ಬೌ ಬೌ ಮಡಿಲಿಗೆ 20 ಪ್ರಶಸ್ತಿ!

ಶ್ವಾನವೊಂದರ ಭಾವನೆಗಳ ಸುತ್ತ...

Team Udayavani, Jul 19, 2019, 5:00 AM IST

ಅದೊಂದು ಸಾಕು ಪ್ರಾಣಿ ಮತ್ತು ಬಾಲಕನೊಬ್ಬನ ಚಿತ್ರ. ಅಲ್ಲಿ ಕೆಲಸ ಮಾಡಿರುವ ಬಹುತೇಕರಿಗೂ ಅದು ಮೊದಲ ಚಿತ್ರ. ಏಕಕಾಲಕ್ಕೆ ಆರು ಭಾಷೆಯಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ. ಅಷ್ಟೇ ಅಲ್ಲ, ಒಂದಲ್ಲ, ಎರಡಲ್ಲ, ಬರೋಬ್ಬರಿ ಇಪ್ಪತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಬಾಚಿಕೊಂಡಿದೆ!

ಇಷ್ಟು ಹೇಳಿದ ಮೇಲೆ ಆ ಚಿತ್ರದ ಬಗ್ಗೆ ಕುತೂಹಲ ಇಲ್ಲದಿದ್ದರೆ ಹೇಗೆ? ನಿಜ, ಇದು ಒಂದು ನಾಯಿ ಮತ್ತು ಬಾಲಕನೊಬ್ಬನ ಕಥಾಹಂದರ ಹೊಂದಿರುವ ಚಿತ್ರ. ಅದಕ್ಕೆ ಇಟ್ಟಿರುವ ಹೆಸರು “ಬೌ ಬೌ’. ರಿಲೀಸ್‌ಗೆ ಸಿದ್ಧಗೊಂಡಿರುವ ಈ ಚಿತ್ರವನ್ನು ಎಸ್‌.ಪ್ರದೀಪ್‌ ಕಿಲಿಕರ್‌ ನಿರ್ದೇಶಿಸಿದ್ದಾರೆ. ಲಂಡನ್‌ ಟಾಕೀಸ್‌ ಮೂಲಕ ಕೆ.ನಟರಾಜನ್‌ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದ ಹಾಡು ಹಾಗು ಟ್ರೇಲರ್‌ ತೋರಿಸಿದ ಚಿತ್ರತಂಡ, ಪತ್ರಕರ್ತರ ಜೊತೆ ಸಿನಿಮಾ ಬಗ್ಗೆ ಹೇಳಿಕೊಂಡಿತು.

ಅಂದು ಮೊದಲು ಮಾತು ಶುರುಮಾಡಿದ್ದು ನಿರ್ದೇಶಕ ಎಸ್‌.ಪ್ರದೀಪ್‌ ಕಿಲಿಕರ್‌. “ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಇಲ್ಲಿ ಬಾಲಕ ಮತ್ತು ನಾಯಿ ನಡುವಿನ ಕಥೆ ಹೈಲೈಟ್‌. ಹಾಗೆ ನೋಡಿದರೆ, ನಾಯಿ ಕೂಡ ಚಿತ್ರದ ಹೀರೋ ಅಂದರೆ ತಪ್ಪಿಲ್ಲ. ಅದಕ್ಕೂ ಒಂದು ಹಾಡು ಇಡಲಾಗಿದೆ. ಅದರ ಭಾವನೆ, ಯಾತನೆ, ನೋವು-ನಲಿವುಗಳು ಹೇಗೆಲ್ಲಾ ಇರುತ್ತವೆ ಎಂಬುದನ್ನು ತೋರಿಸಲಾಗಿದೆ. ಚಿತ್ರದಲ್ಲಿ ಸಾಕಷ್ಟು ವಿಶೇಷತೆಗಳಿವೆ. ಸೆಕೆಂಡ್‌ ಹಾಫ್ನಲ್ಲಿ ಸುಮಾರು 30 ನಿಮಿಷ ಸಿನಿಮಾ ಸೈಲೆನ್ಸ್‌ ಆಗಿರುತ್ತೆ. ಇದು ಕಮರ್ಷಿಯಲ್‌ ಸಿನಿಮಾನಾ ಎನ್ನುವ ಪ್ರಶ್ನೆಗೆ, ಆ ಗೊಂದಲ ಇಲ್ಲದಂತೆ ಕಮರ್ಷಿಯಲ್‌ ಅಂಶಗಳನ್ನು ಸೇರಿಸಿ ಚಿತ್ರ ಮಾಡಿದ್ದೆವೆ. ಈಗಾಗಲೇ ಚಿತ್ರ ಹಲವು ದೇಶಗಳಲ್ಲಿ ಪ್ರದರ್ಶನ ಕಂಡಿದೆ. ಎಲ್ಲೆಡೆಯಿಂದಲೂ ಒಳ್ಳೆಯ ಮೆಚ್ಚುಗೆ ಸಿಕ್ಕಿದ್ದು, ಹಲವು ದೇಶಗಳಲ್ಲಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನೂ ಪಡೆದುಕೊಂಡಿದೆ. ಇದೊಂದು ಭಾವುಕ ಪಯಣದ ಕಥೆ. ಕಳೆದ ಎರಡುವರ್ಷಗಳ ಶ್ರಮ ಇಲ್ಲಿದೆ. ಇಲ್ಲಿ ಎಲ್ಲವೂ ಫ್ರೆಶ್‌ ಎನಿಸುವ ದೃಶ್ಯಗಳಿವೆ. ಚಿತ್ರದಲ್ಲಿ ನುರಿತು ಕಲಾವಿದರು ಇರದಿದ್ದರೂ, ಕಥೆಯೇ ಇಲ್ಲಿ ಪ್ರಧಾನ ಪಾತ್ರವಹಿಸಿದೆ. ಮನರಂಜನೆ ಜೊತೆ ಮಾನವೀಯ ಮೌಲ್ಯ ಸಾರುವ ಅಂಶಗಳು ಇಲ್ಲಿದ್ದು, ಸಿನಿಮಾ ನೋಡಿ ಹೊರಬಂದವರಿಗೆ ಹೊಸ ಫೀಲ್‌ ಸಿಗಲಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಹಾಗೂ ಬೆಂಗಾಲಿ ಭಾಷೆಯಲ್ಲೂ ಚಿತ್ರ ತೆರೆಗೆ ಬರಲಿದೆ’ ಎಂದು ವಿವರ ಕೊಟ್ಟರು ನಿರ್ದೇಶಕ ಪ್ರದೀಪ್‌ ಕಿಲಿಕರ್‌.

ಚಿತ್ರದ ಪ್ರಮುಖ ಆಕರ್ಷಣೆಯಾಗಿರುವ ಮಾಸ್ಟರ್‌ ಅಹಾನ್‌ಗೆ ಇದು ಮೊದಲ ಅನುಭವ. ಈ ಚಿತ್ರ ಮಾಡುವಾಗ, ಅಹಾನ್‌, ಕೇವಲ ಎಲ್‌ಕೆಜಿ ಓದುತ್ತಿದ್ದನಂತೆ. ಈಗ 3ನೇ ತರಗತಿ ಓದುತ್ತಿದ್ದಾನೆ. ತನ್ನ ಚಿತ್ರದ ಬಗ್ಗೆ ಅಹಾನ್‌ ಹೇಳಿದ್ದಿಷ್ಟು. “ನನಗೆ ಮೂಡ್‌ ಇದ್ದಾಗ ಸಿನಿಮಾ ಮಾಡುತ್ತಿದ್ದರು. ನನ್ನ ಜೊತೆ ಇದ್ದ ನಾಯಿ ಕೂಡ ಒಂದೊಂದು ಸಲ ಮಾತು ಕೇಳುತ್ತಿರಲಿಲ್ಲ. ಅದರ ಮೂಡ್‌ ಸರಿಹೋಗುವ ತನಕ ಕಾದು, ಆಮೇಲೆ ಸೀನ್‌ ಶೂಟ್‌ ಮಾಡುತ್ತಿದ್ದರು. ಇಲ್ಲಿ ಬೇಬಿ ಡಾಗ್‌ ಜೊತೆ ಕಾಲ ಕಳೆದದ್ದು ಮರೆಯುವಂತಿಲ್ಲ. ಡೈರೆಕ್ಟರ್‌ ಅಂಕಲ್‌ ಹೇಳಿದ್ದನ್ನಷ್ಟೇ ಮಾಡುತ್ತಿದ್ದೆ. ಇಲ್ಲಿ ನನಗೂ ಒಂದು ಹಾಡಿದೆ, ನನ್ನ ಜೊತೆಗಿರುವ ನಾಯಿಗೂ ಒಂದು ಹಾಡಿದೆ’ ಎಂದು ಹೇಳಿ ಮೈಕ್‌ ನಿರ್ಮಾಪಕರ ಕೈಗಿಟ್ಟು ಸುಮ್ಮನಾದರು ಅಹಾನ್‌.

ನಿರ್ಮಾಪಕ ನಟರಾಜನ್‌ ಅವರಿಗೆ ಇದು ಕನ್ನಡದಲ್ಲಿ ಮೊದಲ ನಿರ್ಮಾಣದ ಚಿತ್ರ. ಹಾಗಂತ ಅವರಿಗೆ ನಿರ್ಮಾಣ ಹೊಸದಲ್ಲ. ಅವರ ತಂದೆಯ ಕಾಲದಿಂದಲೂ ನಿರ್ಮಾಣ ಮಾಡಿಕೊಂಡು ಬಂದಿದ್ದಾರೆ. ಡಾ.ರಾಜಕುಮಾರ್‌ ಅವರ ಅನೇಕ ಸಿನಿಮಾಗಳನ್ನು ತಮಿಳಿನಲ್ಲಿ ರಿಮೇಕ್‌ ಮಾಡಿದ ಹೆಮ್ಮೆ ಇವರದು. “ಆರು ಭಾಷೆಯಲ್ಲಿ ಈ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ. ನಿಮ್ಮೆಲ್ಲರ ಪ್ರೋತ್ಸಾಹ ಇರಲಿ’ ಎಂದರು ಅವರು.

ಅಂದು ಮಂಡಳಿ ಅಧ್ಯಕ್ಷ ಜೈರಾಜ್‌, ಉಪಾಧ್ಯಕ್ಷರಾದ ಉಮೇಶ್‌ ಬಣಕಾರ್‌, ಎನ್‌.ಎಂ.ಸುರೇಶ್‌ ಇತರರು ಇದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಯಶಸ್ವಿಯಾಗಿ ನೂರು ಚಿತ್ರಗಳಲ್ಲಿ ಅಭಿನಯಿಸಿ, ಶತಕದ ಸಂಭ್ರಮದಲ್ಲಿರುವ ನಟ ರಮೇಶ್‌ ಅರವಿಂದ್‌, ಈ ವಾರ 101ನೇ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ....

  • ನಾನು ಎಲ್ಲಾ ಬಿಟ್ಟು, ಈ ರಂಗಕ್ಕೆ ಬಂದಿದ್ದೇ ಏನೋ ಮಾಡಬೇಕು ಅಂತ. ಚಾಲೆಂಜ್‌ ತೆಗೆದುಕೊಳ್ಳದಿದ್ದರೆ ಹೇಗೆ? ಕಂಫ‌ರ್ಟ್‌ ಜೋನ್‌ ಬಿಟ್ಟು ಬೇರೆ ಮಾಡಬೇಕು ಅಂದಾಗ,...

  • ಈಗಂತೂ ಮೊಬೈಲ್‌ನದ್ದೇ ಸುದ್ದಿ. ಯಾರ ಕೈ ನೋಡಿದರೂ ಮೊಬೈಲ್‌ ಇದ್ದೇ ಇರುತ್ತೆ. ಅದರಲ್ಲೂ ವಾಟ್ಸಾಪ್‌, ಫೇಸ್‌ಬುಕ್‌, ಇನ್ಸ್‌ಟಾಗ್ರಾಂ, ಟ್ವಿಟ್ಟರ್‌...ಹೀಗೆ ಒಂದಾ...

  • ಪ್ರೇಮ್‌ ನಿರ್ದೇಶನದ "ಏಕಲವ್ಯ' ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ದೊಡ್ಡ ಗ್ಯಾಪ್‌ನ ಬಳಿಕ ಲವ್‌ಸ್ಟೋರಿ ಮಾಡುತ್ತಿರುವ ಪ್ರೇಮ್‌, ಈ ಬಾರಿ ಸಖತ್‌ ಬೋಲ್ಡ್‌ ಕಥೆಯನ್ನೇ...

  • ಹಿರಿಯ ಸಾಹಿತಿ ಡಾ.ಬಿ.ಎಲ್‌.ವೇಣು ಅವರ ಐತಿಹಾಸಿಕ ಕಾದಂಬರಿ "ದಳವಾಯಿ ಮುದ್ದಣ' ಈಗ ದೃಶ್ಯರೂಪ ಪಡೆದುಕೊಂಡಿದೆ. "ದಳವಾಯಿ ಮುದ್ದಣ್ಣ' ಕಾದಂಬರಿ ಈಗ ಚಲನಚಿತ್ರಕ್ಕೆ...

ಹೊಸ ಸೇರ್ಪಡೆ