ಕೋಮಲ್‌ ಮೊಗದಲ್ಲಿ ಕೆಂಪೇಗೌಡ ನಗು

Team Udayavani, May 3, 2019, 6:00 AM IST

ನಟ ಕೋಮಲ್‌ ಖುಷಿಯಾಗಿದ್ದಾರೆ. ಅವರ ಮುಖದಲ್ಲಿ ಮಂದಹಾಸ ಮೂಡಿದೆ. ಅದಕ್ಕೆ ಕಾರಣ ಅವರ ಖಡಕ್‌ ಲುಕ್‌ ಮತ್ತು ಅದಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ. ನಿಮಗೆ ಗೊತ್ತಿರುವಂತೆ ಇತ್ತೀಚೆಗೆ ಒಂದೆರಡು ವರ್ಷಗಳಿಂದ ಚಿತ್ರರಂಗದಿಂದ ದೂರವೇ ಇದ್ದರು. ನಟ ಕೋಮಲ್‌ ಚಿತ್ರರಂಗ ಬಿಟ್ಟೆ ಬಿಟ್ರಾ? ಹೀಗೆ ಗಾಂಧಿನಗರ ಹಾಗೂ ಸಿನಿಮಂದಿ ಕೇಳುವ ಮಟ್ಟಕ್ಕೆ ಕೋಮಲ್‌ ಚಿತ್ರರಂಗದಿಂದ ದೂರ ಉಳಿದಿದ್ದರು.

ಅದಕ್ಕೆ ಕಾರಣ “ಕೆಂಪೇಗೌಡ-2′ ಚಿತ್ರ. ಹೊಸ ಇಮೇಜಿಗೆ ಹೊಂದಿಕೊಳ್ಳಬೇಕೆಂದು ಕೋಮಲ್‌ ಒಪ್ಪಿಕೊಂಡ ಸಿನಿಮಾ “ಕೆಂಪೇಗೌಡ-2′. ಆರಂಭದಲ್ಲಿ ಅದ್ಧೂರಿಯಾಗಿ ಸೆಟ್ಟೇರಿ, ಭರ್ಜರಿ ಸುದ್ದಿ ಮಾಡಿದ ಈ ಚಿತ್ರ ಆ ನಂತರ ನಿಧಾನವಾಗುತ್ತಾ ಹೋಯಿತು. ಇನ್ನೇನು ಆ ಸಿನಿಮಾ ನಿಂತೇ ಹೋಯಿತು ಎನ್ನುವಷ್ಟರಲ್ಲಿ ಕೋಮಲ್‌ ಸದ್ದು ಮಾಡಿದ್ದಾರೆ. ಅದು ಚಿತ್ರದ ಟ್ರೇಲರ್‌ ಮೂಲಕ.

ಹೌದು, ಕೋಮಲ್‌ ಅಭಿನಯದ “ಕೆಂಪೇಗೌಡ-2′ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆ­ಯಾಗಿದೆ. ಇಷ್ಟು ದಿನ ನೋಡಿದ ಕೋಮಲ್‌ಗ‌ೂ “ಕೆಂಪೇ­ಗೌಡ-2′ ಚಿತ್ರದಲ್ಲಿ ಕಾಣಿಸಿಕೊಂಡ ಕೋಮಲ್‌ಗ‌ೂ ಅಜಗಜಾಂತರ ವ್ಯತ್ಯಾಸವಿದೆ. ಸಖತ್‌ ಮಾಸ್‌ ಲುಕ್‌ನಲ್ಲಿ ಖಡಕ್‌ ಆಗಿ ಕಾಣಿಸಿಕೊಂಡಿರುವ ಕೋಮಲ್‌ ಅವರ ಲುಕ್‌ಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಈ ಚಿತ್ರದ ಮೂಲಕ ಕೋಮಲ್‌ ಮತ್ತೆ ಚಿತ್ರರಂಗದಲ್ಲಿ ಬಿಝಿಯಾಗುವ ಸೂಚನೆ ಸಿಕ್ಕಿದೆ.

ಅದ್ಧೂರಿಯಾಗಿ ಮೂಡಿಬಂದಿರುವ “ಕೆಂಪೇಗೌಡ-2′ ಚಿತ್ರದ ಮೇಲೆ ಕೋಮಲ್‌ಗೆ ಸಾಕಷ್ಟು ನಿರೀಕ್ಷೆ ಇದೆ. ಇಷ್ಟು ದಿನ ಕಾದಿದ್ದಕ್ಕೆ ಈ ಚಿತ್ರ ಫ‌ಲ ನೀಡುತ್ತದೆ ಎಂಬ ನಿರೀಕ್ಷೆಯೊಂದಿಗೆ ಎದುರು ನೋಡುತ್ತಿದ್ದಾರೆ ಕೋಮಲ್‌. “ಚಿತ್ರದ ಟ್ರೇಲರ್‌ಗೆ ಎಲ್ಲಾ ಕಡೆಗಳಿಂದಲೂ ಅದ್ಭುತವಾದ ಪ್ರತಿಕ್ರಿಯೆ ಸಿಗುತ್ತಿದೆ. ಪ್ರೇಕ್ಷಕರು ಸಿನಿಮಾವನ್ನು ಇದೇ ರೀತಿ ಸ್ವೀಕರಿಸುತ್ತಾರೆಂಬ ವಿಶ್ವಾಸವಿದೆ’ ಎನ್ನುವುದು ಕೋಮಲ್‌ ಮಾತು. ಈ ನಡುವೆಯೇ ಕೋಮಲ್‌ ಹೊಸ ಸಿನಿಮಾದ ಮಾತುಕತೆ ಕೂಡಾ ನಡೆಯುತ್ತಿದೆ.


ಈ ವಿಭಾಗದಿಂದ ಇನ್ನಷ್ಟು

  • "ನಾನು ಏನು ಅಂದುಕೊಂಡಿದ್ದೆನೋ ಹಾಗೇ ಆಗಿದೆ...' - ಹೀಗೆ ಹೇಳಿ ಹಾಗೊಂದು ಸ್ಮೈಲ್‌ ಕೊಟ್ಟರು ನಿರ್ಮಾಪಕ ಶ್ರೀನಿವಾಸ್‌. ಅವರು ಹೀಗೆ ಹೇಳಿದ್ದು ತಮ್ಮ ನಿರ್ಮಾಣದ...

  • "ಈ ಸಿನಿಮಾದ ನಿಜವಾದ ಹೀರೋ ನಿರ್ಮಾಪಕ ಮುನಿರತ್ನ' - ಹೀಗೆ ಹೇಳಿ ಪಕ್ಕದಲ್ಲಿ ಕುಳಿತಿದ್ದ ನಿರ್ಮಾಪಕ ಮುನಿರತ್ನ ಅವರತ್ತ ನೋಡಿದರು ನಿರ್ದೇಶಕ ನಾಗಣ್ಣ. ಅವರು ಹೀಗೆ...

  • ಈಗಾಗಲೇ ಶೀರ್ಷಿಕೆ, ಫ‌ಸ್ಟ್‌ಲುಕ್‌ ಹಾಗೂ ಟೀಸರ್‌ ಮೂಲಕ ಸಾಕಷ್ಟು ಕುತೂಹಲ ಮೂಡಿಸಿರುವ "ಕಮರೊಟ್ಟು ಚೆಕ್‌ಪೋಸ್ಟ್‌' ಇದೀಗ ರಿಲೀಸ್‌ಗೆ ರೆಡಿಯಾಗಿದೆ. ಚಿತ್ರದಲ್ಲಿ...

  • ಮುಹೂರ್ತದ ಬಳಿಕ ಎಲ್ಲಿಯೂ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿರದ "ಅಮರ್‌' ಚಿತ್ರತಂಡ, ಚಿತ್ರದ ಬಿಡುಗಡೆಗೂ ಮುನ್ನ ಪತ್ರಿಕಾಗೋಷ್ಟಿಯನ್ನು ನಡೆಸಿ "ಅಮರ್‌' ಸಿನಿ...

  • ಶಾದಿ ಕೆ ಆಫ್ಟರ್‌ ಎಫೆಕ್ಟ್...! - ಇದು ಬಾಲಿವುಡ್‌ನ‌ಲ್ಲಿ ಬಂದ ಸಿನಿಮಾದ ಹೆಸರು. ಈಗ ಇಲ್ಲೇಕೆ ಈ ಹೆಸರಿನ ಪ್ರಸ್ತಾಪ ಎಂಬ ಸಣ್ಣದ್ದೊಂದು ಪ್ರಶ್ನೆ ಕಾಡಬಹುದು. ಹಾಗಂತ,...

ಹೊಸ ಸೇರ್ಪಡೆ