ನಿಗೂಢ ಲೋಕದೊಳಗೆ ಕಿಚ್ಚನ ರಂಗಿನಾಟ: ವಿಕ್ರಾಂತ್‌ ರೋಣ ಟ್ರೇಲರ್‌ಗೆ ಫ್ಯಾನ್ಸ್‌ ಫಿದಾ

Team Udayavani, Jun 24, 2022, 8:20 AM IST

ನಿಗೂಢ ಲೋಕದೊಳಗೆ ಕಿಚ್ಚನ ರಂಗಿನಾಟ: ವಿಕ್ರಾಂತ್‌ ರೋಣ ಟ್ರೇಲರ್‌ಗೆ ಫ್ಯಾನ್ಸ್‌ ಫಿದಾ

ಭಯನೇ ತುಂಬಿದ ಊರಿಗೆ, ಭಯ ಅಂದ್ರೆ ಏನು ಅಂತಾನೇ ಗೊತ್ತಿಲ್ವೇ ಇರೋನು ಒಬ್ಬ ಬಂದ… – ಇದು “ವಿಕ್ರಾಂತ್‌ ರೋಣ’ ಚಿತ್ರದ ಟ್ರೇಲರ್‌ನಲ್ಲಿರುವ ಒಂದು ಡೈಲಾಗ್‌. ಡೈಲಾಗ್‌ಗೆ ತಕ್ಕಂತೆ ಇಡೀ ಸಿನಿಮಾವನ್ನು ಕಟ್ಟಿಕೊಟ್ಟಿರೋದು ಟ್ರೇಲರ್‌ ನೋಡಿದಾಗ ಗೊತ್ತಾಗುತ್ತದೆ.

ಗುರುವಾರ ಬಿಡುಗಡೆಯಾಗಿರುವ “ವಿಕ್ರಾಂತ್‌ ರೋಣ’ ಚಿತ್ರದ ಟ್ರೇಲರ್‌ ನಿಮ್ಮನ್ನು ಹೊಸ ಲೋಕಕ್ಕೆ ಕೊಂಡೊಯ್ಯುವುದರಲ್ಲಿ ಎರಡು ಮಾತಿಲ್ಲ. ನಿರ್ದೇಶಕ ಅನೂಪ್‌ ಭಂಡಾರಿ ಥ್ರಿಲ್ಲರ್‌ ಹಿನ್ನೆಲೆಯಲ್ಲಿ ಇಡೀ ಕಥೆಯನ್ನು ಕಟ್ಟಿಕೊಟ್ಟಿರೋದು ಎದ್ದು ಕಾಣುತ್ತದೆ.

ಟ್ರೇಲರ್‌ನಲ್ಲಿ ತೋರಿಸಿರುವ ಸಣ್ಣ ತುಣುಕು, ಸಿನಿಮಾದೊಳಗಿರುವ ದೊಡ್ಡ ಕುತೂಹಲಕ್ಕೆ ನಾಂದಿ ಹಾಡಿರೋದು ಸುಳ್ಳಲ್ಲ. ಟ್ರೇಲರ್‌ ನೋಡಿದವರಿಗೆ ಇದು ರೆಗ್ಯುಲರ್‌ ಜಾನರ್‌ ಸಿನಿಮಾವಲ್ಲ ಎಂಬುದು ಮೊದಲ ನೋಟಕ್ಕೆ ಸ್ಪಷ್ಟವಾಗುತ್ತದೆ.

ಚಿತ್ರದಲ್ಲಿ ನಿಗೂಢ ಊರು, ಆ ಊರಿನಲ್ಲಿ ನಿಗೂಢವಾಗಿ ನಡೆಯುವ ಘಟನೆಗಳು, ಭಯಭೀತ ಜನರ ಮಧ್ಯೆ ಡೇರ್‌ ಡೇವಿಲ್‌ನಂತಹ ನಾಯಕನ ಎಂಟ್ರಿ… ಹೀಗೆ ಹಲವು ಅಂಶಗಳನ್ನು ಟ್ರೇಲರ್‌ನಲ್ಲಿ ಕಟ್ಟಿಕೊಡಲಾಗಿದೆ. ಮುಖ್ಯವಾಗಿ ಕಥೆಗೆ ಪೂರಕವಾಗಿರುವ ಪರಿಸರ ಟ್ರೇಲರ್‌ನ ಹೈಲೈಟ್‌. ಕಲಾ ನಿರ್ದೇಶಕ ಶಿವಕುಮಾರ್‌, ಛಾಯಾಗ್ರಾಹಕ ವಿಲಿಯಂ ಡೇವಿಡ್‌ ಅವರ ಕೈ ಚಳಕ ಟ್ರೇಲರ್‌ನಲ್ಲಿ ಗಮನ ಸೆಳೆಯುತ್ತದೆ. ಚಿತ್ರತಂಡ ಕಥೆಗೆ ಪೂರಕವಾದ ಸೂಕ್ಷ್ಮ ಅಂಶಗಳ ಬಗ್ಗೆ ಗಮನ ಹರಿಸಿರೋದು ಎದ್ದು ಕಾಣುತ್ತದೆ.

ಟ್ರೇಲರ್‌ ನೋಡಿದ ಕಿಚ್ಚನ ಅಭಿಮಾನಿಗಳು ಫಿದಾ ಆಗಿದ್ದಾರೆ. ಪರಿಣಾಮ ಸಿಕ್ಕಾಪಟ್ಟೆ ಹಿಟ್ಸ್‌ ನೊಂದಿಗೆ ಟ್ರೇಲರ್‌ ಮುನ್ನುಗ್ಗುತ್ತಿದೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ “ರ.. ರ.. ರಕ್ಕಮ್ಮ’ ಹಾಡು ಸೂಪರ್‌ ಹಿಟ್‌ ಆಗಿದ್ದು, ಜಾಕ್ವೆಲಿನ್‌ ಸ್ಟೆಪ್‌ ವೈರಲ್‌ ಆಗಿದೆ. ಈಗ ಟ್ರೇಲರ್‌ ಸಿನಿಮಾದ ಬಗೆಗಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಜಾಕ್‌ ಮಂಜು ನಿರ್ಮಿಸಿರುವ ಈ ಚಿತ್ರ ವನ್ನು ಅನೂಪ್‌ ಭಂಡಾರಿ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಸಂಗೀತವಿದೆ. ಇದು ಪ್ಯಾನ್‌ ಇಂಡಿಯಾ ಸಿನಿಮಾವಾಗಿದ್ದು, ಜುಲೈ 28ಕ್ಕೆ ವಿಶ್ವದಾದ್ಯಂತ ತೆರೆಕಾಣಲಿದೆ.

ಟಾಪ್ ನ್ಯೂಸ್

ಡಿಕೆಶಿ

ಸಿದ್ದರಾಮೋತ್ಸವಕ್ಕಿಂತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಿದ್ದತೆ ಮುಖ್ಯವೆಂದ ಡಿಕೆಶಿ

1-fdgg

ಕರ್ನಾಟಕ- ಕೊರಿಯಾ ಗಣರಾಜ್ಯ ಬಾಂಧವ್ಯ ವೃದ್ಧಿ: ಸಿಎಂ ಬೊಮ್ಮಾಯಿ

ಸಿದ್ದರಾಮಯ್ಯ ಸರ್ಕಾರ ಡ್ರಗ್ಸ್ ದಂಧೆಯಿಂದ ನಡೆಯುತ್ತಿತ್ತು: ನಳಿನ್ ಕಟೀಲ್ ಆರೋಪ

ಸಿದ್ದರಾಮಯ್ಯ ಸರ್ಕಾರ ಡ್ರಗ್ಸ್ ದಂಧೆಯಿಂದ ನಡೆಯುತ್ತಿತ್ತು: ನಳಿನ್ ಕಟೀಲ್ ಆರೋಪ

7landsilde—–1

ಮಂಗಳೂರು: ಗುಡ್ಡ ಕುಸಿದು ಮನೆಗಳಿಗೆ ಹಾನಿ; 5 ಮನೆಯವರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ

ಮಾಡು ಇಲ್ಲವೇ ಮಡಿ: ವಿರಾಟ್ ಕೊಹ್ಲಿ ಎರಡೇ ಪಂದ್ಯಗಳ ಗಡುವು ನೀಡಿದ ಬಿಸಿಸಿಐ!

ಮಾಡು ಇಲ್ಲವೇ ಮಡಿ: ವಿರಾಟ್ ಕೊಹ್ಲಿಗೆ ಎರಡೇ ಪಂದ್ಯಗಳ ಗಡುವು ನೀಡಿದ ಬಿಸಿಸಿಐ!

6news-born

ಉಡುಪಿ: ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೆಸರಿನಲ್ಲಿ ವಂಚನೆ: ದೂರು ದಾಖಲು

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೆಸರಿನಲ್ಲಿ ವಂಚನೆ: ದೂರು ದಾಖಲುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜುಲೈ 08 ರಿಂದ ಗಿರ್ಕಿಯಾಟ

ಜುಲೈ 08 ರಿಂದ ಗಿರ್ಕಿಯಾಟ

ಹೊಯ್ಸಳದಲ್ಲಿ ಧನಂಜಯ್‌ ಖಡಕ್‌ ಲುಕ್‌

ಹೊಯ್ಸಳದಲ್ಲಿ ಧನಂಜಯ್‌ ಖಡಕ್‌ ಲುಕ್‌

ವೆಡ್ಡಿಂಗ್ ಗಿಫ್ಟ್: ಲಾಯರ್ ಪಾತ್ರದ ಮೂಲಕ ಮತ್ತೆ ಬಣ್ಣ ಹಚ್ಚಿದ ನಟಿ ಪ್ರೇಮಾ

ವೆಡ್ಡಿಂಗ್ ಗಿಫ್ಟ್: ಲಾಯರ್ ಪಾತ್ರದ ಮೂಲಕ ಮತ್ತೆ ಬಣ್ಣ ಹಚ್ಚಿದ ನಟಿ ಪ್ರೇಮಾ

ಜುಲೈ 15ರಂದು ಚಿತ್ರ ತೆರೆಗೆ: `ಚೇಸ್’ ಸಿನಿಮಾದ ವಿತರಣಾ ಹಕ್ಕು ಖರೀದಿಸಿದ ಯುಎಫ್ಒ

ಜುಲೈ 15ರಂದು ಚಿತ್ರ ತೆರೆಗೆ: `ಚೇಸ್’ ಸಿನಿಮಾದ ವಿತರಣಾ ಹಕ್ಕು ಖರೀದಿಸಿದ ಯುಎಫ್ಒ

ಪಂಚಭಾಷೆಗಳಲ್ಲಿ ಕಮಾಲ್; ಬನಾರಸ್ ಮೂಲಕ ಬಣ್ಣದ ಲೋಕಕ್ಕೆ ಝೈದ್ ಖಾನ್ ರಂಗ ಪ್ರವೇಶ

ಪಂಚಭಾಷೆಗಳಲ್ಲಿ ಕಮಾಲ್; ಬನಾರಸ್ ಮೂಲಕ ಬಣ್ಣದ ಲೋಕಕ್ಕೆ ಝೈದ್ ಖಾನ್ ರಂಗ ಪ್ರವೇಶ

MUST WATCH

udayavani youtube

ಇಡೀ ದೇಶ ಸೇವೆಗೊಂದು ಅವಕಾಶ: ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

udayavani youtube

ದೇವಸ್ಥಾನದ ಆವರಣದೊಳಕ್ಕೆ ಉಕ್ಕಿ ಹರಿದ ನದಿಗಳು!

udayavani youtube

ಚಂದ್ರಶೇಖರ ಗುರೂಜಿ ಹತ್ಯೆ : ಕೇವಲ 4 ಗಂಟೆಯಲ್ಲಿ ಹಂತಕರ ಪತ್ತೆ

udayavani youtube

Lightings ನೋಡಿದಾಗ Shock ಆದೆ! – ಪ್ರೇಮಾ

udayavani youtube

ಚಂದ್ರಶೇಕರ್‌ ಗುರೂಜಿ ಹತ್ಯೆ: ಹಂತಕರ ಬಂಧನ

ಹೊಸ ಸೇರ್ಪಡೆ

8theft

ಕೆಲಸಕಿದ್ದ ಮನೆಯಲ್ಲಿ ನಗನಾಣ್ಯ ಕದ್ದ ತಾಯಿ-ಮಗಳು

ಡಿಕೆಶಿ

ಸಿದ್ದರಾಮೋತ್ಸವಕ್ಕಿಂತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಿದ್ದತೆ ಮುಖ್ಯವೆಂದ ಡಿಕೆಶಿ

1-fdf-dsf

ಕಲಬುರಗಿ- ಯಾದಗಿರಿ ಡಿಸಿಸಿ ಬ್ಯಾಂಕ್ ಗೆ 19 ಕೋ ರೂ ಲಾಭ : ತೇಲ್ಕೂರ

1-fdgg

ಕರ್ನಾಟಕ- ಕೊರಿಯಾ ಗಣರಾಜ್ಯ ಬಾಂಧವ್ಯ ವೃದ್ಧಿ: ಸಿಎಂ ಬೊಮ್ಮಾಯಿ

ಸಿದ್ದರಾಮಯ್ಯ ಸರ್ಕಾರ ಡ್ರಗ್ಸ್ ದಂಧೆಯಿಂದ ನಡೆಯುತ್ತಿತ್ತು: ನಳಿನ್ ಕಟೀಲ್ ಆರೋಪ

ಸಿದ್ದರಾಮಯ್ಯ ಸರ್ಕಾರ ಡ್ರಗ್ಸ್ ದಂಧೆಯಿಂದ ನಡೆಯುತ್ತಿತ್ತು: ನಳಿನ್ ಕಟೀಲ್ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.