ಕನ್ನಡ ಸಿನಿಮಾ-ಟಿವಿ ಡೈರೆಕ್ಟರಿಯ 8ನೇ ಆವೃತ್ತಿ ಬಿಡುಗಡೆ

ಲಿಂಗರಾಜು ಪರಿಶ್ರಮದ ಡೈರೆಕ್ಟರಿಗೆ ಮೆಚ್ಚುಗೆ

Team Udayavani, Jun 7, 2019, 6:00 AM IST

ಕನ್ನಡ ಚಿತ್ರರಂಗದ ಪ್ರಚಾರಕರ್ತರಾಗಿ ಕಳೆದ ಮೂರು ದಶಕಗಳಿಂದಲೂ ಸೇವೆ ಸಲ್ಲಿಸುತ್ತಿರುವ ಎಂ.ಜಿ.ಲಿಂಗರಾಜು, ಇದುವರೆಗೆ ಯಶಸ್ವಿಯಾಗಿ ಹೊರತರುತ್ತಿದ್ದ “ಕನ್ನಡ ಸಿನಿಮಾ-ಟಿವಿ ಡೈರೆಕ್ಟರಿ’ಯ 8 ನೇ (ಇಂಗ್ಲೀಷ್‌) ಆವೃತ್ತಿ ಇತ್ತೀಚೆಗೆ ಬಿಡುಗಡೆಯಾಗಿದೆ. ತಮ್ಮ ಸಂಪಾದಕತ್ವದಲ್ಲಿ ಸಾಕಷ್ಟು ಸಮಸ್ಯೆಗಳ ನಡುವೆಯೂ ಯಶಸ್ವಿಯಾಗಿಯೇ ಅದನ್ನು ಹೊರತರುತ್ತಿದ್ದ ಎಂ.ಜಿ.ಲಿಂಗರಾಜು, ಈ 8 ನೇ ಆವೃತ್ತಿಯನ್ನು ಕಲರ್‌ಫ‌ುಲ್‌ ಕಾರ್ಯಕ್ರಮದ ಮೂಲಕ ಬಿಡುಗಡೆಗೊಳಿಸಿದ್ದಾರೆ. ಅಂದಹಾಗೆ, ಅವರ “ಕನ್ನಡ ಸಿನಿಮಾ-ಟಿವಿ ಡೈರೆಕ್ಟರಿ’ಯ 8 ನೇ ಅವೃತ್ತಿ ಬಿಡುಗಡೆಗೆ ನಟ ಮತ್ತು ನಿರ್ದೇಶಕ ಉಪೇಂದ್ರ, ನಟಿ ಹರಿಪ್ರಿಯಾ, ವೈಷ್ಣವಿ, ನಿರ್ಮಾಪಕ ಎಂ. ದೇವೇಂದ್ರ ರೆಡ್ಡಿ, ನಿರ್ದೇಶಕ ಸಾಯಿಪ್ರಕಾಶ್‌, ಗೀತರಚನೆಕಾರ ವಿ. ನಾಗೇಂದ್ರ ಪ್ರಸಾದ್‌, ಗಣೇಶ್‌ ಕಾಸರೋಗೋಡು, ಭಾ.ಮ.ಹರೀಶ್‌ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಸಾಕ್ಷಿಯಾದರು.

ಅಂದಹಾಗೆ, 2019ರ “ಕನ್ನಡ ಸಿನಿಮಾ-ಟಿವಿ ಡೈರೆಕ್ಟರಿ’ಯ 8ನೇ ಆವೃತ್ತಿಯ ಬಿಡುಗಡೆ ಕಾರ್ಯಕ್ರಮದಂದು ಹಿರಿಯ ನಿರ್ದೇಶಕ ಎಸ್‌.ಕೆ. ಭಗವಾನ್‌ ಆಕರ್ಷಣೆಯಾಗಿದ್ದರು. ಲಿಂಗರಾಜು ಅವರ ಪರಿಶ್ರಮ ಹಾಗು ಛಲದ ಬಗ್ಗೆ ಭಗವಾನ್‌ ಗುಣಗಾನ ಮಾಡಿದರು. ಈ ಡೈರೆಕ್ಟರಿ ಎಷ್ಟೊಂದು ಉಪಯುಕ್ತ ಎಂಬುದನ್ನು ಸಾರುತ್ತಲೇ, ಲಿಂಗರಾಜು ಅವರ ಅನೇಕ ಕನಸುಗಳು ನನಸಾಗಲಿ’ ಎಂದರು. “ಕನ್ನಡ ಸಿನಿಮಾ-ಟಿವಿ ಡೈರೆಕ್ಟರಿ’ ಕುರಿತು ಉಪೇಂದ್ರ ಹೇಳಿದ್ದಿಷ್ಟು.”ಕಳೆದ 20 ವರ್ಷಗಳ ಹಿಂದೆ ಇದೇ ಡೈರೆಕ್ಟರಿಯ ಪ್ರಥಮ ಪ್ರತಿಯನ್ನು ನಾನು ಬಿಡುಗಡೆ ಮಾಡಿದ್ದು ಇನ್ನೂ ನೆನಪಿದೆ. ಇಂದು ಸಂತೋಷ ಪಡುವ ವಿಷಯ. ಲಿಂಗರಾಜು ಅವರು ಬಹಳ ರಿಸ್ಕ್ ತೆಗೆದುಕೊಂಡು ಈ ಪುಸ್ತಕವನ್ನು ಹೊರ ತಂದಿದ್ದಾರೆ, ಅದೇ ಬೇಸರದಿಂದ ಇದು ಕೊನೆಯ ಆವೃತ್ತಿ ಎಂದು ಹೇಳಿದ್ದಾರೆ. ಆದರೆ, ಇದು ಕೊನೆಯದಾಗಬಾರದು. ಎಲ್ಲಿ ಮೊದಲು ಇರುತ್ತದೆಯೋ ಅಲ್ಲಿ ಕೊನೆ ಇರುತ್ತೆ. ಎಲ್ಲಿ ಕೊನೆ ಇರುತ್ತದೆಯೋ ಅಲ್ಲಿ ಮೊದಲು ಇರುತ್ತದೆ. ನಾವೆಲ್ಲ ಅವರ ಜೊತೆಗಿದ್ದೇವೆ. ಚಿತ್ರರಂಗದ ಬಗ್ಗೆ ಇಷ್ಟೊಂದು ಮಾಹಿತಿಗಳನ್ನು ಒಳಗೊಂಡಿರುವ ಈ ಪುಸ್ತಕವನ್ನು ಉಪಯೋಗಿಸಿಕೊಂಡು ಒಂದು “ವೆಬ್‌ಸೈಟ್‌’ ತೆರೆಯಿರಿ’ ಎಂಬ ಸಲಹೆ ಕೊಟ್ಟರು ಉಪೇಂದ್ರ.

ಗೀತರಚನೆಕಾರ ವಿ ನಾಗೇಂದ್ರಪ್ರಸಾದ್‌ ಕೂಡ ಅಂದು ಲಿಂಗರಾಜ್‌ ಅವರ ಪ್ರಯತ್ನವನ್ನು ಕೊಂಡಾಡಿದರು. “ಈಗಿನ ಕಾಲದಲ್ಲಿ ಅಂಗೈಯಲ್ಲಿ ಇಡೀ ವಿಶ್ವವನ್ನು ಇಟ್ಟುಕೊಂಡಿದ್ದೇವೆ. ಆದರೆ 20 ವರ್ಷಗಳ ಹಿಂದೆ ಈ ಡೈರೆಕ್ಟರಿಗೆ ಅದರದ್ದೇ ಆದಂತಹ ಮಹತ್ವವಿತ್ತು. ಇದನ್ನು ಲಿಂಗರಾಜ್‌ ಅವರು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು. ಡಿಜಿಟಲ್‌ ರೂಪದಲ್ಲಿಯಾದರೂ ಈ ಕೆಲಸವನ್ನು ಅವರು ಮುಂದುವರೆಸಬೇಕು’ ಎಂದರು ನಾಗೇಂದ್ರಪ್ರಸಾದ್‌.

ಅಂದು ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್‌, ಹಿರಿಯ ನಟ ಶಂಕರ ಭಟ್‌, ನಿರ್ದೇಶಕ ಕಪಿಲ್‌ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದರು. “ನಂದಿನಿ ಪಬ್ಲಿಕೇಶನ್‌’ ಹೂರತಂದಿರುವ ಸಿನಿಮಾ-ಟಿವಿ ಡೈರೆಕ್ಟರಿ 2019-2021 ಸಾಲಿನವರೆಗೆ ಇರಲಿದ್ದು, ಇದರಲ್ಲಿ ಹಿರಿತೆರೆ – ಕಿರುತೆರೆ ಕಲಾವಿದರು, ತಂತ್ರಜ್ಞರ ದೂರವಾಣಿ, ವಿಳಾಸ ಸೇರಿದಂತೆ ಸಮಗ್ರ ವಿವರಗಳು ಒಳಗೊಂಡಿದ್ದು, ಚಿತ್ರರಂಗಕ್ಕೆ ಸಂಬಂಧಿಸಿದ ಎಲ್ಲಾ ಸಂಘ-ಸಂಸ್ಥೆಗಳಲ್ಲೂ ಈ ಡೈರೆಕ್ಟರಿ ಲಭ್ಯವಿದೆ.


ಈ ವಿಭಾಗದಿಂದ ಇನ್ನಷ್ಟು

  • ಅಂತೂ ಇಂತೂ ಇನ್ನು ಎರಡು ವಾರ ಕಳೆದರೆ 2019 ಪೂರ್ಣಗೊಳ್ಳಲಿದೆ. ಚಿತ್ರರಂಗ ಕೂಡ ಎಂದಿಗಿಂತ ಗರಿಗೆದರಿ ನಿಂತಿದೆ. ಈ ವರ್ಷ ಇಟ್ಟುಕೊಂಡ ಕೆಲವು ನಿರೀಕ್ಷೆ ಸುಳ್ಳಾದರೆ,...

  • "ನಾನು ಇಲ್ಲಿಯವರೆಗೆ ಹೀರೋ ಆಗಿ ಅನೇಕ ಸಿನಿಮಾಗಳಲ್ಲಿ ಆ್ಯಕ್ಟಿಂಗ್‌ ಮಾಡಿದ್ದೀನಿ. ಆದ್ರೆ, ಇಲ್ಲಿಯವರೆಗೂ ಯಾವ ಸಿನಿಮಾಗಳಲ್ಲೂ, ರಿಲೀಸ್‌ ಆದ ನಂತರ ಸಿನಿಮಾ ಸಕ್ಸಸ್‌...

  • ಕೆಂಪಾಗಿ ಕಂಗೊಳಿಸುತ್ತಿದ್ದ ಸೂರ್ಯ. ಜೋರಾಗಿ ಬೀಸುತ್ತಿದ್ದ ಗಾಳಿ. ಜೊತೆಗೆ ಒಂದಷ್ಟು ಚಳಿ. ಆಗಾಗ ಇಣುಕಿ ಮರೆಯಾಗುತ್ತಿದ್ದ ಬಿಸಿಲು, ಸುತ್ತಲ ಹಸಿರು .... ರಸ್ತೆ...

  • ಇತ್ತೀಚೆಗಷ್ಟೇ ದಿನೇಶ್‌ ಬಾಬು ನಿರ್ದೇಶನದ "ಹಗಲು ಕನಸು' ಬಿಡುಗಡೆಯಾಗಿದೆ. ಅದರ ಬೆನ್ನಲ್ಲೇ ತಮ್ಮ ನಿರ್ದೇಶನದ ಇನ್ನೊಂದು ಸಿನಿಮಾ ಮಾಡಿ ಪ್ರೇಕ್ಷಕರ ಮುಂದೆ ತರಲು...

  • ಸಾಮಾನ್ಯವಾಗಿ ನಮ್ಮಲ್ಲಿ ರಾಜಕಾರಣಿಯ ಮಕ್ಕಳು ರಾಜಕಾರಣಿ, ಕಲಾವಿದರ ಮಕ್ಕಳು ಕಲಾವಿದರು, ಉದ್ಯಮಿಗಳ ಮಕ್ಕಳು ಉದ್ಯಮಿಗಳಾಗುತ್ತಾರೆ. ತಂದೆಯ ಹೆಸರಿನಲ್ಲಿ, ತಮ್ಮ...

ಹೊಸ ಸೇರ್ಪಡೆ