Udayavni Special

ಸ್ವಲ್ಪದರಲ್ಲೇ ಪಾರು!


Team Udayavani, May 11, 2018, 7:20 AM IST

11.jpg

ವೇದಿಕೆ ಮೇಲೆ ಶಿವ-ಪಾರ್ವತಿ ಕೂತಿದ್ದರು. ಶಿವ-ಪಾರ್ವತಿ ಎನ್ನುವುದಕ್ಕಿಂತ ಅವರ ಕಾಸ್ಟೂಮ್‌ ತೊಟ್ಟು ಕೂತಿದ್ದರು. ಇಡೀ ಸಮಾರಂಭದಲ್ಲಿ ಅವರು ಮಾತಾಡಲೇ ಇಲ್ಲ. ತಮಗೂ ಈ ಭೂಲೋಕದ ಜನರಿಗೂ ಸಂಬಂಧವಿಲ್ಲ ಎನ್ನುವಂತೆ ಕುಳಿತಿದ್ದರು. ಹಾಗಾದರೆ, ಅವರನ್ನು ವೇದಿಕೆ ಮೇಲೆ ಕೂರಿಸಿದ್ದಾಕೆ? ಎಂಬ ಪ್ರಶ್ನೆ ಪತ್ರಕರ್ತರಿಗೂ ಬಂತು. “ಶಿವು-ಪಾರು’ ಚಿತ್ರದ ನಾಯಕ-ನಿರ್ಮಾಪಕ-ನಿರ್ದೇಶಕ-ಸಂಗೀತ ನಿರ್ದೇಶಕ-ಕಥೆಗಾರ ಎಲ್ಲವೂ ಆಗಿರುವ ಅಮೇರಿಕಾ ಸುರೇಶ್‌, ಎಲ್ಲವನ್ನೂ ವಿಭಿನ್ನವಾಗಿ ಯೋಚಿಸುವುದರಿಂದ, “ಶಿವು-ಪಾರು’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ, ಅವರಿಬ್ಬರಿಗೆ ಸಾಂಕೇತಿಕವಾಗಿ ಶಿವ-ಪಾರ್ವತಿಯರ ಕಾಸ್ಟೂéಮ್‌ ಹಾಕಿ ಕೂರಿಸಿರಬಹುದು ಎಂದು ಅಂದಾಜು ಮಾಡಲಾಯಿತು.

“ಶಿವು-ಪಾರು’ ಚಿತ್ರದ ಪತ್ರಿಕಾಗೋಷ್ಠಿ ಶುರುವಾಗಿದ್ದು ಚಿತ್ರದ ಟ್ರೇಲರ್‌ ಮತ್ತು ಹಾಡುಗಳನ್ನು ತೋರಿಸುವ ಮೂಲಕ. ಅರ್ಧ ಸಿನಿಮಾ ನೋಡಿದ ಅನುಭವವಾದ ಪತ್ರಕರ್ತರೊಂದಿಗೆ ಆ ನಂತರ ಸುರೇಶ್‌ ಎದುರಾದರು. ಅವರು “ಶಿವು-ಪಾರು’ ಚಿತ್ರವನ್ನು ಮಾಡಿ ಮುಗಿಸಿದ್ದಾರೆ. ಜೂನ್‌ನಲ್ಲಿ ಬಿಡುಗಡೆ ಮಾಡುವುದಕ್ಕೆ ಯೋಚಿಸಿದ್ದು, ಅದಕ್ಕೂ ಮುನ್ನ ಅದನ್ನು ಮಾಧ್ಯಮದವರಿಗೆ ಒಪ್ಪಿಸುವುದಕ್ಕೆ ಕರೆದಿದ್ದರು.

“ಚಿತ್ರ ತಯಾರಾಗಿದೆ. ನಮ್ಮ ಕರ್ತವ್ಯ ಮುಗಿದಿದೆ. ಇನ್ನು ಅದನ್ನು ತಲುಪಿಸುವ ಜವಾಬ್ದಾರಿ ಮಾಧ್ಯಮದವರದ್ದು. ಅದು ನಿಮ್ಮ ಚಿತ್ರ. ಈ ಚಿತ್ರದಲ್ಲಿ ಶಿವ-ಪಾರ್ವತಿಯ ಭೂಲೋಕದ ಅವತಾರ ಇದೆ. ರೋಮಿಯೋ-ಜ್ಯೂಲಿಯಟ್‌, ಲೈಲಾ-ಮಜು° ಪ್ರೇಮಕಥೆಗಳಿಗಿಂಥ ಈ ಪ್ರೇಮ ಕಥೆ ಕಡಿಮೆ ಇರಬಾರದು, ಇದೊಂದು ಮೆಗಾ ಎಪಿಕ್‌ ಆಗಿರಬೇಕು ಎಂದು ಚಿತ್ರ ಮಾಡಿದ್ದೇವೆ. ಇಲ್ಲಿ ಕಥೆಯೇ ಹೀರೋ. ಅದೇ ಕಾರಣಕ್ಕೆ ಕಥೆ ಹೀರೋ, ವಿಧಿ ವಿಲನ್‌ ಎಂಬ ಸಬ್‌ಟೈಟಲ್‌ ಇದೆ. ಬಹಳ ಗ್ರಾಂಡ್‌ ಆಗಿ ಈ ಚಿತ್ರವನ್ನು ಮಾಡಿದ್ದೇವೆ. ಈ ಚಿತ್ರದ ಬಿಡುಗಡೆಯ ನಂತರ ಒಂದು ಕಾದಂಬರಿ ಬಿಡುಗಡೆ ಮಾಡುವ ಯೋಚನೆ ಇದೆ. ಈಗಾಗಲೇ ಕಾದಂಬರಿ ರೆಡಿಯಾಗಿದೆ. ಆದರೆ, ಜನ ಈಗಲೇ ಓದಿಬಿಟ್ಟರೆ, ಕಥೆ ಗೊತ್ತಾಗಿಬಿಡಬಹುದು ಎಂಬ ಕಾರಣಕ್ಕೆ ಬಿಡುಗಡೆ ಮಾಡಿಲ್ಲ. ಚಿತ್ರ ಬಿಡುಗಡೆಯಾದ ನಂತರ ಕಾದಂಬರಿಯೂ ಬಿಡುಗಡೆಯಾಗುತ್ತದೆ. ಸಾಯುವ ಮುನ್ನ ಪ್ರತಿ ಮನುಷ್ಯನೂ ಒಮ್ಮೆ ನೋಡಿ ಸಾಯಬೇಕಾದ ಚಿತ್ರ’ ಎಂದು ಹೇಳುವ ಮೂಲಕ ನೆರೆದಿದ್ದವರನ್ನು ಗಾಬರಿಪಡಿಸಿದರು ಸುರೇಶ್‌. ಅಂದು ಚಿತ್ರದ ನಾಯಕಿ ದಿಷಾ ಪೂವಯ್ಯ ಬಂದಿರಲಿಲ್ಲ. ಅವರ ಬದಲು ವೇದಿಕೆಯ ಮೇಲೆ ಆಲಿಷಾ ಕಾಣಿಸಿಕೊಂಡರು. ಅವರು ಎಂದಿನಂತೆ ಈ ಚಿತ್ರದಲ್ಲೂ ಐಟಂ ಡ್ಯಾನ್ಸ್‌ ಮಾಡಿದ್ದಾರೆ. ಇದು ಅವರ 99ನೇ ಚಿತ್ರ. ಹಾಗಾಗಿ ಬಹಳ ಖುಷಿಯಾಗಿ ಕಂಡರು ಅವರು.

“ಇದು ನನ್ನ 99ನೇ ಚಿತ್ರ. ಸುರೇಶ್‌ ಮತ್ತು ಈ ತಂಡವನ್ನು ನನಗೆ ಪರಿಚಯ ಮಾಡಿಕೊಟ್ಟಿದ್ದು ಶಶಾಂಕ್‌ ರಾಜ್‌. ಇದು ಸುರೇಶ್‌ ಅವರ ಮೊದಲ ಚಿತ್ರ. ಅವರ ಮುಂದಿನ ಚಿತ್ರಗಳಿಗೂ ನಮ್ಮ ಸಹಕಾರ ಇದ್ದೇ ಇರುತ್ತದೆ’ ಎಂದು ಆಶ್ವಾಸನೆ ನೀಡಿದರು. ಇನ್ನು ಶಶಾಂಕ್‌ ರಾಜ್‌ ಸಹ ಹಾಜರಿದ್ದರು. ಅವರಿಗೂ ಸುರೇಶ್‌ಗೂ 15 ವರ್ಷಗಳ ಸ್ನೇಹವಂತೆ. ಕಳೆದ ಒಂದು ವರ್ಷದಿಂದ ಸುರೇಶ್‌ ಅವರು ತಮ್ಮ ಕುಟುಂಬವನ್ನು ಬಿಟ್ಟು, ಚಿತ್ರದಲ್ಲಿ ತೊಡಗಿಸಿಕೊಂಡಿರುವುದನ್ನು ನೋಡಿ, ಶಶಾಂಕ್‌ ಖುಷಿಯಾಗಿದ್ದರು. “ಸುರೇಶ್‌ ಬರೀ ಚಿತ್ರ ಮಾಡಿಲ್ಲ. ಅವರ ಕಟ್ಟಡದಲ್ಲಿ ಒಂದು ಸ್ಟುಡಿಯೋ ಮಾಡಿದ್ದಾರೆ. ಚಿತ್ರಕ್ಕೆ ಬೇಕಾದ ಕ್ಯಾಮೆರಾಗಳನ್ನು ಕೊಂಡಿದ್ದಾರೆ. ಈ ಚಿತ್ರ ಸೋತರೆ ಏನು ಮಾಡುತ್ತೀರಿ ಎಂದು ಕೇಳಿದೆ. ಇದೊಂದು ಪ್ರಯೋಗ ವಾಗಿ ಮಾಡುತ್ತಿದ್ದೇನೆ. ಮುಂದೆ ಇನ್ನಷ್ಟು ಚಿತ್ರಗಳನ್ನು ಮಾಡುತ್ತೇನೆ ಎಂದರು. ಅವರಿಗೆ ಎಲ್ಲರ ಸಹಕಾರವಿರಲಿ’ ಎಂದು ಹಾರೈಸಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಚೊಚ್ಚಲ ಟಿ20 ವಿಶ್ವಕಪ್ ಗೆಲುವಿನ ಸಂಭ್ರಮಕ್ಕೆ 13 ವರ್ಷ

ಚೊಚ್ಚಲ ಟಿ20 ವಿಶ್ವಕಪ್ ಗೆಲುವಿನ ಸಂಭ್ರಮಕ್ಕೆ 13 ವರ್ಷ: ಇಲ್ಲಿದೆ ಆಕರ್ಷಕ ಫೋಟೋಗಳು

dgp

ನಾನು ರಾಜಕೀಯ ಪ್ರವೇಶಿಸುತ್ತಿದ್ದೇನೆ, ಕಳ್ಳನಂತೆ ಅಲ್ಲ, ಸಿಂಹದಂತೆ!: ಬಿಹಾರ ಮಾಜಿ DGP ಪಾಂಡೆ

ಚಿತ್ರೀಕರಣದ ವೇಳೆ ಹೃದಯಾಘಾತ: ಹಿರಿಯ ನಟ ರಾಕ್ ಲೈನ್ ಸುಧಾಕರ್ ನಿಧನ

ಚಿತ್ರೀಕರಣದ ವೇಳೆ ಹೃದಯಾಘಾತ: ಹಿರಿಯ ನಟ ರಾಕ್ ಲೈನ್ ಸುಧಾಕರ್ ನಿಧನ

ಭ್ರಷ್ಟಾಚಾರ ಆರೋಪ: ಸಿಎಂ ಬಿಎಸ್ ವೈ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಕಾಂಗ್ರೆಸ್ ನಿರ್ಧಾರ

ಭ್ರಷ್ಟಾಚಾರ ಆರೋಪ:ಸಿಎಂ ಬಿಎಸ್ ವೈ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಕಾಂಗ್ರೆಸ್ ನಿರ್ಧಾರ

ಡ್ರಗ್ಸ್‌ ತನಿಖಾ ಮಾಹಿತಿ ಲೀಕ್‌: ಎಸಿಪಿ ಸೇರಿ ಇಬ್ಬರ ಅಮಾನತು

ಡ್ರಗ್ಸ್‌ ತನಿಖಾ ಮಾಹಿತಿ ಲೀಕ್‌: ಎಸಿಪಿ ಸೇರಿ ಇಬ್ಬರ ಅಮಾನತು

ಉಪ್ಪಿನಂಡಿ ಕೊಣಾಲು: ಪತಿಯಿಂದ ಪತ್ನಿ, ಪತ್ನಿಯ ಚಿಕ್ಕಮ್ಮನ ಮೇಲೆ ಆಸಿಡ್ ದಾಳಿ

ಉಪ್ಪಿನಂಗಡಿ ಕೊಣಾಲು: ಪತಿಯಿಂದ ಪತ್ನಿ, ಪತ್ನಿಯ ಚಿಕ್ಕಮ್ಮನ ಮೇಲೆ ಆಸಿಡ್ ದಾಳಿ

ಹಿರಿಯ ವಿದ್ವಾಂಸ ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ನಿಧನ

ಹಿರಿಯ ವಿದ್ವಾಂಸ ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಿಯಲ್‌ಸ್ಟಾರ್‌ ಉಪ್ಪಿಗೆ ಬರ್ತ್‌ಡೇ ಸಂಭ್ರಮ : ಕೈಯಲ್ಲಿವೆ ಸಾಲು ಸಾಲು ಸಿನಿಮಾ

ರಿಯಲ್‌ಸ್ಟಾರ್‌ ಉಪ್ಪಿಗೆ ಬರ್ತ್‌ಡೇ ಸಂಭ್ರಮ : ಕೈಯಲ್ಲಿವೆ ಸಾಲು ಸಾಲು ಸಿನಿಮಾ

ವಿಷ್ಣುದಾದ 70 ಅಭಿಮಾನಿಗಳ ಮನದಲ್ಲಿ ಯಜಮಾನ್ರು ಜೀವಂತ

ವಿಷ್ಣುದಾದ 70 ಅಭಿಮಾನಿಗಳ ಮನದಲ್ಲಿ ಯಜಮಾನ್ರು ಜೀವಂತ

ಭ್ರಮೆಯಲ್ಲಿ ಹೊಸಬರು

ಭ್ರಮೆಯಲ್ಲಿ ಹೊಸಬರು

suchitra-tdy-5

ಎಂಟ್ರಿಗೆ ರೆಡಿಯಾದ ‌ಟಿಪ್ಪುವರ್ಧನ್‌

ಹೀರೋ ಆಗಿಬಿಟ್ರಲ್ಲಾ ರಿಷಭ್‌!

ಹೀರೋ ಆಗಿಬಿಟ್ರಲ್ಲಾ ರಿಷಭ್‌!

MUST WATCH

udayavani youtube

ಕೋವಿಡ್ ‌ಕಾಲದಲ್ಲಿ ರಸ್ತೆ ರಾಜಕಾರಣ: ಪ್ರತಿಕ್ರಿಯಿಸಿದ ಸಂತ ಅಲೋಶಿಯಸ್ ಸಂಸ್ಥೆ

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ

udayavani youtube

District Excise Department seized Millions worth of Marijuana | Udayavani

udayavani youtube

Hospet : Tungabhadra Dam Gates Are Opened | TB Dam | Udayavani

udayavani youtube

ಸುರತ್ಕಲ್ ಕಳ್ಳತನ ಪ್ರಕರಣ: ಕೇರಳದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರುಹೊಸ ಸೇರ್ಪಡೆ

rn-tdy-1

ಆಸ್ತಿ ದಾಖಲೆ ಪಡೆದುಕೊಳ್ಳಲು ನಾರಾಯಣಪ್ಪ ಸಲಹೆ

ತುಂಗಭದ್ರಾ ನದಿಗೆ ನಿರ್ಮಿಸಿದ್ದ ರಸ್ತೆ ಮೇಲ್ಸೇತುವೆ ಕುಸಿತ ; ಆತಂಕದಲ್ಲಿ ವಾಹನ ಸವಾರರು

ತುಂಗಭದ್ರಾ ನದಿಗೆ ನಿರ್ಮಿಸಿದ್ದ ರಸ್ತೆ ಮೇಲ್ಸೇತುವೆ ಕುಸಿತ ; ಆತಂಕದಲ್ಲಿ ವಾಹನ ಸವಾರರು

ಚೊಚ್ಚಲ ಟಿ20 ವಿಶ್ವಕಪ್ ಗೆಲುವಿನ ಸಂಭ್ರಮಕ್ಕೆ 13 ವರ್ಷ

ಚೊಚ್ಚಲ ಟಿ20 ವಿಶ್ವಕಪ್ ಗೆಲುವಿನ ಸಂಭ್ರಮಕ್ಕೆ 13 ವರ್ಷ: ಇಲ್ಲಿದೆ ಆಕರ್ಷಕ ಫೋಟೋಗಳು

100 ಕಾರುಗಳನ್ನು ನೇಪಾಳಕ್ಕೆ ಸಾಗಿಸಿದ ನೈರುತ್ಯ ರೈಲೆ

100 ಕಾರುಗಳನ್ನು ನೇಪಾಳಕ್ಕೆ ಸಾಗಿಸಿದ ನೈರುತ್ಯ ರೈಲೆ

ಕಲ್ಲು-ಮರ- ಲೋಹದ ವಸ್ತುಗಳಿಗೆ ಜೀವ ತುಂಬುವ ಬಹುಮುಖ ಪ್ರತಿಭೆ ಮಾನಪ್ಪ ಬಡಿಗೇರ

ಕಲ್ಲು-ಮರ- ಲೋಹದ ವಸ್ತುಗಳಿಗೆ ಜೀವ ತುಂಬುವ ಬಹುಮುಖ ಪ್ರತಿಭೆ ಮಾನಪ್ಪ ಬಡಿಗೇರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.