ಗೊಂದಲದ ನಡುವೆ ಬಂದಾಕೆ ಸರೋಜ

Team Udayavani, Nov 24, 2017, 11:47 AM IST

Saroja_(123).jpg

ವೇದಿಕೆ ಮೇಲಿದ್ದ ಜನರನ್ನು ನೋಡಿಯೇ ಎಲ್ಲರಿಗೂ ಗಾಬರಿಯಾಗಿತ್ತು. 20ಕ್ಕೂ ಹೆಚ್ಚು ಜನರು ಆ ವೇದಿಕೆಯ ಮೇಲಿದ್ದರು. ಅವರೆಲ್ಲಾ ಮಾತಾಡುವುದು ಯಾವಾಗ, ಹಾಡು ಮತ್ತು ಟೀಸರ್‌ ನೋಡುವುದು ಯಾವಾಗ ಎಂದು ಸಭಾಂಗಣದಲ್ಲಿದ್ದ ಪ್ರೇಕ್ಷಕರು ತಲೆಯಲ್ಲೇ ಗುಣಾಕಾರ, ಬಾಗಾಕಾರ ಮಾಡುತ್ತಿದ್ದರು. ಇತ್ತ ಕಡೆ ವೇದಿಕೆ ಮೇಲಿದ್ದವರನ್ನೆಲ್ಲಾ ಕೆಳಗೆ ಕಳಿಸಿ ಹಾಡು ಕೇಳಿಸುವುದು ಅಥವಾ ಅವರ ಮಾತೆಲ್ಲಾ ಆದ ನಂತರವೇ ಹಾಡುಗಳನ್ನು ತೋರಿಸುವುದೋ ಎಂಬ ಗೊಂದಲದಲ್ಲಿ ನಿರ್ಮಾಪಕರು ಓಡಾಡುತ್ತಿದ್ದರು.

ಕೊನೆಗೊಮ್ಮೆ ಹಾಡು ಮತ್ತು ಟೀಸರ್‌ ತೋರಿಸಿಯೇ ಮಾತು ಎಂದು ತೀರ್ಮಾನವಾಗಿ ಅವೆರಡನ್ನೂ ತೋರಿಸಲಾಯಿತು. ಅಂದ ಹಾಗೆ, ಇದು “ಸರೋಜ’ ಚಿತ್ರದ ಹಾಡುಗಳ ಮತ್ತು ಟೀಸರ್‌ ಬಿಡುಗಡೆ ಸಮಾರಂಭ. ಈ ಚಿತ್ರವನ್ನು ಶಿವಕುಮಾರ್‌ ದಾಸರಿ ನಿರ್ಮಿಸಿದರೆ, ವಿಜಯಲಕ್ಷ್ಮೀ ಶ್ರೀಧರ್‌ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಈಶ್ವರ್‌ ಬಾಬು, ಸಹನ, ರಾಧಾ ದೇವದಾಸ್‌ ಮುಂತಾದವರು ಚಿತ್ರದಲ್ಲಿ ನಟಿಸಿದರೆ, ಪ್ರಜ್ವಲ್‌ ಕ್ರಿಶ್‌ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

ಮೊದಲು ಮಾತನಾಡಿದ್ದು ಶ್ರೀಧರ್‌. “ನಮಗೆ ಚಿತ್ರ ನಿರ್ದೇಶನದ ಯಾವುದೇ ಅನುಭವವಿಲ್ಲ. ನನ್ನ ಹೆಂಡತಿ ವಿಜಯಲಕ್ಷ್ಮೀ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಒಂದು ನೈಜ ಘಟನೆಯನ್ನಾಧರಿಸಿ ಈ ಕಥೆ ಮಾಡಿದ್ದಾರೆ. ಇದು ಆಕೆಯ ಅಣ್ಣನ ಸ್ವಂತ ಕಥೆ. ಈ ಕಥೆಯನ್ನ ಸಿನಿಮಾ ಮಾಡಬೇಕು ಎಂಬ ಆಸೆ ಆಕೆಗಿತ್ತು. ಈಗ ಸಿನಿಮಾ ಆಗಿದೆ’ ಎಂದರು. ಅಂದು ಚಿತ್ರರಂಗದ ಸಾಕಷ್ಟು ಗಣ್ಯರು ಬಂದಿದ್ದರು.

ಚಾಮುಂಡೇಶ್ವರಿ ಸ್ಟುಡಿಯೋದ ರಾಜಲಕ್ಷ್ಮೀ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷ ಉಮೇಶ್‌ ಬಣಕಾರ್‌, ಹಿರಿಯ ನಿರ್ದೇಶಕ ಎಸ್‌.ಕೆ. ಭಗವಾನ್‌, ನಟರಾದ ಡಿಂಗ್ರಿ ನಾಗರಾಜ್‌, ಬ್ಯಾಂಕ್‌ ಜನಾರ್ಧನ್‌, ಶಿವಕುಮಾರ್‌ ಆರಾಧ್ಯ, ಆಡುಗೋಡಿ ಶ್ರೀನಿವಾಸ್‌ ಮುಂತಾದವರು ಬಂದಿದ್ದರು. ಈ ಪೈಕಿ ಹಿರಿಯರಾದ ಭಗವಾನ್‌ ಅವರು ಹಾಡುಗಳನ್ನು ಬಿಡುಗಡೆ ಮಾಡುವುದರ ಜೊತೆಗೆ ಒಂದಿಷ್ಟು ಹಿತವಚನಗಳನ್ನು ಆಡಿದರು.

ಅವರು ಈ ಸಮಾರಂಭಕ್ಕೆ ಬರಲು ಕಾರಣ ಅವರ ಪತ್ನಿ. ಏಕೆಂದರೆ, ಭಗವಾನ್‌ ಅವರ ಮಡದಿಯ ಹೆಸರು ಸಹ ಸರೋಜ ಅಂತ. ಹಾಗಾಗಿ ಅವರ ಹೆಸರಿರುವ ಸಿನಿಮಾಗೆ ಹೋಗದಿದ್ದರೆ, ನಾಳೆ ಏನು ಉತ್ತರ ಕೊಡಬೇಕು ಹೇಳಿ ಎಂದು ನಗುತ್ತಲೇ ಮಾತು ಪ್ರಾರಂಭಿಸಿದರು ಅವರು. “ಈ ಚಿತ್ರದಲ್ಲಿ ಎಲ್ಲಾ ಹೊಸಬರೇ. ನಾವು ಯಾವತ್ತೂ ಹೊಸಬರನ್ನು ಉತ್ತೇಜಿಸಿದ್ದೀನಿ.

ಆದಾರ್ಶ ಫಿಲ್ಮ್ ಇನ್‌ಸ್ಟಿಟ್ಯೂಟ್‌ ಮತ್ತು ಇತರೆ ಕಡೆ ಇದ್ದಾಗ ಹಲವರು ಹೊಸಬರನ್ನು ತಯಾರು ಮಾಡಿದ ತೃಪ್ತಿ ಇದೆ. ಇದುವರೆಗೂ 250 ಯುವಕರು ಹಿರಿತೆರೆ ಮತ್ತು ಕಿರುತೆರೆಯಲ್ಲಿ ತೊಡಗಿಸಿಕೊಂಡಿದ್ದಾರೆ. 65 ವರ್ಷಗಳಿಂದ ಕನ್ನಡ ಚಿತ್ರರತಂಗದಲ್ಲಿ ಹಲವು ಹೊಸಬರ ಜತೊಎಗೆ ಕೆಲಸ ಮಾಡಿದ ಸಂತೋಷವಿದೆ. ಈ ಚಿತ್ರ 100 ದಿನ ಓಡಲಿ’ ಎಂದು ಹಾರೈಸಿ ಅವರು ಮಾತು ಮುಗಿಸಿದರು.

ಟಾಪ್ ನ್ಯೂಸ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

6-fusion

Yugadi: ಯುಗಾದಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.