ಯಶಸ್ವಿ ಥ್ರಿಲ್ಲರ್ ಕಥಾ
ಸಿನಿಮಾದ ಒಳಗೊಂದು ಚಿತ್ರಕಥೆ
Team Udayavani, Jun 7, 2019, 6:00 AM IST
ಚಿತ್ರದಲ್ಲಿ ಕೆಲವು ಹಿರಿಯ ಕಲಾವಿದರನ್ನು ಹೊರತುಪಡಿಸಿದರೆ, ಬಹುತೇಕ ಯುವ ಪ್ರತಿಭೆಗಳೇ ತೆರೆಯ ಹಿಂದೆ ಮತ್ತು ಮುಂದೆ ಕೆಲಸ ಮಾಡಿವೆ ಎಂಬುದು ವಿಶೇಷ. ಇವರೆಲ್ಲರಿಗೂ ಇದು ಮೊದಲ ಅನುಭವ. ಇತ್ತೀಚೆಗೆ ತಮ್ಮ ಚೊಚ್ಚಲ ಚಿತ್ರದ ಬಗ್ಗೆ ಹೇಳಿಕೊಳ್ಳಲೆಂದೇ ಮಾಧ್ಯಮ ಎದುರು ಚಿತ್ರತಂಡ ಆಗಮಿಸಿತ್ತು. ಅಂದು ಚಿತ್ರದ ಪೋಸ್ಟರ್ ರಿಲೀಸ್ ಮಾಡುವ ಮೂಲಕ “ಚಿತ್ರಕಥಾ’ದೊಳಗಿನ ವಿಶೇಷವನ್ನು ಹೇಳಿಕೊಂಡಿತು…
ಕನ್ನಡದಲ್ಲಿ ಹೊಸಬರ ಆಗಮನ ಹೊಸದೇನಲ್ಲ. ಆ ಸಾಲಿಗೆ ಈಗ “ಚಿತ್ರಕಥಾ’ ಎಂಬ ಹೊಸ ಚಿತ್ರತಂಡ ಸೇರ್ಪಡೆಯಾಗಿದೆ. ಈಗಾಗಲೇ ಸದ್ದಿಲ್ಲದೆಯೇ ಚಿತ್ರೀಕರಣ ಮುಗಿಸಿ ಬಂದಿರುವ ಚಿತ್ರತಂಡ, ಬಿಡುಗಡೆಗೆ ಸಜ್ಜಾಗುತ್ತಿದೆ. ಚಿತ್ರದಲ್ಲಿ ಕೆಲವು ಹಿರಿಯ ಕಲಾವಿದರನ್ನು ಹೊರತುಪಡಿಸಿದರೆ, ಬಹುತೇಕ ಯುವ ಪ್ರತಿಭೆಗಳೇ ತೆರೆಯ ಹಿಂದೆ ಮತ್ತು ಮುಂದೆ ಕೆಲಸ ಮಾಡಿವೆ ಎಂಬುದು ವಿಶೇಷ. ಇವರೆಲ್ಲರಿಗೂ ಇದು ಮೊದಲ ಅನುಭವ. ಇತ್ತೀಚೆಗೆ ತಮ್ಮ ಚೊಚ್ಚಲ ಚಿತ್ರದ ಬಗ್ಗೆ ಹೇಳಿಕೊಳ್ಳಲೆಂದೇ ಮಾಧ್ಯಮ ಎದುರು ಚಿತ್ರತಂಡ ಆಗಮಿಸಿತ್ತು. ಅಂದು ಚಿತ್ರದ ಪೋಸ್ಟರ್ ರಿಲೀಸ್ ಮಾಡುವ ಮೂಲಕ “ಚಿತ್ರಕಥಾ’ದೊಳಗಿನ ವಿಶೇಷವನ್ನು ಹೇಳಿಕೊಂಡಿತು. ಅಂದಹಾಗೆ, ಅಂದು ಚಿತ್ರದ ಪೋಸ್ಟರ್‌ಗೆ ಸಾಕ್ಷಿಯಾಗಿದ್ದು, ಹಿರಿಯ ಕಲಾವಿದೆ ಬಿ.ಜಯಶ್ರೀ.
ಈ ಚಿತ್ರದ ಮೂಲಕ ಯಶಸ್ವಿ ಬಾಲಾದಿತ್ಯ ನಿರ್ದೇಶಕರಾಗಿದ್ದಾರೆ. ಇದೊಂದು ಸಿನಿಮಾದೊಳಗಿನ ಸಿನಿಮಾ. ಈಗಾಗಲೇ ಸಾಕಷ್ಟು ಚಿತ್ರಗಳಲ್ಲಿ ಸಿನಿಮಾದೊಳಗೊಂದು ಸಿನಿಮಾ ಕಥೆ ಬಂದಿವೆ. ಇಲ್ಲೂ ಅಂಥದ್ದೊಂದು ಕಥೆ ಇದ್ದರೂ, ಅದೊಂದು ವಿಭಿನ್ನವಾಗಿ ಮೂಡಿಬಂದಿದೆ ಎಂಬುದು ಚಿತ್ರತಂಡದ ಮಾತು. ತಮ್ಮ ಮೊದಲ ಅನುಭವ ಕುರಿತು ನಿರ್ದೇಶಕ ಯಶಸ್ವಿ ಬಾಲಾದಿತ್ಯ ಹೇಳಿದ್ದಿಷ್ಟು. “ಇದು ನನ್ನ ಮೊದಲ ಚಿತ್ರ. ನಿರ್ದೇಶನ ನನ್ನ ಕನಸು. ಇದಕ್ಕೂ ಮೊದಲು ಅನಿಮೇಷನ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಇದೆ. ಚಿತ್ರದ ಬಗ್ಗೆ ಹೇಳುವುದಾದರೆ, ಒಬ್ಬ ಕಲಾವಿದ ಕಷ್ಟಪಟ್ಟು ಒಂದು ಹಂತವನ್ನು ದಾಟಿದ ಬಳಿಕ ಅವನಿಗೆ ಒಂದಷ್ಟು ನೆಲೆ ಸಿಗುತ್ತದೆ. ತನ್ನ ಗುರಿ ಬಿಡದೆ ಹೊರಟಾಗ ಅವನ ಕಲೆಗೊಂದು ಬೆಲೆ ಸಿಗುತ್ತದೆ. ಹಾಗೆಯೇ ಅವನು ಗುರುತಿಸಿಕೊಳ್ಳುತ್ತಾನೆ. ಆ ಕಲೆ ಉಳಿಸಿಕೊಂಡು ಬೆಳೆಸಲು ಬಣ್ಣದ ಪಯಣಕ್ಕೆ ಕಾಲಿಡುವ ಆತನ ಬದುಕಲ್ಲಿ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತವೆ. ಅವೆಲ್ಲವನ್ನೂ ಅವನು ಹೇಗೆ ಎದುರಿಸಿ, ತನ್ನ ಗುರಿ ಸಾಧಿಸುತ್ತಾನೆ ಎಂಬುದು ಕಥೆ. ಇದೊಂದು ಸಸ್ಪೆನ್ಸ್-ಥ್ರಿಲ್ಲರ್ ಅಂಶಗಳೊಂದಿಗೆ ಸಿನಿಮಾ ಸಾಗಲಿದೆ. ಬೆಂಗಳೂರು, ಕೇರಳ, ಮಂಗಳೂರು, ಮಡಿಕೇರಿ ಸೇರಿದಂತೆ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ’ ಎಂದು ವಿವರ ಕೊಡುತ್ತಾರೆ ಯಶಸ್ವಿ ಬಾಲಾದಿತ್ಯ.
ಚಿತ್ರಕ್ಕೆ ಸುಜಿತ್ ರಾಥೋಡ್ ಹೀರೋ. ಅವರಿಗೆ ಸಿನಿಮಾ ಮೇಲೆ ಪ್ರೀತಿ ಮತ್ತು ಆಸಕ್ತಿ ಹೆಚ್ಚು. ಹಾಗಾಗಿಯೇ ಬಣ್ಣದ ಲೋಕದ ಮೇಲೆ ಇನ್ನಿಲ್ಲದ ಸೆಳೆತ. ಹೀರೋ ಆಗಬೇಕೆಂಬ ಕನಸು “ಚಿತ್ರಕಥಾ’ ಮೂಲಕ ಈಡೇರಿದೆ. ಅವರಿಗೆ ಇಲ್ಲಿ ಚಾಲೆಂಜಿಂಗ್ ಪಾತ್ರ ಸಿಕ್ಕಿದೆಯಂತೆ. ಕಥೆ ಮತ್ತು
ಪಾತ್ರ ನೋಡುಗರನ್ನು ಖಂಡಿತ ಆಕರ್ಷಿಸಲಿದೆ ಎಂಬುದು ಸುಜಿತ್ ರಾಥೋಡ್ ಅವರ ಮಾತು.
ಚಿತ್ರದಲ್ಲಿ ಹಿರಿಯ ನಟಿ ಬಿ.ಜಯಶ್ರೀ ಅವರು ನಟಿಸಿದ್ದಾರೆ. ಅದೊಂದು ಕೊರವಂಜಿಯ ವಿಶೇಷ ಪಾತ್ರವಾಗಿದ್ದು, ಎಲ್ಲರ ಗಮನಸೆಳೆಯುವಂಥದ್ದು ಎಂಬುದು ಅವರ ಹೇಳಿಕೆ. ಇನನು, ಅವರು ನಟನೆಯ ಜೊತೆಗೆ ಈ ಚಿತ್ರಕ್ಕಾಗಿ ಒಂದು ಹಾಡನ್ನೂ ಹಾಡಿದ್ದಾರಂತೆ. ಸುಧಾರಾಣಿ ಇಲ್ಲಿ ಡಾಕ್ಟರ್ ಪಾತ್ರ ಮಾಡಿದರೆ, ತಬಲನಾಣಿ, ದಿಲೀಪ್‌ರಾಜ್, ಹೊಸ ಪ್ರತಿಭೆಗಳಾದ ಮೇಧಾ, ಆದರ್ಶ್, ಅನುಷಾ ರಾವ್. ಮಹಂತೇಶ್ ಇತರರು ನಟಿಸಿದ್ದಾರೆ. ಎರಡು ಹಾಡುಗಳಿಗೆ ಚೇತನ್‌ಕುಮಾರ್ ಸಂಗೀತ ನೀಡಿದ್ದಾರೆ. ತನ್ವಿಕ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಮಧು ತುಂಬಕೆರೆ ಸಂಕಲವಿದೆ. ಗೆಳೆಯ ಹೀರೋ ಆಗಿದ್ದರಿಂದ ಅವನ ಚಿತ್ರಕ್ಕೆ ಪ್ರಜ್ವಲ್ ಎಂ.ರಾಜ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಮಣಿಪಾಲ : ಡಿವೈಡರ್ ಗೆ ಬೈಕ್ ಢಿಕ್ಕಿ, ವಿದ್ಯಾರ್ಥಿ ಸಾವು… ಇನ್ನೋರ್ವ ಗಂಭೀರ
IPL ಬೆಟ್ಟಿಂಗ್ ಗಾಗಿ ಠೇವಣಿದಾರರ ಹಣವನ್ನೇ ಬಳಸಿಕೊಂಡ ಪೋಸ್ಟ್ ಮಾಸ್ಟರ್
Wheel Chair Romeo actor exclusive interview | RELEASING ON MAY 27TH
ಶಿರಸಿ : ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರ ಹಾವಿನ ರಕ್ಷಣೆ
ಪುತ್ರನಿಗೆ ತಪ್ಪಿದ ಪರಿಷತ್ ಟಿಕೆಟ್ : ಬಿಎಸ್ ವೈ ಹೇಳಿದ್ದೇನು?
ಹೊಸ ಸೇರ್ಪಡೆ
ಬೆಂಗಳೂರು- ಚೆನ್ನೈ ಸಾರಿಗೆಯ ಹೊಸ ಭಾಷ್ಯ ಎಕ್ಸ್ಪ್ರೆಸ್ ವೇ!
ನಾಳೆ ಕೇರಳಕ್ಕೆ ಮುಂಗಾರು ಪ್ರವೇಶ; ಐದು ದಿನ ಸಾಧಾರಣ ಮಳೆ ಸಾಧ್ಯತೆ
ಮೋದಿ ಸರ್ಕಾರಕ್ಕೆ ಇಂದಿಗೆ 8 ವರ್ಷ; 2014ರ ಮೇ 26ರಂದು ಪ್ರಧಾನಿಯಾಗಿ ಪದಗ್ರಹಣ
ಕೂಲ್ಡ್ರಿಂಕ್ಸ್ನಲ್ಲಿ ಹಲ್ಲಿ! ಅಹ್ಮದಾಬಾದ್ ಮೆಕ್ಡೊನಾಲ್ಡ್ ವಿರುದ್ಧ ಆರೋಪ
ಮಂಗಳಕ್ಕೆ ವಿಜ್ಞಾನಿಗಳ 30 ದಿನಗಳ ಟ್ರಿಪ್! ಅಮೆರಿಕ ಬಾಹ್ಯಾಕಾಶ ಸಂಸ್ಥೆಯ ವಿಶಿಷ್ಟ ಸಾಹಸ