ಒಂದು ವಜ್ರದ ಸುತ್ತ
Team Udayavani, Jun 8, 2018, 6:00 AM IST
ನಟಿ ರೂಪಿಕಾ ಚಿತ್ರರಂಗಕ್ಕೆ ಬಂದು 10 ವರ್ಷ ಆಗಿದೆ. ಈ ಹತ್ತು ವರ್ಷದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಂತಿಪ್ಪ ರೂಪಿಕಾ ಈಗ ಸದ್ದಿಲ್ಲದೇ ಹೊಸ ಸಿನಿಮಾವೊಂದರಲ್ಲಿ ನಟಿಸಿದ್ದಾರೆ. ಅದು “ರುದ್ರಾಕ್ಷಿಪುರ’. ಹೌದು, “ರುದ್ರಾಕ್ಷಿಪುರ’ ಎಂಬ ಸಿನಿಮಾವೊಂದು ತಯಾರಾಗಿದ್ದು ಈ ಚಿತ್ರದಲ್ಲಿ ರೂಪಿಕಾ ನಾಯಕಿ. ಅರ್ಜುನ್ ಚೌಹಾಣ್ ನಾಯಕ. ಈಶ್ವರ್ ಪೊಲಂಕಿ ಈ ಚಿತ್ರದ ನಿರ್ದೇಶಕರು.
ಎಲ್ಲಾ ಓಕೆ, “ರುದ್ರಾಕ್ಷಿಪುರ’ದಲ್ಲಿ ನಿರ್ದೇಶಕರು ಏನು ಹೇಳಲು ಹೊರಟಿದ್ದಾರೆಂದು ನೀವು ಕೇಳಬಹುದು. ನಿರ್ದೇಶಕ ಈಶ್ವರ್ ಹೇಳುವಂತೆ, ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಒಂದು ವಜ್ರವನ್ನು ಹುಡುಕಲು ಹೋದಾಗ ಏನೇನು ಅವಘಡಗಳಾಗುತ್ತವೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆಯಂತೆ. ರುದ್ರಾಕ್ಷಿಪುರ ಎಂಬುದು ಕಾಲ್ಪನಿಕ ಊರಿನ ಹೆಸರಾಗಿದ್ದು, ಕಥೆ ಈ ಊರಿನಲ್ಲಿ ನಡೆಯಲಿದೆಯಂತೆ. ನಾಯಕ ಕಳ್ಳರ ಗುಂಪೊಂದಕ್ಕೆ ಸೇರಿಕೊಳ್ಳುವ ಮೂಲಕ ಕಥೆ ತೆರೆದುಕೊಳ್ಳುತ್ತದೆಯಂತೆ. ತನ್ನ ಗುರಿ ಸಾಧನೆಗಾಗಿ ಕಳ್ಳರ ಗುಂಪಿಗೆ ಸೇರಿಕೊಳ್ಳುವ ನಾಯಕ, ಮುಂದೆ ಏನೆಲ್ಲಾ ಬದಲಾವಣೆಗೆ ಕಾರಣವಾಗುತ್ತಾನೆ, ಜೊತೆಗೆ ನಾಯಕಿಗೂ ವಜ್ರಕ್ಕೂ ಏನು ಸಂಬಂಧ, ಅದರ ಹಿನ್ನೆಲೆಯಲ್ಲಿ ಕಥೆ ಸಾಗುತ್ತದೆಯಂತೆ.
ವಜ್ರವನ್ನು ಹುಡುಕುತ್ತಾ ಹೋಗುವ ಪಾತ್ರದಲ್ಲಿ ರೂಪಿಕಾ ಕಾಣಿಸಿಕೊಂಡಿದ್ದಾರಂತೆ. ಮೂಲತ: ಡ್ಯಾನ್ಸರ್ ಆಗಿರುವ ರೂಪಿಕಾ ಅವರ ಪಾತ್ರದ ಪರಿಚಯವನ್ನು ಭರತನಾಟ್ಯದ ಮೂಲಕ ಮಾಡಿರುವುದು ಅವರಿಗೆ ಖುಷಿಕೊಟ್ಟಿದೆಯಂತೆ. ಚಿತ್ರದಲ್ಲಿ ರವಿಚೇತನ್ ವಿಲನ್ ಆಗಿ ನಟಿಸಿದ್ದಾರೆ. ಚಿತ್ರವನ್ನು ನಾಗರಾಜ್ ಮುರುಡೇಶ್ವರ ನಿರ್ಮಿಸಿದ್ದಾರೆ. ಚಿತ್ರಕ್ಕೆ ಪವನ್ ಪಾರ್ಥ ಸಂಗೀತ ನೀಡಿದ್ದಾರೆ. ಜೊತೆಗೆ ಎರಡು ಹಾಡುಗಳನ್ನು ಕೂಡಾ ಬರೆದಿದ್ದಾಗಿ ಹೇಳಿಕೊಂಡರು.
ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆಯಾಯಿತು. ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ಆಡಿಯೋ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಕೋರಿದರು. ಚಿತ್ರ ಜುಲೈನಲ್ಲಿ ತೆರೆಕಾಣಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ