹುಸಿಗೊಳಿಸಿದರು. ಐಪಿಎಲ್‌ ಸೀಸನ್‌ 11ರಲ್ಲಿ ಯುವಿ, 7 ಪಂದ್ಯಗಳಲ್ಲಿ 91.42 ಸ್ಟ್ರೈಕ್‌ ರೇಟ…ನೊಂದಿಗೆ ಕೇವಲ 64 ರನ್‌ ಕಲೆಹಾಕಿ¨ªಾರೆ. ಐಪಿಎಲ್‌ನಲ್ಲೂ ಅವರು ವಿಫ‌ಲವಾಗಿರುವುದರಿಂದ ಅಭಿಮಾನಿಗಳು ಬೇಸರಗೊಳ್ಳುವುದು ಸಹಜ. ಇಲ್ಲೇ ಹೀಗಿರುವಾಗ ಭಾರತ ತಂಡ ಅವರ ಬಗ್ಗೆ ಭರವಸೆ ಕಳೆದುಕೊಳ್ಳುವುದು ಕಹಿಸತ್ಯ.

-ಧನಂಜಯ ಆರ್‌, ಮಧು 

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.