ಬಾಬು ಕನಸು ಇಂದು ನನಸು

ನೆಕ್ಲೆಸ್‌ ತಂದ ಆನಂದಭಾಷ್ಪ

Team Udayavani, Sep 6, 2019, 5:48 AM IST

ಕೆಲವು ನಿರ್ದೇಶಕರು ಸಿನಿಮಾ ಮಾಡುವ ಮೊದಲೇ ಸುದ್ದಿಯಾಗುತ್ತಾರೆ. ಸ್ಕ್ರಿಪ್ಟ್ಗೆ ಓಂಕಾರ ಹಾಕುವಾಗಿನಿಂದಲೇ ತಾವು, ತಮ್ಮ ಸಿನಿಮಾ ಸುದ್ದಿಯಲ್ಲಿರಬೇಕೆಂಬುದು ಬಯಸುತ್ತಾರೆ. ಇನ್ನು ಕೆಲವು ನಿರ್ದೇಶಕರು ಸಿನಿಮಾ ಬಿಡುಗಡೆಯಾದ ನಂತರ ಸುದ್ದಿಯಾಗಲು ಬಯಸುತ್ತಾರೆ. ಈ ಸಾಲಿಗೆ ಹಿರಿಯ ನಿರ್ದೇಶಕ ದಿನೇಶ್‌ ಬಾಬು ಕೂಡಾ ಸೇರುತ್ತಾರೆ. ಈಗ ಯಾಕೆ ಅವರ ವಿಷಯ ಅಂತೀರಾ, ನಿರ್ದೇಶಕ ದಿನೇಶ್‌ ಬಾಬು ಸದ್ದಿಲ್ಲದೇ ಸಿನಿಮಾವೊಂದನ್ನು ಮಾಡಿ ಮುಗಿಸಿದ್ದಾರೆ. ಅದು ‘ಹಗಲು ಕನಸು’. ಈ ಸಿನಿಮಾ ಯಾವ ಹಂತದಲ್ಲಿದೆ ಎಂದು ನೀವು ಕೇಳಿದರೆ ಅದಕ್ಕೆ ಉತ್ತರ ಈ ವಾರ ತೆರೆಕಾಣುತ್ತಿದೆ ಎಂಬುದು. ಹೌದು, ‘ಹಗಲು ಕನಸು’ ಎಂಬ ಸಿನಿಮಾ ಈ ವಾರ ತೆರೆಕಾಣುತ್ತಿದೆ.

ದಿನೇಶ್‌ ಬಾಬು ಈ ಚಿತ್ರದ ನಿರ್ದೇಶಕರು. ಆನಂದ್‌ ಈ ಚಿತ್ರದ ನಾಯಕ. ಎಲ್ಲಾ ಓಕೆ, ಈ ಸಿನಿಮಾದಲ್ಲಿ ದಿನೇಶ್‌ ಬಾಬು ಏನು ಹೇಳಲು ಹೊರಟಿದ್ದಾರೆಂದು ನೀವು ಕೇಳಬಹುದು. ಆದರೆ, ದಿನೇಶ್‌ ಬಾಬು ಮಾತ್ರ ತಮ್ಮ ಸಿನಿಮಾ ವಿವರ ಕೊಡಲಿಲ್ಲ. ಬದಲಾಗಿ ನಾಯಕ ಆನಂದ್‌ ಮಾತನಾಡಿದರು. ‘ಇದು ಮೂರು ದಿನಗಳಲ್ಲಿ ನಡೆಯುವ ಕಥೆ. ಶುಕ್ರವಾರ, ಶನಿವಾರ ಹಾಗೂ ಭಾನುವಾರ ಈ ಕಥೆ ನಡೆಯುತ್ತದೆ.

ದಿನೇಶ್‌ ಬಾಬು ಅವರ ಸಿನಿಮಾ ಎಂದ ಮೇಲೆ ಅಲ್ಲಿ ಕಂಟೆಂಟ್‌ಗೆ ಹೆಚ್ಚಿನ ಒತ್ತು ಕೊಡುತ್ತಾರೆ. ಈ ಸಿನಿಮಾದಲ್ಲೂ ಗಟ್ಟಿಕಥಾಹಂದರವಿದೆ. ಇಡೀ ಸಿನಿಮಾವನ್ನು ಒಂದು ಮನೆಯಲ್ಲಿ ಚಿತ್ರೀಕರಿಸಲಾಗಿದೆ. ಹಾಡೊಂದರ ಚಿತ್ರೀಕರಣ ಹೊರಾಂಗಣದಲ್ಲಿ ನಡೆದಿದೆ. ನಾನಿಲ್ಲಿ ವಿಕ್ರಮಾದಿತ್ಯ ಎಂಬ ಪಾತ್ರ ಮಾಡಿದ್ದೇನೆ. ದೊಡ್ಡ ನೆಕ್ಲೆಸ್‌ ಹಾಕಿಕೊಂಡಿರುವ ಹುಡುಗಿಯ ಕನಸನ್ನೇ ಕಾಣುತ್ತಿರುವ ನನಗೆ ಅಂತಹ ಹುಡುಗಿ ಸಿಕ್ಕಾಗ ಜೀವನದಲ್ಲಿ ಮುಂದೆ ಏನೇನು ಆಗುತ್ತದೆ ಎಂಬ ಅಂಶದೊಂದಿಗೆ ಚಿತ್ರ ಸಾಗುತ್ತದೆ’ ಎಂದು ಚಿತ್ರದ ಬಗ್ಗೆ ವಿವರ ನೀಡಿದರು ಆನಂದ್‌. ಸನಿಹ ಯಾದವ್‌ ಚಿತ್ರದ ನಾಯಕಿ.

ಚಿತ್ರಕ್ಕೆ ಕಾರ್ತಿಕ್‌ ವೆಂಕಟೇಶ್‌ ಎರಡು ಹಾಡುಗಳನ್ನು ನೀಡಿದ್ದಾರೆ. ಚಿತ್ರದಲ್ಲಿ ಮನ್‌ದೀಪ್‌ ರಾಯ್‌, ಚಿತ್ಕಲಾ ಬಿರಾದರ್‌, ನಾರಾಯಣಸ್ವಾಮಿ ಸೇರಿದಂತೆ ಅನೇಕರು ನಟಿಸಿದ್ದು, ಅವರೆಲ್ಲರೂ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಯಶಸ್ವಿಯಾಗಿ ನೂರು ಚಿತ್ರಗಳಲ್ಲಿ ಅಭಿನಯಿಸಿ, ಶತಕದ ಸಂಭ್ರಮದಲ್ಲಿರುವ ನಟ ರಮೇಶ್‌ ಅರವಿಂದ್‌, ಈ ವಾರ 101ನೇ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ....

  • ನಾನು ಎಲ್ಲಾ ಬಿಟ್ಟು, ಈ ರಂಗಕ್ಕೆ ಬಂದಿದ್ದೇ ಏನೋ ಮಾಡಬೇಕು ಅಂತ. ಚಾಲೆಂಜ್‌ ತೆಗೆದುಕೊಳ್ಳದಿದ್ದರೆ ಹೇಗೆ? ಕಂಫ‌ರ್ಟ್‌ ಜೋನ್‌ ಬಿಟ್ಟು ಬೇರೆ ಮಾಡಬೇಕು ಅಂದಾಗ,...

  • ಈಗಂತೂ ಮೊಬೈಲ್‌ನದ್ದೇ ಸುದ್ದಿ. ಯಾರ ಕೈ ನೋಡಿದರೂ ಮೊಬೈಲ್‌ ಇದ್ದೇ ಇರುತ್ತೆ. ಅದರಲ್ಲೂ ವಾಟ್ಸಾಪ್‌, ಫೇಸ್‌ಬುಕ್‌, ಇನ್ಸ್‌ಟಾಗ್ರಾಂ, ಟ್ವಿಟ್ಟರ್‌...ಹೀಗೆ ಒಂದಾ...

  • ಪ್ರೇಮ್‌ ನಿರ್ದೇಶನದ "ಏಕಲವ್ಯ' ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ದೊಡ್ಡ ಗ್ಯಾಪ್‌ನ ಬಳಿಕ ಲವ್‌ಸ್ಟೋರಿ ಮಾಡುತ್ತಿರುವ ಪ್ರೇಮ್‌, ಈ ಬಾರಿ ಸಖತ್‌ ಬೋಲ್ಡ್‌ ಕಥೆಯನ್ನೇ...

  • ಹಿರಿಯ ಸಾಹಿತಿ ಡಾ.ಬಿ.ಎಲ್‌.ವೇಣು ಅವರ ಐತಿಹಾಸಿಕ ಕಾದಂಬರಿ "ದಳವಾಯಿ ಮುದ್ದಣ' ಈಗ ದೃಶ್ಯರೂಪ ಪಡೆದುಕೊಂಡಿದೆ. "ದಳವಾಯಿ ಮುದ್ದಣ್ಣ' ಕಾದಂಬರಿ ಈಗ ಚಲನಚಿತ್ರಕ್ಕೆ...

ಹೊಸ ಸೇರ್ಪಡೆ